ನವದೆಹಲಿ: ರಾಜಧಾನಿ ದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಸೋಮವಾರ 400 ರೂ. ಕಡಿಮೆಯಾಗಿ, 81,100 ರೂ.ಗೆ ತಲುಪಿದೆ. ಆದರೂ, 81 ಸಾವಿರದ ಗಡಿ ದಾಟಿರುವುದರಿಂದ ಖರೀದಿದಾರರು ಹಿಂದೇಟು ಹಾಕುತ್ತಿದ್ದಾರೆ. ಕೆ.ಜಿ ಬೆಳ್ಳಿಯ ದರ ಸೋಮವಾರ 1 ಸಾವಿರ ರೂ. ಕಡಿಮೆಯಾಗಿದ್ದು, 98 ಸಾವಿರ ರೂ.ಗೆ ಮಾರಾಟಗೊಂಡಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಜಾಗತಿಕ ಮಟ್ಟದಲ್ಲಿ ಬೇಡಿಕೆ ಕಡಿಮೆಯಾಗಿರುವುದರಿಂದ ಚಿನ್ನ ಮತ್ತು ಬೆಳ್ಳಿಯ ದರ ಇಳಿದಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭಾರಿ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಕಳೆದ ವರ್ಷದ ದೀಪಾವಳಿಯಷ್ಟು ಈ ಬಾರಿ ಮಾರಾಟವಾಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳಿದ್ದಾರೆ.
Post a Comment