ನಂದಿನಿ ಬ್ರ್ಯಾಂಡ್ ವ್ಯಾಲ್ಯೂವನ ಬಗ್ಗೆ ನಿಮಗೆಲ್ಲ ತಿಳಿದಿರುವ ವಿಷಯವೇ. ಇದೀಗ ನಂದಿನಿ ಗ್ರಾಹಕರ ಅಗತ್ಯತೆಗಳನ್ನು ತಿಳಿದುಕೊಂಡು ಹೊಸ ಆಹಾರ ಪದಾರ್ಥವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ನಂದಿನ ಪ್ರಾಡೆಕ್ಟ್‌ನ ಬಗ್ಗೆ ವಿಶ್ವಾಸ ಹಾಗೂ ಗೌರವ ಹೆಚ್ಚಾಗಿದೆ.
ಕೇವಲ ಕರ್ನಾಟಕ ಮಾತ್ರವಲ್ಲ. ದಕ್ಷಿಣದ ವಿವಿಧ ರಾಜ್ಯಗಳಲ್ಲಿ ಹಾಗೂ ಉತ್ತರ ಭಾರತದಲ್ಲೂ ನಂದಿನಿ ಪ್ರಾಡೆಕ್ಟ್‌ನ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಂದಿನಿಯಿಂದ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳವು (ಕೆಎಂಎಫ್) ಇಡ್ಲಿ ಮತ್ತು ದೋಸೆ ಹಿಟ್ಟನ್ನು ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿಯೇ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಪ್ರಾಡೆಕ್ಟ್ ಜನರಿಗೆ ಪರಿಚಯಿಸಲಾಗುತ್ತದೆ. ಪ್ರಾರಂಭದ ಹಂತದಲ್ಲಿ ಇಡ್ಲಿ ಹಾಗೂ ದೋಸೆ ಹಿಟ್ಟನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತದೆ. ಇದಾದ ನಂತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಮಾರಾಟ ಮಾಡು ಉದ್ದೇಶಿಸಲಾಗಿದೆ. ಇನ್ನು ಬೆಂಗಳೂರಿನಲ್ಲೂ ಜನರ ಬೇಡಿಕೆಯನ್ನು ನೋಡಿಕೊಂಡು ಹಿಟ್ಟನ್ನು ಮಾರಾಟ ಮಾಡಲು ಕೆಎಂಫ್ ನಿರ್ಧರಿಸಿದೆ. ಇದರ ಭಾಗವಾಗಿ ಪ್ರಾರಂಭದಲ್ಲಿ 10 ಸಾವಿರದಿಂದ 20 ಸಾವಿರ ಕೆ.ಜಿಯಷ್ಟು ಹಿಟ್ಟು ಮಾಡಲು ಉದ್ದೇಶಿಸಲಾಗಿದೆ. ಇದಾದ ನಂತರ ಹಂತ ಹಂತವಾಗಿ ಕರ್ನಾಟಕದಾದ್ಯಂತ ಈ ಪ್ರಾಡೆಕ್ಟ್ ವಿಸ್ತರಣೆಯಾಗಲಿದೆ. ರೆಡಿ ಟು-ಕುಕ್ ಫುಡ್ ಕ್ಷೇತ್ರಕ್ಕೆ ಗ್ರ್ಯಾಂಡ್ ಎಂಟ್ರಿ: ಹಾಲು, ಮೊಸರು, ಮಜ್ಜಿಗೆ, ತುಪ್ಪ ಹಾಗೂ ಸ್ವೀಟ್ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಮೂಲಕ ಮನೆ ಮಾತಾಗಿದೆ ನಮ್ಮ ನಂದಿನಿ. ನಂದಿನ ಪ್ರಾಡೆಕ್ಟ್‌ಗಳು ಕನ್ನಡಿಗರ ನಿತ್ಯ ಬಳಕೆಯ ಪದಾರ್ಥಗಳಲ್ಲಿ ಅಗ್ರಪಂಕ್ತಿಯಲ್ಲಿ ಇದೆ. ಇದೀಗ ನಂದಿನಿ ರೆಡಿ ಟು - ಕುಕ್ ಕ್ಷೇತ್ರ (ಸಿದ್ಧ ಆಹಾರ ಪದಾರ್ಥಗಳು)ಕ್ಕೂ ಕಾಲಿರಿಸಿದೆ. ಇದರ ಪ್ರಾಯೋಗಿಕ ಭಾಗವಾಗಿ ರೆಡಿ ಟು - ಕುಕ್ ದೋಸೆ ಹಾಗೂ ಇಡ್ಲಿ ಹಿಟ್ಟನ್ನು ಪರಿಚಯಿಸಲಾಗುತ್ತಿದೆ. ದೋಸೆ ಮತ್ತು ಇಡ್ಲಿ ಹಿಟ್ಟಿನ ಪ್ಯಾಕೇಟ್‌ಗಳ ಪ್ರಮಾಣ 450 ಗ್ರಾಂ ಹಾಗೂ 900 ಗ್ರಾಂ ಪ್ಯಾಕೆಟ್‌ಗಳಲ್ಲಿ ಸಿಗಲಿವೆ ಎಂದು ಹೇಳಲಾಗಿದೆ.
ಮಾರುಕಟ್ಟೆಯಲ್ಲಿರುವ ಬೇಡಿಕೆ ಹಾಗೂ ತನ್ನ ಬ್ರ್ಯಾಂಡ್‌ವ್ಯಾಲ್ಯೂ ಎರಡನ್ನೂ ಬಳಸಿಕೊಂಡು ಆದಾಯ ಗಳಿಸುವುದು ಹಾಗೂ ಗ್ರಾಹಕರಿಗೆ ಉತ್ತಮ ಆಹಾರ ಪದಾರ್ಥವನ್ನು ನೀಡುವುದು ಕೆಎಂಎಫ್‌ನ ಉದ್ದೇಶವಾಗಿದೆ. ಇದೇ ಕಾರಣಕ್ಕಾಗಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಹೊಸ ಪ್ರಯೋಗಕ್ಕೆ ಮುಂದಾಗಿದೆ. ಈಗಾಗಲೇ ನಂದಿನಿ ಬ್ರ್ಯಾಂಡ್‌ನ ಉತ್ಪನ್ನಗಳನ್ನು ಜನ ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಇದೀಗ ರೆಡಿ ಟು -ಕುಕ್ ಫುಡ್ ಕ್ಷೇತ್ರದಲ್ಲೂ ಜಾದೂ ಮಾಡಲು ಕೆಎಂಎಫ್ ಮುಂದಾಗಿದೆ. ಮತ್ತೊಂದು ವಿಶೇಷವೆಂದರೆ, ಈಗಾಗಲೇ ಮಾರುಕಟ್ಟೆಯಲ್ಲಿರುವ ರೆಡಿ ಟು - ಕುಕ್ ಇಡ್ಲಿ ಹಾಗೂ ದೋಸೆ ಹಿಟ್ಟಿನ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ನಂದಿನಿ ಬ್ರ್ಯಾಂಡ್ ಇಡ್ಲಿ ಮತ್ತು ದೋಸೆ ಹಿಟ್ಟು ಗ್ರಾಹಕರಿಗೆ ಸಿಗಲಿದೆ ಎಂದು ಹೇಳಲಾಗಿದೆ.
ನಂದಿನಿ ಬ್ರ್ಯಾಂಡ್‌ಗೆ ಡಿಮ್ಯಾಂಡ್: ನಂದಿನಿ ಬ್ರ್ಯಾಂಡ್‌ಗೆ ತನ್ನದೇ ವ್ಯಾಲ್ಯೂವು ಇದೆ. ಇತ್ತೀಚೆಗೆ ತಿರುಪತಿ ಲಡ್ಡುವಿನಲ್ಲಿ ಕಲಬೆರೆಕೆ ತುಪ್ಪ ಬಳಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದಾದ ನಂತರ ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡುವಿನಲ್ಲಿ ಮತ್ತೆ ನಂದಿನಿ ತುಪ್ಪವನ್ನೇ ಬಳಸಲಾಗುತ್ತಿದೆ. ಈ ಪ್ರಕರಣದ ನಂತರ ನಂದಿನಿ ಬ್ರ್ಯಾಂಡ್ ವ್ಯಾಲ್ಯೂವ್ ಹೆಚ್ಚಾಗಿದೆ. ನಂದಿನಿ ಬ್ರ್ಯಾಂಡ್ ಉತ್ಪನ್ನಗಳ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಾಗಿದೆ.
Post a Comment