ಕುಂಕುಮ್ ಪ್ಯಾಷನ್ಸ್ ಸಂಸ್ಥೆಯ ನೂತನ ಮಳಿಗೆ

ರೊಮ್ಯಾಂಟಿಕ್ ವಸ್ತ್ರ ಮಳಿಗೆ ಶುಭಾರಂಭ

 ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಂ..ಕುಂ.. ಫ್ಯಾಶನ್ ನವರ ಸಹ ಸಂಸ್ಥೆ ರೊಮ್ಯಾಂಟಿಕ್ ವಸ್ತ್ರ ಮಳಿಗೆ ಸುಳ್ಯ ರಥಬೀದಿಯಲ್ಲಿನ ನಂದಿನಿ ಟವರ್‍ಸ್‌ನಲ್ಲಿ ಶುಭಾರಂಭಗೊಂಡಿತು. 

ನಂದಿನಿ ಟವರ್‍ಸ್ ಮಾಲಕ, ಹಿರಿಯರಾದ ಗುಡ್ಡಪ್ಪ ರೈ ಮೇನಾಲರು ನೂತನ ವಸ್ತ್ರ ಮಳಿಗೆಯಲ್ಲಿ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರೆ, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ.ಯವರು ದೀಪ ಪ್ರಜ್ವಲನೆಗೊಳಿಸಿದರು. 

ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಕುಂ..ಕುಂ.. ಫ್ಯಾಶನ್ ಸಂಸ್ಥೆ ಕಾರ್ಯಾಚರಿಸುತ್ತಿರುವ ಕಟ್ಟಡದ ಮಾಲಕರಾದ ಪ್ರೇಮಲತಾ, ನ.ಪಂ. ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಹಿರಿಯ ಉದ್ಯಮಿಗಳಾದ ಕೃಷ್ಣ ಕಾಮತ್, ಕಟ್ಟೆಕಾರ್ ಅಬುಲ್ಲ, ಅಮರಸುಳ್ಯ ರಮನೀಯ ಸುಳ್ಯ ತಂಡದ ಪ್ರಭಾಕರ್ ನಾಯರ್, ಸುಳ್ಯ ನ.ಪಂ. ಸದಸ್ಯ ರಾಜು ಪಂಡಿತ್, ಉದ್ಯಮಿ ಶಾಫಿ ಕುತ್ತಮೊಟ್ಟೆ ಮುಖ್ಯ ಅತಿಥಿಗಳಾಗಿದ್ದರು. 

ಗೌರವ : ರೊಮ್ಯಾಂಟಿಕ್ ಎಂಬ ಹೊಸ ವಸ್ತ್ರ ಮಳಿಗೆಯನ್ನು ಆರಂಭಿಸಿರುವ ಭೀಮ್ ರಾಮ್ ಹಾಗೂ ಧನ್ ರಾಮ್ ರನ್ನು ಅಕ್ಷಯ್ ಕೆ.ಸಿ.ಯವರು ಗೌರವಿಸಿದರು. ಹಾಗೂ ವಿ.ಜೆ.ವಿಖ್ಯಾತ್ ರವರ ಸಂಸ್ಥೆಯ ವತಿಯಿಂದಲೂ ಗೌರವಿಸಲಾಯಿತು. 

ನೂತನ ಸಂಸ್ಥೆಯಲ್ಲಿ ಬ್ಯಾಂಡೆಡ್ ವಸ್ತ್ರಗಳ ಮಳಿಗೆಯಾಗಿದ್ದು, ಇನ್ನರ್ ವೇರ್, ಹೋಮ್ ವೇರ್, ಹ್ಯಾಂಡ್‌ಲೂಮ್, ಕುರ್ತಿಸ್, ನ್ಯೂ ಬೋರ್‍ನ್ ವೇರ್, ವೆಸ್ಟರ್‍ನ್ ವೇರ್ ಗಳ ಅಪೂರ್ವ ಸಂಗ್ರಹಗಳಿವೆ. 

ಗ್ರಾಹಕರಿಗೆ ಕೊಡುಗೆ : ಸಂಸ್ಥೆಯ ಶುಭಾರಂಭ ಹಾಗೂ ದಸರಾ, ದೀಪಾವಳಿ ಹಬ್ಬಗಳ ಪ್ರಯುಕ್ತ ಸಂಸ್ಥೆಯಲ್ಲಿ ರೂ.೧೫೦೦ ರೂ ಮೇಲ್ಪಟ್ಟ, ರೂ.೫೦೦೦ ಮೇಲ್ಪಟ್ಟ, ರೂ. ೧೦,೦೦೦ ಮೇಲ್ಪಟ್ಟ ವಸ್ತ್ರಗಳ ಖರೀದಿಯಲ್ಲಿ ಬೆಳ್ಳಿಯ ಉಚಿತ ಉಡುಗೊರೆಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. 

ವಿ.ಜೆ. ವಿಖ್ಯಾತ್ ಬಾರ್ಪಣೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget