ಟಿಟಿಡಿ ಹೊಸ ಅಧ್ಯಕ್ಷರಾಗಿ ಟಿವಿ5 ಮಾಧ್ಯಮ ಮುಖ್ಯಸ್ಥ ಬಿ.ಆರ್ ನಾಯ್ಡು

 


ಆಂಧ್ರ ಪ್ರದೇಶದಲ್ಲಿ ತೆಲುಗುದೇಶಂ, ಜನಸೇನಾ ಮತ್ತು ಬಿಜೆಪಿ ನೇತೃತ್ವದ ಎನ್ದಿಎ ಮೈತ್ರಿಕೂಟದ ಸರ್ಕಾರವು ಅಧಿಕಾರದಲ್ಲಿರುವಾಗ, ತಿರುಮಲ ತಿರುಪತಿ ದೇವಸ್ಥಾನದ ಮಂಡಳಿಗೆ ಹೊಸ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಲಾಗಿದೆ
.



ಅಮರಾವತಿ: ಆಂಧ್ರ ಪ್ರದೇಶದಲ್ಲಿ ತೆಲುಗುದೇಶಂ, ಜನಸೇನಾ ಮತ್ತು ಬಿಜೆಪಿ ನೇತೃತ್ವದ ಎನ್ದಿಎ ಮೈತ್ರಿಕೂಟದ ಸರ್ಕಾರವು ಅಧಿಕಾರದಲ್ಲಿರುವಾಗ,


ತಿರುಮಲ ತಿರುಪತಿ ದೇವಸ್ಥಾನದ ಮಂಡಳಿಗೆ ಹೊಸ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಲಾಗಿದೆ.



ಅ. 30 ರಿಂದ ಜಾರಿಗೆ ಬರುವಂತೆ, 21 ಸದಸ್ಯರ ಮಂಡಳಿಯನ್ನು ನೇಮಿಸುವ ಆದೇಶವನ್ನು ಚಂದ್ರಬಾಬು ನಾಯ್ಡು ಸರ್ಕಾರ ಹೊರಡಿಸಿದೆ. ಈ ಹೊಸ ಸದಸ್ಯರಲ್ಲಿ



ಕರ್ನಾಟಕದಿಂದ ಮೂವರು, ತೆಲಂಗಾಣದಿಂದ ಐವರು, ತಮಿಳುನಾಡಿನಿಂದ ಇಬ್ಬರು, ಹಾಗೂ ಗುಜರಾತ್ ಮತ್ತು ಮಹಾರಾಷ್ಟ್ರದಿಂದ ತಲಾ ಒಬ್ಬರು ಸ್ಥಾನ ಪಡೆದಿದ್ದಾರೆ. ಉಳಿದವರು ಆಂಧ್ರ ಪ್ರದೇಶದವರಾಗಿದ್ದಾರೆ.



ತಿರುಪತಿ ಲಡ್ಡುಗೆ ಅಪವಿತ್ರತೆ ಉಂಟಾದ ಘಟನೆನಂತರ, ಹಿಂದಿನ ಮುಖ್ಯಮಂತ್ರಿ ಯಸ್. ಜೆ.ಜಗನ್ ಮೋಹನ್ ರೆಡ್ಡಿಯ ಆಡಳಿತದಲ್ಲಿ ಟಿಟಿಡಿ ಮಂಡಳಿಯನ್ನು ಬರ್ಖಾಸ್ತುಗೊಳಿಸಲಾಗಿತ್ತು.



ಈ ಘಟನೆ ದೇಶಾದ್ಯಂತ ಗಂಭೀರ ಪ್ರತಿಸ್ಪಂದನವನ್ನು ಸೃಷ್ಟಿಸಿತು. ಇದೀಗ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಮಂಡಳಿಯ ಸದಸ್ಯರ ಹೆಸರನ್ನು ಅಂತಿಮಗೊಳಿಸಿದ್ದಾರೆ.





ಟಿವಿ5 ಸುದ್ದಿ ವಾಹಿನಿಯ ಮಾಲೀಕ ಮತ್ತು ಉದ್ಯಮಿ ಬೊಲ್ಲಿನೇನಿ ರಾಜಗೋಪಾಲ ನಾಯ್ಡು (ಬಿ.ಆರ್. ನಾಯ್ಡು) ಅನ್ನು ಟಿಟಿಡಿ ಮಂಡಳಿಯ ಅಧ್ಯಕ್ಷನಾಗಿ ಆಯ್ಕೆ ಮಾಡಲಾಗಿದೆ. ಭಾರತದ ಖಾತರಿಯಾದ ಬಯೋಟೆಕ್‌ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಸುಚಿತಾ ಏಲಾ ಕೂಡ ಹೊಸ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.

ಚಂದ್ರಬಾಬು ನಾಯ್ಡು ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ. ಮಾಜಿ ಅಧ್ಯಕ್ಷ ಕರುಣಾಕರ ರೆಡ್ಡಿ ಸೇರಿದಂತೆ ಎಲ್ಲಾ 24 ಸದಸ್ಯರು ರಾಜೀನಾಮೆ ನೀಡಿದ್ದಾರೆ. ಹೊಸ ಟ್ರಸ್ಟ್‌ನಲ್ಲಿ, ಕರ್ನಾಟಕದ ನ್ಯಾಯಮೂರ್ತಿ ಎಚ್‌.ಎಲ್‌. ದತ್ತು. ದರ್ಶನ್ ಆ‌ರ್.ಎನ್ ಮತ್ತು ನರೇಶ್ ಕುಮಾರ್ ಸೇರಿದ್ದಾರೆ.

ಹಿಂದಿನ ಟ್ರಸ್ಟ್‌ನಲ್ಲಿ, ಯಲಹಂಕ ಶಾಸಕ ಎಸ್.ಆ‌ರ್. ವಿಶ್ವನಾಥ್‌ ಮತ್ತು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಇದ್ದರು. ಹೊಸ 24 ಟ್ರಸ್ಟ್ ಸದಸ್ಯರ ವಿವರ ಹೀಗಿದೆ:

ಅಧ್ಯಕ್ಷರಾಗಿ ಬಿ.ಆರ್. ನಾಯ್ಡು, ಸದಸ್ಯರುಗಳಾದ ಪ್ರಶಾಂತಿ ರೆಡ್ಡಿ (ಕೊವೂರು ಶಾಸಕ), ಎಂ.ಎಸ್. ರಾಜು (ಮಡಕಶಿರಾ ಶಾಸಕ), ಜ್ಯೋತುಲ ನೆಹೂ (ಜಗ್ಗಂಪೇಟೆ ಶಾಸಕ), ಪ್ರಣಂಬಕ ಲಕ್ಷ್ಮೀ (ಮಾಜಿ ಕೇಂದ್ರ ಸಚಿವ), ಸಾಂಬಶಿವ ರಾವ್, ಸದಾಶಿವ ರಾವ್ ನಳಪ್ಪನ್ನೇನಿ, ಮಲ್ಲೇಲ ರಾಜಶೇಖರಗೌಡ. ಸುಚಿತಾ ಏಲಾ, ಜಂಗ ಕೃಷ್ಣಮೂರ್ತಿ, ಕೃಷ್ಣಮೂರ್ತಿ ಕೋಟೇಶ್ವರ ರಾವ್, `ಬುರುಗಾಪು ಆನಂದ ಸಾಯಿ, ಶಾಂತಾರಾಮ್.ಪಿ, ನರೇಶ್ ಕುಮಾರ್, ಸುರಬ್.ಎಚ್. ಬೋರಾ, ದರ್ಶನ್ ಆರ್.ಎನ್. ನ್ಯಾಯಮೂರ್ತಿ ಎಚ್.ಎಲ್. ದತ್ತು. ಪಿ. ರಾಮಮೂರ್ತಿ, ಡಾ. ಆದಿತ್ ದೇಸಾಯಿ, ಬೂನಗುನ್ನೂರು ಮಹೇಂದ್ರ ರೆಡ್ಡಿ, ಜಾನಕಿದೇವಿ ತಮ್ಮಿಶೆಟ್ಟಿ, ಅನುಗೋಲು ರಂಗಶ್ರೀ, ನರ್ಸಿ ರೆಡ್ಡಿ. ಕೃಷ್ಣಮೂರ್ತಿಗಳನ್ನು ನೇಮಿಸಲಾಗಿದೆ.


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget