ಮೈಸೂರು: ಚನ್ನಪಟ್ಟಣ ಚುನಾವಣೆಗೆ ನನ್ನ ಕುಟುಂಬದವರಲ್ಲ, ನಾನೇ ಅಭ್ಯರ್ಥಿ ಎಂಬವನ್ನು ಡಿಕೆ ಶಿವಕುಮಾರ್ ಸಂದೇಶ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಚನ್ನಪಟ್ಟಣದಲ್ಲಿ ನಾವು ವೇದಿಕೆಯನ್ನು ಸೆಟ್ ಮಾಡಿಕೊಳ್ಳುತ್ತಾ ಇದ್ದೇವೆ. ಎಂಪಿ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಹಿನ್ನಡೆ ಆಗಿತ್ತು. ಎಂಎಲ್‌ಎ ಚುನಾವಣೆಯಲ್ಲಿ ಹೆಚ್ಚು ಹಿನ್ನಡೆಯಾಗಿತ್ತು. ಈಗ ನಮ್ಮ ಬೇಸ್ ಸ್ಟ್ರಾಂಗ್ ಮಾಡ್ತಾ ಇದ್ದೀವಿ. ನಮ್ಮ ಕೆಲಸಕ್ಕೆ ಜನರು ನಮ್ಮ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ಇದೆ’ ಎಂದರು.
ಇನ್ನು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಮಾತನಾಡುತ್ತಾ, ಅವರ ಪಕ್ಷದಲ್ಲಿ ಯಾರೂ ಬೇಕಾದರೂ ಸ್ಪರ್ಧಿಸಲಿ. ಅವರ ಅವರ ಪಕ್ಷದ ಆಯ್ಕೆ. ನಾನು ಅವರ ಆಯ್ಕೆಯ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಚನ್ನಪಟ್ಟಣದಲ್ಲಿ ವ್ಯಕ್ತಿ ಮೇಲೆ ಚುನಾವಣೆ ನಡೆಯುವುದಿಲ್ಲ. ಪಕ್ಷದ ಸಿದ್ಧಾಂತದ ಮೇಲೆ ಚುನಾವಣೆ ಮಾಡಲು ಹೊರಟಿದ್ದೇನೆ. ಯಾರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಲಿ, ನಾವದರ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಮನೆಯನ್ನು ನಾವು ರಿಪೇರಿ ಮಾಡಿಕೊಂಡ್ರೆ ಸಾಕು ಎಂದರು.
Post a Comment