ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ
ರಾಷ್ಟ್ರೀಯ ವಿಚಾರಧಾರೆ ಮೂಲಕ ಸಮಾಜದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಗತ್ತಿನ ಅತೀ ದೊಡ್ಡ ಸಂಘಟನೆ ಅರೆಸೆಸ್ಸ್ ಗೆ ನೂರಾರ ಸಂಭ್ರಮ ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅರೆಸೆಸ್ಸ್ ಜೇಷ್ಠ ಪ್ರಚಾರಕ ಸು.ರಾಮಣ್ಣ ರ ಬರಹ
1980 ರ ದಶಕದಲ್ಲಿ ಲಂಡನ್ ಪ್ರಖ್ಯಾತ ಸುದ್ದಿ ಸಂಸ್ಥೆ ಬಿ.ಬಿ.ಸಿ.ಯಲ್ಲಿ ಒಂದು ರಸಪ್ರಶ್ನೆ (ಕ್ವಿಜ್)ಯ ಕಾರ್ಯಕ್ರಮ. ಕ್ವಿಡ್ ಮಾಸ್ಟರ್ ಒಂದು ಪ್ರಶ್ನೆ ಕೇಳಿದರಂತೆ " ಜಗತ್ತಿನಲ್ಲಿ ಅತಿ ದೊಡ್ಡದಾದ ಸ್ವಯಂಸೇವಾ ಖಾಸಗಿ ಸಂಘಟನೆ ಯಾವುದು'' ಭಾಗವಹಿಸಿದ್ದ ಸ್ಪರ್ಧಿಗಳು ಉತ್ತರ ಗೊತ್ತಿಲ್ಲದೆ ಸುಮ್ಮನಿದ್ದರು. ಆಗ ಕ್ವಿಜ್ ಮಾಸ್ತರ್, ಹೇಳಿದರು. ''ಜಗತ್ತಿನಲ್ಲಿ ಅತಿ ದೊಡ್ಡದಾದ ಸ್ವಯಂಸೇವಾ ಸಂಘಟನೆ ಭಾರತದ ರಾಷ್ಟ್ರೀಯ ಸ್ವಯಂಸೇವಕ ಸಂಘ'',
ಹೌದು ನಿಜವೇ, ಇದಾಗಿ ನಾಲ್ಕು ದಶಕಗಳು ಉರುಳಿ ಹೋಗಿವೆ. ಈಗ ಸಂಘದ ಗಾತ್ರ ಮುಮ್ಮಡಿಯಾಗಿ ಬೆಳೆದಿದೆ. ಆಗ ದೇಶದಾದ್ಯಂತ 20 ಸಾವಿರ ಇದ್ದ ಶಾಖೆಗಳ ಸಂಖ್ಯೆ ಈಗ 70 ಸಾವಿರಕ್ಕೇರಿದೆ.
99 ವರ್ಷಗಳ ಹಿಂದೆ ವಿಜಯ ದಶಮಿಯಂದು ಡಾ. ಕೇಶವ ಬಲಿರಾಂ ಹೆಡ್ಡೆವಾರ್ ಎಂಬ ಜನ್ಮಜಾತ ದೇಶಭಕ್ತರು ಹತ್ತಾರು ಕಿಶೋರರನ್ನು ತಮ್ಮ ನಿವಾಸದಲ್ಲಿ ಸೇರಿಸಿ, ಇಂದು ನಾವು ಸಂಘವನ್ನು ಸ್ಥಾಪಿಸುತ್ತಿದ್ದೇವೆ ಎಂದು ಘೋಷಿಸಿದರು. ತಮಟೆ, ಜಾಗಟೆಗಳ ಸದ್ದು ಗದ್ದಲವಾಗಲೀ, ಪ್ರಚಾರ ಪ್ರಸಿದ್ದಿಗಳ ಆಡಂಬರವಾಗಲಿ ಅಲ್ಲಿ ಇರಲಿಲ್ಲ. ಮಣ್ಣಿನಲ್ಲಿ ಹೂತುಹೋಗಿದ್ದ ವಟವೃಕ್ಷದ ಬೀಜ ಮೊಳೆಯುವಂತೆ ಸಂಘದ ಸಸಿ ಅಂದು ಜನಿಸಿತು.
ಯಾರೊಬ್ಬರ ಗಮನವನ್ನು ಸೆಳೆಯದೆ ಮೌನವಾಗಿ, ಮನೆಯ ಮೂಲೆಯೊಂದರಲ್ಲಿ ಹುಟ್ಟಿದ ಆ ಸಸಿ ಇಂದು ವಿಶಾಲ ವೃಟವೃಕ್ಷದಂತೆ ದೇಶದ ಉದ್ದಗಲಕ್ಕೆ ಮಾತ್ರವಲ್ಲದೆ, ಎಲ್ಲೆಲ್ಲಿ ಹಿಂದುಗಳ ವಸತಿ ಇದೆಯೋ ಅಂತಹ ಎಲ್ಲ ದೇಶಗಳಲ್ಲೂ ಈ ಸಂಘಟನೆಯ ಹರಹು ವಿಸ್ತರಿಸಿದೆ ಎಂಬುವುದರಲ್ಲಿ ಉತ್ತೇಕ್ಷೆ ಎಳ್ಳಷ್ಟೂ ಇಲ್ಲ.
ಉಪೇಕ್ಷ, ವಿರೋಧ, ಸ್ವೀಕಾರಗಳ ಮೂರು ಹಂತಗಳು: ತನ್ನ ನೂರು ವರ್ಷಗಳ ಅಖಂಡ ಜೀವನ ಯಾತ್ರೆಯಲ್ಲಿ ಸಂಘವು ಪ್ರಾರಂಭದ ಉಪೇಕ್ಷೆ ಉಪಹಾಸ ಅಪಹಾಸ್ಯಗಳ ಹಂತವನ್ನು ದಾಟಿದ ನಂತರ ಸಾಧಾರಣ 5 ದಶಕಗಳು ಸಂಘದ್ದು ಅಗ್ನಿ ಪರೀಕ್ಷೆಯ ಕಾಲಖಂಡ ಗಾಂಧೀಜಿ ಹತ್ಯೆಯ ಮಿತ್ಯಾರೋಪ, ಆಳುವ ನಮ್ಮವರದೇ ಸರ್ಕಾರದ ಗದಾಪ್ರಹಾರಗಳು, ವೈಚಾರಿಕ ವಲಯದಿಂದ ಆಕ್ರಮಣಗಳು ಪ್ರಚಾರ ಮಾಧ್ಯಮಗಳ ಪೂರ್ವಾಗ್ರಹದ ಅಪಪ್ರಚಾರಗಳು... ಹೀಗೆ ವಿಟನ ಮೇಲೆ ಬಟುಗಳು.
ಎಲ್ಲವನ್ನು ಅತ್ಯಂತ ತಾಳ್ಮೆಯಿಂದ ಸಹಿಸುತ್ತಾ, ಎದುರಿಸುತ್ತಾ ಪ್ರತಿಕ್ರಿಯೆಗಳನ್ನು ತೋರಿಸದೆ, ತನ್ನ ಹದವನ್ನು ವಿಸ್ತಾರಗೊಳಿಸುತ್ತ ಬೆಳೆದು ಬಂದ ಪರಿ ಅದ್ಭುತ. ಆರ್‌ಎಸ್ಎಸ್ ಇಂದು ಒಂದು ವೈಕ್ತಿಕ ವಿಸ್ಮಯ !
ಇದೀಗ ಒಂದೆರಡು ದಶಕಗಳಿಂದ ಸಂಘವು ಅಗ್ನಿ ಪರೀಕ್ಷೆಯಲ್ಲಿ ವಾರಾಗಿ, ದೇಶ, ವಿದೇಶಗಳ ಸ್ವೀಕಾರದ, ಮತ್ತು ಮಾನ್ಯತೆಯ ಮೂರನೇ ಹಂತವನ್ನು ಪ್ರವೇಶಿಸಿರುವುದು ಸಂಘದ ಹೆಗ್ಗಳಿಕೆಯೇ ಸರಿ.
ಸಂಘದ ಮೂಲ ಉದ್ದೇಶ ಹಾಗೂ ಉದ್ದೇಶಕ್ಕೆ ತಕ್ಕಂತೆ ಸಂಘದ ಸಾಧನೆ: ಮೊತ್ತ ಮೊದಲಾಗಿ ಒಂದು ಸೃಷ್ಟಿಕರಣ, 'ಹಿಂದುತ್ವ'ದೆ ಅನಾವರಣವೇ ಸಂಘದ ಉದ್ದಿಶ್ಯ ಎಂದಾಗ, ಅಹಿಂದುಗಳ ವಿರೋಧ ಎಂಬ ಅರ್ಥವಿಲ್ಲದ ಟೀಕೆ ಟಿಪ್ಪಣಿಗಳು ನಾಲ್ಕೂ ಕಡೆಯಿಂದ ಬಂದದ್ದು, ಈಗಲೂ
ಬರುತ್ತಿರುವುದು ಆಶ್ಚರ್ಯಕರವೇ.
ಒಬ್ಬ ವ್ಯಕ್ತಿ ತನ್ನ ಆರೋಗ್ಯ, ಆಯುಷ್ಯಗಳನ್ನು ಸುಧಾರಿಸಿಕೊಳ್ಳಲು ನಿತ್ಯ ವ್ಯಾಯಾಮ ಮಾಡಿದ ಅನ್ನಿ. ಓಹೋ ಇದು ನಮ್ಮ ಮೇಲೆ ಆಕ್ರಮಣ ಮಾಡುವ ಒಂದು ಷಡ್ಯಂತ್ರ ಅಂತ ನೆರೆಯವನು ಯೋಚಿಸುವುದು ಎಷ್ಟರ ಮಟ್ಟಿಗೆ ಸರಿ? ಸಂಘ ಕಾರ್ಯವು ಎಂದೂ ಪ್ರತಿಕ್ರಿಯೆಯದೂ ಅಲ್ಲ,
ವಿರೋಧಾತ್ಮಕವೂ ಅಲ್ಲ, ಯಾರೊಟ್ಟಿಗೂ ಸ್ಪರ್ಧೆಯೂ ಅಲ್ಲ. ಹಿಂದು ಎಂದರೇನೇ, ' ಸರ್ವೇಷಾಂ ಅವಿರೋಧನ' ಎಂಬಂತೆ ಹಿಂದುವಿನ ಘೋಷಣೆಯೇ 'ಲೋಕಾ ಸಮಸ್ತಾ ಸುಖಿನೋ ಭವಂತು', 'ಇಡೀ ವಿಶ್ವವೇ ಒಂದು ಕುಟುಂಬ' ಎಂಬುದು ಹಿಂದುವಿನ ನಂಬಿಕೆ ಹಾಗೂ
ನಡವಳಿಕೆ.
ಜಗತ್ತಿನ ಇತಿಹಾಸದಲ್ಲೇ ಹಿಂದು ಆಕ್ರಮಣಕಾರಿ, ಅಸಹಿಷ್ಣು, ಸಾಮ್ರಾಜ್ಯಶಾಹಿ ಎನ್ನಲು ಒಂದೇ ಒಂದು ಉದಾಹರಣೆ ಇದೆಯೇ..? ಎಕ್ಸ್ ರೇ (ಕ್ಷ-ಕಿರಣ) ತೆಗೆದರೂ ಕಾಣುವುದಿಲ್ಲ,
ಭಾರತದ ಮಣ್ಣಿನ ಮಕ್ಕಳಾದ ಹಿಂದೂಗಳಲ್ಲಿ ಜಾಗೃತಿ ಸುಧಾರಣೆ ಹಾಗೂ ಸಂಘಟನೆಗಳು ಭಾರತದ ಮೂಲಭೂತ ಅಗತ್ಯತೆ ಆನಿವಾರ್ಯತೆ ಎಂಬುವುದು ಸಂಘದ ಮೂಲ ನಂಬಿಕೆ. ಇದರ ಮುಖಾಂತರ ಭಾರತದ ಸರ್ವಾಂಗೀಣ ವಿಕಾಸ ಸಾಧ್ಯ ಎಂಬುವುದು ಸಂಘದ ಚಿಂತನೆ. ಹೀಗಾಗಿ ಸಂಘದ ಕಾರ್ಯವೂ ಅತ್ಯಂತ ಧನಾತ್ಮಕ ಅರ್ಥಾತ ಪಾಸಿಟಿವ್, ಖಂಡಿತಾ ನೆಗಟಿವ್ ಅಲ್ಲ, ಋಣಾತ್ಮಕ ಅಲ್ಲವೇ ಅಲ್ಲ,
ಸರಳವಾಗಿ ಹೇಳುವುದಾದರೆ ಹಿಂದು ಹಿಂದು ಎಲ್ಲಿಯವರೆಗೆ ಭಾಯಿ ಭಾಯಿ ಆಗುವುದಿಲ್ಲವೋ ಅಲ್ಲಿಯವರೆಗೆ ಒಂದು ಮುಸ್ಲಿಂ, ಹಿಂದು ಇಸಾಯಿ ಭಾಯಿ ಭಾಯಿ ಹೇಗೆ ಸಾಧ್ಯ?
ಹಿಂದು ಸಂಘಟನೆಯು ವೈಶ್ಯಕ ಸಾಮರಸ್ಯಕ್ಕೆ ತಳಹದಿಯೇ ವಿನಹ ಅಪಾಯ ಅಲ್ಲ. ಭಾರತ ಒಂದು ಭೂಮಿ ಮಾತ್ರವಲ್ಲ ಈ ಭೂಮಿಯ
ಎಲ್ಲರನ್ನು ಬಂಧುತ್ವದ ಬೆಸುಗೆಯಲ್ಲಿ ಬೆಸೆಯುವ ಮೂಲಮಂತ್ರ. ಇದರಲ್ಲಿ ಯಾವ ಮತೀಯವಾದವೂ ಇರಲು ಸಾಧ್ಯವಿಲ್ಲ, ಇದು ಸೆಕ್ಯುಲರ್ ವಿರೋಧಿ ಎಂಬುದು ಒಂದು ಪೂರ್ವಗ್ರಹ ಅಷ್ಟೇ.
ಸಾರಾಂಶದಲ್ಲಿ ಹೇಳುವುದಾದರೆ ಸಂಘದ ವ್ಯಾಪ್ತಿ ಇಷ್ಟೇ ಭಾರತವನ್ನು ಸದಾ ಎಚ್ಚರದಲ್ಲಿಡಲು ಬೇಕಾದ ನಿತ್ಯ ಸಿದ್ದ ಸಂಘಟಿತ ಶಕ್ತಿಯೇ ಆರ್. ಎಸ್.ಎಸ್. ಎಂಬ ವಿವರಣೆಯನ್ನು ಅನೇಕ ಸಂಘತರ ದೇಶಭಕ್ತರು ಕೊಟ್ಟಿರುತ್ತಾರೆ.
ಅಧಿಕಾರ ರಾಜಕೀಯ (power politics ) ವಾಗಲೀ ಚುನಾವಣಾ
ರಾಜಕೀಯ (election politics ) ವಾಗಲೀ, ಪಕ್ಷ ರಾಜಕೀಯ ವಾಗಲೀ (Party politics ) ಸಂಘದ ಶಕ್ತಿಯ ವಿಷಯವಲ್ಲ.
ರಾಷ್ಟ್ರವೇ ನಮ್ಮ ದೇವರು, ರಾಷ್ಟ್ರೀಯತೆಯೇ ನಮ್ಮ ಉಸಿರು. ರಾಷ್ಟ್ರಕ್ಕಾಗಿ
ನಾವೇ ಹೊರತು ನಮ್ಮದು ಇನ್ಯಾವ ಸ್ವಾರ್ಥವೂ ಇಲ್ಲ. ಇದೇ ಮಂತ್ರವನ್ನು ಜಪಿಸುತ್ತ ಸಂಘದ ಸ್ವಯಂಸೇವಕರು ನಮ್ಮ ರಾಷ್ಟ್ರ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಇಂದು ಪ್ರವೇಶ ಮಾಡಿದ್ದಾರೆ. ಮತ್ತು ರಾಷ್ಟ್ರೀಯತೆಯನ್ನು ಬಲ ಪಡಿಸುವ ಕಾಯಕದಲ್ಲಿ ತೊಡಗಿದ್ದಾರೆ. ಯಶಸ್ವಿಯೂ ಆಗುತ್ತಿದ್ದಾರೆ.
ಧಾರ್ಮಿಕ ಕ್ಷೇತ್ರದಲ್ಲಿ ವಿಶ್ವ ಹಿಂದು ಪರಿಷದ್, ರಾಜಕೀಯ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ, ಕಾರ್ಮಿಕರ ಕ್ಷೇತ್ರದಲ್ಲಿ ಭಾರತೀಯ ಮಜದೂರ ಸಂಘ, ವನವಾಸೀ ಕ್ಷೇತ್ರದಲ್ಲಿ ವನವಾಸಿ ಕಲ್ಯಾಣ ಆಶ್ರಮ, ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಕ ಮಹಾಸಂಘ, ಶಾಲಾ ಶಿಕ್ಷಣದಲ್ಲಿ ವಿದ್ಯಾ ಭಾರತಿ, ಮಹಿಳಾ ಜಾಗೃತಿಗಾಗಿ ರಾಷ್ಟ್ರ ಸೇವಿಕಾ ಸಮಿತಿ, ಕಲಾ ಕ್ಷೇತ್ರದಲ್ಲಿ ಸಂಸ್ಕಾರ ಭಾರತಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತ್ಯ ಪರಿಷದ್ ರಾಷ್ಟೋತ್ಥಾನ ಪರಿಷದ್, ಮಾನವೀಯ ಸೇವಾಕ್ಷೇತ್ರದಲ್ಲಿ ಸೇವಾ ಭಾರತಿ.. ಇತ್ಯಾದಿ ಇತ್ಯಾದಿ ನೂರಾರೂ ಚಟುವಟಿಕೆಗಳು ಆರ್.ಎಸ್ಎಸ್‌ನ ಪ್ರಭಾವಳಿಯಲ್ಲಿ ಕೆಲಸ ಮಾಡುತ್ತಿವೆ. ಇವೆಲ್ಲವೂ ಸಂಘದ ಆಸ್ತಿಗಳಲ್ಲ. ಇವೆಲ್ಲವೂ ಪುನರುತ್ಥಾನದ ದಿಕ್ಕಿನಲ್ಲಿ ಮುನ್ನಡೆಯುತ್ತಿರುವ ಭಾರತದ ಆಸ್ತಿ. ಸಂಘದ ಸ್ವಯಂಸೇವಕರು ದೇಶದ ಆಸ್ತಿ.
ಕೊನೆಯದಾಗಿ, ಸಂಘಕ್ಕೆ ತಾನು ವಿಶ್ವದಲ್ಲೇ ಅತಿ ದೊಡ್ಡ ಸಂಘಟನೆ ಯಾಗಬೇಕೆಂಬ ಮಹತ್ವಾಕಾಂಕ್ಷೆ ಸರ್ವಥಾ ಇಲ್ಲ. ಭಾರತಮಾತೆಯು ಜಗತ್ತಿನ ಸಾಂಸ್ಕೃತಿಕ ಸಿಂಹಾಸನದಲ್ಲಿ ವಿರಾಜಮಾನಳಾಗಬೇಕೆಂಬ ಕನಸು ನಮ್ಮದು. ಈ ಕನಸನ್ನು ನನಸು ಮಾಡುವುದರಲ್ಲೇ ನಮಗೆ ಸಂತೋಷ ಇದೆ. ಸಂಭ್ರಮ ಇದೆ. ಸಾರ್ಥಕತೆಯ ಭಾವ ಇದೆ.
ಸಂಘದ ಒಂದು ಹಾಡಿನಲ್ಲಿ ಹೀಗೆ ಹೇಳುತ್ತೇವೆ. ತೇರಾ ವೈಭವ ಅಮರ ರಹೇ ಮಾ.. ಹಮ ದಿನ ಚಾರ ರಹೇ ನ ರಹೇ..
ಇದರ ಭಾವಾರ್ಥ: ತಾಯಿ ಭಾರತಾಂಬೆ ನಿನ್ನ ವೈಭವ ಅಮರವಾಗಿರಲಿ, ನಾವು ನಾಲ್ಕು ದಿನ ಇದ್ದು ಹೋಗುವ ನಶ್ವರ ರಷ್ಟೇ -
ಸಂಘ ಕಾರ್ಯವಂತೂ ನಮ್ಮ ಪಾಲಿಗೆ ದೇವರ ಕಾರ್ಯ ತ್ವದೀಯಾಯ ಕಾರ್ಯಾಯ ಬದ್ಧಾ ಕಟೀಯಂ ಶುಭಾಂ ಆಶಿಷಂ ದೇಹಿ ತತ್ ಪೂರ್ತಯೇ, ಇದರ ಅರ್ಥ: ಹೇ ಭಗವಂತಾ ನಿನ್ನ ಕಾರ್ಯಕ್ಕಾಗಿಯೇ ನಾವು ಸೊಂಟಕಟ್ಟಿದ್ದೇವೆ. ಅದನ್ನು ಪೂರ್ಣಗೊಳಿಸಲು ನಿನ್ನ ಆಶೀರ್ವಾದ ಬೇಡುತ್ತೇವೆ. ನಿತ್ಯ ನಾವು ಹೇಳುವ ಸಂಘದ ಪಾರ್ಥನೆಯ ಒಂದು ಸಾಲು ಇದು.
ಭಾರತ ಮಾತಾ ಕೀ ಜೈ
Post a Comment