ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ, ಜೆಸಿಐ ಪಂಜ ಪಂಚಶ್ರೀ ವತಿಯಿಂದ ಪರಿಣಾಮಕಾರಿ ಭಾಷಣ ಕಲೆಯ ತರಬೇತಿ ಕಾರ್ಯಗಾರ
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ , ರಾಷ್ಟ್ರೀಯ ಸೇವಾ ಯೋಜನಾ ಘಟಕ, ಜೆ.ಸಿ.ಐ ಪಂಜ ಪಂಚಶ್ರೀ ವತಿಯಿಂದ ದಿನಾಂಕ 14.10.2024 ರಂದು ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ್ಯಗಾರವನ್ನು ಪದವಿ ವಿದ್ಯಾಲಯದ ಆಯ್ದ 30 ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಜಿ ಇ ಎಂ ಜೀವನ್ ಮಲ್ಕಜೆ, ಜೆ ಸಿ ಐ ಪಂಜ ಪಂಚಶ್ರೀ ಇವರು ವಹಿಸಿದ್ದರು, ತರಬೇತುದಾರರಾಗಿ ಜೆ ಇ ಎಂ ಸವಿತಾರ ಮೂಡೂರು, ಜಿ ಇ ಎಂ ಸೋಮಶೇಖರ್ ನೇರಳ, ವಲಯ ತರಬೇತುದಾರರು ಭಾಗವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ದಿನೇಶ ಪಿ.ಟಿ. ಐಕ್ಯೂಎಸಿ ಸಂಯೋಜಕಿ ಲತಾ ಬಿ ಟಿ ಅವರು ಉಪಸ್ಥಿತರಿದ್ದರು.ಜೆ ಸಿ ಅಶ್ವತ್ ಬಾಬಲ್ ಬೆಟ್ಟು ಹಾಗೂ ಜೆ ಸಿ ನಾಗಮಣಿ ಕೆದಿಲ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ಜೆಸಿಐ ಪಂಜ ಪಂಚಶ್ರೀಯ ಸದಸ್ಯರು ಉಪಸ್ಥಿತರಿದ್ದರು.ಉಪಸ್ಥಿತರಿದ್ದರು.Jc ಭರತ್ ನೆಕ್ರಾಜೆ ಸ್ವಾಗತಿಸಿ, ಜೆಸಿ ಜೀವನ್ ಶೆಟ್ಟಿಗದ್ದೆ ವಂದಿಸಿದರು.
Post a Comment