1000 ಬಸ್ಕಿ ಹೊಡಿಸಿದ ಶಿಕ್ಷಕ, ಕಾಲಿನ ಸ್ವಾಧೀನ ಕಳೆದುಕೊಂಡ ವಿದ್ಯಾರ್ಥಿ


ಶಾಲೆಗಳಲ್ಲಿ ಕಲಿಕೆ ಮತ್ತು ಶಿಸ್ತಿನ ವಿಷಯದಲ್ಲಿ ಶಿಕ್ಷಕರ ಕಟ್ಟುನಿಟ್ಟು ಸಾಮಾನ್ಯವಾಗಿದೆ. ಅನೇಕ ಬಾರಿ ಶಿಕ್ಷಕರು ಮಕ್ಕಳಿಗೆ ಬೈದು ಹೊಡೆದು ಪಾಠ ಕಲಿಸಲು ಪ್ರಯತ್ನಿಸುತ್ತಾರೆ. ಆದರೆ ಇಲ್ಲೊಂದು ಶಿಕ್ಷಕ ವಿದ್ಯಾರ್ಥಿಗೆ 1000 ಬಸ್ಕಿ ಹೊಡಿಯುವ ಶಿಕ್ಷೆ ನೀಡಿದ್ದು, ಪರಿಣಾಮ 13ವರ್ಷದ ಬಾಲಕ ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾನೆ. ಈ ಘಟನೆ ಚೀನಾದ ಶಾನ್‌ಡಾಂಗ್ ಪ್ರಾಂತ್ಯದ ಮಿಡ್ಲ್ ಸ್ಕೂಲ್‌ನಲ್ಲಿ ನಡೆದಿದೆ. ತೀವ್ರ ಕಾಲು ನೋವಿನಿಂದ ಬಳಲುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪ್ರಾರಂಭದಲ್ಲಿ ಸ್ನಾಯು ನೋವು ಎಂದು ಭಾವಿಸಿ ಔಷಧಿ ನೀಡಲಾಗಿದೆ. ಆದರೆ ಬಾಲಕನಿಗೆ ನೋವು ಜಾಸ್ತಿಯಾಗಿದ್ದು, ವೈದ್ಯಕೀಯ ಪರೀಕ್ಷೆಯ ವೇಳೆ ಬಾಲಕ ರಾಬ್ಡೋಮಿಯೊಲಿಸಿಸ್ ಎಂಬ ಗಂಭೀರ ವೈದ್ಯಕೀಯ ಸ್ಥಿತಿಯಿಂದ ಬಳಲುತ್ತಿದ್ದಾನೆ ಎಂದು ತಿಳಿದುಬಂದಿದೆ. 1000 ಬಸ್ಕಿ ಹೊಡೆದ ಪರಿಣಾಮ ಬಾಲಕನ ಸ್ನಾಯುಗಳಿಗೆ ಗಂಭೀರ ಹಾನಿಯನ್ನುಂಟುಮಾಡಿದೆ. ಇನ್ನು ಜೀವನ ಪರ್ಯಂತ ಕಾಲ ಮೇಲೆ ನಿಲ್ಲುವಂತಿಲ್ಲ. ಈ ಘಟನೆಯು ಮಗುವಿಗೆ ದೈಹಿಕ ಹಾಗೂ ಮಾನಸಿಕವಾಗಿ ಆಳವಾದ ಪ್ರಭಾವವನ್ನು ಬೀರಿದೆ ಎಂದು ಬಾಲಕನ ಪೋಷಕರು ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget