ಮಹಾರಾಷ್ಟ್ರ ಚುನಾವಣೆ: ಉದ್ಧವ್‌ ಪುತ್ರ ಆದಿತ್ಯಗೆ ಶಿಂದೆ ಬಣದ ಸಂಸದ ಮಿಲಿಂದ್‌ ಸವಾಲು

 


ಮುಂಬೈ: ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷವು ರಾಜ್ಯಸಭೆ ಸದಸ್ಯ ಮಿಲಿಂದ್ ದಿಯೋರಾ ಅವರನ್ನು ಮಾಜಿ ಸಿಎಂ ಉದ್ಧವ್ ಠಾಕ್ರೆ ಪುತ್ರ ಹಾಗೂ ಶಿವಸೇನಾ-ಯುಬಿಟಿ ಅಭ್ಯರ್ಥಿ ಆದಿತ್ಯ ಠಾಕ್ರೆ ವಿರುದ್ಧ ಕಣಕ್ಕಿಳಿಸಲು ಸಜ್ಜಾಗಿದೆ.

ಆದಿತ್ಯ ಅವರು ಸ್ಪರ್ಧಿಸುವ ಮುಂಬೈನ ವರ್ಲಿಯಿಂದ ಮಿಲಿಂದ್ ಅವರನ್ನು ನಿಲ್ಲಿಸುವ ಶಿಂದೆ ಅವರ ನಿರ್ಧಾರವು, ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಗೆ ಎಡೆ ಮಾಡಿಕೊಟ್ಟಿದೆ.


ಕಾಂಗ್ರೆಸ್‌ನ ಮಾಜಿ ನಾಯಕ ಹಾಗೂ ಮಾಜಿ ಸಚಿವರೂ ಆದ ಮಿಲಿಂದ್ ಅವರು ಈ ವರ್ಷ ನಡೆದ ಲೋಕಸಭೆ ಚುನಾವಣೆಗೂ ಮುನ್ನ ಶಿಂದೆ ಅವರ ಶಿವಸೇನಾಗೆ ಸೇರಿದ್ದರು. ಬಳಿಕ, ರಾಜ್ಯಸಭೆಗೆ ಚುನಾಯಿತರಾಗಿದ್ದಾರೆ.


288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಮತದಾನ ನಡೆಯಲಿದ್ದು, 23ರಂದು ಫಲಿತಾಂಶ ಪ್ರಕಟವಾಗಲಿದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget