ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11) ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭರ್ಜರಿ ಸದ್ದು ಮಾಡಿದ್ದ ಲಾಯರ್ ಜಗದೀಶ್ (Lawyer Jagadish) ಮತ್ತೆ ʼಬಿಗ್ ಬಾಸ್ʼ ನಡೆಸಿಕೊಡುವ ಕಲರ್ಸ್ ವಾಹಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.
ದೊಡ್ಮನೆಗೆ ಎಂಟ್ರಿ ಕೊಟ್ಟು ಸಹ ಸ್ಪರ್ಧಿಗಳಿಗೆ ಟಾಂಗ್ ಕೊಡುತ್ತಾ ಅವರೊಂದಿಗೆ ವಾಗ್ವಾದಕ್ಕಿಳಿದು ಕಿರಿಕ್ ಮಾಡಿಕೊಂಡಿದ್ದ ಜಗದೀಶ್ ಅವರನ್ನು ಮಹಿಳಾ ಸ್ಪರ್ಧಿಗಳ ಮೇಲೆ ನಿಂದನೀಯ ಪದಗಳ ಬಳಕೆ ಮಾಡಿದ ಆರೋಪದ ಮೇಲೆ ಬಿಗ್ ಬಾಸ್ ಮನೆಯಿಂದ ಆಚೆ ಹಾಕಲಾಗಿತ್ತು. ಇವರೊಂದಿಗೆ ಜಗದೀಶ್ ಮೇಲೆ ದೈಹಿಕ ಹಲ್ಲೆಗೆ ಮುಂದಾದ ರಂಜಿತ್ ಅವರನ್ನು ಸಹ ಹೊರಗೆ ಹಾಕಲಾಗಿತ್ತು.ಬಿಗ್‌ಬಾಸ್‌ನಿಂದ ಆಚೆ ಬಂದ ಬಳಿಕ ಜಗದೀಶ್ ʼಕ್ರಷ್ ಆಫ್ ಕರ್ನಾಟಕʼ ಆಗಿ ಫೇಮ್ ಗಿಟ್ಟಿಸಿಕೊಂಡಿದ್ದಾರೆ. ಅವರು ಮತ್ತೆ ಬಿಗ್ ಬಾಸ್ ಗೆ ಬರಬೇಕೆನ್ನುವ ಕೂಗು ಒಂದು ಕಡೆ ಕೇಳಿ ಬರುತ್ತಿದ್ದು, ಇನ್ನೊಂದು ಕಡೆ ಈ ಬಗ್ಗೆ ಮೌನವಾಗಿರುವ ಜಗದೀಶ್ ಹತ್ತಾರು ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ಪ್ರಸಾರವಾಗುವ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಅಡುಗೆ ಕಾರ್ಯಕ್ರಮ ʼಸವಿರುಚಿ ಸೀಸನ್ -3ʼ ರಲ್ಲಿ ಜಗದೀಶ್ ಅವರು ಅತಿಥಿಯಾಗಿ ಆಗಮಿಸಿದ್ದು, ಕಾರ್ಯಕ್ರಮದ ಪ್ರೋಮೊ ರಿಲೀಸ್ ಮಾಡಲಾಗಿದೆ. “ನಾನು ನಿಮ್ಮ ಪ್ರೀತಿಯ ಜಗದೀಶ್” ಎಂದು ಸ್ಟೈಲ್ ಆಗಿಯೇ ʼಕ್ರಷ್ ಆಫ್ ಕರ್ನಾಟಕʼ ಕಲರ್ಸ್ ಕಿಚನ್‌ಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ವಿಶೇಷ ರೆಸಿಪಿ ಮಾಡುತ್ತಾ ಅವರು ಬಿಗ್ ಬಾಸ್ ಮನೆಯಲ್ಲಿನ ಅನೇಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಮಜ್ಜಿಗೆ ನೋಡಿದರೆ ತಿವಿಕ್ರಮ್ ಹಾಗೂ ರಂಜಿತ್ ಅವರು ನೆನಪು ಆಗುತ್ತಾರೆ ಅವರು ಹಂಸಾನ ಕಿತ್ತುಕೊಂಡರು ಎಂದು ಹೇಳಿದ್ದಾರೆ. ಹಂಸ ಮೇಲೆ ನಿಮಗೆ ಲವ್ ಆಗಿತ್ತಾ ಎನ್ನುವ ಪ್ರಶ್ನೆಗೆ ಜಗದೀಶ್ ಅವರು ಜೋರಾಗಿ ನಕ್ಕಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
Post a Comment