ಎರಡು ಸಂಘ ಸೇರಿ ನೂತನವಾಗಿ ಜಿಲ್ಲಾ ಒಕ್ಕಲಿಗರ ಸಂಘವನ್ನು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡರ ಮಧ್ಯಸ್ಥಿಕೆಯಲ್ಲಿ ರಚನೆ
ಅಧ್ಯಕ್ಷರಾಗಿ ಲೋಕಯ್ಯ ಗೌಡ, ಕಾರ್ಯಧ್ಯಕ್ಷರಾಗಿ ಡಿ.ಬಿ ಬಾಲಕೃಷ್ಣ,
ಕೆಲ ಸಮಯದಿಂದ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ ಮತ್ತು ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತ್ರ ಸಂಘ ಎಂಬ ಎರಡು ಸಂಘಗಳಿಂದ ಉಂಟಾದ ಗೊಂದಲಕ್ಕೆ ತೆರೆ ಬಿದ್ದಿದೆ.
ಇಂದು (ಅ. 23 ರಂದು ) ಪುತ್ತೂರಿನಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡರ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಉಭಯ ಸಂಘಗಳು ಸೇರಿ 'ಜಿಲ್ಲಾ ಒಕ್ಕಲಿಗರ ಸಂಘ' ಎಂದು ಇನ್ನು ಮುಂದೆ ಕಾರ್ಯನಿರ್ವಹಿಸಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯಧ್ಯಕ್ಷರಾಗಿ ಡಿ.ಬಿ ಬಾಲಕೃಷ್ಣ, ಅಧ್ಯಕ್ಷರಾಗಿ ಲೋಕಯ್ಯ ಗೌಡರು ಆಯ್ಕೆಯಾಗಿದ್ದಾರೆ.
ಮಾಜಿ ಶಾಸಕ ಸಂಜೀವ ಮಠoದೂರು ಸೇರಿದಂತೆ ಉಭಯ ಸಂಘಗಳ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Post a Comment