ರಾಷ್ಟ್ರೀಯ ಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದ ಮಂಗಳೂರು ಅತ್ತಾವರದ ದಿಯಾ ದಿನೇಶ್


ಮಧ್ಯಪ್ರದೇಶದಲ್ಲಿ ಸತ್ನಾ ಜಿಲ್ಲೆಯಲ್ಲಿ ಗುರುವಾರದಂದು ನಡೆದ ರಾಷ್ಟ್ರೀಯ ಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕವನ್ನು ಪಡೆದು ಮುಂದಿನ ತಿಂಗಳು ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯಲಿರುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ(SGFI) ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.  ಕಳೆದ ತಿಂಗಳು ಆಂಧ್ರಪ್ರದೇಶದಲ್ಲಿ ನಡೆದ ರಾಷ್ಟ್ರೀಯ ವಲಯ ಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭಾಗವಹಿಸಿದ ದಿಯಾ ದಿನೇಶ್ ಅತ್ತಾವರ ಪ್ರಥಮ ಸ್ಥಾನವನ್ನು ಪಡೆದು ಬಂಗಾರದ ಪದಕದೊಂದಿಗೆ ಮಧ್ಯಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು.

 


ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜರಗಿದ ಜಿಲ್ಲಾ ಮಟ್ಟದ ಎತ್ತರ ಜಿಗಿತ ಮತ್ತು ದೂರ ಜಿಗಿತ ಸ್ಪರ್ಧೆಯಲ್ಲಿ ಬೆಳ್ಳಿ ಪದಕದೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು ಬೀದರ್ ನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದೂರ ಜಿಗಿತ ಸ್ಪರ್ಧೆಗೆ ಸಮಯದ ಹೊಂದಾಣಿಕೆಯಾಗದೆ ಸ್ಪರ್ಧಿಸಲು ಅನಾನುಕೂಲವಾಯಿತು. ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕವನ್ನು ದಿಯಾ ಪಡೆದಿರುತ್ತಾರೆ ದಕ್ಷಿಣ ಭಾರತದ ವಲಯ ಮಟ್ಟದ ಹಾಗೂ ರಾಷ್ಟ್ರೀಯ ಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಸ್ಪರ್ಧೆ ನೀಡಿ ಬಂಗಾರದ ಪದಕವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು ಮಂಗಳೂರಿನ ಕೊಡಿಯಲ್ ಬೈಲ್ ಶಾರದಾ ವಿದ್ಯಾಲಯದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದಿಯಾ ದಿನೇಶ್ ಅತ್ತಾವರ, ದಿನೇಶ್ ಭಂಡಾರಿ ಮತ್ತು ಪ್ರಿಯಾ ದಿನೇಶ್ ದಂಪತಿಯ ಸುಪುತ್ರಿ.


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget