ಪರಿಸರದ ಪ್ರತಿ ಅಂಶದಲ್ಲಿ ದೇವರನ್ನು ಕಂಡುಕೊಂಡ ಸನಾತನ ಸಂಸ್ಕೃತಿ ನಮ್ಮದು: ಪ್ರಕಾಶ್ ಮಲ್ಪೆ
ಬಳ್ಪ: ನಮ್ಮ ಸನಾತನ ಹಿಂದೂ ಸಂಸ್ಕೃತಿ ಯಲ್ಲಿ ನಾವು ಪ್ರಕೃತಿಯ ಆರಾಧಕರು.ನಮ್ಮ ಪುರಾಣ,ಇತಿಹಾಸದಲ್ಲಿ ಅದಕ್ಕೇ ಹಲವಾರು ನಿದರ್ಶನಗಳಿವೆ. ರಾಮಾಯಣ ದಲ್ಲಿ ಲಕ್ಷ್ಮಣ ಮೂರ್ಛೆ ತಪ್ಪಿದಾಗ ಹನುಮಂತ ನಿಗೆ ಸಂಜೀವಿನಿ ಗಿಡ ಮೂಲಿಕೆ ತರಲು ಸಂದೇಶ ನೀಡಿದರು,ಆದರೆ ಪೂರ್ಣ ಬೆಟ್ಟವನ್ನು ಹನುಮಂತ ತಂದರು,ನಂತರ ಅದೇ ಬೆಟ್ಟದ ಭಾಗವನ್ನು ಪುನಃ ಅದೇ ಜಾಗದಲ್ಲಿಟ್ಟು ಪರಿಸರದ ಬಗ್ಗೆ ನಮ್ಮ ಸಂಸ್ಕೃತಿ ಗಿರುವ ಕಾಳಜಿ ಪುರಾಣಗಳಲ್ಲಿ ವ್ಯಕ್ತವಾಗಿದೆ.
ಪ್ರಕೃತಿ ಯಲ್ಲಿ ಭಗವಂತನನ್ನು ಕಾಣುವ ಸಂಸ್ಕೃತಿ ಯಿದ್ದಾರೆ ಅದೂ ಸನಾತನ ಹಿಂದೂ ಸಂಸ್ಕೃತಿ ಯೆಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಮಲ್ಪೆ ಯವರು ಗ್ರಾಮ ವಿಕಾಸ ಪ್ರತಿಷ್ಠಾನ ಬಳ್ಪ,ಕೇನ್ಯ ವತಿಯಿಂದ ನಡೆದ ಬೊಗಾಯನ ಕೆರೆ ಬಳಿ ನಡೆದ ಗಂಗಾ ಆರತಿ ಕಾರ್ಯಕ್ರಮ ದಲ್ಲಿ ಮಾತನಾಡಿದರು.ಮುಖ್ಯ ಅತಿಥಿಯಾಗಿ ಗ್ರಾಮ ವಿಕಾಸ ಸಂಯೋಜಕಾರದ ಜಿತೇಂದ್ರ ಪ್ರತಾಪ್ ನಗರ ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿ ಶಾಸಕಿ ಭಾಗೀರಥಿ ಮುರುಳ್ಯ,ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಅರೆಸೆಸ್ಸ್ ಪ್ರಾಂತ್ಯ ಸಹ ಸೇವಾ ಪ್ರಮುಖ್ ನ. ಸೀತಾರಾಮ,ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಲಳಂಬೆ, ,ಸುಬ್ರಮಣ್ಯ ಕುಳ, ವಿನೋದ್ ಬೊಳ್ಮಲೆ,ದೇವರಾಜ್, ಪ್ರಸನ್ನ ದರ್ಬೆ ಊರಿನ ಪ್ರಮುಖರು ಉಪಸ್ಥಿತರಿದ್ದರು. ಈ ವೇಳೆ ಗಂಗಾ ಆರತಿ ಕಾರ್ಯಕ್ರಮ ನಡೆಯಿತು, ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Post a Comment