ಲಖನೌ: ಅಯೋಧ್ಯೆಯಲ್ಲಿ ಬುಧವಾರ (ಅಕ್ಟೋಬರ್ 30) ನಡೆದ ಭವ್ಯ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಕಾಶಿ ಮತ್ತು ಮಥುರಾ ಕೂಡ ಪವಿತ್ರ ನಗರದಂತೆ ಬೆಳಗಬೇಕು ಎಂದು ಹೇಳಿದ್ದಾರೆ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಅಯೋಧ್ಯೆಗೆ ಏನು ಹೇಳಿದ್ದರೂ ಅದನ್ನು ಈಡೇರಿಸಿದೆ, ಇದಕ್ಕೆ ಅಯೋಧ್ಯೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಈ ವರ್ಷದ ಆರಂಭದಲ್ಲಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದ ಉದ್ಘಾಟನೆಯನ್ನು ಉಲ್ಲೇಖಿಸಿದ ಯೋಗಿ ಆದಿತ್ಯನಾಥ್, 500 ವರ್ಷಗಳ ನಂತರ ದೀಪಾವಳಿಯಂದು ಬಾಲರಾಮನು ತನ್ನ ನಿವಾಸದಲ್ಲಿದ್ದಾನೆ. ಆದರೆ ಮತ್ತೊಮ್ಮೆ ಅಯೋಧ್ಯೆಯ ಸರದಿ, ಮಾತೆ ಸೀತೆಯ ಅಗ್ನಿಪರೀಕ್ಷೆ ಮತ್ತೆ ಮತ್ತೆ ಮರುಕಳಿಸಬಾರದು. ಈ ಶಾಪದಿಂದ ಹೊರಬರಬೇಕು ಎಂದು ಹೇಳಿದರು.
ಇದು ಕೇವಲ ಆರಂಭವಾಗಿದ್ದು, ಈ ಆರಂಭವು ಅದರ ತಾರ್ಕಿಕ ಅಂತ್ಯವನ್ನು ತಲುಪಬೇಕಾಗಿದೆ. ಹಾಗಾಗಿ 2047ರ ವೇಳೆಗೆ ದೇಶವು ತನ್ನ ಸ್ವಾತಂತ್ರ್ಯದ 100ನೇ ವರ್ಷವನ್ನು ಆಚರಿಸುವ ಸಂದರ್ಭದಲ್ಲಿ ಕಾಶಿ ಮತ್ತು ಮಥುರಾ ಕೂಡ ಅಯೋಧ್ಯೆಯಂತೆ ಬೆಳಗಬೇಕು ಎಂದು ಅವರು ಹೇಳಿದರು.
ವಾರಣಾಸಿಯಲ್ಲಿ ಕಾಶಿ ವಿಶ್ವನಾಥ-ಜ್ಞಾನವಾಪಿ ದೇವಸ್ಥಾನದ ಮಸೀದಿ ವಿವಾದದ ಪರಿಹಾರಕ್ಕಾಗಿ ಸುದೀರ್ಘ ನ್ಯಾಯಾಲಯದ ಹೋರಾಟ ನಡೆಯುತ್ತಿದೆ. ಕೃಷ್ಣ ಜನ್ಮ ಭೂಮಿ ಮತ್ತು ಮಥುರಾದ ಶಾಹಿ ಈದ್ದಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಇದೇ ರೀತಿಯ ನ್ಯಾಯಾಲಯದ ಪ್ರಕರಣವೂ ನಡೆಯುತ್ತಿದೆ.
ವಿವಾದಿತ ಭೂಮಿಯನ್ನು ಹಿಂದೂಗಳಿಗೆ ನೀಡಬೇಕೆಂದು 2019 ರಲ್ಲಿ ತೀರ್ಪು ನೀಡಿದ ನಂತರ ಸುಪ್ರೀಂಕೋರ್ಟ್ ದೇವಾಲಯದ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ದೊಡ್ಡ ಪ್ರಮಾಣದ ಭೂಮಿಯನ್ನು ಮಂಜೂರು ಮಾಡುವಂತೆಯೂ ನ್ಯಾಯಾಲಯ ಸರ್ಕಾರಕ್ಕೆ ಆದೇಶ ನೀಡಿತ್ತು. ಈ ವರ್ಷದ ಜನವರಿಯಲ್ಲಿ ಅಯೋಧ್ಯೆ ರಾಮ ಮಂದಿರವನ್ನು ಉದ್ಘಾಟಿಸಲಾಯಿತು. ಇದು ದೇವಾಲಯದ ಮೊದಲ ದೀಪಾವಳಿಯಾಗಿದೆ.
Post a Comment