ಸ್ವಂತ ಮನೆ ಕನಸ್ಸು ಕಾಣುತ್ತಿರುವವರಿಗೆ ಶುಭ ಸುದ್ದಿ - ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನೋಂದಣಿ ಆರಂಭ – ಅರ್ಹತೆ ಹಾಗೂ ಅರ್ಜಿ ಸಲ್ಲಿಕೆಯ ವಿವರ

 


ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) 2.0 ಮೋದಿ ನೇತ್ರತ್ವದ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದು. ಈ ಯೋಜನೆಯಡಿ ಸರ್ಕಾರವು ಈಗ ಹೆಚ್ಚುವರಿ 3 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದು. ಇದಕ್ಕಾಗಿ ಈ ಆರ್ಥಿಕ ವರ್ಷದಲ್ಲಿ 10 ಲಕ್ಷ ಕೋಟಿ ರೂ.ಮೀಸಲು ಇಡಲಾಗಿದೆ. ಮಾಸಿಕ 15,000 ರೂ. ಆದಾಯ ಇರುವವರೂ ಯೋಜನೆಗೆ ಅರ್ಹರಾಗಿದ್ದು, 90 ದಿನಗಳಲ್ಲಿ ಮನೆ ನೀಡುವ ಉದ್ದೇಶ ಹೊಂದಿದೆ.

ಅರ್ಹತೆ

* ಈ ಮೊದಲು, ಮಾಸಿಕ ಆದಾಯ 10,000 ರೂ.ವರೆಗಿನ ಜನರು ಈ ಯೋಜನೆಗೆ ಅರ್ಹತೆ ಹೊಂದಿದ್ದರು.. ಈಗ ತಿಂಗಳ ಆದಾಯದ ಮಿತಿಯನ್ನು 15,000 ರೂ.ಗೆ ಹೆಚ್ಚಿಸಲಾಗಿದೆ.

* ಈ ಹಿಂದೆ ಎರಡು ಕೋಣೆಗಳ ಕಚ್ಚೆ ಮನೆ, ಫ್ರಿಜ್ ಅಥವಾ ದ್ವಿಚಕ್ರ ವಾಹನ ಹೊಂದಿರುವವರು ಈ ಯೋಜನೆಗೆ ಅರ್ಹರಾಗಿರಲಿಲ್ಲ. ಆದರೆ ಈಗ ಈ ಹೊಸ ಯೋಜನೆಯಲ್ಲಿ ಈ ಷರತ್ತುಗಳನ್ನು ಸಡಿಲಿಸಲಾಗಿದೆ.

* ಅರ್ಹ ವ್ಯಕ್ತಿಗಳನ್ನು ಗ್ರಾಮ ಮಟ್ಟದಲ್ಲಿ ಬಹಿರಂಗ ಸಭೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

* ಅರ್ಹ ವ್ಯಕ್ತಿಗಳಿಗೆ ಕೇವಲ 90 ದಿನಗಳಲ್ಲಿ ಅವರ ಮನೆಗಳನ್ನು ಒದಗಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ.

ನಾಲ್ಕು ವಿಭಾಗ

ಈ ಯೋಜನೆಯ ಪ್ರಯೋಜನಗಳನ್ನು ಎಲ್ಲಾ ನಾಗರಿಕರಿಗೆ ವಿಸ್ತರಿಸಲು, ಸರ್ಕಾರವು ಇದನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಿದೆ. ಅವುಗಳು ಕೆಳಕಂಡಂತಿವೆ: ಆರ್ಥಿಕವಾಗಿ ದುರ್ಬಲ ವಿಭಾಗ (EWS): ಇದು ಅತ್ಯಂತ ಕಡಿಮೆ ಆದಾಯದ ವರ್ಗವಾಗಿದೆ. ಈ ವರ್ಗಕ್ಕೆ ಸೇರುವ ಕುಟುಂಬಗಳು ವಸತಿ ಯೋಜನೆಯಡಿಯಲ್ಲಿ ಹೆಚ್ಚಿನ ಸಹಾಯವನ್ನು ಪಡೆಯುತ್ತವೆ.

ಕಡಿಮೆ ಆದಾಯದ ಗುಂಪು (LIG): ಈ ವರ್ಗದಲ್ಲಿ ಬೀಳುವ ಕುಟುಂಬಗಳ ಆದಾಯವು EWS ವರ್ಗಕ್ಕಿಂತ ಸ್ವಲ್ಪ ಹೆಚ್ಚಾಗಿರುತ್ತದೆ. ಅವರಿಗೂ ವಸತಿ ಯೋಜನೆಯಡಿ ಸಾಕಷ್ಟು ನೆರವು ಸಿಗುತ್ತದೆ.

ಮಧ್ಯಮ ಆದಾಯ ಗುಂಪು- 1 (MIG-I): ಈ ವರ್ಗದಲ್ಲಿ ಬೀಳುವ ಕುಟುಂಬಗಳ ಆದಾಯವು LIG ವರ್ಗಕ್ಕಿಂತ ಹೆಚ್ಚಾಗಿರುತ್ತದೆ.

ಮಧ್ಯಮ ಆದಾಯ ಗುಂಪು-2 (MIG-II): ಇದು ಅತ್ಯಧಿಕ ಆದಾಯ ವರ್ಗವಾಗಿದೆ. ಇತರ ವರ್ಗಗಳಿಗೆ ಹೋಲಿಸಿದರೆ ಈ ವರ್ಗದಲ್ಲಿ ಬೀಳುವ ಕುಟುಂಬಗಳು ಕಡಿಮೆ ಸಹಾಯವನ್ನು ಪಡೆಯುತ್ತವೆ.

ಸರ್ಕಾರ ಶೀಘ್ರದಲ್ಲೇ ಸಮೀಕ್ಷೆ ಪ್ರಾರಂಭಿಸಲಿದ್ದು, ಆರ್ಹ ಫಲಾನುಭವಿಗಳನ್ನು ಗುರುತಿಸಲಿದೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

 • ಆಸಕ್ತರು ಪಿಎಂ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ pmaymis.gov.in ge ಭೇಟಿ ನೀಡಿ ವೆಬ್ಸೈಟ್ನಲ್ಲಿನ 'ನಾಗರಿಕರ ಮೌಲ್ಯಮಾಪನ' ಮೆನುವಿನಲ್ಲಿ ಇತರ 3 ಘಟಕಗಳ ಅಡಿಯಲ್ಲಿ ಪ್ರಯೋಜನಗಳು' ಆಯ್ಕೆಯನ್ನು ಆಯ್ಕೆಮಾಡಿ.

· ಆಧಾರ್ ಕಾರ್ಡ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ.

· ಬಳಿಕ ಅರ್ಜಿಯ ಪುಟವು ತೆರೆದುಕೊಳ್ಳುತ್ತದೆ.ಅಲ್ಲಿ ಅರ್ಜಿದಾರರು ಅಗತ್ಯ ಮಾಹಿತಿಯನ್ನು ತುಂಬ ಬೇಕು ನಂತರ, ಕ್ಯಾಪ್ಟಾವನ್ನು ನಮೂದಿಸಿ ಮತ್ತು 'ಉಳಿಸು' ಬಟನ್ ಕ್ಲಿಕ್ ಮಾಡಿ.


· ಅರ್ಜಿ ನಮೂನೆಯನ್ನು ಡೌನ್ಫೋಡ್ ಮಾಡಿ ಭವಿಷ್ಯದ ಅಗತ್ಯಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

* ಬಳಿಕ ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ಬ್ಯಾಂಕ್ಕೆ ಹೋಗಿ ಮತ್ತು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಸಲ್ಲಿಸಿ.

· ನೀವು ಅಸೆಸ್ಕೆಂಟ್ ಐಡಿ ಅಥವಾ ಹೆಸರು, ತಂದೆಯ ಹೆಸರು ಮತ್ತು ಮೊಬೈಲ್ ಸಂಖ್ಯೆಯ ಮೂಲಕ ವೆಬ್ಬೆಟ್ನಲ್ಲಿ ಅಪ್ಲಿಕೇಶನ್ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.


ಯಾರು ಅರ್ಜಿ ಸಲ್ಲಿಸಬಹುದು?

· ಕುಟುಂಬದಲ್ಲಿ ಕೇವಲ ಪುರುಷ ಸದಸ್ಯರಿದ್ದರೆ, ಅವರು ಅರ್ಜಿ ಸಲ್ಲಿಸಬಹುದು.

• ಅಭ್ಯರ್ಥಿಯ ವಯಸ್ಸು 70 ವರ್ಷಕ್ಕಿಂತ ಕಡಿಮೆ ಇರಬೇಕು

• ಅರ್ಜಿದಾರರ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಈಗಾಗಲೇ ಯಾವುದೇ ಮನೆ ಇರಬಾರದು.

 •ಫಲಾನುಭವಿಯು ಈ ಹಿಂದೆ ಯಾವುದೇ ಸರ್ಕಾರಿ ವಸತಿ ಯೋಜನೆಯ ಲಾಭವನ್ನು ಪಡೆದಿರಬಾರದು.

 •ಮನೆಯ ಒಡೆತನ ಮಹಿಳೆಯ ಹೆಸರಿಗೆ ಆಗಬೇಕು ಎಂಬುದು ಸರ್ಕಾರದ ಉದ್ದೇಶ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಪ್ರಯತ್ನ ಇದಾಗಿದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget