ಹಿಂದೂ ಸ್ಮಶಾನವೂ ಪಹಣಿಯಲ್ಲಿ 'ವಕ್ಸ್‌ ಆಸ್ತಿ'

 ಹಾವೇರಿ ಜಿಲ್ಲೆಯಲ್ಲಿ 285 ಆಸ್ತಿಗಳ ಗುರುತು |ಖಾತೆ ಬದಲಾವಣೆಗೆ ಸೂಚನೆ ಕೊಟ್ಟ ಜಿಲ್ಲಾಧಿಕಾರಿ


ಹುಬ್ಬಳ್ಳಿ: ಪಹಣಿ ಪತ್ರದಲ್ಲಿ 'ವಕ್ಸ್ ಆಸ್ತಿ' ಎಂಬುದಾಗಿ ನಮೂದು ‎‫ليه‬‎ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ, ವಿಜಯಪುರ, ಗದಗ, ಹಾವೇರಿ ಜಿಲ್ಲೆಗಳ ಹಲವೆಡೆ ಬುಧವಾರ ರೈತರು ಪ್ರತಿಭಟನೆ ನಡೆಸಿದರು. ವಕ್ಸ್ ಆಸ್ತಿ ವಿವಾದ ಸಂಬಂಧಿಸಿದಂತೆ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರ ಅನಿರ್ದಿಷ್ಟಾವಧಿ ಧರಣಿ ಮುಂದುವರಿದಿದೆ.


ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ತಡಸ ಗ್ರಾಮದ ಹಿಂದೂ ಸ್ಮಶಾನದ (ಮಸಣಗಟ್ಟಿ) ಪಹಣಿ ಪತ್ರದಲ್ಲಿ ಸರ್ವೆ ನಂಬರ್ 403ರಲ್ಲಿ 19 ಎಕರೆ 33 ಗುಂಟೆ ಜಾಗವನ್ನು 'ವಕ್ಸ್ ಆಸ್ತಿ' ಎಂದು ‎‫لب‬‎ ನಮೂದು ಮಾಡಲಾಗಿದ್ದು, ಈ ಕ್ರಮಕ್ಕೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ.



'ದುಂಡಶಿ ಹೋಬಳಿ ವ್ಯಾಪ್ತಿ ಯಲ್ಲಿರುವ ತಡಸದಲ್ಲಿ ಹಿಂದೂ ಸಮುದಾಯಕ್ಕೆ ಒಂದೇ ಸ್ಮಶಾನವಿದೆ. ಮುಸ್ಲಿಮರಿಗೆ ಎರಡು ಖಬರಸ್ತಾನ ಇವೆ. ಈಗ, ಹಿಂದೂಗಳ ಸ್ಮಶಾನ ಸಹ ವಕ್ಸ್ ಆಸ್ತಿ ಎಂಬುದಾಗಿ ಕಂದಾಯ ದಾಖಲೆಗಳು ಬದಲಾವಣೆ ಆಗಿವೆ. ಇದನ್ನು ಸರಿಪಡಿಸದಿದ್ದರೆ, ಪ್ರತಿಭಟಿಸು ತ್ತೇವೆ' ಎಂದು ತಡಸ ಗ್ರಾಮದ ಮುಖಂಡರು ಎಚ್ಚರಿಕೆ ನೀಡಿದರು.



'ಗದಗ ಜಿಲ್ಲೆಯ ಲಕ್ಷ್ಮೀಶ್ವರ ಹಾಗೂ ಮುಂಡರಗಿ ತಾಲ್ಲೂಕಿನ ಕೆಲ ರೈತರ ಜಮೀನಿನ ಉತಾರದಲ್ಲಿ ವಕ್ಸ್ ಆಸ್ತಿ ಎಂದು ನಮೂದಾಗಿದ್ದು, ಅವರಲ್ಲಿ ಆತಂಕ ಮೂಡಿಸಿದೆ. ಉತಾರದಲ್ಲಿ ನಮೂದಾದ ವಕ್ಸ್ ಮಂಡಳಿ ಹೆಸರನ್ನು ತೆಗೆದು ಹಾಕಬೇಕು' ಎಂದು ರೈತರು ತಹಶೀಲ್ದಾರ್ ಕಚೇರಿಗಳ ಎದುರು ಬುಧವಾರ ಪ್ರತಿಭಟನೆ ನಡೆಸಿದರು.


'ವಕ್ಸ್‌ ಆಸ್ತಿಗೆ ಸಂಬಂಧಿಸಿದಂತೆ 2019ರಿಂದ 2023ರ ನಡುವಿನ ಅವಧಿಯಲ್ಲಿ ಗದಗ ಜಿಲ್ಲೆಯ ಯಾವ ರೈತರಿಗೂ ನೋಟಿಸ್‌ ಕೊಟ್ಟಿಲ್ಲ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಸ್ಪಷ್ಟಪಡಿಸಿದರು.


ವಕ್ಸ್‌ ಆಸ್ತಿ ಅತಿಕ್ರಮಣ/ ಪರಭಾರೆ ಮಾಡಿದ ಆರೋಪದ ಮೇರೆಗೆ ವಿಜಯ ನಗರದ ಬಳ್ಳಾರಿ ರಸ್ತೆಯ ಕಂಚ ಗಾರ್ ಪೇಟೆಯಲ್ಲಿ ಐವರಿಗೆ ವಕ್ಸ್ ಬೋರ್ಡ್‌ನಿಂದ ನೋಟಿಸ್ ಜಾರಿ ಆಗಿದ್ದು, ನ.8ರಂದು ಬೆಂಗಳೂರಿನಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.



ಅನಿರ್ದಿಷ್ಟಾವಧಿ ಧರಣಿ: ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಕೇಂದ್ರ ಸಚಿವ ಪ್ರಲಾದ ಜೋಶಿ ಮಾತನಾಡಿ, 'ಮುಂದಿನ ಅಧಿವೇಶನದಲ್ಲಿ ವಕ್ಸ್ ಕಾಯ್ದೆಗೆ ತಿದ್ದುಪಡಿ ತರುಲು ಕೇಂದ್ರ ಸರ್ಕಾರ ಮುಂದಾಗಿದ್ದು, ರಾಜ್ಯ ಕಾಂಗ್ರೆಸ್‌ ಸರ್ಕಾರ ವಕ್ಸ್ ಮಂಡಳಿ ಮೂಲಕ ರೈತರ ಭೂಮಿ ವಶಪಡಿಸಿಕೊಳ್ಳಲು ಷಡ್ಯಂತ್ರ ರೂಪಿಸಿದೆ' ಎಂದರು.


`ಸಚಿವ ಜಮೀರ್ ಅಹಮದ್ ಅವರು ಮುಖ್ಯಮಂತ್ರಿ ಸೂಚನೆ ಮೇರೆಗೆ ವಕ್ಸ್ ಅದಾಲತ್ ಮಾಡಿದ್ದೇನೆ ಎನ್ನುತ್ತಾರೆ. ವಕ್ಸ್ ಆದಾಲತ್ ಮಾಡಲು ಸಿದ್ದರಾಮಯ್ಯ ಅವರ ಕುಮ್ಮಕ್ಕು, ಸೂಚನೆ ಇದೆಯಾ ಎಂಬುದನ್ನು ಸ್ಪಷ್ಟಪಡಿಸಬೇಕು' ಎಂದರು.


ಸಂಸದರಾದ ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಾಜಿ ಶಾಸಕ ಎಸ್.ಕೆ.ಬೆಳ್ಳುಬ್ಬಿ, ರಮೇಶ ಭೂಸನೂರ, ಬಿಜೆಪಿ ಮುಖಂಡ ಉಮೇಶ ಕಾರಜೋಳ, ವಿಜುಗೌಡ ಪಾಟೀಲ ಇದ್ದರು.


ಜೋಶಿ-ಜಮೀರ್ ಜಟಾಪಟಿ


'ಕೋಮು ದ್ವೇಷ ಹರಡುವುದರ ಜೊತೆಗೆ ರಾಜ್ಯವನ್ನು ಇಸ್ಲಾಮೀಕರಣ ಮಾಡಲು ಮುಂದಾಗಿರುವ ಸಚಿವ ಜಮೀರ್ ಅಹಮದ್‌ ಖಾನ್ ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು' ಎಂದು ಕೇಂದ್ರ ಸಚಿವ ಪ್ರಲಾದ ಜೋಶಿ ಆಗ್ರಹಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಕಾಂಗ್ರೆಸ್‌ನ ಡೋಂಗಿ ಜಾತ್ಯತೀತತೆ ಮತ್ತು ಮುಸ್ಲಿಮರ ತುಷ್ಟಿಕರಣ ನೀತಿಯಿಂದ ದೇವಸ್ಥಾನಗಳ ಒಂದು ಇಂಚು ಜಾಗವೂ ಹೆಚ್ಚಾಗಿಲ್ಲ. ಆದರೆ, ಎಲ್ಲ ಪ್ರಮುಖ ಮತ್ತು ಹೆಚ್ಚು ಆದಾಯ ಇರುವ ದೇವಸ್ಥಾನಗಳನ್ನು ಸರ್ಕಾರ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ' ಎಂದು ಆರೋಪಿಸಿದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget