ಪುನೀತ್ ರಾಜ್ ಕುಮಾರ್ 3ನೇ ವರ್ಷದ ಪುಣ್ಯಸ್ಮರಣ: ಸಮಾಧಿಗೆ ಪೂಜೆ

 ನಟ ಪುನೀತ್ ರಾಜ್‌ಕುಮಾರ್ ಅವರು ಅಗಲಿ ಮೂರು ವರ್ಷ ಉರುಳಿದೆ.


ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರು ಅಗಲಿ ಮೂರು ವರ್ಷ ಉರುಳಿದೆ. ಮಂಗಳವಾರ (ಅ.29) ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಗಳು ವಂದಿತಾ, ನಟ ರಾಘವೇಂದ್ರ ರಾಜ್‌ಕುಮಾರ್ ದಂಪತಿ ಸೇರಿದಂತೆ ಕುಟುಂಬದ ಸದಸ್ಯರು ಇಲ್ಲಿನ ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.

2021ರ ಅ.29ರಂದು ಪುನೀತ್ ಅವರ ಅಕಾಲಿಕ ನಿಧನರಾಗಿದ್ದರು. ಪೂಜೆ ಸಲ್ಲಿಸಿದ ಬಳಿಕ ಅಶ್ವಿನಿ ಪುನೀತ್ ರಾಜ್‌ಕುಮಾ‌ರ್ ಹಾಗೂ ವಂದಿತಾ ಅವರು ಪುನೀತ್ ಅವರ ನೆಚ್ಚಿನ ತಿಂಡಿ, ಸಿಹಿ ತಿನಿಸುಗಳನ್ನು ಎಡೆ ಇಟ್ಟರು. ವರ್ಷ ಉರುಳಿದಂತೆ ಪುನೀತ್ ಅವರ ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮಂಗಳವಾರವೂ ಸಾವಿರಾರು ಜನರು ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಮೈಸೂರು ದಸರಾ ವಿದ್ಯುದ್ದೀಪಾಲಂಕಾರ ಮಾಡಿದವರೇ ಸಮಾಧಿ ಸುತ್ತಮುತ್ತ ವಿದ್ಯುದ್ದೀಪಾಲಂಕಾರ ಮಾಡಿದ್ದಾರೆ. ಪುಣ್ಯಭೂಮಿಯ ಆವರಣದಲ್ಲೇ ಅಭಿಮಾನಿಗಳು ನೇತ್ರದಾನದ ಪ್ರತಿಜ್ಞೆ ತೆಗೆದುಕೊಂಡರು. ಅನ್ನದಾನ ಮತ್ತು ರಕ್ತದಾನದ ಕಾರ್ಯಗಳೂ ನಡೆದವು. ಪುನೀತ್ ರಾಜ್‌ಕುಮಾರ್ ಹುಟ್ಟಿದ ವರ್ಷ, ನಿಧನರಾದ ವರ್ಷ ಹಾಗೂ 2024ರಲ್ಲಿ ಬಿಡುಗಡೆಗೊಂಡ ನಾಣ್ಯಗಳನ್ನು, ನೋಟ್‌ಗಳನ್ನು ಬಳಸಿಕೊಂಡು ರಚಿಸಿದ ಕಲಾಕೃತಿಗಳು ನೆರೆದವರನ್ನು ಸೆಳೆದವು.


'ಪ್ರತಿನಿತ್ಯವೂ ಅವನ ನೆನಪಿನಲ್ಲೇ ಇದ್ದೇವೆ. ದುಃಖ ಇನ್ನೂ ಇದೆ. ಜನಗಳ ಪ್ರೀತಿ ಕಮ್ಮಿ ಆಗುತ್ತಲೇ ಇಲ್ಲ. ಅವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪುನೀತ್ ಅವರ ಗುಣಗಳನ್ನು ನಿಮ್ಮಲ್ಲೂ ಮುಂದುವರಿಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಳ್ಳುತ್ತೇನೆ”

2021ರ ಅ.29ರಂದು ಪುನೀತ್ ಅವರ ಅಕಾಲಿಕ ನಿಧನರಾಗಿದ್ದರು. ಪೂಜೆ ಸಲ್ಲಿಸಿದ ಬಳಿಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ವಂದಿತಾ ಅವರು ಪುನೀತ್ ಅವರ ನೆಚ್ಚಿನ ತಿಂಡಿ, ಸಿಹಿ ತಿನಿಸುಗಳನ್ನು ಎಡೆ ಇಟ್ಟರು. ವರ್ಷ ಉರುಳಿದಂತೆ ಪುನೀತ್ ಅವರ ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮಂಗಳವಾರವೂ ಸಾವಿರಾರು ಜನರು ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಮೈಸೂರು ದಸರಾ ವಿದ್ಯುದ್ದೀಪಾಲಂಕಾರ ಮಾಡಿದವರೇ ಸಮಾಧಿ ಸುತ್ತಮುತ್ತ ವಿದ್ಯುದ್ದೀಪಾಲಂಕಾರ ಮಾಡಿದ್ದಾರೆ. ಪುಣ್ಯಭೂಮಿಯ ಆವರಣದಲ್ಲೇ ಅಭಿಮಾನಿಗಳು ನೇತ್ರದಾನದ ಪ್ರತಿಜ್ಞೆ ತೆಗೆದುಕೊಂಡರು. ಅನ್ನದಾನ ಮತ್ತು ರಕ್ತದಾನದ ಕಾರ್ಯಗಳೂ ನಡೆದವು. ಪುನೀತ್ ರಾಜ್‌ಕುಮಾರ್ ಹುಟ್ಟಿದ ವರ್ಷ, ನಿಧನರಾದ ವರ್ಷ ಹಾಗೂ 2024ರಲ್ಲಿ ಬಿಡುಗಡೆಗೊಂಡ ನಾಣ್ಯಗಳನ್ನು, ನೋಟ್‌ಗಳನ್ನು ಬಳಸಿಕೊಂಡು ರಚಿಸಿದ ಕಲಾಕೃತಿಗಳು ನೆರೆದವರನ್ನು ಸೆಳೆದವು.

'ಪ್ರತಿನಿತ್ಯವೂ ಅವನ ನೆನಪಿನಲ್ಲೇ ಇದ್ದೇವೆ. ದುಃಖ ಇನ್ನೂ ಇದೆ. ಜನಗಳ ಪ್ರೀತಿ ಕಮ್ಮಿ ಆಗುತ್ತಲೇ ಇಲ್ಲ. ಅವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪುನೀತ್ ಅವರ ಗುಣಗಳನ್ನು ನಿಮ್ಮಲ್ಲೂ ಮುಂದುವರಿಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಳ್ಳುತ್ತೇನೆ' ಎಂದು ನಟ ರಾಘವೇಂದ್ರ ರಾಜ್‌ಕುಮಾರ್ ಹೇಳಿದರು.


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget