ಮಡಿಕೇರಿ ದಸರಾ ಜನೋತ್ಸವದ ಶೋಭಾ ಯಾತ್ರೆಯಲ್ಲಿ ಡಿಜೆ ಬಳಕೆಗೆ ಸಂಬಂಧಿಸಿದಂತೆ ಎಲ್ಲಾ 10 ಮಂಟಪಗಳ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ಈ ಬಾರಿ ಮಡಿಕೇರಿ ದಸರಾ ಉತ್ಸವದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲ 10 ಮಂಟಪಗಳ ವಿರುದ್ಧ ಸುಮೋಟೊ ಕೇಸ್ ದಾಖಲಾಗಿದೆ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಆಕ್ಟ್ 37, 109 ಮತ್ತು ಬಿಎನ್‌ಎಸ್ 292ರ ಅಡಿ ಯಲ್ಲಿ ಪ್ರಕರಣ ದಾಖಲಿಸಲಾಗಿದೆ
ಮಡಿಕೇರಿ ನಗರ ದಸರಾ ಜನೋತ್ಸವದಲ್ಲಿ ಡಿಜೆ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ 2023ರಲ್ಲಿ ವಕೀಲ ಅಮೃತೇಶ್ ಅವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದರಂತೆ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿ ದಂತೆ ಶಬ್ದ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ಪಾಲಿಸ ಬೇಕು. ದಸರಾ ಸಂದರ್ಭ ನಿಯಮ ಉಲ್ಲಂಘನೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಹೈ ಕೋರ್ಟ್ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆ ಕಳೆದ ವರ್ಷದಿಂದ ನಿಯಮ ಉಲ್ಲಂಘಿಸಿ ಡಿಜೆ ಬಳಸುವ ಸಮಿತಿಗಳ ವಿರುದ್ಧ ಮಡಿಕೇರಿ ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸುವ ಮೂಲಕ ಕ್ರಮ ಕೈಗೊಳ್ಳುತ್ತಿದ್ದಾರೆ.
ಕಳೆದ ವರ್ಷದ ದಸರಾ ಉತ್ಸವದಲ್ಲಿ ಡಿಜೆ ಬಳಕೆಯ ಬಗ್ಗೆ ಎದ್ದ ಗೊಂದಲಗಳಿಂದ ಸಾಕಷ್ಟು ಸಮಸ್ಯೆಯಾದ ಹಿನ್ನೆಲೆ ಈ ಬಾರಿ ದಸರಾ ದಶಮಂಟಪ ಸಮಿತಿಯೇ ಹೆಚ್ಚಿನ ಧ್ವನಿವರ್ಧಕಗಳ ಬಳ ಕೆಗೆ ಕಡಿವಾಣ ಹಾಕಲು ಮುಂದಾಯಿತು. ಪ್ರತಿ ಮಂಟಪಗಳಲ್ಲಿಯೂ ಕಥಾ ಸಾರಾಂಶವನ್ನು ಪ್ರಸ್ತುತ ಪಡಿಸುವಷ್ಟು ಮಾತ್ರ ಧ್ವನಿವರ್ಧಕಗಳನ್ನು ಬಳಸಬೇಕೆಂಬ ನಿಯಮ ಮಾಡಲಾಯಿತು. ಎಲ್ಲ ಮಂಟಪ ಸಮಿತಿಗಳ ಪ್ರಮುಖರು ಚರ್ಚಿಸಿ ಒಂದು ಮಂಟಪದಲ್ಲಿ 12ಕ್ಕಿಂತ ಹೆಚ್ಚು ಬಾಕ್ಸ್ ಬಳಸಬಾರದೆಂಬ ನಿರ್ಧಾರಕ್ಕೆ ಬಂದಿದ್ದರು. ಅದರಂತೆ ಎಲ್ಲ ಮಂಟಪ ಸಮಿತಿಗಳೂ ಧ್ವನಿವರ್ಧಕಗಳನ್ನು 12 ಬಾಕ್ಸ್ ಗೆ ಸೀಮಿತಗೊಳಿಸಿದ್ದರು. ಆದರೆ, ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ಧಕ ಬಳಸಬಾರದೆಂಬ ನಿಯಮವಿದ್ದು, ದಸರೆ ಯಲ್ಲಿ ರಾತ್ರಿಯಿಡಿ ಧ್ವನಿವರ್ಧಕ ಬಳಸಿರು ವುದು ನಿಯಮ ಬಾಹಿರವಾಗಿದೆ. ಹೀಗಾಗಿ ಎಲ್ಲ ಮಂಟಪಗಳ ಮೇಲೆಯೂ ಪೊಲೀಸ್ ಇಲಾಖೆ ಕಾನೂನಿನಂತೆ ಕ್ರಮಕೈಗೊಂಡಿದೆ.ಪ್ರತಿವರ್ಷ ಕೇಸ್ ಎದುರಿಸಲು ಸಿದ್ದರಿರ ಬೇಕು: ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ನಿಗದಿತ ಸಮಯ ಮೀರಿ ಧ್ವನಿವರ್ಧಕ ಬಳಸಿರುವುದಕ್ಕೆ ಈಗ ಕೇಸು ದಾಖಲಿಸಲಾಗಿದೆ. ಮಡಿಕೇರಿ ದಸರಾ ಶೋಭಾಯಾತ್ರೆ ಆರಂಭವಾಗುವುದೇ 10 ಗಂಟೆಯ ಬಳಿಕ. ಮಡಿಕೇರಿ ದಸರಾ ರಾತ್ರಿಯಲ್ಲಿಯೇ ನಡೆಯುವ ಉತ್ಸವವಾ ಗಿರುವುದರಿಂದ ಈಗ ಎಲ್ಲ ಮಂಟಪಗಳೂ ಅನಿವಾರ್ಯವಾಗಿ ಕಾನೂನು ಕ್ರಮವನ್ನು ಎದುರಿಸಲೇ ಬೇಕಾಗಿದೆ. ಧ್ವನಿವರ್ಧಕ ವಿಲ್ಲದೆ ಮಂಟಪ ಹೊರಡುವುದು ಸಾಧ್ಯವಿಲ್ಲ, ಕಾನೂನು ಪಾಲಿಸುವ ದೃಷ್ಟಿಯಿಂದ ಹಗಲಿ ನಲ್ಲಿ ಶೋಭಾಯಾತ್ರೆ ನಡೆಸಲಾಗುವುದಿಲ್ಲ. ಹೀಗಾಗಿ ಈಗ ಪ್ರತಿವರ್ಷವೂ ಮಂಟಪ ಸಮಿ ತಿಗಳು ಕಾನೂನು ಸಂಕಷ್ಟವನ್ನು ಎದುರಿಸಲೇ ಬೇಕಾದ ಇಕ್ಕಟ್ಟಿಗೆ ಸಿಲುಕಿವೆ.
ಪ್ರತಿ ಮಂಟಪ ಸಮಿತಿಗಳು ವರ್ಷಕ್ಕೆ ಒಬ್ಬ ರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿ ಅವರ ಅಧ್ಯಕ್ಷತೆಯಲ್ಲಿ ಮಂಟಪವನ್ನು ಸಿದ್ಧಪಡಿಸಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಮಂಟಪಕ್ಕೆ ಹಣ ಕ್ರೋ ಢೀಕರಿಸುವುದು, ಎಲ್ಲ ಸದಸ್ಯರನ್ನು ಒಟ್ಟಾಗಿ ಕರೆದೊಯ್ಯುವ ಮಹತ್ತರ ಜವಾಬ್ದಾರಿ ಈ ಮಂಟಪ ಸಮಿತಿ ಅಧ್ಯಕ್ಷರದ್ದಾಗಿರುತ್ತದೆ. ಇದರೊಂದಿಗೆ ಈಗ ಕೋರ್ಟ್ ಕೇಸಿಗೆ ಓಡಾಡುವುದೂ ಅಧ್ಯಕ್ಷರಾದವರಿಗೆ ಅನಿವಾರ್ಯ ಎಂಬತಾಗಿದೆ. ನೂರಾರು ವರ್ಷಗಳ ಇತಿಹಾ ಸವಿರುವ ಮಡಿಕೇರಿ ದಸರಾ ಉತ್ಸವದಲ್ಲಿ ಇತ್ತೀಚೆಗೆ ಆರಂಭವಾಗಿರುವ ಇಂತಹ ಸಂಕ ಷ್ಟಗಳಿಂದ ಮುಂದೆ ಮಂಟಪ ಸಮಿತಿ ಅಧ್ಯಕ್ಷ ರಾಗಲು ಯಾರೂ ಬಯಸದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ ಎಂಬುದು ದಸರಾ ಸಮಿತಿ ಪ್ರಮುಖರ ಆತಂಕವಾಗಿದೆ.
Post a Comment