ನವದೆಹಲಿ: ಬಾಂಗ್ಲಾದೇಶದಲ್ಲಿ ಇರುವ ಹಿಂದೂಗಳು ಭಾರತಕ್ಕೆ ವಲಸೆ ಬರಬಾರದು ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಹೇಳಿದ್ದಾರೆ.
ಸಂಘದ ಎರಡು ದಿನಗಳ ಸಭೆಯ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ವಕ್ಸ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಜೆಪಿಸಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಿರಬೇಕು ಎಂದು ಸಲಹೆ ನೀಡಿದ್ದಾರೆ.
“ಕೃಷ್ಣ ಜನ್ಮಭೂಮಿಗೆ ಸಂಬಂಧಿಸಿದ ವಿಚಾರವು ನ್ಯಾಯಾಲಯದ ಅಂಗಳದಲ್ಲಿದೆ. ಅದು ತೀರ್ಮಾನ ತೆಗೆದುಕೊಳ್ಳುತ್ತದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಡೆದಂತಹ ಹೋರಾಟದ ಅಗತ್ಯ ಇಲ್ಲಿ ಇಲ್ಲ. ಸಮಾಜವು ತಿರ್ಮಾನಿಸುತ್ತದೆ ನಾವು ಸಮಾಜದ ಜೊತೆ ಇದ್ದೇವೆ' ಎಂದಿದ್ದಾರೆ.
'ಹಿಂದೂ ಸಮಾಜವು ಬಾಂಗ್ಲಾದೇಶದಿಂದ ವಲಸೆ ಬರುವ ಅಗತ್ಯ ಇಲ್ಲ. ಅವರು ಅಲ್ಲೇ ಇರಬೇಕು. ಅದು ಅವರ ನೆಲ. ಬಾಂಗ್ಲಾದೇಶದಲ್ಲಿ ನಾವು ಶಕ್ತಿಪೀಠಗಳನ್ನು ಹೊಂದಿದ್ದೇವೆ. ಹಿಂದೂಗಳು ಜಗತ್ತಿನ ಎಲ್ಲೆಡೆ ಇದ್ದಾರೆ. ಬಿಕ್ಕಟ್ಟು ಎದುರಾದಾಗಲೆಲ್ಲ ಹಿಂದೂಗಳು ಭಾರತದ ಕಡೆ ನೋಡುತ್ತಾರೆ' ಎಂದು ಭಾಗವತ್ ಹೇಳಿದ್ದಾರೆ.
Post a Comment