ಸಾಮಾಜಿಕ ಸಮರಸತೆ ಮತ್ತು ಪರಸ್ಪರ ಸಧ್ಬಾವನೆ ನಮ್ಮ ಕುಟುಂಬದ ಹಂತಗಳಲ್ಲಿ ಮಾಡಬೇಕು ಅರೆಸೆಸ್ಸ್ ಸರಸಂಘಚಾಲಕ್ ಮೋಹನ್ ಭಾಗವತ್

 ಬಾಂಗ್ಲಾ ನುಸುಳುಕೋರರ ಬಗ್ಗೆ ಕಳವಳ


ನಮ್ಮ ರಾಷ್ಟ್ರೀಯ ಜೀವನವು ಸಾಂಸ್ಕೃತಿಕ ಏಕಾತ್ಮತೆ ಮತ್ತು ಶ್ರೇಷ್ಠ ನಾಗರಿಕತೆಯ ಸುದೃಢ ಅಡಿಪಾಯದ ಮೇಲೆ ನಿಂತಿದೆಯೆಂದು ಅರೆಸೆಸ್ಸ್ ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದ್ದಾರೆ. ವಿಜಯ ದಶಮಿ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಸಾಮಾಜಿಕ ಜೀವನವು ಉದಾತ್ತ ಜೀವನ ಮೌಲ್ಯಗಳಿಂದ ಪ್ರೇರಿತವಾದದ್ದು ಮತ್ತು ಪೋಷಣೆಯಾದದ್ದು. ನಮ್ಮ ಇಂತಹ ರಾಷ್ಟ್ರೀಯ ಜೀವನಕ್ಕೆ ಹಾನಿ ಮಾಡುವ ಮತ್ತು ನಾಶಗೊಳಿಸುವ ದುಷ್ಟ ಪ್ರಯತ್ನಗಳನ್ನು ಬಹುಮುಂಚಿತವಾಗಿಯೇ ನಿಲ್ಲಿಸುವ ಅವಶ್ಯಕತೆ ಇದೆ. ಇದಕ್ಕಾಗಿ ಜಾಗೃತ ಸಮಾಜವೇ ಪ್ರಯತ್ನ ನಡೆಸಬೇಕಿದೆ.ಸಮಾಜದ ಸ್ವಸ್ಥ ಮತ್ತು ಸಬಲ ಸ್ಥಿತಿಯ ಮೊದಲ ಷರತ್ತು ಎಂದರೆ ಸಾಮಾಜಿಕ ಸಮರಸತೆ ಮತ್ತು ಸಮಾಜದ ವಿವಿಧ ವರ್ಗಗಳ ನಡುವಣ ಪರಸ್ಪರ ಸದ್ಭಾವನೆ. ಕೆಲವು ಸಂಕೇತಾತ್ಮಕ ಕಾರ್ಯಕ್ರಮಗಳನ್ನು ಮಾತ್ರ ಮಾಡುವುದರಿಂದ ಈ ಕಾರ್ಯ ಸಾಧ್ಯವಾಗುವುದಿಲ್ಲ. ಸಮಾಜದ ಎಲ್ಲಾ ವರ್ಗ ಮತ್ತು ಸ್ತರಗಳಲ್ಲಿ ವ್ಯಕ್ತಿಗಳ Cards ಕುಟುಂಬಗಳ ಮಿತ್ರತ್ವ ಇರಬೇಕು. ಇದನ್ನು ನಾವು ಮೊದಲು . ವ್ಯಕ್ತಿಗತ ಮತ್ತು ಕುಟುಂಬದ ಹಂತದಲ್ಲಿ ಮಾಡಬೇಕು.ರಾಮರಾಜ್ಯ ಸದೃಢ ವಾತಾವರಣ ನಿರ್ಮಾಣವಾಗುವುದಕ್ಕೆ ಪ್ರಜೆಗಳ ಗುಣಮಟ್ಟ ಮತ್ತು ಚಾರಿತ್ರ್ಯ,ದೃಢತೆ, ಸಂಸ್ಕಾರ ಅಗತ್ಯವಾಗಿದೆ. ಜಾತಿ ಪ್ರಮುಖರು ಜೊತೆಯಾಗಿ ಕುಳಿತು ನಮ್ಮಲ್ಲಿನ ಒಡಕುಗಳನ್ನು ದೇಶ ದೃಷ್ಟಿಯಿಂದ ಸರಿಪಡಿಸಿಕೊಳ್ಳುವ ಅಗತ್ಯವಿದೆಯೆಂದರು.


ಬಿರ್ಸಾ ಮುಂಡಾ, ಅಹಲ್ಯಾ , ದಯಾನಂದ ಸರಸ್ವತಿ ಯವರು ನೂರಾರು ವರ್ಷ ಹಿಂದೆ ಈ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಅವರೆಲ್ಲರನ್ನೂ ಸ್ಮರಿಸಿಕೊಳ್ಳುವ ಅಗತ್ಯವಿದ್ದು ಇವರೆಲ್ಲ ಪ್ರಾಮಾಣಿಕತೆ,ನಿಸ್ವಾರ್ಥತೆಯಿಂದ ಸಮಾಜಕ್ಕೆ ಬದುಕನ್ನು ಮುಡಿಪಾಗಿಟ್ಟವರು. ಬಾಂಗ್ಲಾದಿಂದ ನುಸುಳುಕೋರರಿಂದ ಸಮಸ್ಯೆಗಳಾಗುತ್ತಿದೆ ಅವೆಲ್ಲವನ್ನೂ ನಿಲ್ಲಿಸಬೇಕಾಗಿದೆಯೆಂದು ಒತ್ತಿ ಹೇಳಿದರು.ಮನೆಗಳಲ್ಲಿ ತಿಳಿದೋ ತಿಳಿಯದೆ ಅನೇಕ ಬಾಹ್ಯ ವಿಚಾರಗಳಲ್ಲೂ ನಮ್ಮಲ್ಲಿ ಬಂದು ಹೋಗಿದೆ ಅದರ ಬಗ್ಗೆ ಮಾತೃ ಶಕ್ತಿ ಜಾಗೃತವಾಗಬೇಕು,ಪರಿಸರ ಸಂರಕ್ಷಣೆ,ನೀರಿನ ಮಿತಬಳಕೆ ಬಗ್ಗೆ ಸ್ವಯಂ ಸೇವಕರಿಗೆ ಮೋಹನ್ ಭಾಗವತ್ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ:ರಾಧಾಕೃಷ್ಣನ್,ಸಂಘದ ಪ್ರಮುಖರು,ರಾಜಕೀಯ ಗಣ್ಯರು, ಸ್ವಯಂ ಸೇವಕರು ಉಪಸ್ಥಿತರಿದ್ದರು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget