ಸಾಮರಸ್ಯ ವೇದಿಕೆ ಸುಳ್ಯ ವತಿಯಿಂದ ನಗರದ ನಾವೂರು ಕಾಲೋನಿ ಯಲ್ಲಿ ದೀಪಾವಳಿ ತುಡರ್ ಕಾರ್ಯಕ್ರಮ ನಡೆಯಿತು.
.
ಕಲ್ಕುಡ ದೈವಸ್ಥಾನದಿಂದ ದೀಪ ಪ್ರಜ್ವಲಿಸಿ ನಾವೂರು ಕಾಲೋನಿ ಮನೆಗಳಿಗೆ ಹಣತೆ ಬೆಳಗಲಾಯಿತು. ಈ ಸಂದರ್ಭದಲ್ಲಿ ಅರೆಸೆಸ್ಸ್ ಮಂಗಳೂರು ವಿಭಾಗ ಸಹಕಾರ್ಯವಾಹ ಸುಭಾಶ್ ಕಳಂಜ ತುಡರ್ ಮತ್ತು ಸಾಮರಸ್ಯದ ಬಗ್ಗೆ ಮಾತನಾಡಿದರು.
ಸ್ಥಳೀಯ ಹಿರಿಯರಾದ ಹುಕ್ರ,ಕಂಜಲ, ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನಿರಬೀದಿರೆ, ಕಲ್ಕುಡ ದೈವಸ್ಥಾನ ಸಮಿತಿ ಅಧ್ಯಕ್ಷರಾದ ಪಿ.ಕೆ ಉಮೇಶ್ ಉಪಸ್ಥಿತರಿದ್ದರು.
ಸ್ಥಳೀಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಎ.ಟಿ.ಕುಸುಮಾಧರ ಕಾರ್ಯಕ್ರಮ ನಿರೂಪಿಸಿ,ಸಾಮರಸ್ಯ ಸಹ ಸಂಚಾಲಕ ಶೀನಪ್ಪ ಬಯಂಬು ವಂದಿಸಿದರು.
ಮಳೆಯ ನಡುವೆ ನೂರಾರು ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Post a Comment