ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಖಾಲಿಯಿರುವ ಹುದ್ದೆಗೆ ನೇಮಕಾತಿ ಮಾಡುವಂತೆ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶಹೀದ್ ಪಾರೆ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವರಾಗಿರುವ ದಿನೇಶ್ ಗುಂಡೂರಾವ್ ರಿಗೆ ಮನವಿ ಸಲ್ಲಿಸಿದ್ದಾರೆ.
ಅ.11 ರಂದು ಸುಳ್ಯಕ್ಕೆ ಸಚಿವರು ಆಗಮಿಸಿದ್ದ ವೇಳೆ ಅವರಿಗೆ ಮನವಿ ಸಲ್ಲಿಸಲಾಯಿತು.
ಸುಳ್ಯ ತಾಲೂಕು ಕೇಂದ್ರ ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯ ಗಡಿ ಪ್ರದೇಶವಾಗಿದ್ದು ದಿನನಿತ್ಯ ನೂರಾರು ಹೊರರೋಗಿಗಳ ಸುಳ್ಯ ತಾಲೂಕು ಆಸ್ಪತ್ರೆಗೆ ಬರುತ್ತಾರೆ.
ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ 1, ಪ್ರಸೂತಿ ತಜ್ಞರು -1, ಲ್ಯಾಬ್ ಟೆಕ್ನಿಷಿಯನ್ -1, ಫಾರ್ಮಾಸಿಸ್ಟ್ -1, ಎಕ್ಸ್ ರೇ ಟೆಕ್ನಿಷಿಯನ್ -2, ಕಣ್ಣು ಪರೀಕ್ಷಾ ತಜ್ಞರು -1, ಪ್ರಥಮ ದರ್ಜೆ ಸಹಾಯಕರು -1, ದ್ವಿತೀಯ ದರ್ಜೆ ಸಹಾಯಕರು -2, ಗ್ರೂಪ್ ಡಿ ನೌಕರರು 10
ಹೀಗೆ ಹಲವು ಖಾಯಂ ಹುದ್ದೆಗಳು ಖಾಲಿಯಿದ್ದು ಈ ಹುದ್ದೆಯನ್ನು ನೇಮಕಾತಿ ಮೂಲಕ ಭರ್ತಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
Post a Comment