ಕರ್ನಾಟಕ ಕಿರಿಯರ ತಂಡಕ್ಕೆ ರಾಹುಲ್ ದ್ರಾವಿಡ್ ಪುತ್ರ ಸಮಿತ್ ಉಪನಾಯಕ!

 


ಬೆಂಗಳೂರು: ಮುಂಬರುವ ಕೂಚ್ ಬೆಹಾರ್ ಟ್ರೋಫಿ 19 ವಯೋಮಿತಿಯ ದೇಶೀಯ ಕ್ರಿಕೆಟ್ ಟೂರ್ನಿಯ ಮೊದಲ 2 ಪಂದ್ಯಗಳಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದುಕೊಟ್ಟಿದ್ದ ಧೀರಜ್ ಜೆ. ಗೌಡ ನಾಯಕರಾಗಿ ಮುಂದುವರಿದಿದ್ದಾರೆ.


ಕರ್ನಾಟಕ ತಂಡ ನವೆಂಬ‌ರ್ 6ರಿಂದ 9ರವರೆಗೆ ಮೊದಲ ಪಂದ್ಯದಲ್ಲಿ ಬರೋಡ ಮತ್ತು ನವೆಂಬರ್ 13ರಿಂದ 16ರವರೆಗೆ ತನ್ನ 2ನೇ ಪಂದ್ಯದಲ್ಲಿ ದೆಹಲಿ ವಿರುದ್ಧ ಆಡಲಿದೆ. ಇತ್ತೀಚೆಗೆ ಭಾರತದ 19 ವಯೋಮಿತಿ ತಂಡದಲ್ಲಿ ಸ್ಥಾನ ಪಡೆದರೂ, ಫಿಟೈಸ್‌ ಸಮಸ್ಯೆಯಿಂದಾಗಿ ಆಡುವ ಅವಕಾಶದಿಂದ ವಂಚಿತರಾಗಿದ್ದ ಸಮಿತ್ ಈಗ ಫಿಟ್ ಆಗಿ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.


ರಾಜ್ಯ ಕಿರಿಯರ ತಂಡ: ಧೀರಜ್ ಜೆ. ಗೌಡ (ನಾಯಕ), ಸಮಿತ್ ದ್ರಾವಿಡ್ (ಉಪನಾಯಕ), ಶಿವಂ ಸಿಂಗ್, ಪ್ರಣವ್ ಬಾಬು, ರವಿ ಕೈರವ್ ರೆಡ್ಡಿ (ವಿ.ಕೀ), ಕೆಪಿ ಕಾರ್ತಿಕೇಯ, ಸಿದ್ದಾರ್ಥ್ ಅಖಿಲ್, ಸಮರ್ಥ್ ನಾಗರಾಜ್, ವೈಭವ್ ಶರ್ಮ, ಪ್ರಥಮ್ ಆರ್, ರಾಗ್ ಪೂಂಜ, ಗೌರವ್ ಶಾನ್‌ಭಾಗ್, ಸೀನ್ ಪ್ರತ್ಯುಷ್ ಸಿರಿಲ್ (ವಿ.ಕೀ), ಸನ್ಮಯ್ ರುದ್ರ ಆದಿ, ರೋನಿತ್ ಅಯ್ಯಂಗಾರ್; ಕೋಚ್: ಕೆಬಿ ಪವನ್.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget