ಸಾಮರಸ್ಯ ವೇದಿಕೆ ಸುಬ್ರಹ್ಮಣ್ಯ ವತಿಯಿಂದ ದೀಪಾವಳಿ ತುಡರ್ ಕಾರ್ಯಕ್ರಮ ನಡೆಯಿತು.
ಸುಬ್ರಹ್ಮಣ್ಯ ಗ್ರಾಮದ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಗರ್ಭಗುಡಿಯಿಂದ,
ಶ್ರೀ ದೇವರ ದೀಪವನ್ನು ತಂದು ಅಣ್ಣಿ ವಾಲದಕೇರಿ, ಅವರ ಕಲ್ಲಪಣೆ ಮನೆಯಲ್ಲಿ ತುಡರ್ ನ್ನು ಬೆಳಗಿಸಲಾಯಿತು.
ಕುಕ್ಕೆ ಶ್ರೀ ಭಜನಾ ಮಹಿಳಾ ತಂಡ ಕುಣಿತ ಭಜನೆಯೊಂದಿಗೆ ಮೆರಗು ನೀಡಿದರು ತುಡರ್ ಬಗ್ಗೆ ಅರೆಸೆಸ್ಸ್ ಪುತ್ತೂರು ಜಿಲ್ಲೆಯ ಉದ್ಯೋಗ ಕಾರ್ಯ ಪ್ರಮುಖ್ ಹೇಮಚಂದ್ರ ಮೇರ್ಕಜೆ ಬೌದ್ಧಿಕ್ ನ್ನು ನೀಡಿದರು.
ವೇದಿಕೆಯಲ್ಲಿ ಗುರಿಕಾರಾದಂತಹ, ಉಕ್ರ, ಅಣ್ಣಿವಾಲಗದಕೇರಿ, ಅಚ್ಚುತ ಗೌಡ ಕುಕ್ಕಪ್ಪನ ಮನೆ , ಉಪಸ್ಥಿತಿದ್ದರು,
ಪುತ್ತೂರು ತಾಲ್ಲೂಕಿನ ಸಾಮರಸ್ಯದ, ಸಹ ಸಂಯೋಜಕ ಶ್ರೀಕುಮಾರ್, ಪುಟ್ಟ ವಾಲಗದಕೇರಿ, ಉಮೇಶ್ ವಾಲಗದಕೇರಿ, ವನಜ ಭಟ್, ಶೋಭಾಗಿರಿಧರ್,
ವೆಂಕಟೇಶ್ ಎಚ್ ಎಲ್, ರಾಮಚಂದ್ರ ದೇವರಗದ್ದೆ,ದಿನೇಶ್ ಸಂಪ್ಯಾಡಿ, ಅಶೋಕ್ ಮೂಲೆ ಮಜಲು, ಜಾನಕಿ ಹೆಚ್.ಎಲ್ ಪ್ರಾರ್ಥನ್ ಗಿರಿಧರ್ ಹಾಗೂ ಕಲ್ಲಪ್ಪಣೆ, ಮತ್ತು ವಾಲಗದಕೇರಿಯ ಬಂಧುಗಳು, ಉಪಸ್ಥಿತರಿದ್ದರು.
ಸಾಮರಸ್ಯ ವೇದಿಕೆ ಗುತ್ತಿಗಾರು ತುಡರ್ ಕಾರ್ಯಕ್ರಮ
ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಭಾಗದ ಗುಂಡಡ್ಕ ದಲ್ಲಿ ತುಡರ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಭಜನೆಯನ್ನು ಮಾಡುತ್ತ ಮನೆ ಮನೆಗಳಿಗೆ ತೆರಳಿ ದೀಪವನ್ನು ಉರಿಸಿ ಗೋವು ಪೂಜೆ ನಡೆಸಿದರು.
ಕಾರ್ಯಕ್ರಮದ ವೇದಿಕೆ ಯಲ್ಲಿ ಹಿರಿಯರಾದ ಶ್ರೀ ಕಾಳಿ ಹಾಗೂ ಶ್ರೀ ರವೀಂದ್ರ ಪುತ್ತೂರು ಸಾಮರಸ್ಯ ವೇದಿಕೆ ಮಂಗಳೂರು ವಿಭಾಗದ
ಸಂಯೋಜಕ್ ಅವರು ಮಾತನಾಡಿ ದೀಪಾವಳಿ ಯ ಶುಭ ಸಂದರ್ಭದಲ್ಲಿ ಸಮಾಜದಲ್ಲಿ ಸಾಮರಸ್ಯ ಬೆಳಕನ್ನು ನೀಡೋಣ ವೆಂದರು.
ಕಾರ್ಯಕ್ರಮದಲ್ಲಿ ವೆಂಕಟ್ ವಳಲಂಬೆ,ರಾಕೇಶ್, ವರ್ಷಿತ್ ಕಡ್ತಳಕಜೆ,ಕರುಣಾಕರ ಮಡಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಅಮರಾವತಿ: ಆಂಧ್ರ ಪ್ರದೇಶದಲ್ಲಿ ತೆಲುಗುದೇಶಂ, ಜನಸೇನಾ ಮತ್ತು ಬಿಜೆಪಿ ನೇತೃತ್ವದ ಎನ್ದಿಎ ಮೈತ್ರಿಕೂಟದ ಸರ್ಕಾರವು ಅಧಿಕಾರದಲ್ಲಿರುವಾಗ,
ತಿರುಮಲ ತಿರುಪತಿ ದೇವಸ್ಥಾನದ ಮಂಡಳಿಗೆ ಹೊಸ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಲಾಗಿದೆ.
ಅ. 30 ರಿಂದ ಜಾರಿಗೆ ಬರುವಂತೆ, 21 ಸದಸ್ಯರ ಮಂಡಳಿಯನ್ನು ನೇಮಿಸುವ ಆದೇಶವನ್ನು ಚಂದ್ರಬಾಬು ನಾಯ್ಡು ಸರ್ಕಾರ ಹೊರಡಿಸಿದೆ. ಈ ಹೊಸ ಸದಸ್ಯರಲ್ಲಿ
ಕರ್ನಾಟಕದಿಂದ ಮೂವರು, ತೆಲಂಗಾಣದಿಂದ ಐವರು, ತಮಿಳುನಾಡಿನಿಂದ ಇಬ್ಬರು, ಹಾಗೂ ಗುಜರಾತ್ ಮತ್ತು ಮಹಾರಾಷ್ಟ್ರದಿಂದ ತಲಾ ಒಬ್ಬರು ಸ್ಥಾನ ಪಡೆದಿದ್ದಾರೆ. ಉಳಿದವರು ಆಂಧ್ರ ಪ್ರದೇಶದವರಾಗಿದ್ದಾರೆ.
ತಿರುಪತಿ ಲಡ್ಡುಗೆ ಅಪವಿತ್ರತೆ ಉಂಟಾದ ಘಟನೆನಂತರ, ಹಿಂದಿನ ಮುಖ್ಯಮಂತ್ರಿ ಯಸ್. ಜೆ.ಜಗನ್ ಮೋಹನ್ ರೆಡ್ಡಿಯ ಆಡಳಿತದಲ್ಲಿ ಟಿಟಿಡಿ ಮಂಡಳಿಯನ್ನು ಬರ್ಖಾಸ್ತುಗೊಳಿಸಲಾಗಿತ್ತು.
ಈ ಘಟನೆ ದೇಶಾದ್ಯಂತ ಗಂಭೀರ ಪ್ರತಿಸ್ಪಂದನವನ್ನು ಸೃಷ್ಟಿಸಿತು. ಇದೀಗ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಮಂಡಳಿಯ ಸದಸ್ಯರ ಹೆಸರನ್ನು ಅಂತಿಮಗೊಳಿಸಿದ್ದಾರೆ.
ಟಿವಿ5 ಸುದ್ದಿ ವಾಹಿನಿಯ ಮಾಲೀಕ ಮತ್ತು ಉದ್ಯಮಿ ಬೊಲ್ಲಿನೇನಿ ರಾಜಗೋಪಾಲ ನಾಯ್ಡು (ಬಿ.ಆರ್. ನಾಯ್ಡು) ಅನ್ನು ಟಿಟಿಡಿ ಮಂಡಳಿಯ ಅಧ್ಯಕ್ಷನಾಗಿ ಆಯ್ಕೆ ಮಾಡಲಾಗಿದೆ. ಭಾರತದ ಖಾತರಿಯಾದ ಬಯೋಟೆಕ್ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಸುಚಿತಾ ಏಲಾ ಕೂಡ ಹೊಸ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.
ಚಂದ್ರಬಾಬು ನಾಯ್ಡು ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ. ಮಾಜಿ ಅಧ್ಯಕ್ಷ ಕರುಣಾಕರ ರೆಡ್ಡಿ ಸೇರಿದಂತೆ ಎಲ್ಲಾ 24 ಸದಸ್ಯರು ರಾಜೀನಾಮೆ ನೀಡಿದ್ದಾರೆ. ಹೊಸ ಟ್ರಸ್ಟ್‌ನಲ್ಲಿ, ಕರ್ನಾಟಕದ ನ್ಯಾಯಮೂರ್ತಿ ಎಚ್.ಎಲ್. ದತ್ತು. ದರ್ಶನ್ ಆರ್.ಎನ್ ಮತ್ತು ನರೇಶ್ ಕುಮಾರ್ ಸೇರಿದ್ದಾರೆ.
ಮಂಗಳೂರು: ಹಿರಿಯ ಪತ್ರಕರ್ತ ಸೇರಿ ಪುಷ್ಪರಾಜ್ ಬಿ.ಎನ್. ಸಢರಿ 56 ಸಾಧಕರಿಗೆ ಹಾಗೂ 20 ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಯುಕ್ತ ದ.ಕ.ಜಿಲ್ಲಾಡಳಿತ ನೀಡುವ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಘೋಷಿಸಲಾ ಗಿದೆ.
ನ.1ರಂದು ಬೆಳಗ್ಗೆ 9ಕ್ಕೆ ನಗರದ ನೆಹರೂ ಮೈದಾನದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸ್ಪೀಕರ್ ಯು.ಟಿ.ಖಾದರ್ ಅವರ ಸಮ್ಮುಖ ದ.ಕ.ಜಿಲ್ಲಾ
ನಾಗೇಂದ್ರ ಕುಡುಪು (ವಿಶೇಷ ಪಂಚವಾದ್ಯ, ಚೆಂಡೆ, ಅತಿಥಿ ಕಲಾವಿದರು) , ವಿಲಿಯಂ ಆಯಂಟನಿ ಡಿಸೋಜ ಕದ್ರಿ (ಪ್ರವಾಸೋದ್ಯಮ), ಪ್ರಭಾಕರ ಶ್ರೀಯಾನ್ ಕಂಕನಾಡಿ ಗುತ್ತು (ಸಮಾಜ ಸೇವೆ), ಜಯರಾಮ್ ಎಕ್ಕೂರು (ಕಲೆ), ಮುನಿತಾ ವೇಗಸ್ ರೋವ್ ಬೆಂದೂರು (ಸಂಗೀತ), ಲೀಲಾಧರ ಚಿತ್ರಾಪುರ (ಕಲೆ), ಅಬ್ದುಲ್ಲಾ ಮೋನು ಮೊಯ್ದಿನ್ ಖತರ್ (ಸಮಾಜ ಸೇವೆ), ಗಂಗಾಧರ ದೇವಾಡಿಗ ಕದ್ರಿಧರ (ಕಲೆ), ಪುಷ್ಪರಾಜ್ ಬಿ.ಎನ್. (ಸುದ್ದಿ ಮಾಧ್ಯಮ), ಸುಖ್‌ಪಾಲ್ ಪೊಳಲಿ (ದೃಶ್ಯಮಾಧ್ಯಮ), ರೊನಾಲ್ಡ್ ಮಾರ್ಟಿನ್ ಕುಲಶೇಖರ (ಸಮಾಜ ಸೇವೆ, ರಾಜೇಂದ್ರ ಶೇರಿಗಾರ್ ಪಾವೂರು (ಕಲೆ), ಬಾಬು ಪಿಲಾರ್ (ಸಮಾಜ ಸೇವೆ), ಚಂದ್ರಹಾಸ ಶೆಟ್ಟಿ ಮೋರ್ಲ (ಕೃಷಿ/ಸಾಮಾಜಿಕ), ಕೆ. ಹುಸೈನ್ ಉಳ್ಳಾಲ (ಸಮಾಜ ಸೇವೆ )
ರೊನಾಲ್ಡ್ ಫೆರ್ನಾಂಡೀಸ್ ಪೆರ್ಮುದೆ (ಕೃಷಿ), ಜಯಪ್ರಕಾಶ್ ಶೆಟ್ಟಿ ಪೆರ್ಮುದೆ (ಯಕ್ಷಗಾನ), ನಾರಾಯಣ ಪರವ ಮಾಂಟ್ರಾಡಿ (ಕಲೆ), ಪ್ರಕಾಶ್ ಆಚಾರ್ಯ ಉಲ್ಲಂಜೆ (ಸಂಗೀತ), ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ (ಯಕ್ಷಗಾನ), ಉದಯ ಕುಮಾರ್ ಲಾಯಿಲ (ಸುಗಮ ಸಂಗೀತ/ಜಾನಪದ/ಕಲೆ), ವಸಂತಿ ಟಿ. ನಿಡ್ಲೆ (ಲೇಖಕಿ/ಯಕ್ಷಗಾನ), ಜಯಾನಂದಲಾಯಿಲ (ಸಮಾಜ ಸೇವೆ), ಲಕ್ಷ್ಮಣ ಗೌಡ ಪುಳಿತ್ತಡಿ (ಸಮಾಜ
ಸೇವೆ), ಮುಹಮ್ಮದ್ ಹಾಜಿ ಕುಕ್ಕುವಳ್ಳಿ (ಸಮಾಜ ಸೇವೆ), ಜ್ಞಾನ ರೈ ಕುರಿಯ (ಬಹುಮುಖ ಪ್ರತಿಭೆ), ಎಂ.ಮಹಮ್ಮದ್ ಬಡಗನ್ನೂರು (ಸಮಾಜ ಸೇವೆ), ಎಂ.ವೇಣುಗೋಪಾಲ ಪುತ್ತೂರು (ಕಲೆ), ಕೇಶವ ಮುಚ್ಚಮಲೆ (ಕಲೆ), ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್ ಮುಂಡೂರು (ಸಮಾಜ ಸೇವೆ), ಬಿ.ಶೇಖರ ಭಂಡಾರಿ ಬನ್ನೂರು (ಕಲೆ), ದಯಾನಂದ ರೈ ಕೊರ್ಮಂಡ (ಕಲೆ), ಜೋನ್ ಸಿರಿಲ್ ಡಿಸೋಜ ಸರಪಾಡಿ (ಕಂಬಳ), ಶೇಖರ ಪರವ ವಿಟ್ಲಪಡೂರು (ದೈವರಾದನೆ), ಸಂಜೀವ ಪೂಜಾರಿ ಸಜಿಪಮೂಡ (ಸಹಕಾರಿ/ ಸಮಾಜ ಸೇವೆ), ಕೆ.ಎನ್. ಗಂಗಾಧರ ಆಳ್ವ(ಶಿಕ್ಷಣ), ಮುಹಮ್ಮದ್ ಯಾಸೀರ್ ಕಲ್ಲಡ್ಕ (ಪುರಾತನ ವಸ್ತು ಸಂಗ್ರಹಾಲಯ), ಗೋಪಾಲ ಜೋಗಿ ಕೊಡಂಗಾಯಿ (ನಾಗಸ್ವರ ವಾದಕ), ಮುಹಮ್ಮದ್ ಹನೀಫ್ ಗೋಳ್ತಮಜಲು (ಸಾಮಾಜಿಕ/ ಕ್ರೀಡೆ), ಸದಾಶಿವ ಡಿ. ತುಂಬೆ (ಸಾಂಸ್ಕೃತಿಕ/ಕಲಾ ಸೇವೆ), ಕಡಬ ಶ್ರೀನಿವಾಸ ರೈ (ಕಲೆ), ಕುತ್ತಿಕಾರು ಕಿಂಞಣ್ಣ ಶೆಟ್ಟಿ (ಸಮಾಜ ಸೇವೆ), ರಶ್ಮಿತಾ ಜೈನ್ ಕಲ್ಲಬೆಟ್ಟು (ಶಿಕ್ಷಣ).
ಪ್ರಶಸ್ತಿ ವಿಜೇತ ಸಂಘ ಸಂಸ್ಥೆಗಳ ವಿವರ:
ಬಂಟರ ಸಂಘ (ರಿ) ಬಜೆ ವಲಯ, ಒಲವಿನ ಹಳ್ಳಿ ಪುನರ್ವಸತಿ ಮತ್ತು ಸಮುದಾಯ ಅಭಿವೃದ್ಧಿ ಕೇಂದ್ರ, ಯುನೈಟೆಡ್ ಫ್ರೆಂಡ್ಸ್ ಬಿಜೈ (ರಿ) ಸಂಸ್ಥೆ, ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಮಂಗಳೂರು, ಫೈವ್ ಸ್ಟಾರ್ ಯಂಗ್ಸ್ ಬಾಯ್ಸ್ ಅಡ್ಡರು (ರಿ), ಶ್ರೀ ಜಯಲಕ್ಷ್ಮಿಫ್ರೆಂಡ್ಸ್ ಸರ್ಕಲ್ ಬೋಳೂರು (ರಿ), ಕರ್ನಾಟಕ ಸೇವಾ ವೃಂದ (ರಿ) ಸುರತ್ಕಲ್, ಬಿಲ್ಲವ ಸಂಘ(ರಿ) ಉರ್ವ ಅಶೋಕ್ ನಗರ, ಶ್ರೀ ದುರ್ಗಾಪರಮೇಶ್ವರಿ ಸೇವಾ ಸಂಘ ಯುವಕ ಮಂಡಲ ದೇವಿಪುರ ತಲಪಾಡಿ, ಬೆಂಗರೆ ವಿದ್ಯಾರ್ಥಿ ಸಂಘ ಯುವಕ ಮಂಡಲ(ರಿ), ನವೋದಯ ಫ್ರೆಂಡ್ಸ್ ಸರ್ಕಲ್ ಉಳ್ಳಾಲ ಬೈಲು (ರಿ), ಸಫರ್ ಸ್ಪೋರ್ಟ್ಸ್ ಮತ್ತು ಕಲ್ಬರಲ್ ಅಸೋಸಿಯೇಶನ್ (ರಿ) ಮಂಚಿಲ, ಮುನ್ನೂರು ಯುವಕ ಮಂಡಲ(ರಿ), ಮಂಗಳ ಗ್ರಾಮೀಣ ಯುವಕ ಸಂಘ(ರಿ) ಕೊಣಾಜೆ, ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ತೊಕ್ಕೊಟ್ಟು (ರಿ), ದಯಾ ವಿಶೇಷ ಶಾಲೆ ಲಾಯಿಲ ಕೊಯ್ಯರು ಕ್ರಾಸ್ ಬೆಳ್ತಂಗಡಿ, ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಮಿತಿ (ರಿ) ಬಳಂಜ, ಯುವಕ ಮಂಡಲ (ರಿ) ನರಿಂಗಾನ ತೌಡುಗೋಳಿ, ಶ್ರೀರಕೇಶ್ವರಿ ಯುವಕ ಸಂಘ (ರಿ) ನೇರಂಬೋಳು, ಶ್ರೀ ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ) ಆರ್ಲಪದವು.