ಹರಿಯಾಣ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಪೊಗಟ್ ಗೆ ಗೆಲುವು

 


ಚಂಡೀಗಢ: ಹರಿಯಾಣದ ಜಿಂದ್‌ ಜಿಲ್ಲೆಯ ಜೂಲಾನಾ ವಿಧಾನಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಮಾಜಿ ಕುಸ್ತಿ ಪಟು ವಿನೇಶ್ ಫೋಗಟ್ ಜಯದ ಮಾಲೆ ಧರಿಸಿದ್ದಾರೆ.


ಚುನಾವಣಾ ಆಯೋಗದ ಜಾಲತಾಣದ ಪ್ರಕಾರ, ವಿನೇಶ್ ಫೋಗಟ್ ತಮ್ಮ ಎದುರಾಳಿ ಬಿಜೆಪಿಯ ಯೋಗೇಶ್‌ ಕುಮಾ‌ರ್ ಅವರ ವಿರುದ್ಧ 6 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.


ಹರಿಯಾಣದಲ್ಲಿ ಬದಲಾದ ಟ್ರೆಂಡ್: ಹರಿಯಾಣ ವಿಧಾನಸಭಾ ಚುನಾವಣೆಯ ಆರಂಭಿಕ ಮತ ಎಣಿಕೆ ವೇಳೆ ಕಾಂಗ್ರೆಸ್ ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರೂ ಇದೀಗ ಬಿಜೆಪಿ ಮುನ್ನಡೆ ಸಾಧಿಸಿದೆ.


ಬೆಳಗ್ಗೆ 8ಗಂಟೆಗೆ ಮತ ಏಣಿಕೆ ಆರಂಭವಾದಾಗ ಮೊದಲ ಎರಡು ಗಂಟೆ ಅವಧಿಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಆದರೆ ಇದೀಗ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಸದ್ಯ ಅಲ್ಲಿನ ಟ್ರೆಂಡ್ ಬದಲಾಗಿದೆ.


ಚುನಾವಣಾ ಆಯೋಗದ ದತ್ತಾಂಶ ಪ್ರಕಾರ, ಬಿಜಪಿ ತನ್ನ ಎದುರಾಳಿ ಪಕ್ಷದ ಮತಗಳ ಅರ್ಧಕ್ಕಿಂತ ಹೆಚ್ಚಿನ ಚುನಾವಣಾ ಆಯೋಗದ ಜಾಲತಾಣದ ಪ್ರಕಾರ, ವಿನೇಶ್ ಫೋಗಟ್ ತಮ್ಮ ಎದುರಾಳಿ ಬಿಜೆಪಿಯ ಯೋಗೇಶ್‌ ಕುಮಾ‌ರ್ ಅವರ ವಿರುದ್ಧ 6 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.


ಹರಿಯಾಣದಲ್ಲಿ ಬದಲಾದ ಟ್ರೆಂಡ್: ಹರಿಯಾಣ ವಿಧಾನಸಭಾ ಚುನಾವಣೆಯ ಆರಂಭಿಕ ಮತ ಎಣಿಕೆ ವೇಳೆ ಕಾಂಗ್ರೆಸ್ ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರೂ ಇದೀಗ ಬಿಜೆಪಿ ಮುನ್ನಡೆ ಸಾಧಿಸಿದೆ.


ಬೆಳಗ್ಗೆ 8ಗಂಟೆಗೆ ಮತ ಏಣಿಕೆ ಆರಂಭವಾದಾಗ ಮೊದಲ ಎರಡು ಗಂಟೆ ಅವಧಿಯಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿತ್ತು. ಆದರೆ ಇದೀಗ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಸದ್ಯ ಅಲ್ಲಿನ ಟ್ರೆಂಡ್ ಬದಲಾಗಿದೆ.


ಚುನಾವಣಾ ಆಯೋಗದ ದತ್ತಾಂಶ ಪ್ರಕಾರ, ಬಿಜೆಪಿ ತನ್ನ ಎದುರಾಳಿ ಪಕ್ಷದ ಮತಗಳ ಅರ್ಧಕ್ಕಿಂತ ಹೆಚ್ಚಿನ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ, 90 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 48 ಕ್ಷೇತ್ರಗಳಲ್ಲಿ ಮುನ್ನಡೆ ಕಂಡಿದೆ. ಕಾಂಗ್ರೆಸ್ 34 ಕ್ಷೇತ್ರದಲ್ಲಿ ಮುನ್ನಡೆ ಕಂಡಿದೆ. ಇನ್ನು ರಾಷ್ಟ್ರೀಯ ಲೋಕ ದಳ, ಜನನಾಯಕ್ ಜನತಾ ಪಕ್ಷ ಮತ್ತು ಬಹುಜನ ಸಮಾಜ್ ಪಕ್ಷ ಕೇವಲ ತಲಾ ಒಂದು ಸೀಟು ಗಳಿಸಿವೆ.


ಗೆಲುವಿನ ವಿಶ್ವಾಸದಲ್ಲಿ ಹೂಡ: ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಕರುಕ್ಷೇತ್ರ ಜಿಲ್ಲೆಯ ಲಾಡ್ವಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ ನಾಯಕ ಭೂಪಿಂದ‌ರ್ ಸಿಂಗ್ ಹೂಡ ರೋಸ್ಟಗಿ ಜಿಲ್ಲೆಯ ಸಂಪಲ- ಕಿಲೊಯಿಯಲ್ಲಿ ಮುನ್ನಡೆ ಕಂಡಿದ್ದಾರೆ. ಬಿಜೆಪಿ ನಾಯಕ ಅನಿಲ್ ವಿಜ್ ಅಂಬಾಲ ಕಂಟೋನ್ಮಟ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.


ಈ ನಡುವೆ ಮಾತನಾಡಿರುವ ಭೂಪೇಂದರ್ ಸಿಂಗ್ ಹೂಡ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ಹರಿಯಾಣದಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ. ಈ ಗೆಲುವು ದೇಶಾದ್ಯಂತ ರಾಜಕೀಯ ಪರಿಣಾಮ ಬೀರಲಿದೆ. ಈ ಗೆಲುವಿನೊಂದಿಗೆ ದೇಶಾದ್ಯಂತ ಸಂದೇಶ ರವಾನೆಯಾಗಲಿದೆ ಎಂದಿದ್ದಾರೆ.


ಹರಿಯಾಣ ವಿಧಾನಸಭಾ 90 ಕ್ಷೇತ್ರಗಳಿಗೆ ಅಕ್ಟೋಬ‌ರ್ 5ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಶೇ. 74.66 ಮತದಾನ ಆಗಿತ್ತು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget