ಕಾಂಗ್ರೆಸ್ ಪಕ್ಷದ ಕಿಸಾನ್, ಪೈಲ್ವಾನ್,ಜವಾನ್ ಘೋಷಣೆ ತಿರುಮಂತ್ರವಾಯಿತೇ?
ಹರಿಯಾಣ:ರಾಜಕೀಯದಲ್ಲಿ ಇಂದಿದ್ದದ್ದು ನಾಳೆ ಇರಬೇಕೆಂದಿಲ್ಲ, ಪರಿಸ್ಥಿತಿ ,ಸಮಯಗಳು ರಾಜಕೀಯ ಲೆಕ್ಕಾಚಾರವನ್ನು ಬುಡಮೇಲು ಮಾಡುತ್ತದೆ ಆದಕ್ಕೊಂದು ಉದಾಹರಣೆ ಹರಿಯಾಣ ಫಲಿತಾಂಶ. ಸಮೀಕ್ಷೆ ಗಳು,ರಾಜಕೀಯ ವಿಶ್ಲೇಷಕರು ಬಿಜೆಪಿ ಹಲವು ನಾಯಕರು ಹರಿಯಾಣ ದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲವೆಂದು ವಿಶ್ಲೇಷಿಸಿದ್ದರು,ಪರಿಸ್ಥಿತಿ ಹಾಗೇನೇ ಇತ್ತು ಒಬಿಸಿ ಯ ಮನೋಹರ್ ಲಾಲ್ ಖಟ್ಟರ್ ರನ್ನು ಹತ್ತು ವರ್ಷ ಹಿಂದೆ ಮುಖ್ಯಮಂತ್ರಿ ಮಾಡಿದ್ದರು ಕಳೆದ ಆರು ತಿಂಗಳ ಹಿಂದೆ ನಯಬ್ ಸೈನಿ ಹೊಸ ಮುಖ್ಯಮಂತ್ರಿ ಯಾಗಿ ಆಯ್ಕೆ ಮಾಡಲಾಗಿತ್ತು.ಹರಿಯಾಣ ದಲ್ಲಿ ಜಾಟ್ ಮತದಾರರು ಪ್ರಭಾವಶಾಲಿ ಗಳು ಕಳೆದ ಅನೇಕ ವರ್ಷಗಳಿಂದ ಈ ಸಮುದಾಯ ಬಿಜೆಪಿ ಮೇಲೆ ವಿಪರೀತ ಆಕ್ರೋಶ ವ್ಯಕ್ತಪಡಿಸಿತ್ತು. ಇದೇ ವೇಳೆ ಕಾಂಗ್ರೆಸ್ ಕಿಸಾನ್, ಪೈಲ್ವಾನ್, ಜವಾನ್ ಘೋಷಣೆ ಮೂಲಕ ಮತದಾರ ರನ್ನು ತನ್ನತ್ತ ಸೆಳೆಯಲು ವ್ಯಾಪಕ ತಂತ್ರ ಹೆಣೆದಿತ್ತು ರೈತ ಚಳವಳಿ ಮೂಲಕ ಕೇಂದ್ರದ ಕೃಷಿ ಮಸೂದೆ ವಿರುದ್ಧವಾಗಿ ಇಡೀ ರಾಜ್ಯದಲ್ಲಿ ಬಿಜೆಪಿ ಸರ್ಕಾರ ವಿರುದ್ಧವಾಗಿ ದೊಡ್ಡ ಆಂದೋಲನ ವನ್ನೇ ನಡೆಸಿತ್ತು,ಹರಿಯಾಣ ದಲ್ಲಿ ಪೈಲ್ವಾನ್, ಕುಸ್ತಿಪಟು ಗಳು ಪ್ರತಿ ಗ್ರಾಮದಲ್ಲಿ ಕಂಡುಬರುತ್ತಾರೆ ಅಲ್ಲೊಂದು ಅದಕ್ಕೆ ಸಾಂಸ್ಕೃತಿಕ ಹಿನ್ನಲೆಯಿದೆ ಕೇಂದ್ರ ಕುಸ್ತಿ ಫೆಡರೇಷನ್ ಅಧ್ಯಕ್ಷ, ಬಿಜೆಪಿ ಮೂಲ ದ ಬ್ರಿಜೇಶ್ ಭೂಷಣ್ ಮತ್ತು ಕುಸ್ತಿಪಟುಗಳ ನಡುವೆ ದೊಡ್ಡ ಹೋರಾಟ ದೆಹಲಿ ಮಟ್ಟದಲ್ಲಿ ಅನೇಕ ತಿಂಗಳುಗಳ ಕಾಲ ನಡೆದು ಹೋದವು ವಿನೇಶ್ ಪೊಗಟ್ ಮುಂತಾದ ಕ್ರೀಡಾಳುಗಳು ಬ್ರಿಜೇಶ್ ಭೂಷಣ್ ವಿರುದ್ಧ ಸಮರ ಸಾರಿದ್ದರು,ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕುಸ್ತಿಪಟು ಬೆಂಬಲಕ್ಕೆ ನಿಂತು ಅವರ ಹೋರಾಟದಲ್ಲಿ ಪಾಲ್ಗೊಂಡಿದ್ದರು.ಹರಿಯಾಣ ದಲ್ಲಿ ಹೆಚ್ಚಿನ ಜನ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಅಗ್ನಿವೀರ್ ನಂತರ ನಿಮ್ಮನ್ನು ಕೇವಲ 5 ವರ್ಷಕ್ಕೆ ಮಾತ್ರ ದೇಶ ಸೇವೆಗೆ ಪರಿಗಣಿಸುತ್ತಾರೆ ಇದರಿಂದಾಗಿ ಹರಿಯಾಣ ದಿಂದ ಸೈನಿಕ ವೃತ್ತಿಗೆ ತೆರಳುವವರಿಗೆ ಅವಮಾನ ವೆಂದು ಕಾಂಗ್ರೆಸ್ ಜನರ ಮುಂದಿಟ್ಟಿತ್ತು ಆದರೆ ಈ ಸ್ಲೋಗನ್ ಈ ಚುನಾವಣೆ ಯಲ್ಲಿ ಕಾಂಗ್ರೆಸ್ ಕೈಹಿಡಿಯಲಿಲ್ಲ.ಜಾಟ್ ಮತದಾರರ ಕಾಂಗ್ರೆಸ್ ಪಕ್ಷದತ್ತ ತೆರಳಿದರು ಉಳಿದ ಒಬಿಸಿ ಮತದಾರರು ಬಿಜೆಪಿ ಕೈಹಿಡಿದ್ದಾರೆ.ಕಳೆದ ಮೂರು ತಿಂಗಳಿನಿಂದ ಬಿಜೆಪಿ ಹರಿಯಾಣ ದಲ್ಲಿ ಸಂಘಟಿತವಾಗಿ ಕೆಲಸ ಮಾಡಿದೆ,ಆಡಳಿತ ವಿರೋಧಿ ಅಲೆ ರಾಜ್ಯದಲ್ಲಿದ್ದರು ಬಿಜೆಪಿ ಮತ್ತು ಪರಿವಾರ ಸಂಘಟನೆಗಳ ಹೋಮ್ ವರ್ಕ್ ಚೆನ್ನಾಗಿ ವರ್ಕ್ ಔಟ್ ಆಗಿದ್ದು ಈ ಫಲಿತಾಂಶ ದಲ್ಲಿ ಕಾಣುತ್ತಿದೆ. ಕಾರ್ನಾರ್ ಸಭೆಗಳು ಮತ್ತು ಜಾತಿ ಕ್ರೋಡೀಕರಣ ಕ್ಕಾಗಿ ಸಣ್ಣ ಸಣ್ಣ ಸಮುದಾಯ ಪ್ರಮುಖ ರ ಸಭೆಗಳು ಮತಗಳಾಗಿ ಬಿಜೆಪಿಗೆ ಪರಿವರ್ತನೆ ಯಾಗಿದೆ. ಮುಖ್ಯಮಂತ್ರಿ ಸೈನಿ ಪಕ್ಷ ಮತ್ತು ಸಂಘಟನೆ ಯನ್ನು ಬಾರಿ ನಾಜೂಕಾಗಿ ನಿಭಾಯಿಸಿದ್ದು ಎಲ್ಲಿಯೂ ಅಪಸ್ವರ, ಅಸಮಾಧಾನಕ್ಕೆ ಅವಕಾಶವಿರಲಿಲ್ಲ.ಕಳೆದ ಬಾರಿಯ ಮಿತ್ರಪಕ್ಷ ರಾಷ್ಟ್ರೀಯ ಲೋಕದಳ ದ ಮತಗಳು ತನ್ನತ್ತ ಸೆಳೆಯುವಲ್ಲಿ ಬಿಜೆಪಿ ಸಫಲವಾಗಿದೆ. ಹರಿಯಾಣ ದ ಕಾಂಗ್ರೆಸ್ ಪಕ್ಷದ ಹಿರಿಯ ದಲಿತ ನಾಯಕಿ ಸೆಲ್ಜಿ ಮತ್ತು ಭೂಪೇಂದ್ರ ಹುಡಾ ಭಿನ್ನಮತವನ್ನು ಬಿಜೆಪಿ ಚೆನ್ನಾಗಿ ಮೈಂಡ್ ವರ್ಕ್ ಮಾಡಿ ಬಳಸಿಕೊಂಡಿದೆ,ದಲಿತ ವೋಟ್ ಬ್ಯಾಂಕ್ ಕಾಂಗ್ರೆಸ್ ಪಕ್ಷ ಅಷ್ಟೇನು ಬಂದಂತಿಲ್ಲ.ಕಳೆದ ಲೋಕಸಭಾ ಚುನಾವಣೆ ನಂತರ ಬಿಜೆಪಿ ಮತ್ತು ಅರೆಸೆಸ್ಸ್ ನಡುವೆ ಅಂತರಗಳು ನಡ್ದ ರ ನಾವು ಸ್ವಾತಂತ್ರ್ಯ ರು ನಾವು ಯಾರನ್ನು ಕೇಳುವ ಅಗತ್ಯವಿಲ್ಲ ಹೇಳಿಕೆ ನಂತರ ಹೆಚ್ಚಾಗಿತ್ತು ಆದರೆ ಈ ಬಾರಿ ಅರೆಸೆಸ್ಸ್ ತನ್ನದೇ ನೆಟ್ ವರ್ಕ್ ಉಪಯೋಗಿಸಿ ಹರಿಯಾಣ ಮತ್ತು ಕಾಶ್ಮೀರದಲ್ಲಿ ಕೆಲಸ ಮಾಡಿದೆ ,ಅರೆಸೆಸ್ಸ್ ನ ರಾಮ್ ಮಾಧವ್ ರನ್ನು ಜಮ್ಮು ಚುನಾವಣೆ ಉಸ್ತುವಾರಿ ಯಾಗಿ ನೇಮಕಗೊಂಡಿದ್ದರು ಜಮ್ಮು ಮತ್ತು ಕಾಶ್ಮೀರ ದಲ್ಲಿ ಬಿಜೆಪಿ ಅಧಿಕಾರದ ಖಾತ್ರಿಯಿಲ್ಲದಿದ್ದರು ಹಿಂದಿಗಿಂತ ನಾಲ್ಕು ಸೀಟು ಹೆಚ್ಚು ಗಳಿಸಿದೆ. ಹರಿಯಾಣ ಫಲಿತಾಂಶ ಲೋಕಸಭಾ ಚುನಾವಣೆ ರಿಸಲ್ಟ್ ನಂತರ ಬಿಜೆಪಿ ಗೆ ಟಾನಿಕ್ ನೀಡಿದಂತೂ ಸುಳ್ಳಲ್ಲ.
Post a Comment