ನಿಮ್ಗೆ ಗೊತ್ತಾ...?? ನಿಮ್ಮ ಮೊಬೈಲ್ ಅಲ್ಲಿ ನೆಟ್‌ವರ್ಕ್ ಇಲ್ಲದಿದ್ದರೂ ಕಾಲ್ ಮಾಡಬಹುದು.. ಇದರ ಬಗ್ಗೆ ನೀವು ತಿಳ್ಕೊಂಡಿದ್ದೀರಾ..??



ಜಾಗತಿಕ ಉಪಗ್ರಹ ಸಂವಹನ ಕಂಪನಿ ವಿಸಾಟ್ ಸಹಯೋಗದೊಂದಿಗೆ BSNL ಡೈರೆಕ್ಟ್-ಟು-ಡಿವೈಸ್ ತಂತ್ರಜ್ಞಾನದ ಯಶಸ್ವಿ ಪ್ರಯೋಗವನ್ನು ಪೂರ್ಣಗೊಳಿಸಿದೆ. ಬಳಕೆದಾರರು ಈಗ ಯಾವುದೇ ಸಿಮ್ ಕಾರ್ಡ್ ಅಥವಾ ನೆಟ್‌ವರ್ಕ್ ಇಲ್ಲದೆಯೇ ಆಡಿಯೋ-ವೀಡಿಯೋ ಕರೆ ಮಾಡಬಹುದು. ಸರ್ಕಾರಿ-ಚಾಲಿತ ಟೆಲಿಕಾಂ ಕಂಪನಿಯ ಈ ಹೊಸ ತಂತ್ರಜ್ಞಾನವು ಬಳಕೆದಾರರಿಗೆ ಅವರ ಆಂಡ್ರಾಯ್ಡ್ ಅಥವಾ ಐಒಎಸ್ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳು ಅಥವಾ ಇತರ ಸ್ಮಾರ್ಟ್ ಸಾಧನಗಳಲ್ಲಿ ಸಂಪರ್ಕವನ್ನು ಒದಗಿಸುತ್ತದೆ. ಈ ಅದ್ಭುತ ಪ್ರಯೋಗ ಅನೇಕ ಜನರಿಗೆ ಸಹಕಾರಿ ಆಗಲಿದೆ. BSNL ಮತ್ತು Viasat ಕಮ್ಯುನಿಕೇಷನ್ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನವು ತುರ್ತು ಸಂದರ್ಭಗಳಲ್ಲಿ ನೆಟ್‌ವರ್ಕ್ ಇಲ್ಲದೆ ಕರೆ ಮಾಡುವ ಸೌಲಭ್ಯವನ್ನು ಬಳಕೆದಾರರಿಗೆ ಒದಗಿಸುತ್ತದೆ. ಅತ್ತ, ಇತರ ಟೆಲಿಕಾಂ ಆಪರೇಟರ್‌ಗಳಾದ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್-ಐಡಿಯಾ ಸಹ ತಮ್ಮ ಉಪಗ್ರಹ ಸಂಪರ್ಕ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ 2024 ರ ಸಮಯದಲ್ಲಿ ಏರ್‌ಟೆಲ್ ತನ್ನ ಉಪಗ್ರಹ ಇಂಟರ್ನೆಟ್ ಸೇವೆಯ ಡೆಮೊವನ್ನು ಸಹ ನೀಡಿದೆ. ಈ ಮೆಗಾ ಟೆಕ್ ಈವೆಂಟ್‌ನಲ್ಲಿ BSNL ತನ್ನ ಡೈರೆಕ್ಟ್-ಟು-ಡಿವೈಸ್ ಸೇವೆಯನ್ನು ಯಶಸ್ವಿಯಾಗಿ ಪ್ರಯೋಗಿಸಿದೆ.ಡೈರೆಕ್ಟ್-ಟು-ಡಿವೈಸ್ ಎನ್ನುವುದು ಉಪಗ್ರಹ ಸಂವಹನವನ್ನು ಆಧರಿಸಿದ ಸಂಪರ್ಕ ಸೇವೆಯಾಗಿದೆ, ಇದರಲ್ಲಿ ಯಾವುದೇ ಮೊಬೈಲ್ ಟವರ್‌ಗಳು ಅಥವಾ ವೈರ್‌ಗಳಿಲ್ಲದೆ ಒಂದು ಸಾಧನವನ್ನು ಇನ್ನೊಂದಕ್ಕೆ ಸಂಪರ್ಕಿಸಬಹುದು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget