ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಸದೀಯ ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಈ ಸ್ಥಾಯಿ ಸಮಿತಿಯು ಕೇಂದ್ರ ಇಂಧನ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯದ ಮೇಲುಸ್ತುವಾರಿಗಳ ಬಗ್ಗೆ ಕಾರ್ಯನಿರ್ವಹಿಸಲಿದೆ. ಇದೀಗ ಈ ಸ್ಥಾಯಿ ಸಮಿತಿಗೆ ನೇಮಕಗೊಂಡಿರುವ ಕ್ಯಾ. ಚೌಟ ಅವರು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ನೀತಿ-ನಿಯಮಗಳು, ಕಾರ್ಯಯೋಜನೆಗಳ ಬಗ್ಗೆ ಪುನರ್ ಪರಿಶೀಲಿಸುವ ಹಾಗೂ ನಿಗಾ ವಹಿಸುವಲ್ಲಿ ಪಾತ್ರವಹಿಸಲಿದ್ದಾರೆ. ಈ ಸಂಸದೀಯ ಸ್ಥಾಯಿ ಸಮಿತಿಯ ಮೊದಲ ಸಭೆಯು ಅ.7ರಂದು ನಡೆಯಲಿದೆ.
Post a Comment
Click to see the code!
To insert emoticon you must added at least one space before the code.