ಮೊಳಕೆಯೊಡೆದ ಆಲೂಗಡ್ಡೆಯಿಂದ ಅಡುಗೆ ಮಾಡುವುದು ಅಪಾಯಕಾರಿ! ಇನ್ಮುಂದೆ ಹೀಗೆ ಮಾಡಬೇಡಿ

 


ಅನೇಕ ಜನರು ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿಯನ್ನು ಅಗತ್ಯಕ್ಕಿಂತ ಸ್ವಲ್ಪ ಹೆಚ್ಚು ಖರೀದಿಸುತ್ತಾರೆ ಮತ್ತು ಸಂಗ್ರಹಿಸುತ್ತಾರೆ. ಆದರೆ ಕೆಲವು ದಿನಗಳ ನಂತರ ಮೊಳಕೆಯೊಡೆಯುತ್ತದೆ. ಅನೇಕರು ಇವುಗಳನ್ನು ತೆಗೆದು ಅಡುಗೆಗೆ ಬಳಸುತ್ತಾರೆ.. ಹೀಗೆ ಮಾಡುವುದು ತುಂಬಾ ಅಪಾಯಕಾರಿ ಅಂತೆ. ಈ ಕುರಿತಾಗಿ ನಾವು ಇಂದು ನಿಮಗೆ ಅಗತ್ಯವಾದ ಮಾಹಿತಿ ತಿಳಿಸಿ ಕೊಡಲಿದ್ದೇವೆ....


ಆಲೂಗಡ್ಡೆ ಪೊಟ್ಯಾಸಿಯಮ್ನಲ್ಲಿ ಸಮೃದ್ದವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಆದರೆ ಎಣ್ಣೆಯಲ್ಲಿ ಕರಿದು ತಿನ್ನಬೇಡಿ. ಬೇರೆ ಬೇರೆ ಖಾದ್ಯ ಮಾಡಿ ತೆಗೆದುಕೊಳ್ಳುವುದು ಉತ್ತಮ. ಆಲೂಗಡ್ಡೆಯೊಂದಿಗೆ ವಿವಿಧ ಭಕ್ಷ್ಯಗಳನ್ನು ತಯಾರಿಸಬಹುದು. ಆಲೂಗಡ್ಡೆಯನ್ನು ಸಾಂಬಾರ್‌ನಿಂದ ಹಿಡಿದು ಫ್ರೆಂಚ್ ಪ್ರೈಗಳವರೆಗೆ ಬಳಸಲಾಗುತ್ತದೆ.


ಆಲೂಗಡ್ಡೆಯನ್ನು ಖರೀದಿಸಿ ಮನೆಗೆ ತಂದ ತಕ್ಷಣ ಬಳಸದಿದ್ದರೆ, ಅವು ಕೆಲವು ದಿನಗಳವರೆಗೆ ಮೊಳಕೆಯೊಡೆಯುತ್ತವೆ. ಆದರೆ ಅನೇಕ ಜನರು ಈ ಮೊಳಕೆಗಳನ್ನು ತೆಗೆದು ಅಡುಗೆಯಲ್ಲಿ ಬಳಸುತ್ತಾರೆ. ಆದರೆ ಹೀಗೆ ಮಾಡಿದರೆ ಪ್ರಾಣಕ್ಕೇ ಅಪಾಯ.



ಮೊಳಕೆ ಬರಿಸಿದ ಆಲೂಗಡ್ಡೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಮೊಳಕೆಯೊಡೆದ ಅಥವಾ ತಿಳಿ ಹಸಿರು ಆಲೂಗಡ್ಡೆಗಳಲ್ಲಿ ಸೋಲನೈನ್ ಮತ್ತು ಚಾಕೋನೈನ್ ಉತ್ಪತ್ತಿಯಾಗುತ್ತದೆ. ಇವುಗಳ ಸೇವನೆಯಿಂದ ದೇಹ ವಿಷವಾಗುತ್ತದೆ. ಇದು ವಾಕರಿಕೆ, ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವನ್ನು ಉಂಟುಮಾಡಬಹುದು.


ತಲೆನೋವು ಮತ್ತು ತಲೆತಿರುಗುವಿಕೆಯಂತಹ ನರವೈಜ್ಞಾನಿಕ ಲಕ್ಷಣಗಳನ್ನು ಸಹ ಉಂಟುಮಾಡಬಹುದು ಮನೆಯಲ್ಲಿ ಸಂಗ್ರಹಿಸಿ ಅಡುಗೆ ಮಾಡುವಾಗ ಇದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಪರಿಹಾರವಿಲ್ಲದ ಆರೋಗ್ಯ ಸಮಸ್ಯೆಗಳು ಬರುತ್ತವೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget