ಸುಳ್ಯ: ಸುಳ್ಯ ತಹಶೀಲ್ದಾರ್ ಆಗಿ ಮಂಜುಳಾ ಎಂ. ಅವರನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿದೆ ಎಂದು ತಿಳಿದು ಬಂದಿದೆ. ಸುಳ್ಯ ತಹಶೀಲ್ದಾರ್ ಆಗಿದ್ದ ಜಿ.ಮಂಜುನಾಥ್ ಅವರು ವರ್ಗಾವಣೆ ಆದ ಕಾರಣ ಖಾಲಿ ಇರುವ
ಹುದ್ದೆಗೆ ಸ್ಥಳ ನಿರೀಕ್ಷಣೆಯಲ್ಲಿದ್ದ ಗ್ರೇಡ್-1 ತಹಶೀಲ್ದಾರ್ ಮಂಜುಳಾ ಎಂ. ಅವರನ್ನು ನೇಮಕ ಮಾಡಿ ಆದೇಶ ಮಾಡಿದೆ. ಮಂಜುಳಾ ಎಂ. ಅವರು ಬೆಂಗಳೂರಿನವರು. ಸುಳ್ಯ ಪ್ರಭಾರ ತಹಶೀಲ್ದಾರ್ ಆಗಿ ಪ್ರೊಬೇಷನರಿ ಅಧಿಕಾರಿ ಅರವಿಂದ ಕೆ.ಎಂ. ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Post a Comment