ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಆಂತರಿಕ ಗುಣಮಟ್ಟ ಭರವಸಾ ಕೋಶ, ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗದ ಸಹಯೋಗದಲ್ಲಿ ಅ. 25ರಂದು ಆಯುರ್ವೇದ ಔಷಧಿಗಳ ಮಾಹಿತಿ ಹಾಗೂ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ. ಟಿ ವಹಿಸಿದ್ದರು. ಸುಬ್ರಹ್ಮಣ್ಯದ ನೇರಳಗದ್ದೆ ಆಸ್ಪತ್ರೆಯ ಡಾ. ಶ್ವೇತ ಲಕ್ಷ್ಮಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ನಾಟಿ ಔಷಧಿಯಲ್ಲಿ ಹೆಸರುವಾಸಿಯಾದ ಕೊಠಾರಿ ಕೆಂಚಮ್ಮ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸಾಯಿ ಗೀತಾ ಕೂಜುಗೋಡು ಹಾಗೂ ಸದಸ್ಯರಾದ ಡಾ.ರವಿ ಕಕ್ಕೆ ಪದವು, ಕಾರ್ಯಕ್ರಮದ ಸಂಯೋಜಕಿ ಪ್ರಮೀಳಾ. ಎನ್ ಹಾಗೂ ಉಪನ್ಯಾಸಕರಾದ ಮಧುರ ಕೆ , ಕೃತಿಕಾ ಪಿ.ಎಸ್ , ವಿದ್ಯಾರ್ಥಿ ಸಂಯೋಜಕರುಗಳಾದ ರಿತಿಕ್ ಸಿ. ವಿ ಮತ್ತು ಕಾರ್ತಿಕ್ ಯು ಉಪಸ್ಥಿತರಿದ್ದರು. ಸ್ಥಳೀಯ ವಿದ್ಯಾ ಸಂಸ್ಥೆಗಳಾದ ಕುಮಾರಸ್ವಾಮಿ ಶಾಲೆ, ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ಸುಬ್ರಹ್ಮಣ್ಯೇಶ್ವರ ಪ್ರೌಢಶಾಲೆಯ ಅಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಆಯುರ್ವೇದ ಗಿಡಮೂಲಿಕೆಗಳನ್ನು ವೀಕ್ಷಿಸಿದರು.
ಚೈತ್ರ. ಸಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಹಾಗೂ ತ್ರಿಶಾ. ಕೆ ಸನ್ಮಾನ ವ್ಯಕ್ತಿಯನ್ನು ಪರಿಚಯಿಸಿದರು. ಕಾರ್ಯಕ್ರಮವನ್ನು ದ್ವಿತೀಯ ವಾಣಿಜ್ಯ ಸೈಪದವಿಯ ವಿದ್ಯಾರ್ಥಿಗಳು ಆಯೋಜಿಸಿದರು. ಜೀವಿತ್ ಕಾರ್ಯಕ್ರಮ ನಿರೂಪಿಸಿದರು. ಪ್ರಮೀಳಾ ಎನ್ ಸ್ವಾಗತಿಸಿ, ಯೋಗಿತಾ ವಂದಿಸಿದರು.
Post a Comment