BPL ಸಮೂಹ ಸಂಸ್ಥೆಯ ಸಂಸ್ಥಾಪಕ ಟಿಪಿಜಿ ನಂಬಿಯಾ‌ರ್ ನಿಧನ

 

ಬೆಂಗಳೂರು: ಭಾರತೀಯ ಎಲೆಕ್ಟಿಕ್ ಕಂಪನಿ ಬಿಪಿಎಲ್

ಸಮೂಹದ ಸಂಸ್ಥಾಪಕ ಟಿ.ಪಿ. ಗೋಪಾಲನ್ ನಂಬಿಯಾರ್ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.








ನಂಬಿಯಾ‌ರ್ ಅವರಿಗೆ ಕೆಲ ಸಮಯದಿಂದ ಆರೋಗ್ಯ ಸರಿ ಇರಲಿಲ್ಲ. ಇಂದು ಬೆಳಿಗ್ಗೆ 10.15ರ ಸುಮಾರಿಗೆ ಅವರು ನಿಧನರಾಗಿದ್ದಾರೆ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಟಿಪಿಜಿ ಎಂದೇ ಹೆಸರುವಾಸಿಯಾಗಿದ್ದ ನಂಬಿಯಾ‌ರ್ ಅವರು, ಬಿಜೆಪಿ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖ‌ರ್ ಅವರ ಮಾವ.


ಟಿಪಿಜಿ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಂತಾಪ ಸೂಚಿಸಿದ್ದು, ಐಕಾನಿಕ್ ಬಿಪಿಎಲ್ ಬ್ರಾಂಡ್‌ನ ಸಂಸ್ಥಾಪಕ ಟಿಪಿಜಿ ನಂಬಿಯಾರ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಟಿಪಿಜಿ ಅವರು ದೀರ್ಘಕಾಲದಿಂದ ಪರಿಚಯವಿದ್ದರು. ಅವರ ಅಗಾಧ ಕೊಡುಗೆ ಮತ್ತು ಪರಂಪರೆ ಸದಾ ಸ್ಮರಣೀಯ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.














Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget