ವಿಧಾನ ಪರಿಷತ್ ಉಪಚುನಾವಣೆಗೆ ಕಸ್ತೂರಿ ರಂಗನ್ ವರದಿಯ ಬಿಸಿ ಮುಟ್ಟಿದೆ. ಬೈಂದೂರು ಕ್ಷೇತ್ರದ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಶೂನ್ಯ ಮತದಾನ ನಡೆದಿದೆ. ಉಡುಪಿ ಜಿಲ್ಲಾಡಳಿತ, ತಾಲೂಕು ಆಡಳಿತ, ಹೆಚ್ಚುವರಿ ಜಿಲ್ಲಾಧಿಕಾರಿ, ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳ ಕೊನೆಕ್ಷಣದ ವರೆಗಿನ ಪ್ರಯತ್ನದ ಹೊರತಾಗಿಯೂ ಕೆರಾಡಿ ಮತ್ತು ಜಡ್ಕಲ್ ಗ್ರಾಮ ಪಂಚಾಯಿತಿ ಸದಸ್ಯರು ಚುನಾವಣೆ ಬಹಿಷ್ಕಾರದ ತಮ್ಮ ಅಚಲವಾದ ನಿರ್ಧಾರದಿಂದ ಹಿಂದೆ ಸರಿದಿಲ್ಲ.
ಜಡ್ಕಲ್ ಗ್ರಾಮ ಪಂಚಾಯಿತಿಯ 18 ಸದಸ್ಯರ ಪೈಕಿ ಬಿಜೆಪಿ ಬೆಂಬಲಿತ 10 ಮಂದಿ ಸದಸ್ಯರು, ಕಾಂಗ್ರೆಸ್ ಬೆಂಬಲಿತ 8 ಮಂದಿ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸದ ಪರಿಣಾಮ ಶೂನ್ಯ ಮತದಾನ ದಾಖಲಾಗಿದೆ. ಅದೇ ರೀತಿ 14 ಸದಸ್ಯ ಬಲದ ಕೆರಾಡಿ ಗ್ರಾಮದಲ್ಲಿ ಬಿಜೆಪಿ ಬೆಂಬಲಿತ 8 ಮಂದಿ. ಸದಸ್ಯರು, ಕಾಂಗ್ರೆಸ್ ಬೆಂಬಲಿತ 6 ಮಂದಿ ಸದಸ್ಯರು ಮತದಾನದಲ್ಲಿ ಭಾಗವಹಿಸದ ಪರಿಣಾಮ ಅಲ್ಲಿಯೂ ಶೂನ್ಯ ಮತದಾನ ನಡೆಯಿತು.
ಕಸ್ತೂರಿರಂಗನ್ ವರದಿಯ ಅವೈಜ್ಞಾನಿಕ ಹೇರಿಕೆ ಜನಸಾಮಾನ್ಯರ ಬದುಕು ದುರ್ಬರಗೊಂಡಿದೆ. ಪರಿಸರ ಸೂಕ್ಷ್ಮವಲಯದಿಂದ ಗ್ರಾಮ ಪಂಚಾಯಿತಿ ಕೈಬಿಡಬೇಕು. ವಾಣಿಜ್ಯ ಭೂಪರಿವರ್ತನೆಗೆ ಪೂರ್ವಾನುಮತಿ ಪಡೆಯಬೇಕೆಂಬ ಆದೇಶ ಹಿಂಪಡೆಯುವ ತನಕ ಮುಂದಿನ ಯಾವುದೇ ಚುನಾವಣೆಯಲ್ಲಿಯೂ ಮತದಾನ ಮಾಡುವ ಪ್ರಶ್ನೆಯೇ ಉದ್ಭವಿಸಲ್ಲ, ನಮ್ಮ ನಿರ್ಧಾರ ಅಚಲ.
-ದೇವದಾಸ್ ಜಡ್ಕಲ್, ಗ್ರಾ.ಪಂ. ಹಿರಿಯ ಸದಸ್ಯ.
ಭಾವನೆಗೆ ಸ್ಪಂದಿಸಿ. ಜನರ ಅಭಿಮತದಿಂದ ಮತದಾನದಲ್ಲಿ ಭಾಗವಹಿಸಿಲ್ಲ. ಮುಂದೆಯೂ ಭಾಗವಹಿಸಲಾರೆವು. ಎಲ್ಲಿಯ ತನಕ ಕಸ್ತೂರಿರಂಗನ್ ವರದಿಯ ಭೀತಿ ಪಂಚಾಯಿತಿಯಿಂದ ದೂರ ಸರಿಯುವುದಿಲ್ಲವೊ ಅಲ್ಲಿಯ ತನಕ ನಮ್ಮ ಹೋರಾಟ ಮುಂದುವರಿಯಲಿದೆ.
-ಸುದರ್ಶನ್ ಶೆಟ್ಟಿ, ಅಧ್ಯಕ್ಷ, ಕೆರಾಡಿ ಗ್ರಾಮ ಪಂಚಾಯಿತಿ.
Post a Comment