ನವದೆಹಲಿ: ಡಿಜಿಟಲ್ ಮೀಡಿಯಾದಲ್ಲಿ ದೊಡ್ಡ ಭಾಗವನ್ನೇ ಹೊಂದಿರುವ Instagram ಸರ್ವರ್ ಇದ್ದಕ್ಕಿದ್ದಂತೆ ಕೈಕೊಟ್ಟಿದ್ದು, ಬಳಕೆದಾರರು ಮೆಸೇಜ್ ಕಳುಹಿಸಲು, ವಿಡಿಯೋ ಹಾಗೂ ಫೋಟೋಗಳನ್ನು ಅಪ್‌ಲೋಡ್ ಮಾಡಲಾಗದೆ ಪರದಾಡುತ್ತಿದ್ದಾರೆ. ಆ್ಯಂಡ್ರಾಯ್ಡ್, ಐಒಎಸ್ ಹಾಗೂ ಪಿಸಿಯಲ್ಲಿ ಬಳಸಲು ಸಮಸ್ಯೆ ಎದುರಾಗಿದೆ.
ಇನ್ನು ಕೆಲವರ Instagram ಖಾತೆ ಇದ್ದಕ್ಕಿದ್ದಂತೆ ಲಾಗೌಟ್ ಆಗಿದ್ದು, ಇದಕ್ಕೆ ತಾಂತ್ರಿಕ ಸಮಸ್ಯೆಯೇ ಕಾರಣ ಎಂದು ಹೇಳಲಾಗಿದೆ. ಜಗತ್ತಿನಾದ್ಯಂತ ಹಲವು Instagram ಬಳಕೆದಾರರು ಸಂಜೆಯಿಂದ ಈ ಸಮಸ್ಯೆಯನನ್ನು ಎದುರಿಸುತ್ತಿದ್ದಾರೆ.
ಏಕಾಏಕಿ Instagram ಸ್ಥಗಿತಗೊಂಡ ಕಾರಣ ಫೋಟೋ, ವಿಡಿಯೋ, ಸ್ಟೋರಿ ಅಪ್‌ಲೋಡ್ ಮಾಡಲಾಗದೆ ನೆಟ್ಟಿಗರು ಪರದಾಡುತ್ತಿದ್ದು, ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಸದ್ಯಕ್ಕೆ ಟ್ವಿಟರ್‌ನಲ್ಲಿ #Instagram ಎಂಬ ಪದ ಟ್ರೆಂಡಿಂಗ್ ನಲ್ಲಿದ್ದು, ತಾಂತ್ರಿಕ ತೊಂದರೆಗಳಿಗೆ ಈವರೆಗೆ ಕಾರಣ ತಿಳಿದು ໙໐໖.
ಏಕಾಏಕಿ ಖಾತೆಗಳು ಲಾಗೌಟ್ ಆಗಿರುವುದು ಏಕೆ ಎನ್ನುವುದು ಬಳಕೆದಾರರ ಪ್ರಶ್ನೆಯಾಗಿದೆ. ತನ್ನಷ್ಟಕ್ಕೆ ತಾನೇ ಲಗೌಟ್ ಆಗಿದ್ದರಿಂದ ಪಾಸ್‌ವರ್ಡ್ ಮರೆತವರು ಮತ್ತು ಬೇರೆಯವರ ಕಡೆಯಿಂದ Instagram ಖಾತೆ ಸೃಷ್ಟಿಸಿಕೊಂಡವರಿಗೆ ಮತ್ತೆ ಲಾಗಿನ್ ಆಗುವುದು ಹೇಗೆ ಎನ್ನುವ ಚಿಂತೆ ಕಾಡತೊಡಗಿದೆ.
Post a Comment