ಸುಳ್ಯ:ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇವಾ ವಿಭಾಗ ಸುಳ್ಯ ತಾಲೂಕು,ಸೇವಾ ಭಾರತಿ ಹೆಲ್ಫ್ ಲೈನ್ ಟ್ರಸ್ಟ್ (ರಿ) ಸುಳ್ಯ,ನಿವೇದಿತಾ ಮಹಿಳಾ ಜಾಗೃತಿ ಟ್ರಸ್ಟ್ (ರಿ) ಸುಳ್ಯ ವತಿಯಿಂದ ಬಾಲ ಗೋಕುಲ ಪ್ರಶಿಕ್ಷಣ ವರ್ಗ ಗುತ್ತಿಗಾರಿನ ದೀನ ದಯಾಳ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಗುತ್ತಿಗಾರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಅರೆಸೆಸ್ಸ್ ವಿಭಾಗ ಸಹ ಕಾರ್ಯವಾಹ ಸುಭಾಶ್ಚಂದ್ರ ಕಳಂಜ ಪ್ರಸ್ತಾವನೆ ನಡೆಸಿದರು, ವೇದಿಕೆಯಲ್ಲಿ ಸುಳ್ಯ ತಾಲೂಕು ಅರೆಸೆಸ್ಸ್ ಸಂಘ ಚಾಲಕ್ ಚಂದ್ರಶೇಖರ ತಳೂರು ಉಪಸ್ಥಿತರಿದ್ದರು. ಬಾಲಗೋಕುಲ ದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಶ್ರೀ ಪುಂಡರೀಕ್ಷಾ ರು ಮಾಹಿತಿ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಬಾಲಗೋಕುಲ ಪ್ರಮುಖರಾದ ವಸಂತ್ ಕಾಟಿಪಳ್ಳ ಮಾತನಾಡಿದರು ವೇದಿಕೆಯಲ್ಲಿ ಸೇವಭಾರತಿ ಹೆಲ್ಫ್ ಲೈನ್ ಟ್ರಸ್ಟ್ ನ ಆರ್. ಕೆ. ಭಟ್ ಬೆಳ್ಳಾರೆ,ನೀವೆದಿತಾ ಟ್ರಸ್ಟ್ ನಿರ್ದೇಶಕಿ ಲೋಲಕ್ಷಿ ದಾಸನಕಜೆ, ಉಪಸ್ಥಿತರಿದ್ದರು.ತಾಲೂಕಿನ ವಿವಿಧ ಭಾಗಗಳಿಂದ ಸುಮಾರು 150 ಕ್ಕೂ ಹೆಚ್ಚು ಮಹಿಳೆಯರು ಈ ಪ್ರಶಿಕ್ಷಣ ದಲ್ಲಿ ಭಾಗಿಯಾಗಿದ್ದರು.
Post a Comment