ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಒಂದಿಬ್ಬರು ಸಿಬ್ಬಂದಿಗಳು ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾದ ಘಟನೆ ವರದಿಯಾಗಿದ್ದು ಅವರ ಮೇಲೆ ಮೇಲಾಧಿಕಾರಿಗಳು ಕಠಿಣ ಕ್ರಮ ಕೈಗೊಂಡ ಘಟನೆ ವರದಿಯಾಗಿದೆ.
ಇತ್ತೀಚೆಗೆ ಖಾಸಗಿ ನೆಲೆಯಲ್ಲಿ ವಸತಿಗೃಹ ನೋಡಿಕೊಳ್ಳುವ ಜವಾಬ್ದಾರಿಯಲ್ಲಿದ್ದ ವ್ಯಕ್ತಿಯೊಬ್ಬರು ಅಮಲೇರಿಸಿ ಕರ್ತವ್ಯದಲ್ಲಿರುವುದನ್ನು ಪತ್ತೆ ಹಚ್ಚಿ ಪರಿಶೀಲನೆ ಮಾಡಿದಾಗ ಮದ್ಯಪಾನ ಮಾಡಿರುವುದು ತಿಳಿದುಬಂದಿದ್ದು ಆತನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಪರಿಶೀಲಿಸಲಾಗಿದೆ. ಆತ ಕರ್ತವ್ಯದಲ್ಲಿದ್ದಾಗಲೆ ಮದ್ಯ ಸೇವಿಸಿರುವುದು ದೃಡ ಪಟ್ಟಿದೆ. ಆದ್ದರಿಂದ ಆತನನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿರುವುದಾಗಿ ತಿಳಿದು ಬಂದಿದೆ. ಮತ್ತೊಂದು ಘಟನೆಯಲ್ಲಿ ಖಾಯಂ ಗೊಂಡ ನೌಕರರೊಬ್ಬರು ಮದ್ಯ ಸೇವಿಸಿ ಕರ್ತವ್ಯಕ್ಕೆ ಬಂದಿರುವುದು ದೃಡ ಪಟ್ಟಿದ್ದು ಅವರಿಗೆ ನೋಟೀಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವೋಚರ್ ಬೆಸಿಸ್, ದಿನಗೂಲಿಯಲ್ಲಿ, ಭದ್ರತಾ ಸಿಬ್ಬಂದಿಗಳು, ಖಾಯಂ ನೌಕರರು ಹೀಗೆ ಬೇರೆ ಬೇರೆ ವಿಭಾಗದಲ್ಲಿ ಸಿಬ್ಬಂದಿಗಳಿದ್ದು ತಪ್ಪಿ ನಡೆಯುವವರ ಮೇಲೆ ಆಡಳಿತಾಧಿಕಾರಿ ಜುಬಿನ್ ಮಹಾಪಾತ್ರ, ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಇವರುಗಳ ದಿಟ್ಟ ಕ್ರಮ ಅಶಿಸ್ತು ಪ್ರದರ್ಶಿಸುವ ನೌಕರರಿಗೆ ಬಿಸಿ ಮುಟ್ಟಿಸಿದೆ. ಅಲ್ಲದೆ ಸಮವಸ್ತ್ರದಲ್ಲೇ ಕರ್ತವ್ಯ ನಿರ್ವಹಿಸುವುದನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗಿರುವುದಾಗಿ ತಿಳಿದು ಬಂದಿದೆ.
Post a Comment