ಡ್ರೈವಿಂಗ್ ಮಾಡುವಾಗ ಲೈವ್ ಸ್ಟ್ರೀಮ್ ಮಾಡಲು ಹೋಗಿ 1.7 ಕೋಟಿ ಮೌಲ್ಯದ ಕಾರು ಕಳೆದುಕೊಂಡ ಯೂಟ್ಯೂಬರ್


ಡ್ರೈವಿಂಗ್ ಮಾಡುತ್ತಿರುವಾಗಲೇ ಲೈವ್​​ನಲ್ಲಿ ಮಾತನಾಡುತ್ತಾ ಹೋದ ಪರಿಣಾಮ ಅಮೆರಿಕಾದ ಖ್ಯಾತ ಯೂಟ್ಯೂಬರ್ ಒಬ್ಬನ ಕಾರು ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಯೂಟ್ಯೂಬರ್​​ ಹಾಗೂ ಆತನ ಕ್ಯಾಮೆರಾಮ್ಯಾನ್​​ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆದರೆ 1.7 ಕೋಟಿ ಮೌಲ್ಯದ ಐಷಾರಾಮಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಘಟನೆಯ ಸಂಬಂಧಿಸಿದ ದೃಶ್ಯ ಸೋಶಿಯಲ್​ ಮೀಡಿಗಳಲ್ಲಿ ವೈರಲ್​ ಆಗುತ್ತಿದೆ. 20 ವರ್ಷದ ಯೂಟ್ಯೂಬರ್ ಜ್ಯಾಕ್ ಡೊಹೆರ್ಟಿ ಮಿಯಾಮಿ ಹೆದ್ದಾರಿಯಲ್ಲಿ ತಮ್ಮ 1.7 ಕೋಟಿ ಮ್ಯಾಕ್‌ಲಾರೆನ್ ಸೂಪರ್‌ಕಾರ್ನಲ್ಲಿ ಡ್ರೈವಿಂಗ್​ ಜೊತೆಗೆ ಲೈವ್‌ಸ್ಟ್ರೀಮ್ ಮಾಡುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ರೇಲಿಂಗ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ವೇಳೆ ಯೂಟ್ಯೂಬರ್ ಕಿರುಚಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಜಾಕ್ ಮೆಕ್ಲಾರೆನ್ ಸೂಪರ್ ಕಾರನ್ನು $2,02,850.10 (ಅಂದರೆ 1.7 ಕೋಟಿ ರೂ.ಗಿಂತ ಹೆಚ್ಚು)ಗೆ ಖರೀದಿಸಿದ್ದ. ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿರುವುದನ್ನು ಕಂಡು ಪಶ್ಚಾತ್ತಾಪ ಪಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. @FearedBuck ಎಂಬ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಅ.05ರಂದು ಹಂಚಿಕೊಂಡಿರುವ ವಿಡಿಯೋ ಕೇವಲ 4 ದಿನಗಳಲ್ಲಿ 88.7 ಮಿಲಿಯನ್​ ಅಂದರೆ 8.8 ಕೋಟಿ ವೀಕ್ಷಣೆಯನ್ನು ಪಡೆದುಕೊಂಡಿದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget