ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ವರ್ಷಕ್ಕೆ 5 ಲಕ್ಷ ರೂವರೆಗೆ ಇನ್ಷೂರೆನ್ಸ್ ಕವರೇಜ್ ಸಿಗುತ್ತದೆ. ವಿಮಾ ಸೌಲಭ್ಯ ಪಡೆಯಲು ಅಶಕ್ತ ಎನಿಸುವ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲವಾಗಿರುವ ಜನರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಯೋಜನೆ ರೂಪಿಸಿದೆ.
ಗ್ರಾಮೀಣ ಭಾಗದವರು, ಎಸ್ಸಿ ಎಸ್ಟಿ ಸಮುದಾಯದವರು, ನಿರ್ಗತಿಕರು, ಅಶಕ್ತರು ಈ ಸ್ಕೀಮ್ ಅಡಿಯಲ್ಲಿ ಉಚಿತವಾಗಿ ಇನ್ಷೂರೆನ್ಸ್ ಪಡೆಯಲು ಅವಕಾಶ ಇದೆ.
ಇದೀಗ ಅಕ್ಟೊಬರ್ 29ರಿಂದ 70 ವರ್ಷ ವಯಸ್ಸು ದಾಟಿದ ಎಲ್ಲಾ ಹಿರಿಯ ನಾಗರಿಕರನ್ನೂ ಸ್ಕೀಮ್ ವ್ಯಾಪ್ತಿಗೆ ತರಲಾಗಿದೆ. 70 ವರ್ಷ ಮೇಲ್ಪಟ್ಟ ಯಾವುದೇ ಹಿರಿಯ ನಾಗರಿಕರೂ ಆಯುಷ್ಮಾನ್ ಭಾರತ್ ಸ್ಕೀಮ್ ಪಡೆಯಬಹುದು. ಈ ವೃದ್ಧರು ಯಾವುದೇ ಆರ್ಥಿಕ ವರ್ಗದ ಮತ್ತು ಸಾಮಾಜಿಕ ಸ್ತರದ ಸಮುದಾಯಕ್ಕೆ ಸೇರಿದವರಾಗಿರಬಹುದು.
ಕುಟುಂಬದಲ್ಲಿ ಈಗಾಗಲೇ ಆಯುಷ್ಮಾನ್ ಭಾರತ್ ಕಾರ್ಡ್ ಇದ್ದರೂ ಕೂಡ ವೃದ್ಧರಿಗೆ ಪ್ರತ್ಯೇಕವಾಗಿ ಕವರೇಜ್ ಸಿಗುತ್ತದೆ.
Post a Comment