ಬಿಡುಗಡೆಯಾದ 2ನೇ ದಿನದಲ್ಲೇ ವಿಶ್ವದಾದ್ಯಂತ ರೂ. 243 ಕೋಟಿ ಬಾಚಿದ ದೇವರ !
ತೆಲುಗಿನ ಖ್ಯಾತ ನಟ ಜ್ಯೂನಿಯರ್ NTR ಅಭಿನಯದ Devara ಭಾಗ-1 ಬಿಡುಗಡೆಯಾದ 2ನೇ ದಿನದಲ್ಲೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ರೂ. 200 ಕೋಟಿ ಕಲೆಕ್ಷನ್ ಮಾಡಿದೆ. ಚಿತ್ರ ತಯಾರಕರು ನಿರ್ಮಾಪಕರು ಭಾನುವಾರ ಅಧಿಕೃತವಾಗಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ಶುಕ್ರವಾರ ಬಿಡುಗಡೆಯಾದ Devara ಭಾಗ-1 ಮೊದಲ ದಿನವೇ ರೂ. 172 ಕೋಟಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಕೊರಟಲಾ ಶಿವ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ನ ಸೈಫ್ ಅಲಿಖಾನ್ ಹಾಗೂ ಜಾಹ್ನವಿ ಕಪೂರ್ ಕೂಡಾ ಅಭಿನಯಿಸಿದ್ದಾರೆ. ಅವರಿಬ್ಬರಿಗೂ ಇದು ತೆಲುಗಿನ ಚೊಚ್ಚಲ ಚಿತ್ರವಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಚಿತ್ರ ತಯಾರಕರು ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಹಿತಿ ಹಂಚಿಕೊಂಡಿದ್ದಾರೆ.
ಎಲ್ಲಾ ಕಡೆ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದು ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ರೂ. 243 ಕೋಟಿ ಕಲೆಕ್ಷನ್ ಮಾಡಿದೆ ಎಂದು ಫೋಸ್ಟ್ ಮಾಡಲಾಗಿದೆ. ಯುವಸುಧಾ ಅರ್ಟ್ಸ್,NTR ಆರ್ಟ್ಸ್ ನಿರ್ಮಿಸಿರುವ Devara ಭಾಗ 1 ನ್ನು ನಂದಮೂರಿ ಕಲ್ಯಾಣ ರಾಮ್ ಪ್ರಸ್ತುತಪಡಿಸಿದ್ದಾರೆ. ಇದು ಸಾಹಸ ಪ್ರಧಾನ ಚಿತ್ರವಾಗಿದ್ದು, ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಶುಕ್ರವಾರ ಬಿಡುಗಡೆಯಾಗಿದೆ.
Post a Comment