500 ವರ್ಷಗಳ ನಂತರ ರಾಮಭಕ್ತರ ಅಸಂಖ್ಯಾತ ತ್ಯಾಗ, ತಪಸ್ಸಿನೊಂದಿಗೆ ಬಂದಿರುವ ಮಂಗಳಕರ ಕ್ಷಣ: ಪಿಎಂ ಮೋದಿ

 ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ನಂತರದ ಮೊದಲ ದೀಪಾವಳಿಯನ್ನು ಲಕ್ಷಾಂತರ ದೀಪ ಬೆಳಗುವ ಮೂಲಕ ಆಚರಿಸಲಾಗಿದ್ದು, ಪ್ರಧಾನಿ ಮೋದಿ ದೇವಾಲಯದ ಅನನ್ಯ ಸೌಂದರ್ಯದ ಬಗ್ಗೆ ಬಣ್ಣಿಸಿದ್ದಾರೆ.


ನವದೆಹಲಿ: "ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಬಳಿಕದ ಮೊದಲ ದೀಪಾವಳಿಯು, 500 ವರ್ಷಗಳ ನಂತರ "ರಾಮಭಕ್ತರ ಅಸಂಖ್ಯಾತ ತ್ಯಾಗ ಮತ್ತು ತಪಸ್ಸಿನೊಂದಿಗೆ" 


ಬಂದಿರುವ ಮಂಗಳಕರ ಕ್ಷಣವಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


"ದೈವಿಕ ಅಯೋಧ್ಯೆ!. ಭವ್ಯವಾದ ದೇವಾಲಯದಲ್ಲಿ ಪುಣ್ಯದ ಪ್ರತಿರೂಪವಾದ ಭಗವಾನ್ ಶ್ರೀರಾಮನ ಪ್ರತಿಷ್ಠಾಪನೆ ಸಮಾರಂಭದ ನಂತರ ಇದು ಮೊದಲ ದೀಪಾವಳಿಯಾಗಿದೆ. ಅಯೋಧ್ಯೆಯ ಶ್ರೀರಾಮ ಲಲ್ಲಾನ ದೇವಾಲಯದ ಅನನ್ಯ ಸೌಂದರ್ಯವು ಎಲ್ಲರನ್ನೂ ಮಂತ್ರ ಮುಗ್ದಗೊಳಿಸಿದೆ " ಎಂದು ಪ್ರಧಾನಿ ಅವರು ಎಕ್ಸ್​ ಖಾತೆಯಲ್ಲಿ ಬಣ್ಣಿಸಿದ್ದಾರೆ.



500 ವರ್ಷಗಳ ನಂತರ, ರಾಮಭಕ್ತರ ಅಸಂಖ್ಯಾತ ತ್ಯಾಗ ಮತ್ತು ತಪಸ್ಸಿನೊಂದಿಗೆ ಈ ಮಂಗಳಕರ ಕ್ಷಣ ಬಂದಿದೆ. ಈ ಐತಿಹಾಸಿಕ ಸಂದರ್ಭಕ್ಕೆ ನಾವೆಲ್ಲರೂ ಸಾಕ್ಷಿಯಾಗಿರುವುದು ನಮ್ಮ ಸೌಭಾಗ್ಯ" ಎಂದು ಸಂತಸ ಹಂಚಿಕೊಂಡಿದ್ದಾರೆ.



"ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಸಾಧಿಸುವಲ್ಲಿ ಭಗವಾನ್​ ಶ್ರೀರಾಮನ ಜೀವನ ಮತ್ತು ಅವರ ಆದರ್ಶಗಳು ದೇಶದ ಜನರಿಗೆ ಸ್ಫೂರ್ತಿಯಾಗಿ ಮುಂದುವರಿಯುತ್ತದೆ ಎಂಬ ವಿಶ್ವಾಸ ನನಗಿದೆ" ಎಂದು ಮೋದಿ ಹೇಳಿದ್ದಾರೆ.



ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ತನ್ನ ಎಕ್ಸ್​​​​ ಪೋಸ್ಟ್‌ನಲ್ಲಿ, ದೀಪಗಳಿಂದ ಬೆಳಗುತ್ತಿರುವ ದೇವಾಲಯದ ಫೋಟೋಗಳನ್ನು ಹಂಚಿಕೊಂಡಿದೆ.


ಇದಲ್ಲದೇ ಪ್ರತ್ಯೇಕ ಎಕ್ಸ್​​ ಪೋಸ್ಟ್​ನಲ್ಲಿ ಮೋದಿ ಅವರು "ಅಯೋಧ್ಯಾ ಧಾಮದಿಂದ ಹೊರಹೊಮ್ಮುವ ಈ ಬೆಳಕಿನ ಕಿರಣವು ದೇಶಾದ್ಯಂತ ಇರುವ ನನ್ನ ಕುಟುಂಬ ಸದಸ್ಯರಲ್ಲಿ ಹೊಸ ಉತ್ಸಾಹ ಮತ್ತು ಹೊಸ ಶಕ್ತಿಯನ್ನು ತುಂಬುತ್ತದೆ. ಭಗವಾನ್ ಶ್ರೀರಾಮನು ದೇಶದ ಎಲ್ಲ ಜನರಿಗೆ ಸಂತೋಷ, ಸಮೃದ್ಧಿ ಮತ್ತು ಜೀವನದಲ್ಲಿ ಯಶಸ್ಸನ್ನು ನೀಡಲಿ ಎಂದು ನಾನು ಬಯಸುತ್ತೇನೆ" ಎಂದು ಪ್ರಧಾನಿ ತಿಳಿಸಿದ್ದಾರೆ.



Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget