ಸಾಮರಸ್ಯ ವೇದಿಕೆ ಗುತ್ತಿಗಾರು ತುಡರ್ ಕಾರ್ಯಕ್ರಮ
ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಭಾಗದ ಗುಂಡಡ್ಕ ದಲ್ಲಿ ತುಡರ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಭಜನೆಯನ್ನು ಮಾಡುತ್ತ ಮನೆ ಮನೆಗಳಿಗೆ ತೆರಳಿ ದೀಪವನ್ನು ಉರಿಸಿ ಗೋವು ಪೂಜೆ ನಡೆಸಿದರು.
ಕಾರ್ಯಕ್ರಮದ ವೇದಿಕೆ ಯಲ್ಲಿ ಹಿರಿಯರಾದ ಶ್ರೀ ಕಾಳಿ ಹಾಗೂ ಶ್ರೀ ರವೀಂದ್ರ ಪುತ್ತೂರು ಸಾಮರಸ್ಯ ವೇದಿಕೆ ಮಂಗಳೂರು ವಿಭಾಗದ
ಸಂಯೋಜಕ್ ಅವರು ಮಾತನಾಡಿ ದೀಪಾವಳಿ ಯ ಶುಭ ಸಂದರ್ಭದಲ್ಲಿ ಸಮಾಜದಲ್ಲಿ ಸಾಮರಸ್ಯ ಬೆಳಕನ್ನು ನೀಡೋಣ ವೆಂದರು.
ಕಾರ್ಯಕ್ರಮದಲ್ಲಿ ವೆಂಕಟ್ ವಳಲಂಬೆ,ರಾಕೇಶ್, ವರ್ಷಿತ್ ಕಡ್ತಳಕಜೆ,ಕರುಣಾಕರ ಮಡಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
Post a Comment