ಅನೇಕ ವರ್ಷದ ಕರಾವಳಿ ಜನರ ಬೇಡಿಕೆ ಯನ್ನು ಈಡೇರಿಸಿದ ರೈಲ್ವೆ ಇಲಾಖೆ
ಕುಂದಾಪುರ, ಅ.10: ವಿಜಯ ದಶಮಿಯ ದಿನದಂದು ಕರಾವಳಿ ಯಿಂದ ತಿರುಪತಿಗೆ ರೈಲು ಸಂಪರ್ಕ ಆರಂಭವಾಗಲಿದ್ದು, ಆ ಮೂಲಕ ಕರಾವಳಿಗರ ದೀರ್ಘ ಕಾಲದ ಬೇಡಿಕೆ ಈಡೇರಿದಂತಾಗಲಿದೆ. ಸ್ಲೀಪರ್ ಕೋಚ್ 510 ಮತ್ತು ಹವಾನಿಯಂತ್ರಿತ 1100 ದರ ನಿಗದಿಪಡಿಸಲಾಗಿದೆ.ವಿಸ್ತರಣೆಗೊಂಡ ಕಾಚಿಗುಡ ರೇಣಿಗುಂಟ ತಿರುಪತಿ ಮಂಗಳೂರು ರೈಲಿನ ಮೊದಲ ಓಡಾಟವು ಶನಿವಾರ ಆರಂಭಗೊಳ್ಳಲಿದೆ. ಮುರುಡೇಶ್ವರದಿಂದ ಬುಧವಾರ, ಶನಿವಾರ, ತಿರುಪತಿಯಿಂದ ಮಂಗಳ ವಾರ, ಶುಕ್ರವಾರ ಎಂದು ವಾರಕ್ಕೆರಡು ದಿನ ಓಡಲಿದೆ. ಅ.12ರ ಶನಿವಾರ ಮುರುಡೇಶ್ವರದಿಂದ ಮಧ್ಯಾಹ್ನ 3.20ಕ್ಕೆ ಹೊರಡುವ ರೈಲು 3.54ಕ್ಕೆ ಬೈಂದೂರು, ಕುಂದಾಪುರಕ್ಕೆ 4. 40, ಬಾರ್ಕೂರು 5, ಉಡುಪಿ 5.20ಕ್ಕೆ ಮಂಗಳೂರು 7.55ಕ್ಕೆ ತಲುಪಲಿದೆ. ಮಂಗಳೂರಿನಿಂದ ರಾತ್ರಿ 8.05 ಗಂಟೆಗೆ ಹೊರಟ ರೈಲು
ದರ್ಶನಕ್ಕೆ ಅನುಕೂಲ
ಕುಂದಾಪುರದಿಂದ ಸಂಜೆ 4.45ರ ಸುಮಾರಿಗೆ ರೈಲು ಹತ್ತಿದರೆ ಮರುದಿನ
ಬೆಳಗ್ಗೆ 11.45ಕ್ಕೆರೇಣಿಗುಂಟ ನಿಲ್ದಾಣ ತಲುಪಲಿದೆ. ಅಲ್ಲಿ ರೈಲಿಳಿದು ಸಂಜೆಯ ದರ್ಶನ ಅಥವಾ ಮರುದಿನ ಬೆಳಗ್ಗೆ ತಿಮ್ಮಪ್ಪನ ದರ್ಶನ ಪಡೆದರೆ, ಮರು ದಿನ ಸಂಜೆ 4.45ಕ್ಕೆ ಇದೇ ರೈಲು ರೇಣಿಗುಂಟಕ್ಕೆ ಬಂದು ಉಡುಪಿ ಕಡೆ ಹೊರಡಲಿದೆ. ರೇಣಿಗುಂಟದಿಂದ ತಿರುಪತಿ ಕೇವಲ 9 ಕಿ.ಮೀ. ದೂರದಲ್ಲಿದೆ.
ತಿರುಪತಿಗೆ ರವಿವಾರ ಬೆಳಗ್ಗೆ 11.30ಕ್ಕೆ ರೇಣಿಗುಂಟ (ತಿರುಪತಿಗೆ ಹಾಗೂ ಹೈದರಾಬಾದ್‌ನ ಕಾಚಿಗುಡಕ್ಕೆ ಸಂಜೆ 6 ಗಂಟೆಗೆ ತಲುಪಲಿದೆ.
ಕುಂದಾಪುರದಿಂದ ತಿರುಪತಿಗೆ ಸ್ವೀಪರ್ ಕೋಚ್‌ನಲ್ಲಿ 510 ರೂ. ಹವಾನಿಯಂತ್ರಿತ 'ಕೋಚ್‌ನಲ್ಲಿ 1,100 ರೂ. ಟಿಕೆಟ್ ದರ ಇದೆ. ಮಂತ್ರಾಲಯಕ್ಕೆ ಹೋಗುವವರಿಗೂ ಇದುಅನುಕೂಲಕರವಾಗಿದ್ದುದೋನೆ ಜಂಕ್ಷನ್ ಸಹಿತ ಹೈದರಾಬಾದ್‌ಗೂ ರೈಲು ಸಂಪರ್ಕ ಪಡೆಯಬಹುದು.
ಸಂಸದರ ಮೂಲಕ ಈ ಭಾಗದ ಪ್ರಯಾಣಿಕರ ಬೇಡಿಕೆಯಂತೆ ರೈಲು ವಿಸ್ತರಣೆಯಾಗಿದ್ದು ನೀತಿ ಸಂಹಿತೆ ಮುಗಿದ ಬಳಿಕ ರೈಲ್ವೇ ಖಾತೆ ! ಸಹಾಯಕ ಸಚಿವ ಸೋಮಣ್ಣ ಅವರ ಜತೆ ಕುಂದಾಪುರ ನಿಲ್ದಾಣದಲ್ಲಿ ದೊಡ್ಡ ಸಭೆ ನಡೆಯಲಿದ್ದು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
Post a Comment