ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಮಂಡ್ಯ ಅಭಿಮಾನಿ


 ಮಂಡ್ಯ : ಮುಡಾ ಹಗರಣದಲ್ಲಿ ನೀವು ರಾಜೀನಾಮೆ ನೀಡಬಾರದು. ನಿಮ್ಮೊಂದಿಗೆ ನಾವಿದ್ದೇವೆ ಎಂದು ರಕ್ತದಲ್ಲಿ ಅಭಿಮಾನಿ ಒಬ್ಬರು ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಜಿಲ್ಲೆಯ ಮೊತ್ತಹಳ್ಳಿಯವರಾದ ಸಚಿನ್​ ಎಂಬುವವರು ಸಿಎಂಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಅರಸು ಬಳಿಕ ಅತಿಹೆಚ್ಚು ಸರ್ಕಾರಿ ಯೋಜನೆ ನೀಡಿದ್ದೀರಿ. ಬಡಜನರಿಗೆ ಅತಿ ಹೆಚ್ಚು ಯೋಜನೆ ನೀಡಿದ ಸಿಎಂ ನೀವು. ಬಡವರ, ದೀನ‌ ದಲಿತರ ಪರವಾಗಿರುವಂಥ ಸಿಎಂ ನೀವು. ಹಾಗಾಗಿ ರಾಜೀನಾಮೆ ನೀಡಬಾರದು ಎಂದಿದ್ದಾರೆ. 


ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್​ ದಾಖಲಾಗಿದೆ. ರಾಜೀನಾಮೆ ನೀಡುವಂತೆ ಆಗ್ರಹ ಕೇಳಿಬರುತ್ತಿದೆ. ಈ ನಡುವೆ ಮಂಡ್ಯದ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ರಾಜೀನಾಮೆ ನೀಡದಂತೆ ತಮ್ಮ ರಕ್ತದಲ್ಲಿ ಪತ್ರ ಬರೆದಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ಹೇಳಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget