November 2024

 ಇಸ್ಕಾನ್‌ನ ಸನ್ಯಾಸಿ ಚಿನ್ಮಯಿಕೃಷ್ಣ ದಾಸ್ ಅವರನ್ನು ಅನ್ಯಾಯಪೂರ್ವಕ ಸೆರೆವಾಸದಿಂದ ಮುಕ್ತಗೊಳಿಸಬೇಕು  : ದತ್ತಾತ್ರೇಯ ಹೊಸಬಾಳೆ



ನಾಗುರ ನ.30, 2024: ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳಿಂದ ದಾಳಿ, ಹತ್ಯೆ, ಲೂಟಿ, ಬೆಂಕಿಯ ದಾಳಿ ಹಾಗೂ ಮಹಿಳೆಯರ ಮೇಲಿನ ಅಮಾನವೀಯ ದೌರ್ಜನ್ಯಗಳನ್ನು ನಡೆಸುತ್ತಿರುವುದು ಅತ್ಯಂತ ಚಿಂತಾಜನಕ ಸಂಗತಿ. ಇಂತಹ


ಹೇಯಕೃತ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಠೋರವಾಗಿ ಖಂಡಿಸುತ್ತದೆ.


ಈಗಿನ ಬಾಂಗ್ಲಾದೇಶದ ಸರ್ಕಾರ ಮತ್ತು ಅಲ್ಲಿನ ಇತರೆ ಸಂಸ್ಥೆಗಳು ಇದನ್ನು ತಡೆಯುವ ಬದಲು ಕೇವಲ ಮೂಕಪ್ರೇಕ್ಷಕರಾಗಿದ್ದಾರೆ. ಬಾಂಗ್ಲಾದೇಶದ ಹಿಂದೂಗಳು ತಮ್ಮ ರಕ್ಷಣೆಗಾಗಿ ಅನಿವಾರ್ಯವಾಗಿ ಪ್ರಜಾತಾಂತ್ರಿಕ ಮಾರ್ಗದಲ್ಲಿ ಧ್ವನಿಯೆತ್ತಲು ಮುಂದಾದರೆ, ಅವರ ವಿರುದ್ಧವೇ ಅನ್ಯಾಯ ಹಾಗೂ ಅತ್ಯಾಚಾರದಂತಹ ದುಷ್ಕೃತ್ಯಗಳನ್ನು ಎಸಗುವ ಹೊಸ ವಿಧಾನವೊಂದು ಹೊರಹೊಮ್ಮುತ್ತಿದೆ.


ಹಾಗೆಯೇ, ಇಂತಹ ಘಟನೆಗಳ ವಿರುದ್ಧ ಹಿಂದುಗಳ ಪರ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಇಸ್ಕಾನ್‌ನ ಸಾಧು ಚಿನ್ಮಯ ಕೃಷ್ಣದಾಸರನ್ನು ಬಾಂಗ್ಲಾದೇಶದ ಸರ್ಕಾರ ಸೆರೆಮನೆಗೆ ಕಳುಹಿಸಿರುವುದು


ಅನ್ಯಾಯಪೂರ್ಣವಾದದ್ದು.


ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ತಕ್ಷಣವೇ ನಿಲ್ಲುವುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಇಸ್ಕಾನ್‌ನ ಚಿನ್ಮಯ ಕೃಷ್ಣದಾಸ್ ಅವರನ್ನು ಸೆರೆವಾಸದಿಂದ ಮುಕ್ತಗೊಳಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘವು ಬಾಂಗ್ಲಾದೇಶ ಸರ್ಕಾರವನ್ನು ಕೋರುತ್ತದೆ.


ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತ ಸರ್ಕಾರಕ್ಕೂ ಮನವಿ ಮಾಡುವುದೇನೆಂದರೆ ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರೆ ಎಲ್ಲಾ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ತಡೆಯುವ ತನ್ನ ಪ್ರಯತ್ನವನ್ನು ಸರ್ಕಾರ ಮುಂದುವರಿಸಬೇಕು. ಜೊತೆಗೆ, ಅದಕ್ಕೆ ಪೂರಕವಾಗಿ ಜಾಗತಿಕ ಸಹಮತ ರೂಪಿಸುವ ದಿಕ್ಕಿನಲ್ಲಿ ಅವಶ್ಯಕ ಹೆಜ್ಜೆಗಳನ್ನು ಆದಷ್ಟೂ ಶೀಘ್ರದಲ್ಲಿ ಇರಿಸಬೇಕು.


ಈ ಮಹತ್ವಪೂರ್ಣ ಸಮಯದಲ್ಲಿ ಭಾರತ ಮತ್ತು ವೈಶ್ಚಿಕ ಸಮುದಾಯವು ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೆ ಒಳಗಾದವರ ಜೊತೆ ನಿಂತು ಅವರಿಗೆ ನಮ್ಮ ಬೆಂಬಲವನ್ನು ವ್ಯಕ್ತಪಡಿಸಬೇಕು ಮತ್ತು ಇದಕ್ಕಾಗಿ ತಮ್ಮತಮ್ಮ ಸರ್ಕಾರಗಳಿಂದ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಒತ್ತಾಯಿಸಬೇಕಾಗಿರುವುದು ವಿಶ್ವ ಶಾಂತಿ ಮತ್ತು ಸಹೋದರತ್ವ ಮೂಡಿಸಲು ಅವಶ್ಯಕವಾಗಿದೆ.

 ಫೆಂಗಲ್ ಚಂಡಮಾರುತದ ಎಫೆಕ್ಟ್​ನಿಂದಾಗಿ ಚೆನ್ನೈನಲ್ಲಿ ಬೆಳಗ್ಗೆಯಿಂದಲೇ ಭಾರಿ ಮಳೆ ಸುರಿಯುತ್ತಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಸಂಚಾರ ಸ್ಥಗಿತವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸೇರಿದ್ದಾರೆ.



ಚೆನ್ನೈ(ತಮಿಳುನಾಡು) : ಫೆಂಗಲ್ ಚಂಡಮಾರುತದಿಂದಾಗಿ ಚೆನ್ನೈನಲ್ಲಿ ಬೆಳಗ್ಗೆಯಿಂದಲೂ ಭಾರಿ ಗಾಳಿ ಸಹಿತ ಮಳೆಯಾಗುತ್ತಿದೆ. ಹೀಗಾಗಿ, ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಚೆನ್ನೈ ವಿಮಾನ ನಿಲ್ದಾಣದ ಆಡಳಿತ ತಿಳಿಸಿದೆ.


ಚೆನ್ನೈನ ವಿಮಾನ ನಿಲ್ದಾಣವನ್ನು ಮುಚ್ಚಿದ್ದರಿಂದ ವಿಮಾನ ನಿಲ್ದಾಣಕ್ಕೆ ಬಂದ ಎಲ್ಲಾ ಪ್ರಯಾಣಿಕರು ಬಾಡಿಗೆ ಕಾರಿನಲ್ಲಿ ತಮ್ಮ ಮನೆಗಳಿಗೆ ಮರಳಲು ಪ್ರಾರಂಭಿಸಿದ್ದಾರೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಜಮಾಯಿಸಿದ್ದರಿಂದ ಅನೇಕ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಮನೆಗೆ ತೆರಳಲಾಗದೇ ಕಷ್ಟಪಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರಿಂದ ಬಾಡಿಗೆ ಕಾರುಗಳಿಗೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.


ಚೆನ್ನೈ ವಿಮಾನ ನಿಲ್ದಾಣದ ದೇಶೀಯ ಟರ್ಮಿನಲ್ ಆಗಮನ ಪ್ರದೇಶ ಮತ್ತು ಅಂತಾರಾಷ್ಟ್ರೀಯ ಟರ್ಮಿನಲ್ ಆಗಮನ ಪ್ರದೇಶಕ್ಕೆ ಬಸ್‌ಗಳನ್ನು ಕಳುಹಿಸಲಾಗುವುದು ಎಂದು ಮುನ್ಸಿಪಲ್ ಸಾರಿಗೆ ನಿಗಮ ಘೋಷಿಸಿದೆ. ವಿಮಾನ ನಿಲ್ದಾಣದೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸೇರಿದ್ದರಿಂದ ವಿಮಾನ ನಿಲ್ದಾಣ ಪ್ರಾಧಿಕಾರದ ಮನವಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.


ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ ಸಿಟಿ ಬಸ್​ಗಳು: ಅದರಲ್ಲೂ ಕಿಲಂಪಾಕ್ಕಂ, ಕೊಯಂಬೇಡು, ಚೆನ್ನೈ ಪ್ಯಾರಿಸ್ ಕಾರ್ನರ್ ಮೊದಲಾದ ಸ್ಥಳಗಳಿಗೆ ತೆರಳುವ ಸಿಟಿ ಬಸ್​ಗಳು ಚೆನ್ನೈ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡಿವೆ. ಸಾಮಾನ್ಯವಾಗಿ ವಿಮಾನ ನಿಲ್ದಾಣದ ಟರ್ಮಿನಲ್​ಗೆ ಯಾವುದೇ ಸಿಟಿ ಬಸ್‌ಗಳ ಪ್ರವೇಶಕ್ಕೆ ಅನುಮತಿಸಲಾಗುವುದಿಲ್ಲ.

ಚಂಡಮಾರುತವು ಕರಾವಳಿಯನ್ನು ದಾಟಿ ಮಳೆ ಕಡಿಮೆಯಾಗುವವರೆಗೆ ಈ ಸಿಟಿ ಬಸ್‌ಗಳು ಪ್ರಯಾಣಿಕರಿಗೆ ಸಹಾಯ ಮಾಡುತ್ತವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಿದ್ದರಿಂದ 500ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಒಂದೇ ಸ್ಥಳದಲ್ಲಿ ತಂಗಿದ್ದರು.


ಪ್ರಯಾಣಿಕರಿಗೆ ಆಹಾರ ಸೇರಿದಂತೆ ಸೌಲಭ್ಯ : ವಿಮಾನ ನಿಲ್ದಾಣಗಳಲ್ಲಿ ತಂಗುವ ಪ್ರಯಾಣಿಕರಿಗೆ ಆಹಾರ ಸೇರಿದಂತೆ ಸೌಲಭ್ಯಗಳನ್ನು ಒದಗಿಸುವುದಾಗಿ ಆಯಾ ಖಾಸಗಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಭರವಸೆ ನೀಡಿವೆ ಎಂಬುದು ತಿಳಿದುಬಂದಿದೆ.

ನ.30 ರಂದು ಲಕ್ಷದೀಪೋತ್ಸವ, 120 ತಂಡಗಳಿಂದ ಕುಣಿತ ಭಜನೆ



ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವ ಹಿನ್ನೆಲೆಯ ಲಕ್ಷ ದೀಪೋತ್ಸವ ನ. 30 ರಂದು ರಾತ್ರಿ ಜರುಗಲಿದೆ. 



ನ. 27 ರಂದು ಬೆಳಗ್ಗೆ ಕೊಪ್ಪರಿಗೆ ಏರುವ ಮೂಲಕ ಷಷ್ಠಿ ಮಹೋತ್ಸವ ಆರಂಭವಾಗಿದ್ದು. ನಾಳೆ ಲಕ್ಷದೀಪೋತ್ಸವ ನಡೆಯಲಿದೆ. ಸಂಜೆ ಗಂಟೆ 6.00 ರಿಂದ ಕುಣಿತ ಭಜನೆ ನಡೆಯಲಿದೆ. 

ಲಕ್ಷದೀಪೋತ್ಸವ ಹಿನ್ನೆಲೆಯಲ್ಲಿ ಕುಣಿತ ಭಜನಾ ಕಾರ್ಯಕ್ರಮ ಕ್ಕೆ ಸಹಾಯಕ ಅಯುಕ್ತ ಜುಬಿನ್ ಮೊಹಪಾತ್ರ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭ ಈಗಾಗಲೇ ನೊಂದಾಯಿಸಲ್ಪಟ್ಟ 120 ತಂಡಗಳಿಂದ ಕುಣಿತ ಭಜನೆ ನಡೆಯಲಿದೆ., ರಾಜಗೋಪುರದಿಂದ ಆರಂಭಗೊಂಡು ಕಾಶಿಕಟ್ಟೆ ವರೆಗೆ ಕುಣಿತ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಲಿದೆ. ಇದಲ್ಲದೆ ರಥಬೀದಿಯ ಪೋಲಿಸ್ ವೃತ್ತದ ಬಳಿ ಕೆ.ಯೋಗೀಶ್ ಕಿಣಿ ಕಾರ್ಕಳ ಅವರು ಕುಣಿತ ಭಜನೆ ನಡೆಸಿಕೊಡಲಿದ್ದಾರೆ.




ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಲಕ್ಷದೀಪೋತ್ಸವ, 120 ತಂಡಗಳಿಂದ ಕುಣಿತ ಭಜನೆ ಫುಲ್ ವಿಡಿಯೋ 👇🏻👇🏻




ಮಾಜಿ ಸಚಿವ ಎಸ್.ಅಂಗಾರರ ನೇತೃತ್ವದಲ್ಲಿ ದೀನದಯಾಳ್ ಸಹಕಾರ ಸಂಘ ಡಿ.7ರಂದು ಸುಳ್ಯದ ಟಿ.ಎ.ಪಿ.ಸಿ.ಎಂ.ಎಸ್. ಬಿಲ್ಡಿಂಗ್ ಇದರ 2 ನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.


ನ.30ರಂದು ನೂತನ ಸಹಕಾರ ಸಂಘ ಆರಂಭದ ಕುರಿತು ಮಾಜಿ ಸಚಿವ ಎಸ್.ಅಂಗಾರರವರು ಪತ್ರಿಕಾಗೋಷ್ಠಿ ಕರೆದು ವಿವರ ನೀಡಿದರು. 



ನೂತನ ಸಹಕಾರ ಸಂಘವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಸಂಸದ ಕ್ಯಾ.ಬ್ರಿಜೀಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಕಿಶೋರ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಟಿಎಪಿಸಿಎಂಎಸ್ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ, ಸಹಕಾರ ಸಂಘಗಳ ಉಪ ನಿರ್ದೇಶಕ ರಮೇಶ್ ಎನ್.ಎಚ್., ಸಹಕಾರ ಸಂಘಗಳ ಸಹಾಯಕ ನಿರ್ದೇಶಕ ರಘು, ಸುಳ್ಯ ತಾಲೂಕು ಆರ್.ಎಸ್.ಎಸ್. ಸಂಘ ಚಾಲಕರಾದ ಚಂದ್ರಶೇಖರ ತಳೂರು, ಆರ್.ಎಸ್.ಎಸ್. ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ, ಟಿಎಪಿಸಿಎಂಎಸ್ ಕಾರ್ಯದರ್ಶಿ ಜಯರಾಮ ದೇರಪ್ಪಜ್ಜನಮನೆ, ಸುಳ್ಯ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಮುಖ್ಯ ಅತಿಥಿಗಳಾಗಿರುವರು. ಲೆಕ್ಕ ಪರಿಶೋಧಕರಾದ ಶ್ರೀಪತಿ ಭಟ್, ರಾಜ್ಯ‌ಮೊಗೇರ ಸಂಘದ ಅಧ್ಯಕ್ಷ ನಂದರಾಜ ಸಂಕೇಶ, ಮೊಗೇರ ಅಧ್ಯನ ಟ್ರಸ್ಟ್ ಅಧ್ಯಕ್ಷರಾದ ಡಾ. ರಘು ಬೆಳ್ಳಿಪ್ಪಾಡಿ ಗೌರವ ಉಪಸ್ಥಿತರಿರುವರು. 


ಸಹಕಾರ ಸಂಘದ ಲೋಕಾರ್ಪಣೆ ಬಳಿಕ ಸುಳ್ಯದ ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಸಭೆ ನಡೆಯುವುದು.‌


ದೀನ್ ದಯಾಳ್ ಎಜ್ಯುಕೇಶನ್ ರೂರಲ್ ಅರ್ಬನ್ ಡೆವಲಪ್ಮೆಂಟ್ ಟ್ರಸ್ಟ್ ಇದರ ನೇತೃತ್ವದಲ್ಲಿ ಸಂಘವು ಕಾರ್ಯಾಚರಣೆ ಮಾಡುತಿದ್ದು, ಟ್ರಸ್ಟ್ ನ ನೇತೃತ್ವದಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗಿದೆ. ಆಲೆಟ್ಟಿಯ ಕುಡೆಕಲ್ಲಿನಲ್ಲಿ ಆದಿದ್ರಾವಿಡ ಕುಟುಂಬಗಳಿಗೆ ಸರಕಾರದಿಂದ ಒಂದು ಮನೆಗೆ ರೂ.60 ಸಾವಿರ ಅನುದಾನ ದೊರೆತ ಸಂದರ್ಭ ಉಳಿಕೆ ಹಣವನ್ನು ಟ್ರಸ್ಟ್ ಮೂಲಕ ಭರಿಸಿ ಆರ್.ಸಿ.ಸಿ.‌ಮನೆ ನಿರ್ಮಿಸಿ ಹಸ್ತಾಂತರ ಮಾಡಲಾಗಿದೆ. ಇದೇ ರೀತಿ ದೇವಚಳ್ಳದಲ್ಲಿ 9 ಮನೆಗಳನ್ನು ಹಸ್ತಾಂತರ ಮಾಡಲಾಗಿದೆ. ಇಷ್ಟೆ ಅಲ್ಲದೆ ಪ.ಜಾತಿ ಕಾಲೋನಿಗಳಲ್ಲಿ ಜನರು ಆರಾಧಿಸುವ ದೇವಸ್ಥಾನ, ದೈವಸ್ಥಾನದ ಜೀರ್ಣೋದ್ಧಾರ ಗಳಿಗೂ ಸಹಕಾರ ನೀಡಲಾಗಿದೆ. ಶಿಕ್ಷಣ, ಆರೋಗ್ಯ ಚಿಕಿತ್ಸೆಗೂ ಸಹಕಾರ ನೀಡಲಾಗಿದೆ ಎಂದು ಅಂಗಾರರು ಹೇಳಿದರು.


ಈಗ ಸಹಕಾರ ಸಂಘ ಲೋಕಾರ್ಪಣೆ ಯಾಗಲಿದ್ದು 18 ಯೋಜನೆಗಳನ್ನು ಜನರಿಗೆ ನೀಡಲಾಗುತ್ತದೆ. ‌ಆರ್ಥಿಕತೆ ಉಳಿತಾಯ, ಹೈನುಗಾರಿಕೆ, ಸ್ವ ಉದ್ಯೋಗ ಗಳಿಗೆ ಆದ್ಯತೆ ನೀಡಲಾಗುವುದು ಎಂದು ವಿವರ ನೀಡಿದರು.


ಪತ್ರಿಕಾಗೋಷ್ಠಿಯಲ್ಲಿ ಪ್ರವರ್ತಕ ರಾದ ಜಿ.ಜಗನ್ನಾಥ ಜಯನಗರ, ಹರಿಶ್ಚಂದ್ರ ಹಾಸನಡ್ಕ ಇದ್ದರು.

 


ಢಾಕಾ: ಹಿಂದೂ ಸಂಘಟನೆಯ ಮುಖಂಡ ಚಿನ್ಮಯಿ ಕೃಷ್ಣದಾಸ್‌ ಬ್ರಹ್ಮಚಾರಿ ಅವರ ಬಂಧನ ಖಂಡಿಸಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಮುಂದುವರಿದಿದೆ. ಈ ನಡುವೆ ಚಟ್ಟೋಗ್ರಾಮದಲ್ಲಿ ಶುಕ್ರವಾರ ಮೂರು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ.

ಬಂದರು ನಗರದ ಹರೀಶ್ ಚಂದ್ರ ಮುನ್ಸೆಫ್ ಲೇನ್‌ನಲ್ಲಿ ಮಧ್ಯಾಹ್ನ 2:30ರ ಸುಮಾರಿಗೆ ದಾಳಿ ನಡೆದಿದ್ದು, ಶಾಂತನೇಶ್ವರಿ ಮಾತ್ರಿ ದೇವಸ್ಥಾನ, ಸಮೀಪದ ಶೋನಿ ದೇವಸ್ಥಾನ ಮತ್ತು ಶಾಂತನೇಶ್ವರಿ ಕಾಲಿಬರಿ ದೇವಸ್ಥಾನವನ್ನು ಗುರಿಯಾಗಿರಿಸಿ ದಾಳಿ ಮಾಡಲಾಗಿದೆ ಎಂದು ಸುದ್ದಿ ಪೋರ್ಟಲ್ BDNews24.com ವರದಿ ಮಾಡಿದೆ.


ಘೋಷಣೆ ಕೂಗುತ್ತಾ ಬಂದ ನೂರಾರು ಜನರ ಗುಂಪು ದೇವಾಲಯಗಳ ಮೇಲೆ ಇಟ್ಟಿಗೆ ಹಾಗೂ ಕಲ್ಲುಗಳನ್ನು ಎಸೆದರು. ಇದರಿಂದ ಮೂರು ದೇವಾಲಯಗಳ ದ್ವಾರಗಳು ಹಾನಿಗೊಳಗಾಗಿವೆ ಎಂದು ದೇವಾಲಯದ ಅಧಿಕಾರಿಗಳನ್ನು  ಉಲ್ಲೇಖಿಸಿ ಸುದ್ದಿ ಪೋರ್ಟಲ್ ವರದಿ ಮಾಡಿದೆ.


ಕೊತ್ವಾಲಿ ಪೊಲೀಸ್ ಠಾಣೆಯ ಮುಖ್ಯಸ್ಥ ಅಬ್ದುಲ್ ಕರೀಮ್ ದಾಳಿಯನ್ನು ದೃಢಪಡಿಸಿದ್ದಾರೆ.

ದೇಶದ್ರೋಹದ ಆರೋಪದ ಮೇಲೆ ಸಮ್ಮಿಲಿತ್‌ ಸನಾತನಿ ಜಾಗರಣ ಜೋತೆ ಹಿಂದೂ ಸಂಘಟನೆಯ ಮುಖಂಡ ಚಿನ್ಮಯಿ ಕೃಷ್ಣದಾಸ್‌ ಬ್ರಹ್ಮಚಾರಿ ಅವರನ್ನು ಬಂಧಿಸಲಾಗಿದೆ. ಅವರ ಬಂಧನ ಖಂಡಿಸಿ, ರಾಜಧಾನಿ ಢಾಕಾ ಮತ್ತು ಚಟ್ಟೋಗ್ರಾಮ ಸೇರಿದಂತೆ ದೇಶದ ಹಲವು ಸ್ಥಳಗಳಲ್ಲಿ ಹಿಂದೂ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

 ನವೆಂಬರ್​ 29ರಂದು ಮಳೆ ಆರಂಭವಾಗಿದ್ದು, ಕ್ರಮೇಣ ಇದು ಅನೇಕ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಮಡಿಪಕ್ಕಮ್​ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದು, ಫ್ಲೈವರ್​ನ ಎರಡು ರಸ್ತೆ ಬದಿ ಜಲಾವೃತಗೊಂಡಿದೆ.



ಚೆನ್ನೈ: ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಇಂದು ಮಧ್ಯಾಹ್ನ ಪುದುಚೇರಿ ಕರಾವಳಿ ತೀರದತ್ತ ಅಪ್ಪಳಿಸಲಿದ್ದು, ಪರಿಣಾಮವಾಗಿ ತಮಿಳುನಾಡಿನಲ್ಲಿ ಭಾರೀ ಗಾಳಿಯೊಂದಿಗೆ ಮಳೆಯಾಗುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.


ಶುಕ್ರವಾರದಿಂದಲೇ ಮಳೆ ಆರಂಭವಾಗಿದ್ದು, ಕ್ರಮೇಣ ಇದು ಅನೇಕ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಮಡಿಪಕ್ಕಮ್​ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದು, ಫ್ಲೈಓವರ್​ನ ಎರಡು ರಸ್ತೆ ಬದಿ ಜಲಾವೃತಗೊಂಡಿದೆ.


ಭಾರೀ ಮಳೆ ಹಿನ್ನೆಲೆ ಜನರು ಸುರಕ್ಷಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದ್ದು, ರಸ್ತೆಗಳು ನಿರ್ಜನವಾಗಿವೆ. ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಮಳೆ ಅತಿ ಹೆಚ್ಚಿನ ಪರಿಣಾಮದ ಪ್ರದೇಶದಲ್ಲಿ ರಕ್ಷಣಾ ಕಾರ್ಯಕ್ಕೆ ಸನ್ನದ್ಧರಾಗಿದ್ದಾರೆ.

ವಿಮಾನ ಸಂಚಾರ ವ್ಯತ್ಯಯ: ಮಳೆ- ಗಾಳಿ ಹಿನ್ನೆಲೆ ವಿಮಾನ ಸಂಚಾರದಲ್ಲೂ ಕೂಡ ವ್ಯತ್ಯಯ ಉಂಟಾಗಿದೆ. ಇನ್ನು ಚೆನ್ನೈ ಮೆಟ್ರೋ ರೈಲು ಯಾವುದೇ ತೊಂದರೆ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಪ್ರವಾಹಕ್ಕೆ ಒಳಗಾಗುವ ನಿರ್ದಿಷ್ಟ ನಿಲ್ದಾಣಗಳಲ್ಲಿನ ಪಾರ್ಕಿಂಗ್ ಪ್ರದೇಶಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ರಾಜ್ಯ ಸಾರಿಗೆ ನಿಗಮಗಳು ಸೀಮಿತ ಕಾರ್ಯಾಚರಣೆ ನಡೆಸಿದೆ.


ಸಮುದ್ರ ತೀರ ಪ್ರದೇಶ, ಮರಿನಾ ಮತ್ತು ಮಮ್ಮಲಪುರಮ್​ ಬೀಚ್​ಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರಕಾರಿಸಲಾಗಿದ್ದು, ಬ್ಯಾರಿಕೇಡ್​​ಗಳನ್ನು ಹಾಕಲಾಗಿದೆ. ರಾಜ್ಯದಲ್ಲಿ ವಿದ್ಯುತ್​ ಮತ್ತು ವ್ಯವಸ್ಥೆಯಲ್ಲಿಯೂ ಯಾವುದೇ ವ್ಯತ್ಯಯವಾಗಿಲ್ಲ. ಮಳೆಯಿಂದಾಗಿ ಈಗಾಗಲೇ ಶಾಲಾ- ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ. ಸಮುದ್ರದ ಪ್ರಕ್ಷುಬ್ಧತೆ ಮತ್ತು ಉಬ್ಬರವಿಳಿತದಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ಹವಾಮಾನ ಇಲಾಖೆ ತಿಳಿಸಿದೆ.

ಪರಿಸ್ಥಿತಿ ಎದುರಿಸಲು ಸಜ್ಜು: ತಮಿಳುನಾಡಿನ ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಳ್ಳೂರು, ಕಡಲೂರು, ವಿಲ್ಲುಪುರಂ, ಕಲ್ಲಕುರಿಚಿ ಮತ್ತು ಮೈಲಾಡುತುರೈ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಹೆಚ್ಚಿನ ಮಳೆಯಾಗುವ ಸಾಧ್ಯತೆ ಕುರಿತು ಎಚ್ಚರಿಕೆ ನೀಡಲಾಗಿದೆ.


ಮಳೆ ಪರಿಣಾಮ ಎದುರಿಸಲು ಸರ್ಕಾರ ಸಜ್ಜಾಗಿದ್ದು, ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಯು ಭಾರೀ ಮಳೆಯ ಎಚ್ಚರಿಕೆ ಇರುವ ಪ್ರದೇಶಗಳಲ್ಲಿ 2,229 ಪರಿಹಾರ ಕೇಂದ್ರಗಳನ್ನು ತೆರೆದಿದೆ.


ಸದ್ಯ ತಿರುವರೂರ್ ಮತ್ತು ನಾಗಪಟ್ಟಣಂ ಜಿಲ್ಲೆಗಳಲ್ಲಿ ನಿರಾಶ್ರಿತ ಶಿಬಿರ ತೆರೆದಿದ್ದು, 164 ಕುಟುಂಬಗಳನ್ನು ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಮುಂದೆ ಅಗತ್ಯವಿದ್ದಲ್ಲಿ ಮತ್ತಷ್ಟು ಸ್ಥಳಾಂತರ ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ. ಮಳೆ ಹಿನ್ನೆಲೆ ಅನಗತ್ಯವಾಗಿ ಮನೆಯಿಂದ ಹೊರಬಾರದು, ಜನರು ಸುರಕ್ಷತಾ ಕ್ರಮಕ್ಕೆ ಮುಂದಾಗಬೇಕು ಎಂದು ಸರ್ಕಾರ ಜನರಲ್ಲಿ ಮನವಿ ಮಾಡಿದೆ. (ಪಿಟಿಐ/ ಐಎಎನ್​ಎಸ್​)

 ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.30ರಂದು ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ಲಕ್ಷದೀಪೋತ್ಸವ ನೆರವೇರಲಿದೆ. ಶ್ರೀ ದೇವರ ಚಂದ್ರ ಮಂಡಲ ರಥೋತ್ಸವ ನಡೆಯಲಿದ್ದು, ಈ ಸಂದರ್ಭ ದೇಗುಲ ಸಹಿತ ಗೋಪುರದ ಬಳಿಯಿಂದ ಕಾಶಿಕಟ್ಟೆ ತನಕ ಹಾಗೂ ಆದಿ ಸುಬ್ರಹ್ಮಣ್ಯ ದೇಗುಲ ಪರಿಸರದಲ್ಲಿ ಲಕ್ಷದೀಪಗಳು ಬೆಳಗಲಿವೆ. ಸುಮಾರು 120 ತಂಡಗಳಿಂದ ಅಖಂಡ ಕುಣಿತ ಭಜನೆ ಸೇವೆ ನೆರವೇರಲಿದೆ.



ಸುಬ್ರಹ್ಮಣ್ಯ, ನ. 29: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.30ರಂದು ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ಲಕ್ಷದೀಪೋತ್ಸವ ನೆರವೇರಲಿದೆ. ಶ್ರೀ ದೇವರ ಚಂದ್ರ ಮಂಡಲ ರಥೋತ್ಸವ ನಡೆಯಲಿದ್ದು, ಈ ಸಂದರ್ಭ ದೇಗುಲ ಸಹಿತ ಗೋಪುರದ ಬಳಿಯಿಂದ ಕಾಶಿಕಟ್ಟೆ ತನಕ ಹಾಗೂ ಆದಿ ಸುಬ್ರಹ್ಮಣ್ಯ ದೇಗುಲ ಪರಿಸರದಲ್ಲಿ ಲಕ್ಷದೀಪಗಳು ಬೆಳಗಲಿವೆ. ಸುಮಾರು 120 ತಂಡಗಳಿಂದ ಅಖಂಡ ಕುಣಿತ ಭಜನೆ ಸೇವೆ ನೆರವೇರಲಿದೆ.

ಸಂಜೆ 6ರಿಂದ ರಾತ್ರಿ 8ರ ತನಕ ಕುಣಿತ ರಥೋತ್ಸವದ ಮೊದಲು ಭಜನೆ ನಡೆಯಲಿದೆ. ರಾಜಗೋಪುರದ ಬಳಿಯಿಂದ ರಥಬೀದಿ ಮತ್ತು ಅಡ್ಡಬೀದಿಯಲ್ಲಿ ಕುಣಿತ ಭಜನೆ ನಡೆಯಲಿದೆ. ಮುಖ್ಯ ಗುರು ಮತ್ತು ಗಾಯಕ ಕಾರ್ಕಳದ ಯೋಗೀಶ್ ಕಿಣಿ ಅವರ ಗಾಯನಕ್ಕೆ ಭಜನೆ ತಂಡಗಳು ಹೆಜ್ಜೆ ಹಾಕಲಿವೆ. ಕಾಶಿಕಟ್ಟೆಗೆ ಆಗಮಿಸುವ ದೇವರಿಗೆ ಮಹಾಗಣಪತಿ ಸನ್ನಿಧಾನದಲ್ಲಿ ಗುರ್ಜಿ ಪೂಜೆ ಜರಗಲಿದೆ.

ಭಕ್ತರಿಂದ ಸ್ವಯಂಪ್ರೇರಿತ ಬೀದಿ ಉರುಳುಸೇವೆ


ಭಕ್ತರು ಸ್ವಯಂಪ್ರೇರಿತರಾಗಿ ನೆರವೇರಿಸುವ ಬೀದಿ ಉರುಳುಸೇವೆ ನೆರವೇರಿಸಲು ಬೇಕಾದ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದ್ದು, ನ.30ರಂದು ಸಂಘ ಸಂಸ್ಥೆಗಳ ಸಹಕಾರದಿಂದ ಕುಮಾರಧಾರದಿಂದ ರಾಜಗೋಪುರದ ತನಕ ರಸ್ತೆಯನ್ನು ಗುಡಿಸಿ ಬೃಹತ್ ಸ್ವಚ್ಛತಾ ಸೇವೆ ನಡೆಸಲಾಗುವುದು. ಸಂಜೆ ನೀರು ಹಾಯಸಿ ರಸ್ತೆಯನ್ನು ಸ್ವಚ್ಛಗೊಳಿಸುವ ವ್ಯವಸ್ಥೆಮಾಡಲಾಗಿದೆ. ಪ್ರತಿದಿನ ನೀರು ಹಾಯಿಸಿ ರಸ್ತೆಯ ದೂಳನ್ನು ತೆರವು ಗೊಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಆಡಳಿತಾಧಿಕಾರಿ ತಿಳಿಸಿದ್ದಾರೆ.

ಭಕ್ತರು ರಾತ್ರಿ ಬೀದಿ ಉರುಳು ಸೇವೆಯನ್ನು ಆರಂಭಿಸುತ್ತಾರೆ. ಈ ಸಾಂಪ್ರದಾಯಿಕ ಸೇವೆಯನ್ನು ಭಕ್ತರು ಸ್ವಯಂ ಸ್ಪೂರ್ತಿಯಿಂದ ಚಂಪಾಷಷ್ಠಿ ಮಹಾರಥೋತ್ಸವದ ವರೆಗೆ ನೆರವೇರಿಸುತ್ತಾರೆ.




ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನ.30ರ ಶನಿವಾರ ಬೆಳಗ್ಗೆ 8.30 ಗಂಟೆಯಿಂದ 10.30 ಗಂಟೆಯವರೆಗೆ ಸಾರ್ವಜನಿಕರ ಭೇಟಿಗೆ ತಮ್ಮ ಕಚೇರಿಯಲ್ಲಿ ಲಭ್ಯವಿರುತ್ತಾರೆ. 


ನಾಗರಿಕರು ತಮ್ಮ ಅಹವಾಲುಗಳೊಂದಿಗೆ ಮಂಗಳೂರಿನ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಗೆ ಬಂದು ಚೌಟ ಅವರನ್ನು ಖುದ್ದು ಭೇಟಿ ಮಾಡಬಹುದು. ಆ ಮೂಲಕ ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು ಗಮನಕ್ಕೆ ತರಬಹುದು ಎಂದು ಸಂಸದ ಚೌಟ ಅವರ ಕಚೇರಿಯು ಪ್ರಕಟನೆಯಲ್ಲಿ ತಿಳಿಸಿದೆ.

 


ಬೆಂಗಳೂರು: 'ಮುಸ್ಲಿಂ ಸಮುದಾಯದ ಮತದಾನದ ಹಕ್ಕು ರದ್ದುಪಡಿಸಲು ಕಾನೂನು ಜಾರಿಗೆ ತರಬೇಕು' ಎಂಬ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಚಂದ್ರಶೇಖರ ನಾಥ ಸ್ವಾಮೀಜಿ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ವಾಮೀಜಿ ಅವರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಸೈಯದ್ ಅಬ್ಬಾಸ್ ಎಂಬುವವರು ನೀಡಿರುವ ದೂರು ಆಧರಿಸಿ ಬಿಎನ್‌ ಎಸ್ ಸೆಕ್ಷನ್ 299 ರ ಅಡಿ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ನ.26ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು ಎಂದು ಸ್ವಾಮೀಜಿ ಹೇಳಿಕೆ ನೀಡಿದ್ದರು.


ವಿವಾದಾತ್ಮಕ ಹೇಳಿಕೆಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸ್ವಾಮೀಜಿ ಕ್ಷಮೆ ಕೋರಿದ್ದರು.'ಮುಸ್ಲಿಮರು ಕೂಡ ಈ ದೇಶದ ಪ್ರಜೆಗಳು. ಎಲ್ಲರಂತೆ ಅವರಿಗೂ ಮತದಾನದ ಹಕ್ಕಿದೆ. ನನ್ನ ಹೇಳಿಕೆಯಿಂದ ಮುಸ್ಲಿಂ ಬಾಂಧವರಿಗೆ ನೋವಾಗಿದ್ದರೆ, ಅದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ' ಎಂದಿದ್ದರು.

 ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಬಿಜೆಪಿಯಲ್ಲೇ ಆಕಾಂಕ್ಷಿಗಳ ಪಟ್ಟಿ ಬೆಳೆದಿದೆ. ದೇವೇಂದ್ರ ಫಡ್ನವೀಸ್​ ಜೊತೆಗೆ ನಾಲ್ವರು ನಾಯಕರ ಹೆಸರುಗಳು ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿವೆ.



ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ 'ಮಹಾಯುತಿ' ಮೈತ್ರಿಯ ಸಿಎಂ ಆಯ್ಕೆ ವಿಚಾರ ಇನ್ನೂ ಬಗೆಹರಿದಿಲ್ಲ. ಶಿವಸೇನೆಯ ಏಕನಾಥ್​ ಶಿಂಧೆ, ಎನ್​ಸಿಪಿಯ ಶರದ್​ ಪವಾರ್​ ಸಿಎಂ ರೇಸ್​​ನಿಂದ ಹೆಚ್ಚೂ ಕಡಿಮೆ ಹಿಂದೆ ಸರಿದಿದ್ದಾರೆ. ಬಿಜೆಪಿಯ ದೇವೇಂದ್ರ ಫಡ್ನವೀಸ್​ ಅವರು ನೂತನ ಸಿಎಂ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.


ಆದರೆ, ಇದೀಗ ಬಿಜೆಪಿ ಪಕ್ಷದಲ್ಲೇ ಇನ್ನಿತರ ನಾಯಕರು ಸಿಎಂ ಸ್ಥಾನದ ರೇಸ್​ಗೆ ಇಳಿದಿದ್ದು, ಅಚ್ಚರಿಯ ಆಯ್ಕೆಯಲ್ಲಿ ದೇವೇಂದ್ರ ಫಡ್ನವೀಸ್​ ಬದಲಿಗೆ ಬೇರೊಬ್ಬ ನಾಯಕ ರಾಜ್ಯದ ಸಿಎಂ ಆಗುವ ಸಾಧ್ಯತೆಗಳೂ ಇವೆ ಎಂದು ರಾಜಕೀಯ ತಜ್ಞರ ವಿಶ್ಲೇಷಣೆಯಾಗಿದೆ.


ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್​ ಅವರೇ ಅಂತಿಮವಾಗಲಿದ್ದಾರೆ ಎಂದು ಬಿಜೆಪಿಯ ಹಲವು ಶಾಸಕರು ಹೇಳುತ್ತಿದ್ದರೂ, ಹೈಕಮಾಂಡ್​ ತೀರ್ಮಾನ ಇನ್ನೂ ಹೊರಬಿದ್ದಿಲ್ಲ. ರಾಜಸ್ಥಾನ ಮತ್ತು ಮಧ್ಯಪ್ರದೇಶ ಮಾದರಿಯಲ್ಲಿ ಸಿಎಂ ಆಯ್ಕೆ ನಡೆದರೂ ಅಚ್ಚರಿಯೇನಿಲ್ಲ.


ಸಿಎಂ ರೇಸ್​​ಗೆ ಬಂದ 'ಐವರು': ಸಿಎಂ ಸ್ಥಾನಕ್ಕೆ ಬಿಜೆಪಿಯ ಇತರ ನಾಯಕರ ಹೆಸರೂ ಚಾಲ್ತಿಗೆ ಬಂದಿವೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮರಾಠ ಸಮುದಾಯದ ನಾಯಕ ವಿನೋದ್ ತಾವ್ಡೆ ಅವರು ಮುನ್ನೆಲೆಗೆ ಬಂದಿದ್ದಾರೆ. ತಾವ್ಡೆ ಅವರು ಮರಾಠ ಸಮುದಾಯಕ್ಕೆ ಸೇರಿದ ಕಾರಣ, ರಾಜ್ಯದ ಪ್ರಸ್ತುತ ಪರಿಸ್ಥಿತಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿಕಟತೆ ಹಿನ್ನೆಲೆಯಲ್ಲಿ ಅವರು ಸಿಎಂ ಆಗುವ ಸಾಧ್ಯತೆಯೂ ಇದೆ.

ಹಂಗಾಮಿ ಮುಖ್ಯಮಂತ್ರಿ ಏಕನಾಥ್​ ಶಿಂದೆ, ದೇವೇಂದ್ರ ಫಡ್ನವೀಸ್​ ಮತ್ತು ಅಜಿತ್​ ಪವಾರ್​ ಅವರು ಗುರುವಾರ ದೆಹಲಿಯಲ್ಲಿ ಮುಖ್ಯಮಂತ್ರಿ ಹುದ್ದೆ ಕುರಿತು ಬಿಜೆಪಿ ನಾಯಕರೊಂದಿಗೆ ಚರ್ಚಿಸುವ ಮೊದಲು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ರಾತ್ರಿ ವಿನೋದ್ ತಾವ್ಡೆ ಅವರನ್ನು ದಿಢೀರ್ ಆಗಿ ದೆಹಲಿಗೆ ಕರೆಸಿ ಮಾತುಕತೆ ನಡೆಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಸಂಚಲನ ಉಂಟು ಮಾಡಿದೆ.

ವಿನೋದ ತಾವ್ಡೆ ಜತೆಗೆ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ, ಹಾಲಿ ರಾಜ್ಯಾಧ್ಯಕ್ಷ ಚಂದ್ರಶೇಖರ್​ ಬಾವನಕುಳೆ, ಸುಧೀರ್​ ಮುಂಗಂಟಿವಾರ್​, ಪಂಕಜಾ ಮುಂಡೆ ಅವರ ಹೆಸರುಗಳೂ ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬರುತ್ತಿವೆ.


ಫಡ್ನವೀಸ್​ ಪರ ಶೇ.70 ರಷ್ಟು ಶಾಸಕರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿದ ಬಳಿಕ, ದೇವೇಂದ್ರ ಫಡ್ನವೀಸ್​ ಅವರು ಪಕ್ಷವನ್ನು ಮತ್ತೆ ಗೆಲುವಿನ ಹಳಿಗೆ ತಂದಿದ್ದಾರೆ. ಹೀಗಾಗಿ ಅವರನ್ನು ಸಿಎಂ ರೇಸ್​​ನಿಂದ ಕೈಬಿಡುವುದು ಅಷ್ಟು ಸುಲಭವಲ್ಲ. ಪಕ್ಷದ ಶೇಕಡಾ 70 ರಷ್ಟು ಶಾಸಕರು ಮಾಜಿ ಸಿಎಂ ಪರವಾಗಿ ಇದ್ದಾರೆ.


ಮಧ್ಯಪ್ರದೇಶ, ರಾಜಸ್ಥಾನ ಝಲಕ್​: ಮಧ್ಯಪ್ರದೇಶದ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಬಿಜೆಪಿ ಹೈಕಮಾಂಡ್​ ಅಚ್ಚರಿಯ ಸಿಎಂ ಅಭ್ಯರ್ಥಿಯನ್ನು ಘೋಷಿಸಿತ್ತು. ಮಧ್ಯಪ್ರದೇಶದಲ್ಲಿ ಮಾಜಿ ಸಿಎಂ ಶಿವರಾಜ್ ಸಿಂಗ್​ ಚೌಹಾಣ್​ ಅವರ ನೇತೃತ್ವದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದರೂ, ಒಬಿಸಿ ನಾಯಕ ಮೋಹನ್​ ಯಾದವ್​ ಅವರನ್ನು ಸಿಎಂ ಆಗಿ ಮಾಡಲಾಯಿತು. ಇತ್ತ, ರಾಜಸ್ಥಾನದಲ್ಲಿ ಮಾಜಿ ಸಿಎಂ ವಸುಂಧರಾ ರಾಜೇ ಹೆಸರು ಚಾಲ್ತಿಯಲ್ಲಿದ್ದರೂ, ಭಜನಲಾಲ್ ಶರ್ಮಾ ಅವರು ಮುಖ್ಯಮಂತ್ರಿಯಾಗಿ ನೇಮಕವಾಗಿ ಎಲ್ಲರ ಹುಬ್ಬೇರಿಸಿದ್ದರು.

 ಸಂಪುಟ ಪುನಾರಚನೆಯ ಬಗ್ಗೆ ಸದ್ಯಕ್ಕೆ ಪ್ರಸ್ತಾವನೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.



ಬೆಂಗಳೂರು: "ಸಚಿವ ಸಂಪುಟ ಪುನಾರಚನೆ ವಿಚಾರ ಸಂಪುಟ ಸಭೆಯಲ್ಲೂ ಚರ್ಚೆಯಾಗಿದ್ದು, ಸದ್ಯಕ್ಕೆ ಪ್ರಸ್ತಾವನೆ ಇಲ್ಲ" ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.


ಕಳೆದೊಂದು ವಾರದಿಂದ ಸಚಿವ ಸಂಪುಟ ಪುನಾರಚನೆ ಸದ್ದು ಜೋರಾಗಿದೆ. ಅದರಲ್ಲೂ ಇತ್ತೀಚಿಗಿನ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗಳು ಇದಕ್ಕೆ ಇನ್ನಷ್ಟು ಪುಷ್ಠಿ ನೀಡಿವೆ. ಈ ಮಧ್ಯೆ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ, ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ಸಚಿವರ ಆತಂಕಕ್ಕೆ ಕಾರಣವಾಗಿತ್ತು.


ಸಚಿವರ ಕಾರ್ಯನಿರ್ವಹಣೆ ಆಧಾರದಲ್ಲಿ ಹೈಕಮಾಂಡ್ ಸಂಪುಟ ಪುನಾರಚನೆಗೆ ಸಮ್ಮತಿಸುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆಯುತ್ತಿತ್ತು. ಇತ್ತ ಕೆಲವರಲ್ಲಿ ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕವೂ ಮೂಡಿತ್ತು. ಕೆಲ ಹಿರಿಯ ಸಚಿವರೂ ಸಂಪುಟ ಪುನಾರಚನೆ ಸಾಧ್ಯತೆ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದರು.

ವಿವಾದ, ಭ್ರಷ್ಟಾಚಾರ ಆರೋಪಕ್ಕೊಳಗಾದ ಸಚಿವರು, ದಕ್ಷತೆ ಇಲ್ಲದ ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಸಭೆಯಲ್ಲಿ ಸಂಪುಟ ಸಹದ್ಯೋಗಿಗಳಿಗೆ ಸಂಪುಟ ಪುನಾರಚನೆಯ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.


ಉಪಸಮರದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೀರಿ. ನಿಮಗೆಲ್ಲರಿಗೂ ಅಭಿನಂದನೆಗಳು. ಸಂಪುಟ ಪುನಾರಚನೆ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಸುಳ್ಳು ಬರುತ್ತಿದೆ. ಅಂತಹ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎಂದು ಸಚಿವರೊಬ್ಬರು ತಿಳಿಸಿದ್ದಾರೆ.

 


ಪ್ರತಿದಿನ ರೈಲ್ವೆ ಇಲಾಖೆ ಅಧಿಕಾರಿಗಳು ಟಿಕೆಟ್‌ ಇಲ್ಲದೇ ಪ್ರಯಾಣಿಸುವ ನೂರಾರು ಪ್ರಯಾಣಿಕರಿಂದ ದಂಡ ವಸೂಲಿ ಮಾಡುತ್ತಾರೆ. ಹಾಗೇ‌ ಭಾರತದಲ್ಲಿ ಟಿಕೆಟ್‌ ಇಲ್ಲದೇ ಪ್ರಯಾಣಿಸುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ನಿಮಗೆ ಅಚ್ಚರಿಯಾಗುವ ವಿಷಯ ಇದು…ಯಾಕೆಂದರೆ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುವ ದೇಶದ ಏಕೈಕ ರೈಲು ನಿಲ್ದಾಣ ಯಾವುದು ಗೊತ್ತಾ?


ಹೌದು ಭಾಕ್ರಾ-ನಂಗಲ್‌ ರೈಲು ಪ್ರಯಾಣ ನಿಮ್ಮೆಲ್ಲಾ ನಿರೀಕ್ಷೆಗಳನ್ನು ತಲೆಕೆಳಗಾಗಿಸುತ್ತೇ..ಯಾಕೆ ಗೊತ್ತಾ..ಈ ರೈಲು ಕಳೆದ 75 ವರ್ಷಗಳಿಂದ ಪ್ರಯಾಣಿಕರಿಗೆ ಯಾವುದೇ ಶುಲ್ಕ(ಟಿಕೆಟ್)‌ ವಿಧಿಸದೇ ಕಾರ್ಯನಿರ್ವಹಿಸುತ್ತಿದೆ. ಇದು ದೇಶದ ಇತಿಹಾಸದ ಅನನ್ಯ ಮತ್ತು ವೈಶಿಷ್ಟ್ಯದ ಭಾಗವಾಗಿದೆ.

ರೈಲು ಆರಂಭದ ಇತಿಹಾಸ…

ಭಾಕ್ರಾ-ನಂಗಲ್‌ ರೈಲನ್ನು ಮೊದಲ ಬಾರಿಗೆ 1948ರಲ್ಲಿ ಪ್ರಾರಂಭಿಸಲಾಗಿತ್ತು. ಆರಂಭದಲ್ಲಿ ಈ ರೈಲು ಭಾಕ್ರಾ-ನಂಗಲ್‌ ಅಣೆಕಟ್ಟು ನಿರ್ಮಿಸುವ ಕೂಲಿ ಕಾರ್ಮಿಕರನ್ನು ಕರೆದೊಯ್ಯಲು ಹಾಗೂ ನಿರ್ಮಾಣ ಕಾರ್ಯದ ವಸ್ತುಗಳನ್ನು ಕೊಂಡೊಯ್ಯಲು ಬಳಸಲಾಗುತ್ತಿತ್ತು. ಹೀಗೆ ವರ್ಷಗಳು ಉರುಳಿದಂತೆ ಈ ರೈಲು ಸ್ಥಳೀಯರು ಮತ್ತು ಪ್ರವಾಸಿಗರು ಪ್ರಯಾಣಿಸುವ ರೈಲಾಗಿ ಪರಿವರ್ತನೆಗೊಂಡಿತ್ತು. ಈ ರೈಲು ಪ್ರಾರಂಭದಲ್ಲಿ ಸ್ಟೀಮ್‌ (ಉಗಿಬಂಡೆ) ಎಂಜಿನ್‌ ಹೊಂದಿತ್ತು. ಆದರೆ 1953ರಲ್ಲಿ ಅಮೆರಿಕದಿಂದ ಆಮದು ಮಾಡಿಕೊಂಡಿದ್ದ ಡೀಸೆಲ್‌ ಎಂಜಿನ್‌ ಅನ್ನು ಅಳವಡಿಸಲಾಗಿತ್ತು. ಆಧುನಿಕ ಅಪ್‌ ಗ್ರೇಡ್‌ ಗಳ ಹೊರತಾಗಿಯೂ ಈ ರೈಲು ಮರದ ಕೋಚ್‌ ಗಳನ್ನು ಹೊಂದಿರುವ ವಸಾಹತುಶಾಹಿಯ ಚಾರ್ಮ್‌ ಹೊಂದಿತ್ತು.

ಈ ರೈಲು ಪಂಜಾಬ್‌ ನ ನಂಗಲ್‌ ಮತ್ತು ಹಿಮಾಚಲ ಪ್ರದೇಶದ ಭಾಕ್ರಾ ನಡುವಿನ 13 ಕಿಲೋ ಮೀಟರ್‌ ಮಾರ್ಗವನ್ನು ಕ್ರಮಿಸಲಿದೆ. ಭಾಕ್ರಾ ರೈಲು ಸಟ್ಲೇಜ್‌ ನದಿ ಮತ್ತು ಶಿವಾಲಿಕ್‌ ಬೆಟ್ಟಗಳ ಪ್ರಶಾಂತವಾದ ಪ್ರಕೃತಿ ಸೌಂದರ್ಯದ ನಡುವೆ ಹಾದು ಹೋಗುತ್ತದೆ. ಈ ರೈಲು ಪ್ರಯಾಣದಲ್ಲಿ ಆರು ನಿಲ್ದಾಣಗಳು ಹಾಗೂ 3 ಸುರಂಗಗಳು ಸಿಗುತ್ತದೆ. ಜೊತೆಗೆ ಪ್ರಯಾಣದಲ್ಲಿ ಅಬ್ಬಾ ಎನಿಸುವಂತಹ ಪ್ರಕೃತಿ ನೋಟ ಹಾಗೂ ಅವಿಸ್ಮರಣೀಯವಾದ ಅನುಭವ ಪಡೆಯಬಹುದಾಗಿದೆ….

ಟಿಕೆಟ್‌ ರಹಿತ ಪ್ರಯಾಣದ ಪರಂಪರೆ…

ಭಾರತೀಯ ರೈಲ್ವೆಯಿಂದ ನಿರ್ವಹಿಸಲ್ಪಡುವ ಇತರ ರೈಲುಗಳಿಗಿಂತ ಭಿನ್ನವಾಗಿ ಈ ವಿಶಿಷ್ಟ ಸೇವೆಯನ್ನು ಭಾಕ್ರಾ ಬಿಯಾಸ್‌ ನಿರ್ವಹಣಾ ಮಂಡಳಿ (BBMB) ನಿರ್ವಹಿಸುತ್ತಿದೆ. 75 ವರ್ಷಗಳ ನಂತರವೂ ಪ್ರಯಾಣಿಕರಿಗೆ ಶುಲ್ಕ ವಿಧಿಸದೇ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿ ಕೊಡುವ ನಿರ್ಧಾರದ ಪರಂಪರೆಯನ್ನು ಬಿಬಿಎಂಬಿ ಮುಂದುವರಿಸಿದೆ. ಭಾಕ್ರಾ ಟು ನಂಗಲ್‌ ಪ್ರಯಾಣದಲ್ಲಿ ಪ್ರತಿ ಗಂಟೆಗೆ 18-20 ಲೀಟರ್‌ ಗಳಷ್ಟು ಡೀಸೆಲ್‌ ಅಗತ್ಯವಿದೆ. ಆದರೂ ಬಿಬಿಎಂಬಿ, ಭಾರತದ ಸ್ವಾತಂತ್ರ್ಯ ನಂತರದ ಕೈಗಾರಿಕಾ ಸಾಧನೆಯ ರೈಲು ಪರಂಪರೆಯ ಗೌರವಾರ್ಥವಾಗಿ ಉಚಿತ ಪ್ರಯಾಣದ ನಿರ್ಧಾರವನ್ನು ಆಯ್ಕೆ ಮಾಡಿದೆಯಂತೆ!

ಪ್ರತಿದಿನ ರೈಲಿನಲ್ಲಿ 800ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಾರೆ. ಸ್ಥಳೀಯರಿಗೆ ಇದೊಂದು ಅನುಕೂಲಕರವಾದ ಉಚಿತ ಪ್ರಯಾಣದ ಮಾರ್ಗವಾಗಿದ್ದು, ಪ್ರವಾಸಿಗರಿಗೆ ಅದ್ಭುತವಾದ ಅನುಭವ ನೀಡುವ ಪ್ರಕೃತಿ ಸೌಂದರ್ಯ ತಾಣವಾಗಿದೆ. ಯಾಕೆಂದರೆ ದೇಶದ ಅತೀ ಎತ್ತರವಾದ ಭಾಕ್ರಾ-ನಂಗಲ್‌ ಅಣೆಕಟ್ಟು ನಿರ್ಮಾಣದ ಅದ್ಭುತ ಎಂಜಿನಿಯರಿಂಗ್‌ ಕಾರ್ಯಕ್ಕೆ ಸಾಕ್ಷಿಯಾಗಲಿದ್ದೀರಿ…

ಭಾಕ್ರಾ ನಂಗಲ್‌ ರೈಲು ಕೇವಲ ಉಚಿತ ಪ್ರಯಾಣ ಮಾತ್ರವಲ್ಲ ಇದು ಭಾರತದ ಪ್ರಗತಿಯ, ಅಭಿವೃದ್ಧಿಯ ಸಂಕೇತವಾಗಿದೆ. ನೀವೊಬ್ಬರು ಇತಿಹಾಸದ ಆಸಕ್ತರಾಗಿದ್ದರೆ ಅಥವಾ ಪ್ರಕೃತಿ ಪ್ರೇಮಿಯಾಗಿದ್ದರೆ ನಿಮಗೆ ಈ ರೈಲು ಪ್ರಯಾಣ ಮರೆಯಲಾರದ ಅನುಭವ ನೀಡಲಿದೆ. ಹಾಗಾದರೆ ಇನ್ನೇಕೆ ತಡ…ಜೀವನದಲ್ಲಿ ಒಮ್ಮೆಯಾದರೂ ಈ ಉಚಿತ ರೈಲಿನಲ್ಲಿ ಪ್ರಯಾಣಿಸುವ ಕನಸು ನನಸು ಮಾಡಿಕೊಳ್ಳಿ….

 


ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಜಿಹಾದಿಗಳಿಂದ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಿರಂತರ ಕಿರುಕುಳ, ಹಿಂದೂ ದೇವಾಲಯಗಳು ಮತ್ತು ಪ್ರತಿಮೆಗಳನ್ನು ಅಪವಿತ್ರಗೊಳಿಸುವುದು ಮತ್ತು ಹಿಂದೂ ಆಸ್ತಿಗಳು, ಹಿಂದು ಜನರ ಮೇಲೆ ಹಲ್ಲೆ, ದಬ್ಬಾಳಿಕೆ ಮುಂದುವರೆದಿದೆ. ಹಿಂದು ಸಮಾಜದ ಪ್ರಮುಖರನ್ನು ಬಂಧಿಸಲಾಗುತ್ತಿದೆ.

ಮಂಗಳೂರು, ನ.28: ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್

ಮೂಲಭೂತವಾದಿ ಜಿಹಾದಿಗಳಿಂದ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಿರಂತರ ಕಿರುಕುಳ, ಹಿಂದೂ ದೇವಾಲಯಗಳು ಮತ್ತು ಪ್ರತಿಮೆಗಳನ್ನು ಅಪವಿತ್ರಗೊಳಿಸುವುದು ಮತ್ತು ಹಿಂದೂ ಆಸ್ತಿಗಳು, ಹಿಂದು ಜನರ ಮೇಲೆ ಹಲ್ಲೆ ದಬ್ಬಾಳಿಕೆ ಮುಂದುವರೆದಿದೆ. ಹಿಂದು ಸಮಾಜದ ಪ್ರಮುಖರನ್ನು ಬಂಧಿಸಲಾಗುತ್ತಿದೆ. ಇಂತಹ ಕೃತ್ಯವನ್ನು ಖಂಡಿಸಿ ದೇಶಾದ್ಯಂತ ನ.29ರಂದು ವಿಶ್ವ ಹಿಂದು ಪರಿಷತ್‌ ಪ್ರತಿಭಟನೆ ನಡೆಸಲಿದೆ.


ಹಿಂದುಗಳ ಮೇಲಿನ ಹಲ್ಲೆ ಕೃತ್ಯವನ್ನು ತಡೆಯಲು ಸರಕಾರ ಯಾವುದೇ ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಇವುಗಳನ್ನು ವಿರೋಧಿಸಿ ಹಿಂದೂ ಸಮಾಜವು ಢಾಕಾ, ಚಿತ್ತಗಾಂಗ್ ಮೊದಲಾದ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ಆಯೋಜಿಸಿದೆ. ವಿಶ್ವ ಸಮುದಾಯ ಮತ್ತು ಭಾರತ ಸರ್ಕಾರ ನಿರೀಕ್ಷೆಯಂತೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಭದ್ರತೆ ಮತ್ತು ಸಂಘಟನೆಗಾಗಿ ಹಿಂದೂ ಸಮಾಜವನ್ನು ಜಾಗೃತಗೊಳಿಸಿದ ನಾಯಕ ಚಿನ್ನೋಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಂಧಿಸಲಾಗಿದೆ.


ಹಿಂದೂ ನಾಯಕನ ಬಿಡುಗಡೆಗೆ ಒತ್ತಾಯಿಸಿ ಹಾಗೂ ಬಾಂಗ್ಲಾ ದೇಶದ ಹಿಂದೂಗಳ ರಕ್ಷಣೆಗಾಗಿ ಆಗ್ರಹಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು, ಹೋಬಳಿಗಳಲ್ಲಿ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಹಾಗೂ ಬಂಧನವಾಗಿರುವ ಧಾರ್ಮಿಕ ಮುಖಂಡನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಘಟಕದ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪವೆಲ್ ತಿಳಿಸಿದ್ದಾರೆ.

ಚಿನ್ನೊಯ್ ಕೃಷ್ಣದಾಸ್ ಪ್ರಭು ಅವರ ಚಿತ್ರದೊಂದಿಗೆ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಬೇಕು. ಹಿಂದೂಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಕೊನೆಗಾಣಿಸಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಬೇಕು ಎಂದು ಪ್ರತಿಭಟನೆ ಸ್ವರೂಪದ ಬಗ್ಗೆ ಶರಣ್ ಪಂಪೈಲ್ ತಿಳಿಸಿದ್ದಾರೆ.

 Free Aadhaar Update: UIDAI myAadhaar ಪೋರ್ಟಲ್‌ನಲ್ಲಿ ಇತ್ತೀಚಿನ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಉಚಿತವಾಗಿ ಅಪ್​ಡೇಟ್​ ಮಾಡಬಹುದು.



Free Aadhaar Update: ಆಧಾರ್ ಕಾರ್ಡ್ ಅಪ್​ಡೇಟ್​ ಮಾಡುವವರಿಗೆ ಇದು ಪ್ರಮುಖ ಮಾಹಿತಿ. UIDAI (ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ) ಆಧಾರ್ ಅಪ್​ಡೇಟ್​ಗಾಗಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಕೊನೆಯ ದಿನಾಂಕವನ್ನು ಡಿಸೆಂಬರ್ 14 ರವರೆಗೆ ವಿಸ್ತರಿಸಿದೆ. ಈಗ ಹೆಸರು ಬದಲಾವಣೆಗೆ ಗೆಜೆಟ್ ಕಡ್ಡಾಯ. ವಂಚನೆಗಳನ್ನು ತಡೆಯಲು ಯುಐಡಿಎಐ ಈ ಕ್ರಮ ಕೈಗೊಂಡಿದೆ.


ಆಧಾರ್ ಕಾರ್ಡ್ ಅಪ್​ಡೇಟ್​: ನೀವು ಆಧಾರ್ ಕಾರ್ಡ್ ಅಪ್​ಡೇಟ್​ ಮಾಡಲು ನೀವು ಬಯಸಿದರೆ, ನಾವು ನಿಮಗೆ ಕೆಲವು ಮಾಹಿತಿಯನ್ನು ನೀಡಲಿದ್ದೇವೆ. ಈ ಮಾಹಿತಿಯ ಸಹಾಯದಿಂದ ನೀವು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಸುಲಭವಾಗುತ್ತದೆ. UIDAI ಅಪ್‌ಡೇಟ್ ಪ್ರಕಾರ, ದಾಖಲೆಗಳನ್ನು ಅಪ್‌ಲೋಡ್ ಮಾಡಲು ಕೊನೆಯ ದಿನಾಂಕವನ್ನು ಡಿಸೆಂಬರ್ 14 ಎಂದು ನಿಗದಿಪಡಿಸಲಾಗಿದೆ. ಅಂದರೆ ನೀವು ಈ ಮಧ್ಯೆ ಆಧಾರ್ ಕಾರ್ಡ್ ಅಪ್​ಡೇಟ್​ಗೆ ಸಂಬಂಧಿಸಿದ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು.

ಯಾವ ದಾಖಲೆಗಳನ್ನು ಸಲ್ಲಿಸಬಹುದು?: ಐಡಿ ಪ್ರೂಪ್​, ವಿಳಾಸ ಪುರಾವೆಯ ಮಾಹಿತಿಯನ್ನು ಡಿಸೆಂಬರ್ 14ರವರೆಗೆ ಅಪ್‌ಲೋಡ್ ಮಾಡಬಹುದು. UIDAI ನೀಡಿದ ಗಡುವಿನೊಳಗೆ ನೀವು ಈ ಕಾರ್ಯವನ್ನು ಪೂರ್ಣಗೊಳಿಸಬೇಕು.


ಗೆಜೆಟ್ ಬೇಡಿಕೆ: ಆಧಾರ್ ಕಾರ್ಡ್ ನವೀಕರಿಸಲು ಗೆಜೆಟ್ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುಐಡಿಎಐ ಹೊಸ ನಿರ್ಧಾರ ಕೈಗೊಂಡಿದೆ. ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ವಂಚನೆಗೆ ಕಡಿವಾಣ ಹಾಕಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗ ಹೆಸರು ಬದಲಾಯಿಸಬೇಕಾದರೆ ಗೆಜೆಟ್ ಪೇಪರ್ ಕೊಡಬೇಕು. ಇತರ ಬದಲಾವಣೆಗಳನ್ನೂ ಸಹ ಮಾಡಬಹುದು. ಆದರೆ ಅದಕ್ಕಾಗಿ ನೀವು ಪೋಷಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಈ ಕುರಿತು ಇತ್ತೀಚೆಗೆ ನಿರ್ಧಾರ ಕೈಗೊಳ್ಳಲಾಗಿದೆ.


ಯುಐಡಿಎಐ ಕೇಂದ್ರಕ್ಕೆ ಭೇಟಿ ನೀಡಿ: ನೀವು ಯುಐಡಿಎಐ ಕೇಂದ್ರಕ್ಕೆ ಭೇಟಿ ನೀಡುವ ಮೂಲಕವೂ ಅಪ್​ಡೇಟ್​ ಮಾಡಬಹುದು. ನೀವು DOBನಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡಲು ಬಯಸಿದರೆ ನೀವು ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕು. ಏಕೆಂದರೆ ಈ ಬದಲಾವಣೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗುವುದಿಲ್ಲ.

ಅದಕ್ಕಾಗಿ ಹತ್ತಿರದ ಕೇಂದ್ರಕ್ಕೆ ಹೋಗುವುದು ಕಡ್ಡಾಯವಾಗಿರುತ್ತದೆ.


ಆಧಾರ್ ಕಾರ್ಡ್ ನೀಡುವುದು ಯಾರು?: ಆಧಾರ್ ಕಾರ್ಡ್ ನೀಡುವ ಪ್ರಾಧಿಕಾರ ಯುಐಡಿಎಐ (ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ-ಯುಐಡಿಎಐ) ಇದೀಗ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಉಚಿತ ಆಧಾರ್ ಕಾರ್ಡ್ ಅಪ್​ಡೇಟ್​ ಸೌಲಭ್ಯವನ್ನು ಕೊನೆಗೊಳಿಸಲಿದೆ. ಸೆಪ್ಟೆಂಬರ್ 14ರ ನಂತರ, ಯಾವುದೇ ರೀತಿಯ ಅಪ್​ಡೇಟ್​ಗಾಗಿ ನೀವು 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ ನೀವು ಇನ್ನೂ ಎರಡು ದಿನಗಳ ಸಮಯವನ್ನು ಹೊಂದಿದ್ದೀರಿ. ಇದರಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್​ಡೇಟ್​ ಮಾಡಿಕೊಳ್ಳಬಹುದು. ಉಚಿತ ಆಧಾರ್ ಕಾರ್ಡ್ ಅಪ್​ಡೇಟ್​ ಅವಧಿ ಈಗಾಗಲೇ ವಿಸ್ತರಿಸಲ್ಪಟ್ಟಿದೆ. ಆದ್ದರಿಂದ ಈ ಬಾರಿ ಸೆಪ್ಟೆಂಬರ್ 14ರ ನಂತರ ದಿನಾಂಕವನ್ನು ವಿಸ್ತರಿಸುವ ಸಾಧ್ಯತೆ ತುಂಬಾ ಕಡಿಮೆ.


ನಾವಿಲ್ಲಿ ನಿಮಗೆ ಹಂತ ಹಂತವಾಗಿ ಆಧಾರ್ ಕಾರ್ಡ್ ನವೀಕರಿಸುವ ಸುಲಭ ಮಾರ್ಗವನ್ನು ಹೇಳುತ್ತೇವೆ. ಅದನ್ನು ಅನುಸರಿಸುವ ಮೂಲಕ ಆಧಾರ್​ ಕಾರ್ಡ್​ ಅನ್ನು ಉಚಿತವಾಗಿ ಅಪ್​ಡೇಟ್​ ಮಾಡಿಕೊಳ್ಳಬಹುದು.

ಹಂತ 1: myAadhaar ಪೋರ್ಟಲ್‌ಗೆ ಹೋಗಿ.


ಹಂತ 2: Enter ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚ ಕೋಡ್ ನಮೂದಿಸಿ. 'ಸೆಂಡ್ OTP' ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP ಸ್ವೀಕರಿಸಿದ ನಂತರ, ಅದನ್ನು ನಮೂದಿಸಿ ಮತ್ತು ಆಯ್ಕೆಯನ್ನು ಕ್ಲಿಕ್ಕಿಸಿ.


ಹಂತ 3: ಡಾಕ್ಯುಮೆಂಟ್ ಅಪ್‌ಡೇಟ್ ಆಯ್ಕೆಯ ಮೇಲೆ ಕ್ಲಿಕ್ಕಿಸಿ.


ಹಂತ 4: ಸೂಚನೆಗಳನ್ನು ಓದಿದ ನಂತರ ಮುಂದಿನ ಆಯ್ಕೆ ಕ್ಲಿಕ್ಕಿಸಿ.


ಹಂತ 5: ನಿಮ್ಮ ವಿವರಗಳನ್ನು ಪರಿಶೀಲಿಸಿದ ನಂತರ ಪುಟದಲ್ಲಿ ನೀಡಲಾದ 'ಮೇಲಿನ ವಿವರಗಳು ಸರಿಯಾಗಿವೆಯೇ ಎಂದು ನಾನು ಪರಿಶೀಲಿಸುತ್ತೇನೆ' ಎಂಬ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಮುಂದಿನ ಆಯ್ಕೆಗೆ ತೆರಳಿ.

ಹಂತ 6: ID ಪುರಾವೆ ಮತ್ತು ವಿಳಾಸ ಪುರಾವೆಗಾಗಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲಾಗುತ್ತದೆ. ಇದರ ನಂತರ, ನಿಮ್ಮ ನವೀಕರಿಸಿದ ಆಧಾರ್ ಕಾರ್ಡ್ 7 ದಿನಗಳಲ್ಲಿ ಅಪ್​ಡೇಟ್​ ಆಗುತ್ತದೆ.




ಬೆಂಗಳೂರು: ಮೊಬೈಲ್ ಫೋನ್‌ಗಳಿಗೆ ಬರುವ ಒಟಿಪಿ (One Time Password) ಗಳ ಮೂಲವನ್ನು ಪತ್ತೆ ಮಾಡುವ ಸಂಬಂಧ ಭಾರತೀಯ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (TRAI) ರೂಪಿಸಿರುವ ಹೊಸ ನಿಯಮಾವಳಿಗೆ ಟೆಲಿಕಾಂ ಕಂಪನಿಗಳು ಇದೇ ನವೆಂಬರ್ 30ರೊಳಗೆ ಒಪ್ಪಿಗೆ ಸೂಚಿಸಬೇಕಾಗಿದೆ. ಒಂದು ವೇಳೆ ಈ ಗಡುವಿನೊಳಗೆ ಟೆಲಿಕಾಂ ಕಂಪನಿಗಳು ಒಪ್ಪಿಗೆ ಸೂಚಿಸದೇ ಹೋದಲ್ಲಿ ಡಿಸೆಂಬರ್ 1ರಿಂದ ಮೊಬೈಲ್‌ಗಳಿಗೆ ಒಟಿಪಿಗಳು ಬರುವುದಿಲ್ಲ ಎಂದು ತಿಳಿದು ಬಂದಿದೆ.

ಡಿಜಿಟಲ್ ಬ್ಯಾಂಕಿಂಗ್, ಆನ್‌ಲೈನ್ ಹಣಕಾಸು ವ್ಯವಹಾರಗಳಿಗೆ ಒಟಿಪಿ ಅನಿವಾರ್ಯವಾಗಿದೆ. ಟ್ರಾಯ್ ಗಡುವು ವಿಸ್ತರಿಸದಿದ್ದರೆ ಈ ಸೇವೆಗಳಲ್ಲಿ ಭಾರಿ ಸಮಸ್ಯೆ ತಲೆದೂರಲಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಆನ್‌ಲೈನ್ ಹಣಕಾಸು ವ್ಯವಹಾರದಲ್ಲಿ ಒಟಿಪಿಗಳ ಹೆಸರಿನಲ್ಲಿ ಇತ್ತೀಚೆಗೆ ವಂಚನೆಗಳ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಒಟಿಪಿಗಳ ಮೂಲವನ್ನು ಬಹಿರಂಗಗೊಳಿಸುವ ನಿಟ್ಟಿನಲ್ಲಿ ಟ್ರಾಯ್ ಹೊಸ ನಿಯಮಾವಳಿ ರೂಪಿಸಿದ್ದು ಇದಕ್ಕೆ ಜಿಯೊ, ವೊಡಾಫೋನ್, ಏರ್‌ಟೇಲ್, ಬಿಎಸ್‌ಎನ್‌ಎಲ್ ಸೇರಿದಂತೆ ಮೊಬೈಲ್ ಕಂಪನಿಗಳು ಒಪ್ಪಿಗೆ ಸೂಚಿಸಿಲ್ಲ. ಒಂದು ವೇಳೆ ಗಡುವಿನೊಳಗೆ ಈ ಕಂಪನಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಒಟಿಪಿ ಸೇವೆಯಲ್ಲಿ ಕೊರತೆ ಉಂಟಾಗುವ ಸಾಧ್ಯತೆಗಳಿವೆ.



      ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಆಂತರಿಕ ಗುಣಮಟ್ಟ ಭರವಸಾ ಕೋಶ, ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ನ.27ರಂದು ನಾಯಕತ್ವ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ.ಟಿ ವಹಿಸಿದ್ದರು.



 ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯ ಇಂಗ್ಲೀಷ್ ಉಪನ್ಯಾಸಕ ಶೀನಾ ನಾಡೋಳಿ ಅವರು ವಿವಿಧ ಚಟುವಟಿಕೆಯ ಮೂಲಕ ನಾಯಕತ್ವದ ಬಗ್ಗೆ ತರಬೇತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪರಿಷತ್ತಿನ ಸಂಯೋಜಕ ಡಾ. ಪ್ರಸಾದ ಎನ್ ಸಹ ಸಂಯೋಜಕರಾದ ಶಿವಪ್ರಸಾದ ಎಸ್,ಅಶ್ವಿನಿ ಎಸ್ ಎನ್ ಹಾಗೂ ವಿದ್ಯಾರ್ಥಿ ಪರಿಷತ್ತಿನ ನಾಯಕರಾದ, ದಿಶಾಂತ್, ಕಾರ್ತಿಕ್ ಹಾಗೂ ಕಲ್ಪನಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಪರಿಷತ್ತಿನ ಉಪಾಧ್ಯಕ್ಷೆ ಕಲ್ಪನಾ ನಿರೂಪಿಸಿದರು. ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ದಿಶಾಂತ್ ಸ್ವಾಗತಿಸಿ, ದೀಕ್ಷಾ ವಂದಿಸಿದರು.

 


ಬೆಳಗಾವಿ : ಮಹಿಳಾ ವಿಶ್ವವಿದ್ಯಾಲಯದ ಕಾರ್ಯಕ್ರಮದ ನಿಮಿತ್ಯ ಬುಧವಾರ ವಿಜಯಪುರಕ್ಕೆ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿಗೆ ವಾಪಸ್ ಆಗುವಾಗ ಆಕಸ್ಮಾತಾಗಿ ಕಣ್ಣಿಗೆ ಕಾಣಿಸಿದ ನಿರ್ಗತಿಕ ಕುಟುಂಬವೊಂದಕ್ಕೆ ನೆರವು ನೀಡುವ ಮೂಲಕ ಮಾನವೀಯತೆ ತೋರಿಸಿದ್ದಾರೆ.

ಕಾರ್ಯಕ್ರಮ ಮುಗಿಸಿ ಮರಳುವಾಗ ವಿಜಯಪುರ – ಬಾಗಲಕೋಟೆ ಹೆದ್ದಾರಿಯ ಪಕ್ಕ ಹನಗನಹಳ್ಳಿ ಎಂಬಲ್ಲಿ ರಸ್ತೆ ಪಕ್ಕದಲ್ಲಿ ಊಟಕ್ಕೆಂದು ಸಚಿವರು ವಾಹನ ನಿಲ್ಲಿಸಿದರು. ಊಟ ಮಾಡುವಾಗ ಪಕ್ಕದಲ್ಲಿದ್ದ ಸಣ್ಣ ಮನೆಯ ಮುಂದೆ ಅಜ್ಜಿಯೊಬ್ಬಳು ಬಾಟಲಿಗಳಲ್ಲಿ ನೀರು ತುಂಬಿಸಿ ಮನೆಯ ಮುಂದೆ ಇಡುತ್ತಿದ್ದಳು. ಆ ಬಗ್ಗೆ ವಿಚಾರಿಸಿದಾಗ ರಸ್ತೆಯಲ್ಲಿ ಹೋಗುವ ಜನರು ನೀರು ಕುಡಿಯಲು ಬರುತ್ತಾರೆ. ಅವರಿಗೆ ಸಹಾಯವಾಗಲೆಂದು ಬಾಟಲಿಗಳಲ್ಲಿ ತುಂಬಿ ಇಡುವುದಾಗಿ ತಿಳಿಸಿದಳು.

ಹಾಗೆ ಮಾತನಾಡುತ್ತ ಗೌರಮ್ಮ ವಾಡೇದ ಎಂಬ ಆ ಅಜ್ಜಿ ಹಾಗೂ ಜೊತೆಗಿದ್ದ ಮಲ್ಲು ಎನ್ನುವ ಹೆಸರಿನ ಅವಳ ಮಗನ ಕುರಿತು ವಿಚಾರಿಸಿದಾಗ, ಅವರು ಹಳ್ಳಿಯಲ್ಲಿ ಹೊಂದಿದ್ದ ಮನೆಯ ಜಾಗ ರಸ್ತೆ ಮಾಡುವಾಗ ಕೈ ತಪ್ಪಿದೆ. ಇದರಿಂದಾಗಿ ವಾಸಿಸಲು ಮನೆಯೇ ಇರಲಿಲ್ಲ.

ನಂತರ ಈ ಸ್ಥಳದಲ್ಲಿದ್ದ ತೋಟದ ಮಾಲಕರು ಒಂದೇ ಕೊಠಡಿಯ ಮನೆಯಲ್ಲಿ ವಾಸಿಸಲು ಅವಕಾಶ ನೀಡಿದರು. ಆದರೆ ಅಡುಗೆ ಮಾಡಲು ಪಾತ್ರೆಗಳಾಗಲಿ, ಹಾಸಿಗೆ- ಹೊದಿಕೆಗಳಾಗಲಿ, ಕಾಳು ಕಡಿಗಳಾಗಲಿ ಏನೂ ಇಲ್ಲದೆ ಊಟಕ್ಕೂ ಸರಿಯಾಗಿ ಗತಿ ಇಲ್ಲ ಎನ್ನುವ ಅಂಶ ಗೊತ್ತಾಯಿತು.

ಅವರು ಈ ಮೊದಲು ಹೊಂದಿದ್ದ ಪಡಿತರ ಕಾರ್ಡ್ ಕೂಡ ಕಳೆದುಹೋಗಿದ್ದರಿಂದ ಸರಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎನ್ನುವುದು ಕೂಡ ತಿಳಿಯಿತು. ಕೂಡಲೇ ಸಚಿವರು ಸ್ವಲ್ಪಮಟ್ಟಿಗೆ ಆರ್ಥಿಕ ನೆರವು ನೀಡಿದರಲ್ಲದೆ, ಆದಷ್ಟು ಶೀಘ್ರ ರೇಶನ್ ಕಾರ್ಡ್ ಮತ್ತು ಗೃಹಲಕ್ಷ್ಮೀ ಯೋಜನೆಯ ಹಣ ಬರುವಂತೆ ಮಾಡುವುದಾಗಿ ತಿಳಿಸಿ, ಸ್ಥಳದಿಂದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದೇ ವೇಳೆ ಅದೇ ಮಾರ್ಗವಾಗಿ ತೆರಳುತ್ತಿದ್ದ ಎಎಸ್ಐ ಎಚ್.ಎಸ್.ಗೌಡರ್ ಸಚಿವರ ಬಳಿ ಆಗಮಿಸಿ, ಅಜ್ಜಿಯ ಕುಟುಂಬದ ಪರಿಸ್ಥಿತಿ ವಿವರಿಸಿದರು. ಆಗ ಅಜ್ಜಿ, ತಾವು ಉಪವಾಸವಿದ್ದ ಸಂದರ್ಭದಲ್ಲಿ ಎಎಸ್ಐ ತಮಗೆ ಅಕ್ಕಿ ನೀಡಿ ನೆರವು ನೀಡಿದ್ದಾರೆ ಎಂದು ಸಚಿವರಿಗೆ ತಿಳಿಸಿದಳು. ಇದನ್ನು ತಿಳಿದ ಸಚಿವರು, ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಿದ್ದಕ್ಕಾಗಿ ಸರಕಾರದ ಪರವಾಗಿ ಎಎಸ್ಐ ಗೌಡರ್ ಗೆ ಧನ್ಯವಾದ ತಿಳಿಸಿದರು.

ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಇಂತವರಿಗಾಗಿಯೇ ಸರಕಾರ ಗೃಹಲಕ್ಷ್ಮೀ, ಅನ್ನಭಾಗ್ಯ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮುಖ್ಯಮಂತ್ರಿಗಳು ಬಡವರಿಗಾಗಿಯೇ ಯೋಜನೆಗಳನ್ನು ತಂದಿದ್ದಾರೆ. ಅದು ಯಾರಿಗೆ ತಲುಪಿಲ್ಲವೋ ಅಂತವರಿಗೆ ತಲುಪಿಸುವುದು ನಮ್ಮ ಕರ್ತವ್ಯ. ಆ ಕೆಲಸವನ್ನು ಶೀಘ್ರದಲ್ಲೇ ಮಾಡಲಾಗುವುದು.

ಎಎಸ್ಐ ಗೌಡರ್ ಮನುಷ್ಯತ್ವ ತೋರಿಸಿ ಅಜ್ಜಿಯ ಕುಟುಂಬಕ್ಕೆ ನೆರವು ನೀಡಿದ್ದಾರೆ. ಅವರ ಕಾರ್ಯ ಸ್ತುತ್ಯಾರ್ಹ. ಸರಕಾರದಿಂದ ಆ ಕುಟುಂಬಕ್ಕೆ ಎಲ್ಲ ನೆರವು ಸಿಗುವಂತೆ ಮಾಡುತ್ತೇನೆ ಎಂದು ತಿಳಿಸಿದರು. ತಮ್ಮ ಅವಸರದ ಪ್ರವಾಸದ ಮಧ್ಯೆಯೂ ಸಚಿವರು ಸಮಯ ನೀಡಿ ಇಂತಹ ನಿರ್ಗತಿಕ ಕುಟುಂಬಕ್ಕೆ ನೆರವು ನೀಡಲು ಮುಂದಾಗಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

 ಬಡವ,ಅಶಕ್ತರಿಗೆ ನೂರು ಮನೆ ನಿರ್ಮಾಣ ಮತ್ತು ದುರಸ್ತಿ ಕಾರ್ಯಕ್ಕೆ ಪಣತೊಟ್ಟ ಬೈಂದೂರು ಸ್ವಯಂ ಸೇವಕರು



ಜಗತ್ತಿನ ಅತೀ ದೊಡ್ಡ ಸ್ವಯಂ ಸೇವಾ ಸಂಘಟನೆ ಅರೆಸೆಸ್ಸ್ ಸ್ಥಾಪನೆ ಯಾಗಿ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಅನೇಕ ಕಾರ್ಯಕ್ರಮಗಳನು ಹಮ್ಮಿಕೊಂಡಿದೆ. ಪರಿಸರ,ಆರೋಗ್ಯ ,ಕೌಟುಂಬಿಕ ಸಾಮರಸ್ಯ ಬಗ್ಗೆ ಹೆಚ್ಚು ಆದ್ಯತೆ ನೀಡಿದ್ದು ಈ ಹಿನ್ನೆಲೆಯಲ್ಲಿ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ದಾನಿಗಳು ಮತ್ತು ಕಾರ್ಯಕರ್ತರ ನೆರವಿನೊಂದಿಗೆ" ದೇವಿ ನೆಲೆ-ನಮ್ಮ ಮನೆ" ಹೆಸರಿನಲ್ಲಿ 100 ಮನೆಗಳ ನಿರ್ಮಾಣ ಮತ್ತು ದುರಸ್ತಿ ಮಾಡುವ ಪುಣ್ಯ ಕಾರ್ಯವನ್ನು ಹಮ್ಮಿಕೊಂಡಿದೆ.ಈ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಡಿಸೆಂಬರ್ 1 ರಂದು ಕೊಡ್ಲಾಡಿ ಗ್ರಾಮದಲ್ಲಿ ವಜ್ರದೇಹಿ ಮಠದ ಶ್ರೀಶ್ರೀ ರಾಜಶೇಖರಾನಂದ ಸ್ವಾಮೀಜಿ ಸಮ್ಮುಖದಲ್ಲಿ ನಡೆಯಲಿದ್ದು,ಪ್ರಕಾಶ್ ಪಿ.ಯಸ್ ,ಸಹಕಾರ್ಯವಾಹ ಅರೆಸೆಸ್ಸ್ ದಕ್ಷಿಣ ಪ್ರಾಂತ,ಗುರುರಾಜ ಗಂಟಿಹೋಳೆ ಶಾಸಕರು ಬೈಂದೂರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

 ಶಕ್ತಿ ಯೋಜನೆಯ ಯಶಸ್ಸಿಗೆ ಶಕ್ತಿ ಮೀರಿ ಶ್ರಮಿಸುತ್ತಿರುವ ಸಾರಿಗೆ ನೌಕರರ ಬಗ್ಗೆ ಸರಕಾರ ಅಸಡ್ಡೆ ಧೋರಣೆ ತಳೆದಿದೆ. ಸರಕಾರವೇ ವಾಗ್ದಾನ ಮಾಡಿದ್ದ ಬಾಕಿ ವೇತನ ಮತ್ತು ಗ್ರಾಚ್ಯುಟಿ ಸೇರಿದಂತೆ ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆ ವಿಷಯದಲ್ಲಿ ಮುಖ್ಯಮಂತ್ರಿಗಳ ನಿರ್ಲಕ್ಷ್ಯ ತೋರಿದ್ದಾರೆ. ಇದನ್ನು ಖಂಡಿಸಿ ಡಿಸೆಂಬರ್‌ 31ರಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ ಅಧ್ಯಕ್ಷ ಎಚ್‌ವಿ ಅನಂತ ಸುಬ್ಬರಾವ್‌ ತಿಳಿಸಿದ್ದಾರೆ.



ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರ 38 ತಿಂಗಳ ವೇತನ ಬಾಕಿ (ಅರಿಯರ್ಸ್‌) ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್‌ 31ರಿಂದ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಾರಿಗೆ ನೌಕರರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ ಅಧ್ಯಕ್ಷ ಎಚ್‌ವಿ ಅನಂತ ಸುಬ್ಬರಾವ್‌, "ಶಕ್ತಿ ಯೋಜನೆಯ ಯಶಸ್ಸಿಗೆ ಶಕ್ತಿ ಮೀರಿ ಶ್ರಮಿಸುತ್ತಿರುವ ಸಾರಿಗೆ ನೌಕರರ ಬಗ್ಗೆ ಸರಕಾರದ ಅಸಡ್ಡೆ ಧೋರಣೆಯಿಂದ ಬೇಸತ್ತಿದ್ದೇವೆ. ಸರಕಾರವೇ ವಾಗ್ದಾನ ಮಾಡಿದ್ದ ಬಾಕಿ ವೇತನ ಮತ್ತು ಗ್ರಾಚ್ಯುಟಿ ಸೇರಿದಂತೆ ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆ ವಿಷಯದಲ್ಲಿ ಮುಖ್ಯಮಂತ್ರಿಗಳ ನಿರ್ಲಕ್ಷ್ಯ ಖಂಡಿಸಿ ಡಿಸೆಂಬರ್‌ 31ರಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ,'' ಎಂದು ಹೇಳಿದರು.

'ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರಿಗೆ ನೌಕರರ ಬೇಡಿಕೆಗಳನ್ನು ಒಪ್ಪಿ ವೇತನ ಬಾಕಿ ಮತ್ತು ಗ್ರಾಚ್ಯುಟಿ ನೀಡುವುದಾಗಿ ಹೇಳಿದ್ದರು. ಬಳಿಕ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಬಾಕಿ ವೇತನ ಮತ್ತು ಇತರೆ ಬೇಡಿಕೆಗಳ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಸರಕಾರದ ಈ ಧೋರಣೆ ಖಂಡಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದೇವೆ," ಎಂದು ಎಚ್‌ವಿ ಅನಂತ ಸುಬ್ಬರಾವ್‌ ತಿಳಿಸಿದರು.

'ಕಳೆದ ತಿಂಗಳು ಮುಷ್ಕರಕ್ಕೆ ಮುಂದಾಗಿದ್ದಾಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತುಕತೆ ನಡೆಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನವೆಂಬರ್‌ 30ರೊಳಗೆ ವೇತನ ಬಾಕಿ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದ್ದರು. ಹೀಗಾಗಿ, ಮುಷ್ಕರ ಕೈಬಿಟ್ಟಿದ್ದೆವು. ಆದರೆ, ಇದುವರೆಗೆ ಬೇಡಿಕೆ ಈಡೇರಿಸಿಲ್ಲ. ಸರಕಾರದ ಅಸಡ್ಡೆ ಖಂಡಿಸಿ ಡಿಸೆಂಬರ್‌ 9ರಂದು ಬೆಳಗಾವಿ ಚಲೋ ನಡೆಸಿ, ವಿಧಾನಮಂಡಲ ಅಧಿವೇಶನದ ವೇಳೆ ಮುಖ್ಯಮಂತ್ರಿಗಳಿಗೆ ಮುಷ್ಕರದ ನೋಟಿಸ್‌ ನೀಡುತ್ತೇವೆ. ಆ ನಂತರವೂ ಬೇಡಿಕೆ ಈಡೇರಿಸದಿದ್ದರೆ ಮುಷ್ಕರ ನಡೆಸುವುದು ಶತಃಸಿದ್ಧ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಮುಷ್ಕರದಲ್ಲಿ ಭಾಗವಹಿಸಲಿದ್ದು, ಡಿಸೆಂಬರ್‌f 31ರಿಂದ 26 ಸಾವಿರ ಬಸ್‌ಗಳು ರಸ್ತೆಗೆ ಇಳಿಯುವುದಿಲ್ಲ,'' ಎಂದು ಹೇಳಿದರು.

 


ಬೆಂಗಳೂರು: ದೇಶಬಿಟ್ಟು ತೆರಳಿರುವ ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ವಿರುದ್ಧ ಗಂಭೀರ ಫಿಕ್ಸಿಂಗ್ ಆರೋಪಗಳನ್ನು ಮಾಡಿದ್ದಾರೆ.

ತಮ್ಮ ತಂಡ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಆಟಗಾರರ ಹರಾಜು ಪ್ರಕ್ರಿಯೆಯಲ್ಲೇ ಫಿಕ್ಸಿಂಗ್ ಮಾಡಿಕೊಳ್ಳುತ್ತಿದ್ದ ಶ್ರೀನಿವಾಸನ್, ಸಿಎಸ್‌ಕೆ ಪಂದ್ಯಗಳಿದ್ದಾಗ ತಂಡಕ್ಕೆ ಅನುಕೂಲ ಮಾಡಿಕೊಡಲೆಂದು ಚೆನ್ನೈ ಮೂಲದ ಅಂಪೈರ್‌ಗಳನ್ನೇ ನೇಮಕ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.


ರಾಜ್ ಶರ್ಮಾ ಅವರ ಯೂಟ್ಯೂಬ್ ಚಾನಲ್‌ನ 'ಫಿಗರಿಂಗ್‌ ಔಟ್' ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಆಗ ಬಿಸಿಸಿಐ ಕಾರ್ಯದರ್ಶಿ ಆಗಿದ್ದ ಶ್ರೀನಿವಾಸನ್ ವಿರುದ್ಧ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಶ್ರೀನಿವಾಸನ್‌ಗೆ ಐಪಿಎಲ್ ಏಳಿಗೆಗಿಂತ ತಮ್ಮ ಮಾಲೀಕತ್ವದ ಸಿಎಸ್‌ಕೆ ತಂಡದ ಯಶಸ್ಸು ಮುಖ್ಯವಾಗಿತ್ತು. ಅದಕ್ಕಾಗಿ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದರು. ಚೆನ್ನೈ ಮೂಲದ ಅಂಪೈರ್‌ಗಳನ್ನೇ ಪಂದ್ಯಕ್ಕೆ ನಿಯೋಜಿಸುತ್ತಿದ್ದರು ಎಂದು ಮೋದಿ ಆರೋಪಿಸಿರುವುದಾಗಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.


'ಐಪಿಎಲ್ ಅನ್ನು ಶ್ರೀನಿವಾಸನ್ ಇಷ್ಟಪಡುತ್ತಿರಲಿಲ್ಲ. ಐಪಿಎಲ್ ಸಕ್ಸಸ್ ಆಗುತ್ತದೆ ಎಂದು ಅವರು ಭಾವಿಸಿರಲಿಲ್ಲ. ಆದರೆ, ಅದು ಸಕ್ಸಸ್ ಆದಾಗ ಎಲ್ಲರೂ ಲಾಭ ಪಡೆಯಲು ಶುರು ಮಾಡಿದರು. ಬಿಸಿಸಿಐ ಸದಸ್ಯ ಮತ್ತು ಕಾರ್ಯದರ್ಶಿಯಾಗಿದ್ದ ಶ್ರೀನಿವಾಸನ್, ನನ್ನ ದೊಡ್ಡ ವಿರೋಧಿಯಾಗಿದ್ದರು. ಅಂಪೈರ್ ಫಿಕ್ಸಿಂಗ್‌ ಸೇರಿದಂತೆ ಹಲವು ಅಕ್ರಮ ಎಸಗಿದರು' ಎಂದು ಆರೋಪಿಸಿದ್ದಾರೆ.

ಫ್ರಂಟಾಫ್‌ಗೆ ಬಿಡ್ ಮಾಡದಂತೆ ಫ್ರಾಂಚೈಸಿಗಳಿಗೆ ಸಂದೇಶ


2009ರ ಐಪಿಎಲ್ ಆವೃತ್ತಿಯಲ್ಲಿ ಪ್ರಿಂಟಾಪ್ ಅವರಿಗೆ ಬಿಡ್ ಮಾಡದಂತೆ ಶ್ರೀನಿವಾಸನ್ ಅವರು ಇತರೆ ಫ್ರಾಂಚೈಸಿಗಳಿಗೆ ಹೇಳಿದ್ದರು. ಈ ಬಗ್ಗೆ ವಿಚಾರಿಸಿದಾಗ, ಹೌದು ನಾನು ಸಂದೇಶ ಕಳುಹಿಸಿದ್ದು ನಿಜ. ಕ್ಲಿಂಟಾಫ್ ನನ್ನ ತಂಡಕ್ಕೆ ಬೇಕಿತ್ತು ಎಂಬುದಾಗಿ ಶ್ರೀನಿವಾಸನ್‌ ಹೇಳಿದ್ದರು ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.


2013ರ ಐಪಿಎಲ್ ಫಿಕ್ಸಿಂಗ್ ಹಗರಣ

2013ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗಂಭೀರ ಸ್ಪಾಟ್ ಫಿಕ್ಸಿಂಗ್‌ ಹಗರಣದ ಆರೋಪ ಕೇಳಿಬಂದಿತ್ತು. ಇದಕ್ಕಾಗಿ ಫ್ರಾಂಚೈಸಿಯ ಉನ್ನತ ಅಧಿಕಾರಿ ಮತ್ತು ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರನ್ನು ಫೋರ್ಜರಿ ಮತ್ತು ವಂಚನೆ ಆರೋಪದ ಮೇಲೆ ಬಂಧಿಸಲಾಗಿತ್ತು. ಬುಕ್ಕಿಗಳ ಜೊತೆ ಸಂಪರ್ಕ ಹೊಂದಿದ್ದ ಬಂಧಿತ ವೀರೇಂದ್ರ 'ವಿಂದೂ' ದಾರಾ ಸಿಂಗ್ ಅವರೊಂದಿಗೆ ಗುರುನಾಥ್ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿತ್ತು.

 


ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಭರವಸಾ ಕೋಶ, ರಾಜ್ಯಶಾಸ್ತ್ರ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ನ. 26 ರಂದು ಸಂವಿಧಾನ ದಿನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ .ಟಿ ವಹಿಸಿದರು. ಕಾರ್ಯಕ್ರಮದ ಅತಿಥಿಯಾದ ವಕೀಲ ಚೇತನ್ ಕುತೂರ್ ಅವರು ದಿನ ನಿತ್ಯದ ಜೀವನದಲ್ಲಿ ಸಂವಿಧಾನದ ಪ್ರಾಮುಖ್ಯತೆಯನ್ನು ಬಹಳಷ್ಟಿದೆ ಎಂದು ಮಾತನಾಡಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕಿ ಶ್ರೀಮತಿ ಲತಾ ಬಿ. ಟಿ ಉಪಸ್ಥಿತಿಯಾಗಿದ್ದರು. ಕಾರ್ಯಕ್ರಮವನ್ನು ಸಂಖ್ಯಾ ನಿರೂಪಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸ್ವಾತಿ ಸ್ವಾಗತಿಸಿ. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಶ್ರೀಮತಿ ಆರತಿ ವಂದಿಸಿದರು.

ಸಂಸದ ಕ್ಯಾ. ಚೌಟ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಪರಿಸರ ಸಚಿವರ ಉತ್ತರ



ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 36.66 ಕಿಮೀ. ಕರಾವಳಿ ಪ್ರದೇಶದಲ್ಲಿ 17.74 ಕಿಮೀ. ವ್ಯಾಪ್ತಿಯಲ್ಲಿ ಕಡೆಲ್ಕೊರೆತ ಸಂಭವಿಸುತ್ತಿರುವುದಾಗಿ ಕೇಂದ್ರ ಪರಿಸರ ಖಾತೆ ಸಚಿವ ಕೀರ್ತಿವರ್ಧನ್‌ ಸಿಂಗ್‌ ಅವರು ಹೇಳಿದ್ದಾರೆ.


ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಸಂಸತ್‌ನ ಚಳಿಗಾಲದ ಅಧಿವೇಶದಲ್ಲಿ ಕೇಳಿದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿರುವ ಸಚಿವರು, ದಕ್ಷಿಣ ಕನ್ನಡದ ಸಮುದ್ರ ತೀರ ತೆಗದುಕೊಂಡರೆ ಶೇ.48.4ರಷ್ಟು ಭಾಗದಲ್ಲಿ ಸಮುದ್ರ ಕೊರೆತ ಉಂಟಾಗುತ್ತಿದೆ. ಭಾರತೀಯ ರಾಷ್ಟ್ರೀಯ ಸಮುದ್ರ ಮಾಹಿತಿ ಹಾಗೂ ಸೇವಾ ಸೆಂಟರ್‌((INCOIS) 1990ರಿಂದ 2018ರವರೆಗೆ ಸಂಗ್ರಹಿಸಿರುವ ಉಪಗ್ರಹ ಆಧಾರಿತ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಮುದ್ರ ತೀರದಲ್ಲಿ ಕಡಲ್ಕೊರೆತ ಪ್ರಮಾಣ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ ಕೇವಲ 8.02 ಕಿಮೀ. ದೂರ ಮಾತ್ರ ಯಾವುದೇ ಸವಕಳಿ ಸಂಭವಿಸಿದೆ ಸುರಕ್ಷಿತವಾಗಿದೆ. ಉಡುಪಿ ಜಿಲ್ಲೆಯಲ್ಲಿ100.71 ಕಿಮೀ. ಸಮುದ್ರ ತೀರದಲ್ಲಿ 34.96 ಕಿಮೀ. ಉದ್ದಕ್ಕೆ ಕಡಲ್ಕೊರೆತ ಉಂಟಾಗಿದೆ. ದಕ್ಷಿಣ ಕನ್ನಡಕ್ಕೆ ಹೋಲಿಸಿದರೆ, ಉಡುಪಿಯಲ್ಲಿ 40.97 ಕಿಮೀ. ತೀರ ಪ್ರದೇಶ ಕಡಲ್ಕೊರೆತ ಅಪಾಯಕ್ಕೆ ಬಾಧಿತವಾಗಿಲ್ಲ. ಹೀಗಿರುವಾಗ, ಉತ್ತರ ಕನ್ನಡ ಒಳಗೊಂಡಂತೆ ಕರ್ನಾಟಕದ 313 ಕಿಮೀ. ಕರಾವಳಿ ತೀರ ಪ್ರದೇಶದ ಪೈಕಿ ಒಟ್ಟು 74.34 ಕಿಮೀ. ತೀರವು 74.34 ಕಿಮೀ. ವ್ಯಾಪ್ತಿಯಲ್ಲಿ ಸವಕಳಿ ಉಂಟಾಗಿ ಒಟ್ಟು ತೀರ ಪ್ರದೇಶದ ಶೇ.23.7ರಷ್ಟು ಭಾಗವು ಕಡಲ್ಕೊರೆತದ ಹೊಡೆತಕ್ಕೆ ಸಿಲುಕಿರುವುದಾಗಿ ಸಚಿವರು ಅಂಕಿ-ಅಂಶಗಳ ಮೂಲಕ ವಿವರಿಸಿದ್ದಾರೆ.


ಕರ್ನಾಟಕದ ಕರಾವಳಿಯಲ್ಲಿ ಉಂಟಾಗುತ್ತಿರುವ ಕಡಲ್ಕೊರೆತ ತಡೆಯುವುದಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮ್ಯಾಂಗ್ರೋವ್‌ ಹಾಗೂ ಅರಣ್ಯೀಕರಣದ ಮೂಲಕ ಅದರಲ್ಲಿಯೂ 2023ರ ಕೇಂದ್ರ ಬಜೆಟ್‌ನಲ್ಲಿ ಮ್ಯಾಂಗ್ರೋವ್‌ ಬೆಳೆಯುವುದಕ್ಕೆ MISHTI ಎಂಬ ಯೋಜನೆ ಘೋಷಿಸಲಾಗಿತ್ತು. ಅಲ್ಲದೆ, ಕರಾವಳಿ ಪ್ರದೇದಲ್ಲಿ ವ್ಯಾಪಕವಾಗುತ್ತಿರುವ ಸಮುದ್ರ ಕೊರೆತ ತಡೆಗಟ್ಟುವುದಕ್ಕೆ ರಾಜ್ಯ ಸರಕಾರಕ್ಕೂ ಕೇಂದ್ರದಿಂದ ತಾಂತ್ರಿಕ ನೆರವು, ಅಗತ್ಯ ಸಲಹೆಗಳನ್ನು ನೀಡಲಾಗುತ್ತಿದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ. 


ದಕ್ಷಿಣ ಕನ್ನಡ ಜಿಲ್ಲೆಯು ಸೇರಿದಂತೆ ಕರಾವಳಿಯಲ್ಲಿ ಸಮುದ್ರ ಕೊರೆತ ಸೇರಿದಂತೆ ನಾನಾ ರೀತಿಯ ಪ್ರಾಕೃತಿಕ ವಿಕೋಪಗಳಿಂದ ಸಮುದ್ರದ ನೀರಿನ ಮಟ್ಟ ಜಾಸ್ತಿಯಾಗುತ್ತಿದೆಯೇ? ಈ ಬಗ್ಗೆ ವೈಜ್ಞಾನಿಕವಾಗಿ ಯಾವುದಾದರೂ ಅಧ್ಯಯನಗಳನ್ನು ನಡೆಸಲಾಗಿದೆಯೇ ಅಥವಾ ನಿರಂತರವಾಗಿ ಸಂಭವಿಸುತ್ತಿರುವ ಕಡಲ್ಕೊರೆತದಿಂದ ಕರಾವಳಿ ತೀರವನ್ನು ರಕ್ಷಿಸುವುದಕ್ಕೆ ಯಾವೆಲ್ಲ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಕ್ಯಾ. ಚೌಟ ಅವರು ಸಚಿವರಿಗೆ ತಮ್ಮ ಪ್ರಶ್ನೆಯಲ್ಲಿ ಕೇಳಿದ್ದರು.


ದಕ್ಷಿಣ ಕನ್ನಡ ಜಿಲ್ಲೆಯ ಅರ್ಧಕ್ಕಿಂತ ಹೆಚ್ಚು ಕರಾವಳಿ ಪ್ರದೇಶವು ಭೂ ಕ್ಷಯದ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಸಿಕ್ಕಿದ ಉತ್ತರದಿಂದ ಬೆಳಕಿಗೆ ಬಂದಿದೆ.

ಸಂಸದ ಕ್ಯಾ. ಚೌಟ ಅವರಿಂದ ಕೃಷಿ ಸಚಿವ ಶಿವರಾಜ್‌ ಚೌವಾಣ್‌ ಭೇಟಿ ಮಾಡಿ ಮನವಿ ಸಲ್ಲಿಕೆ



ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ ಎಲೆರೋಗ ಬಾಧಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌವಾಣ್‌ ಅವರನ್ನು ಭೇಟಿಯಾಗಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.


ಅಧಿವೇಶದ ಹಿನ್ನಲೆ ನವದೆಹಲಿಯಲ್ಲಿರುವ ಕ್ಯಾ. ಚೌಟ ಅವರು, ದಕ್ಷಿಣ ಕನ್ನಡದಲ್ಲಿ ಅಡಿಗೆ ಬೆಳೆಗಾರರನ್ನು ತೀವ್ರವಾಗಿ ಬಾಧಿಸಿರುವ ಅಡಿಕೆ ಎಲೆಚುಕ್ಕಿ ಹಾಗೂ ಹಳದಿ ಎಲೆರೋಗದ ಗಂಭೀರತೆಯನ್ನು ಕೃಷಿ ಸಚಿವರಿಗೆ ಮನವರಿಕೆ ಮಾಡಿದ್ದಾರೆ. ಸಂಸದರು ಇತ್ತೀಚೆಗಷ್ಟೇ ಎಲೆಚುಕ್ಕೆ ಹಾಗೂ ಹಳದಿ ಎಲೆರೋಗದಿಂದ ಸಂಕಷ್ಟದಲ್ಲಿರುವ ಅಡಿಕೆ ಕೃಷಿಕರ ನೆರವಿಗೆ ಧಾವಿಸುವಂತೆ ಕೋರಿ ಕೃಷಿ ಸಚಿವರು ಹಾಗೂ ವಾಣಿಜ್ಯ ಸಚಿವರಿಗೆ ಪತ್ರ ಬರೆದಿದ್ದರು. ಇದೀಗ ಕ್ಯಾ. ಚೌಟ ಅವರು ಖುದ್ದು ಕೃಷಿ ಸಚಿವರನ್ನು ಭೇಟಿ ಮಾಡಿ ದಕ್ಷಿಣ ಕನ್ನಡದಲ್ಲಿರುವ ಅಡಿಕೆ ಕೃಷಿಕರನ್ನು ಎಲೆಚುಕ್ಕೆ ಹಾಗೂ ಹಳದಿ ಎಳೆ ರೋಗದಿಂದ ಪಾರು ಮಾಡುವುದಕ್ಕೆ ಶಾಶ್ವತ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ.



ಅತಿವೃಷ್ಟಿ, ಪ್ರತಿಕೂಲ ಹವಾಗುಣ ಮುಂತಾದ ಕಾರಣಗಳಿಂದಾಗಿ ಅಡಿಕೆ ಬೆಳೆಗೆ ನಿರಂತರವಾಗಿ ರೋಗಬಾಧೆ ಕಾಣಿಸಿಕೊಂಡು ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದರಿಂದ ಅಡಿಕೆ ಕೃಷಿಕರ ಆದಾಯ ಕುಸಿದು ಆರ್ಥಿಕವಾದ ಸವಾಲುಗಳು ಎದುರಾಗುತ್ತಿರುವ ಬಗ್ಗೆ ಐಸಿಎಆರ್‌ ವರದಿ ಈಗಾಗಲೇ ಎಚ್ಚರಿಸಿದೆ. ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋಆಪರೇಟಿವ್ ಲಿ. ಮಾಹಿತಿ ಪ್ರಕಾರ, ದ.ಕ.ದಲ್ಲಿ ಸುಮಾರು 24 ಹೆಕ್ಟೇರ್‌ ಅಡಿಕೆ ಬೆಳೆ ಹಾನಿಗೀಡಾಗಿದೆ. ಅಲ್ಲದೆ, ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ಯಾನ್ಸರ್‌ ಸಂಶೋಧನೆಗೆ ಸಂಬಂಧಿಸಿದ ಐಎಆರ್‌ಸಿ ಸಂಸ್ಥೆ ಕೂಡ ಅಡಿಕೆಯನ್ನು ಕ್ಯಾನ್ಸರ್‌ಕಾರಕ ಎಂದಿರುವುದು ಎಂದು ಗುರುತಿಸಿರುವುದು ಕೂಡ ಬೆಳೆಗಾರರ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆಯಾಗಿದೆ. ಹೀಗಾಗಿ, ಸಂಕಷ್ಟದಲ್ಲಿರುವ ಜಿಲ್ಲೆಯ ಅಡಿಕೆ ಬೆಳೆಗಾರರ ರಕ್ಷಣೆಗೆ ಕೇಂದ್ರ ಸರ್ಕಾರ ಕೂಡಲೇ ಸ್ಪಂದಿಸುವಂತೆ ಕ್ಯಾ. ಚೌಟ ಮನವಿ ಮಾಡಿದ್ದಾರೆ.



ಕಾಫಿಯನ್ನು ಪರ್ಯಾಯ ಬೆಳೆಯಾಗಿ ಪ್ರೋತ್ಸಾಹಿಸಿ

ದಕ್ಷಿಣ ಕನ್ನಡದ ಹವಾಗುಣವು ಕಾಫಿ ಬೆಳೆಗೆ ಪೂರಕವಾಗಿದ್ದು, ಇಲ್ಲಿ ಕಾಫಿ ಕೃಷಿಗೆ ವಿಪುಲ ಅವಕಾಶಗಳಿವೆ. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ ಕೂಡ ಇದನ್ನು ಮಲೆನಾಡಿನಂತೆ ದ.ಕ.ದಲ್ಲಿಯ ಕಾಫಿ ಬೆಳೆಯನ್ನು ವಾಣಿಜ್ಯವಾಗಿ ಬೆಳೆಯುವುದಕ್ಕೆ ಇರುವ ಸಾಮರ್ಥ್ಯದ ಬಗ್ಗೆ ಹೇಳಿದೆ. ಆದರೆ, ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ಕಾಫಿ ಬೆಳೆಗೆ ಸಿಗುವ ಪ್ರೋತ್ಸಾಹ, ತಾಂತ್ರಿಕ ನೆರವು ಅಥವಾ ಕಾಫಿ ಬೆಂಬಲಿತ ಸಂಸ್ಥೆಗಳಿಂದ ಸಿಗುತ್ತಿಲ್ಲ. ಹೀಗಾಗಿ, ಕಾಫಿ ಬೋರ್ಡ್‌ ಮೂಲಕ ದಕ್ಷಿಣ ಕನ್ನಡ ಭಾಗದಲ್ಲಿಯೂ ಕಾಫಿ ಬೆಳೆಗಾರರನ್ನು ಉತ್ತೇಜಿಸುವುದಕ್ಕೆ ಸೂಕ್ತ ತಾಂತ್ರಿಕ ಮಾರ್ಗದರ್ಶನ, ಸಬ್ಸಿಡಿ, ಗುಣಮಟ್ಟದ ಸಸಿ ಒದಗಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿ ಸಚಿವರನ್ನು ಒತ್ತಾಯಿಸಿದ್ದಾರೆ.

 ಅಕ್ಟೋಬರ್ 27ರಂದು ನಡೆದ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆಯ ಅಂಕಗಳ ತಾತ್ಕಾಲಿಕ ಪಟ್ಟಿ ಪ್ರಕಟಗೊಂಡಿದೆ.



ಬೆಂಗಳೂರು: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅಕ್ಟೋಬರ್ 27ರಂದು ನಡೆದಿದ್ದ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳ ತಾತ್ಕಾಲಿಕ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಬುಧವಾರ ಪ್ರಕಟಿಸಿದೆ.


''ಫಲಿತಾಂಶದ ಜೊತೆಗೆ ಅಂತಿಮ ಕೀ ಉತ್ತರಗಳನ್ನೂ ಪ್ರಕಟಿಸಲಾಗಿದೆ. ತಾತ್ಕಾಲಿಕ ಅಂಕಪಟ್ಟಿಗೆ ಆಕ್ಷೇಪಣೆಗಳು ಇದ್ದರೆ ನವೆಂಬರ್ 28ರಂದು ಸಂಜೆ 4 ಗಂಟೆಯ ಒಳಗೆ ವೆಬ್​ಸೈಟ್​​ನಲ್ಲಿ ಒದಗಿಸಲಾದ ಲಿಂಕ್ ಮೂಲಕ ಸಲ್ಲಿಸಬಹುದು'' ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಿನಾಂಕ ವಿಸ್ತರಣೆ: ಬಿ.ಎಸ್.ಸಿ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್​​ಗಳಿಗೆ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಶುಲ್ಕ ಪಾವತಿಸಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ನವೆಂಬರ್ 28ರ ವರೆಗೆ ದಿನಾಂಕ ವಿಸ್ತರಿಸಲಾಗಿದೆ. ನವೆಂಬರ್ 29 ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ವಿವರಿಸಿದ್ದಾರೆ.



ಬೆಳ್ತಂಗಡಿ: ವೇಣೂರಿನ ಗೆಳೆಯನ ಮನೆಗೆ ಬಂದಿದ್ದ ಮೂವರು ಯುವಕರು ಬರ್ಕಜೆ ಎಂಬಲ್ಲಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಮೃತ ಯುವಕರು ಲಾರೆನ್ಸ್(21),ಸೂರಜ್ (19) ಹಾಗೂ ಜೈಸನ್ (19) ಎಂದು ಗುರುತಿಸಲಾಗಿದೆ. ವೇಣೂರು ಚರ್ಚ್‌ ನ ಕಾರ್ಯಕ್ರಮದ ಹಿನ್ನಲೆಯಲ್ಲಿ ಇವರು ಗೆಳೆಯನ ಮನೆಗೆ ಬಂದಿದ್ದರು ಎನ್ನಲಾಗಿದ್ದು, ಬಳಿಕ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಕಿಂಡಿ ಅಣೆಕಟ್ಟಿನ ಸಮೀಪ ಇವರು ಸ್ನಾನಕ್ಕೆ ಇಳಿದಿದ್ದು, ನದಿ ನೀರಿನಲ್ಲಿ ಸಿಲುಕಿ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕದಳದವರು ತೆರಳಿದ್ದು, ಸ್ಥಳೀಯರ ಸಹಕಾರದೊಂದಿಗೆ ಮೃತದೇಹಗಳನ್ನು ಮೇಲೆತ್ತಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



ಮನುಷ್ಯ ಸೇರಿದಂತೆ ಭೂಮಿಯಲ್ಲಿರುವ ಪ್ರತಿಯೊಂದು ಜೀವಿಯೂ ಸಹ ಆಹಾರ, ನೀರಿಲ್ಲದೆ ಕೆಲವು ದಿನಗಳ ಕಾಲ ಬದುಕಬಲ್ಲವು ಆದರೆ ಗಾಳಿಯಿಲ್ಲದೆ 20 ಸೆಕೆಂಡಿಗಿಂತ ಹೆಚ್ಚು ಕಾಲ ಜೀವಿಸಲು ಸಾಧ್ಯವಿಲ್ಲ. ಹಾಗಾಗಿ ಜೀವಿಗಳ ಉಳಿವಿಗೆ ಶುದ್ಧ ಗಾಳಿ ಅತ್ಯಗತ್ಯ. ಆದರೆ ಇಂದು ನಗರೀಕರಣ, ವಾಯು ಮಾಲಿನ್ಯ ಇತ್ಯಾದಿಗಳ ಕಾರಣದಿಂದಾಗಿ ಶುದ್ಧ ಗಾಳಿಯೇ ಇಲ್ಲದಂತಾಗಿದೆ. ಅದರಲ್ಲೂ ದೆಹಲಿಯ ವಾಯು ಮಾಲಿನ್ಯ ಅಪಾಯಕಾರಿ ಮಟ್ಟವನ್ನು ತಲುಪಿದ್ದು, ರಾಷ್ಟ್ರ ರಾಜಧಾನಿ ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳಲ್ಲಿ ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟವು ಕ್ಷೀಣಿಸುತ್ತಿದೆ. ಇವೆಲ್ಲದರ ನಡುವೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಶುದ್ಧ ಗಾಳಿ ಸಿಗುವ ನಗರಗಳು ಯಾವುವು ಎಂಬ ವರದಿಯನ್ನು ಪ್ರಕಟಿಸಿದ್ದು, ಈ ವರದಿಯ ಪ್ರಕಾರ ಪರಿಶುದ್ಧ ಗಾಳಿ ಸಿಗುವ ದೇಶದ 13 ನಗರಗಳ ಪೈಕಿ ನಮ್ಮ ರಾಜ್ಯದ 7 ನಗರಗಳಿಗೆ ಸ್ಥಾನ ದೊರಕಿದೆ. ಅವುಗಳು ಯಾವುವು ಎಂಬುದನ್ನು ನೋಡೋಣ. ರಾಷ್ಟ್ರ ರಾಜಧಾನಿ ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳು ವಾಯು ಮಾಲಿನ್ಯದಿಂದ ನಡುಗಿ ಹೋಗಿವೆ. ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟವು ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಕರ್ನಾಟಕದ 7 ನಗರಗಳು ಶುದ್ಧ ಗಾಳಿ ಸಿಗುವ ನಗರಗಳೆಂಬ ಸ್ಥಾನವನ್ನು ಪಡೆದುಕೊಂಡಿದೆ. ಹೌದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ ವರದಿಯಲ್ಲಿ ಉತ್ತಮ ಗುಣಮಟ್ಟದ ಹಾಗೂ ಶುದ್ಧ ಗಾಳಿಯನ್ನು ಹೊಂದಿರುವ ದೇಶದ 13 ನಗರಗಳ ಪೈಕಿ ನಮ್ಮ ಕರ್ನಾಟಕದ 7 ನಗರಗಳು ಸ್ಥಾನವನ್ನು ಪಡೆದುಕೊಂಡಿದೆ. ಗಾರ್ಡನ್‌ ಸಿಟಿ ಬೆಂಗಳೂರಿಗೆ ಈ ಪೈಕಿ ಸ್ಥಾನ ಸಿಗದಿದ್ದರೂ ಕರ್ನಾಟಕದ ಚಾಮರಾಜನಗರ, ಬಾಗಲಕೋಟೆ, ಹಾವೇರಿ, ಕೋಲಾರ, ಮಡಿಕೇರಿ, ಮಂಗಳೂರು ಮತ್ತು ವಿಜಯಪುರ ಈ ಏಳು ನಗರಗಳು ಶುದ್ಧ ಗಾಳಿ ಹೊಂದಿರುವ ನಗರಗಳೆಂಬ ಬಿರುದನ್ನು ಪಡೆದುಕೊಂಡಿದೆ.



ಬೆಂಗಳೂರು: ಕಾಳೇನ ಅಗ್ರಹಾರದಿಂದ (ಗೊಟ್ಟಿಗೆರೆ) ನಾಗವಾರದವರೆಗಿನ 21.26 ಕಿಮೀ ಉದ್ದದ ಎತ್ತರಿಸಿದ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಡಿಸೆಂಬರ್ 2025 ರ ವೇಳೆಗೆ ಸಂಚಾರಕ್ಕೆ ಮುಕ್ತವಾಗಲಿದೆ. ಮುಂದಿನ ವರ್ಷದ ಮಧ್ಯಭಾಗದಲ್ಲಿ ಬಿಇಎಂಎಲ್ ಲಿಮಿಟೆಡ್‌ನಿಂದ ಮೊದಲ ರೈಲನ್ನು ಹಸ್ತಾಂತರಿಸಲಾಗುತ್ತಿದ್ದು, ನಿಗದಿತ ಗಡುವಿನಲ್ಲಿ ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ತಾವರೆಕೆರೆ-ಕಾಳೇನ ಅಗ್ರಹಾರ ನಡುವಿನ 7.5 ಕಿ. ಮೀ. ಎತ್ತರಿಸಿದ ಮಾರ್ಗದಲ್ಲಿ 6 ನಿಲ್ದಾಣಗಳ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ. ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಮಾತನಾಡಿದ ಹಿರಿಯ ಮೆಟ್ರೋ ಅಧಿಕಾರಿಯೊಬ್ಬರು, ಮುಂದಿನ ವರ್ಷದ ಜೂನ್ ವೇಳೆಗೆ BEML ಕಂಪನಿ 53 ಸೆಟ್‌ ರೈಲುಗಳನ್ನು ನೀಡಬೇಕಿದೆ. ಜುಲೈ ವೇಳೆಗೆ ಮತ್ತೊಂದು ಸೆಟ್‌ ಹಸ್ತಾಂತರವಾಗುವ ನಿರೀಕ್ಷೆ ಇದೆ. ಡಿಸೆಂಬರ್ ವೇಳೆಗೆ ಎರಡು ಸೆಟ್‌ ಸಂಪೂರ್ಣವಾಗಿ ಕೈ ಸೇರಲಿದ್ದು, ಡಿಸೆಂಬರ್‌ನಲ್ಲಿ ಮಾರ್ಗದ ಉದ್ಘಾಟನೆ ವೇಳೆಗೆ 9-10 ಸೆಟ್ ರೈಲುಗಳು ಸಿದ್ಧವಾಗಿರಲಿದೆ ಎಂದು ತಿಳಿಸಿದರು.

ತಾವರಕೆರೆ, ಜಯದೇವ ಇಂಟರ್‌ಚೇಂಜ್ ನಿಲ್ದಾಣ, ಜೆಪಿ ನಗರ IVನೇ ಹಂತ, ಐಐಎಂಬಿ, ಹುಳಿಮಾವು ಮತ್ತು ಕಾಳೇನ ಅಗ್ರಹಾರ ನಿಲ್ದಾಣಗಳು ಈ ಮಾರ್ಗದಲ್ಲಿದ್ದು, ರೈಲು ನಿಲ್ಲುವ ವಯಾಡಕ್ಟ್ ಬ್ರಿಡ್ಜ್ ಸಂಪೂರ್ಣ ಸಿದ್ಧವಾಗಿದೆ. ರೈಲು ಹಳಿ ಹಾಕುವ ಕಾರ್ಯ ಶೇ.70 ರಷ್ಟು ಪ್ರಗತಿಯಲ್ಲಿದೆ ಎಂದು ತಿಳಿಸಿದರು. 4 ನಿಲ್ದಾಣಗಳಿಗೆ ಆರ್ಕಿಟೆಕ್ಚರ್ ಅಂತಿಮ ರೂಪ ನೀಡಲಾಗುತ್ತಿದೆ. ಜೆ. ಪಿ. ನಗರ ನಿಲ್ದಾಣ ಮೆಟ್ರೋ ಹಂತ-3ರ ವ್ಯಾಪ್ತಿಗೂ ಒಳಪಡಲಿದ್ದು, ಆ ಭಾಗ ಮುಗಿದಿದೆ. ಮಾರ್ಚ್ 2025ಕ್ಕೆ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಕಾಳೇನ ಅಗ್ರಹಾರದಲ್ಲಿ ಪ್ಲಾಟ್‌ಫಾರ್ಮ್‌ನ 50ರಷ್ಟು ಕಾಮಗಾರಿ ಮುಗಿದಿದ್ದು, ಬಲಭಾಗದಲ್ಲಿ ಇನ್ನೂ ಕಾಮಗಾರಿ ನಡೆಯಬೇಕಿದೆ. ಗುಲಾಬಿ ಮಾರ್ಗದ ರೈಲುಗಳು ಕೊತ್ತನೂರು ಡಿಪೋದಿಂದ ಸಂಚಾರ ನಡೆಸಲಿವೆ. ಈ ಡಿಪೋದ ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಕಾಳೇನ ಅಗ್ರಹಾರದಲ್ಲಿ ಪ್ಲಾಟ್‌ಫಾರ್ಮ್‌ನ 50ರಷ್ಟು ಕಾಮಗಾರಿ ಮುಗಿದಿದ್ದು, ಬಲಭಾಗದಲ್ಲಿ ಇನ್ನೂ ಕಾಮಗಾರಿ ನಡೆಯಬೇಕಿದೆ. ಕೊತ್ತನೂರು ಡಿಪೋದ ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇಲ್ಲಿಂದಲೇ ಗುಲಾಬಿ ಮಾರ್ಗದಲ್ಲಿ ರೈಲುಗಳು ಹೊರಡಲಿವೆ. BMRCL ಮಾರ್ಚ್ 2025 ರೊಳಗೆ ಎಲ್ಲಾ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಸಿಗ್ನಲಿಂಗ್, ಟೆಲಿ ಕಮ್ಯನಿಕೇಶನ್ ಮುಂತಾದ ಕಾಮಗಾರಿಗಳನ್ನು ಬಳಿಕ ಕೈಗೊಳ್ಳಲಾಗುತ್ತದೆ ಎಂದು ಅವರು ವಿವರಿಸಿದರು.

 


ಹಸಿರು ಎಲೆ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು ಎಂಬುದು ನಿಮಗೆ ತಿಳಿದಿರಬಹುದು. ನಿಯಮಿತವಾಗಿ ನಿಮ್ಮ ಆಹಾರದ ಭಾಗವಾಗಿ ತರಕಾರಿಯನ್ನು ಸೇವನೆ ಮಾಡುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಹಸಿರು ಎಲೆ ತರಕಾರಿಗಳ ಸೇವನೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಹಸಿರು ತರಕಾರಿಗಳಿಗೆ ನಮ್ಮ ಜೀವನಶೈಲಿಯನ್ನು ಬದಲಾಯಿಸುವ ಸಾಮರ್ಥ್ಯವಿದೆ ಏಕೆಂದರೆ ಅವುಗಳಲ್ಲಿ ಕೊಬ್ಬಿನ ಅಂಶ ಕಡಿಮೆ ಮತ್ತು ಪ್ರೋಟೀನ್ ಮತ್ತು ಖನಿಜ ಲವಣಗಳು ಹೆಚ್ಚಾಗಿರುತ್ತವೆ ಎಂದು ವೈದ್ಯರು ಹೇಳುತ್ತಾರೆ. ಈಗ ಚಳಿಗಾಲವಾಗಿರುವುದರಿಂದ, ವಿವಿಧ ರೀತಿಯ ಸೊಪ್ಪು ತರಕಾರಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಜನರು ತಮ್ಮ ಆದ್ಯತೆಗೆ ಅನುಗುಣವಾಗಿ ತರಕಾರಿಗಳನ್ನು ಆಯ್ಕೆ ಮಾಡುತ್ತಾರೆ. ಅದರಲ್ಲಿಯೂ ಹೆಚ್ಚು ತರಕಾರಿ ಸೇವನೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ ಇವುಗಳಿಂದ ಕೆಲವು ಅಡ್ಡಪರಿಣಾಮಗಳು ಸಹ ಇವೆ ಎಂದರೆ ನಂಬುತ್ತೀರಾ? ಹೌದು, ಅತಿಯಾದರೆ ಅಮೃತವೂ ವಿಷ ಎಂಬ ಮಾತನ್ನು ನೀವು ಕೇಳಿರಬಹುದು. ಅದು ಈ ವಿಷಯದಲ್ಲಿ ನಿಜ. ಸಾಮಾನ್ಯವಾಗಿ ಚಳಿಗಾಲದಲ್ಲಿ ಕೆಲವು ಸೊಪ್ಪು ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಸೊಪ್ಪು ತರಕಾರಿಗಳನ್ನು ತಿನ್ನುವುದು ಹಾನಿಕಾರಕ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ವಿಶೇಷವಾಗಿ ಕೆಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ಇದು ಅನೇಕ ರೀತಿಯ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಈ ಸೊಪ್ಪನ್ನು ಅತಿಯಾಗಿ ತಿನ್ನುವುದರಿಂದ ಅತಿಸಾರ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ತರಕಾರಿಗಳಲ್ಲಿನ ಫೈಬರ್ ಅಂಶವನ್ನು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಇದು ಗ್ಯಾಸ್, ಉಬ್ಬರ ಮತ್ತು ಸೆಳೆತದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಯಾರಿಗಾದರೂ ಗ್ಯಾಸ್ ಸಂಬಂಧಿತ ಸಮಸ್ಯೆಗಳಿದ್ದರೆ ಈ ಸಮಯದಲ್ಲಿ ತರಕಾರಿಗಳನ್ನು ಹೆಚ್ಚು ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಎಲೆ ತರಕಾರಿಗಳಲ್ಲಿ ಫೋಲೇಟ್ ಅಧಿಕವಾಗಿರುತ್ತದೆ. ಇದು ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಅಲ್ಲದೆ, ಅಲರ್ಜಿ ಸಮಸ್ಯೆ ಇರುವವರು ಮತ್ತು ಗರ್ಭಿಣಿಯರು ಚಳಿಗಾಲದಲ್ಲಿ ಸೊಪ್ಪು ತರಕಾರಿಗಳನ್ನು ಹೆಚ್ಚು ತಿನ್ನಬಾರದು. ಕೀಲು ನೋವು ಇರುವವರು ಸೊಪ್ಪುಗಳಲ್ಲಿ ಆಕ್ಸಲೇಟ್ಸ್ ಎಂಬ ಸಂಯುಕ್ತವನ್ನು ಹೊಂದಿರುವುದರಿಂದ ಎಲೆ ತರಕಾರಿಗಳನ್ನು ಹೆಚ್ಚು ತಿನ್ನಬಾರದು. ಇದು ಸಮಸ್ಯೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ.



ನವದೆಹಲಿ:ಭಾರತದ ನಂಬರ್ ಒನ್ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ರಫ್ತು ವಿಚಾರದಲ್ಲಿ ಹೊಸ ಮೈಲಿಗಲ್ಲು ಮುಟ್ಟಿದೆ. ಮಾರುತಿ ಸುಜುಕಿ ವಿದೇಶಕ್ಕೆ ರಫ್ತು ಮಾಡಿದ ವಾಹನಗಳ ಸಂಖ್ಯೆ 30 ಲಕ್ಷ ದಾಟಿದೆ. ಮೊನ್ನೆಯಷ್ಟೇ ಗುಜರಾತ್​ನ ಪಿಪವಾವ್ ಪೋರ್ಟ್​ನಿಂದ ಮಾರುತಿ ಸೆಲೆರಿಯೋ, ಫ್ರಾಂಕ್ಸ್ ಜಿಜ್ನಿ, ಬಲೇನೋ, ಸಿಯಾಜ್, ಡಿಜೈರ್ ಮತ್ತು ಎಸ್ ಪ್ರೆಸ್ಸೋ ಮಾಡಲ್​ನ 1,053 ಕಾರುಗಳನ್ನು ಬೇರೆ ದೇಶಗಳಿಗೆ ಕಳುಹಿಸಲಾಗಿದೆ. ಇದರೊಂದಿಗೆ ಒಟ್ಟಾರೆ ರಫ್ತಾಗಿರುವ ಮಾರುತಿ ಕಾರುಗಳ ಸಂಖ್ಯೆ 30 ಲಕ್ಷ ಗಡಿ ದಾಟಿದೆ. ಈ ರಫ್ತು ಮೈಲಿಗಲ್ಲು ಮುಟ್ಟಿದ ಭಾರತದ ಮೊದಲ ವಾಹನ ಕಂಪನಿಯಾಗಿದೆ ಮಾರುತಿ ಸುಜುಕಿ. ಭಾರತದ ಮಾರುತಿ ಉದ್ಯೋಗ್ ಮತ್ತು ಜಪಾನ್​ನ ಸುಜುಕಿ ಕಾರ್ಪೊರೇಶನ್ ಸಂಸ್ಥೆಗಳು ಜಂಟಿಯಾಗಿ ಸೇರಿ ನಡೆಸುತ್ತಿರುವ ಸಂಸ್ಥೆ ಮಾರುತಿ ಸುಜುಕಿ. 1987ರಲ್ಲಿ ಹಂಗೆರಿಗೆ 500 ಕಾರುಗಳನ್ನು ಕಳುಹಿಸುವ ಮೂಲಕ ಮಾರುತಿ ಸುಜುಕಿಯ ರಫ್ತು ಪ್ರಯಾಣ ಆರಂಭವಾಗಿತ್ತು. 2012-13ರಲ್ಲಿ 10 ಲಕ್ಷ ರಫ್ತು ಮೈಲಿಗಲ್ಲು ಮುಟ್ಟಿತು. ಇದಾಗಲು 25 ವರ್ಷ ಬೇಕಾಯಿತು. ಮತ್ತಷ್ಟು 10 ಲಕ್ಷ ಸಂಖ್ಯೆ ಮುಟ್ಟಲು 9 ವರ್ಷವಾಯಿತು. 20 ಲಕ್ಷದಿಂದ 30 ಲಕ್ಷ ಸಂಖ್ಯೆ ತಲುಪಲು 4 ವರ್ಷಕ್ಕಿಂತ ಕಡಿಮೆ ಅವಧಿ ಆಗಿದೆ. ಭಾರತದ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಮುಂಚೂಣಿಯಲ್ಲಿದೆ. ರಫ್ತು ಮಾರುಕಟ್ಟೆಯಲ್ಲೂ ನಂಬರ್ ಒನ್ ಎನಿಸಿದೆ. ಪ್ಯಾಸೆಂಜರ್ ವಾಹನಗಳಲ್ಲಿ ಶೇ. 40ರಷ್ಟು ರಫ್ತು ಮಾರುತಿ ಸುಜುಕಿಯಿಂದಲೇ ಆಗುತ್ತದೆ. ಅಕ್ಟೋಬರ್ ತಿಂಗಳಲ್ಲಿ 33,168 ಕಾರುಗಳನ್ನು ಅದು ರಫ್ತು ಮಾಡಿ ಹೊಸ ದಾಖಲೆ ಮಾಡಿತ್ತು. ಸೌತ್ ಕೊರಿಯಾ ಮೂಲದ ಕಿಯಾ ಸಂಸ್ಥೆಯ ಭಾರತೀಯ ಘಟಕವು ಒಂದು ಲಕ್ಷ ಸಿಕೆಡಿ ಕಾರುಗಳನ್ನು ರಫ್ತು ಮಾಡಿದೆ. ಸಿಕೆಡಿ ಎಂದರೆ ಕಂಪ್ಲೀಟ್ಲಿ ನಾಕ್ಡ್ ಡೌನ್. ಅಂದರೆ, ಅಸೆಂಬ್ಲಿಂಗ್​ಗೆ ಸಿದ್ಧವಾಗಿರುವ ಬಿಡಿಭಾಗಗಳನ್ನು ಹೊಂದಿರುವ ಘಟಕಗಳಿವು. ಈ ಭಾಗಗಳನ್ನು ಅಸೆಂಬ್ಲಿಂಗ್ ಮಾಡಿ ಪೂರ್ಣ ಕಾರನ್ನು ಸಿದ್ಧಪಡಿಸಬಹುದು. ಇದರ ಸಾಗಣೆ ಸುಲಭವಾಗುತ್ತದೆ. ತೆರಿಗೆ ಉಳಿಸಬಹುದು. ಹೀಗಾಗಿ, ಕಾರುಗಳನ್ನು ಸಿಕೆಡಿ ಘಟಕಗಳಾಗಿ ರಫ್ತು ಮಾಡಲಾಗುತ್ತದೆ.



 ನವದೆಹಲಿ: ದೇಶದಲ್ಲಿ ವಕ್ಸ್ ಮಂಡಳಿಗಳ 58,929 ಆಸ್ತಿಗಳ ಅತಿಕ್ರಮವಾಗಿರುವ ಆರೋಪ ಕೇಳಿಬಂದಿದೆ. ಇದರಲ್ಲಿ ಕರ್ನಾಟಕದ 869 ಆಸ್ತಿಗಳೂ ಸೇರಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಲೋಕಸಭೆಯಲ್ಲಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರೆಣ್ ರಿಜಿಜು, ಕಾಲ ಕಾಲಕ್ಕೆ ವಕ್ಸ್‌ ಆಸ್ತಿಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಕೇಂದ್ರೀಯ ವಕ್ಸ್ ಪರಿಷತ್‌ಗೆ ಬಂದಿವೆ. ಅವುಗಳನ್ನು ಆಯಾ ಸಂದರ್ಭದಲ್ಲೇ ರಾಜ್ಯ ವಕ್ಸ್ ಮಂಡಳಿ ಮತ್ತು ಸರ್ಕಾರಕ್ಕೆ ಕಳುಹಿಸಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದಿದ್ದಾರೆ


WAMSI(ಭಾರತದ ವಕ್ಸ್ ಆಸ್ತಿ ನಿರ್ವಹಣಾ ವ್ಯವಸ್ಥೆ)ಯಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, 58,929 ವಕ್ಸ್ ಆಸ್ತಿಗಳು ಅತಿಕ್ರಮಣವನ್ನು ಎದುರಿಸುತ್ತಿವೆ, ಈ ಪೈಕಿ ಕರ್ನಾಟಕದ 869 ಆಸ್ತಿಗಳೂ ಸೇರಿವೆ.


ವಕ್ಸ್ ಕಾಯ್ದೆಯ ಸೆಕ್ಷನ್ 54 ಮತ್ತು 55ರ ಪ್ರಕಾರ, ರಾಜ್ಯ ವಕ್ಸ್ ಮಂಡಳಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ವಕ್ಸ್ ಆಸ್ತಿಗಳ ಅನಧಿಕೃತ ಒತ್ತುವರಿ ಮತ್ತು ಅತಿಕ್ರಮಣದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವನ್ನು ಹೊಂದಿದ್ದಾರೆ ಎಂದು ರಿಜಿಜು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ವಕ್ಸ್ ಕಾಯ್ದೆಯ ಸೆಕ್ಷನ್ 56ರ ಅಡಿಯಲ್ಲಿ ವಕ್ಸ್ ಆಸ್ತಿಗಳ ಲೀಸ್ ರೂಲ್ಸ್ 2014 ಅನ್ನು ರೂಪಿಸಿದೆ. ಇದು ವಕ್ಸ್ ಆಸ್ತಿಗಳನ್ನು ಗುತ್ತಿಗೆಗೆ ನೀಡಲು ರಾಜ್ಯ ವಕ್ಸ್ ಮಂಡಳಿಗಳಿಗೆ ಅಧಿಕಾರ ನೀಡುತ್ತದೆ ಎಂದು ರಿಜಿಜು ಹೇಳಿದ್ದಾರೆ.



 ಮುಂಬೈ: 'ಮುಂದಿನ ಮುಖ್ಯಮಂತ್ರಿ ಆಯ್ಕೆಯಲ್ಲಿ ಬಿಜೆಪಿ ನಾಯಕತ್ವದ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಅಲ್ಲದೆ ಸಿಎಂ ಆಯ್ಕೆ ವಿಚಾರದಲ್ಲಿ ಅಡ್ಡಿಯಾಗುವುದಿಲ್ಲ' ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಬುಧವಾರ (ಇಂದು) ಸ್ಪಷ್ಟಪಡಿಸಿದ್ದಾರೆ.

ಠಾಣೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ ಶಿಂದೆ, 'ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಅಲ್ಲದೆ ಮೋದಿ, ಶಾ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂಬ ಭರವಸೆ ಕೊಟ್ಟಿದ್ದೇನೆ' ಎಂದು ತಿಳಿಸಿದ್ದಾರೆ.


'ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಬಿಜೆಪಿಯ ನಿರ್ಧಾರವನ್ನು ಶಿವಸೇನಾ ಬೆಂಬಲಿಸಲಿದೆ. ನಾವು ಅಡ್ಡಗಾಲು ಹಾಕುವುದಿಲ್ಲ' ಎಂದು ಅವರು ಹೇಳಿದ್ದಾರೆ.


ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 'ಮಹಾಯುತಿ' ಮೈತ್ರಿ ಭರ್ಜರಿ ಜಯ ಗಳಿಸಿದರೂ ಎರಡನೇ ಅವಧಿಗೆ ಸಿಎಂ ಸ್ಥಾನ ಸಿಗದಿರುವುದಕ್ಕೆ ಏಕನಾಥ ಶಿಂದೆ ನಿರಾಶೆಗೊಂಡಿದ್ದಾರೆ ಎಂದು ವರದಿಯಾಗಿತ್ತು.

ಆದರೆ ವದಂತಿಗಳನ್ನು ತಳ್ಳಿ ಹಾಕಿರುವ ಶಿಂದೆ, 'ಯಾರೂ ಅಸಮಾಧಾನಗೊಂಡಿಲ್ಲ. ನಾವೆಲ್ಲರೂ ಮಹಾಯುತಿ ಮೈತ್ರಿಕೂಟದ ಭಾಗವಾಗಿ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ' ಎಂದು ತಿಳಿಸಿದ್ದಾರೆ.


ಇತ್ತೀಚಿಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಯು ಪ್ರಚಂಡ ಗೆಲುವು ಸಾಧಿಸಿತ್ತು. 288 ಸದಸ್ಯ ಬಲದ ಮಹಾರಾಷ್ಟ್ರದಲ್ಲಿ 230 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿದಿತ್ತು. ಮತ್ತೊಂದೆಡೆ ಮಹಾ ವಿಕಾಸ ಅಘಾಡಿ (ಎಂವಿಎ) ಕೇವಲ 46 ಸ್ಥಾನಗಳಲ್ಲಷ್ಟೇ ಜಯಿಸಿತ್ತು.

 


ಶಿವಮೊಗ್ಗ: ಸಂವಿಧಾನವನ್ನು ನಾವು ಗೌರವಿಸಬೇಕು. ನಮ್ಮನ್ನು ಗೌರವಿಸುವ ಸಂವಿಧಾನ ಬೇಕು ಎಂಬ ಪೇಜಾವರ ಸ್ವಾಮೀಜಿಯ ಮಾತು ಸಲ್ಲ.

ಪೇಜಾವರ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಿಸಿದ್ದಾರೆ.

ಸಂವಿಧಾನ ದಿನದ ಅಂಗವಾಗಿ ಒಡನಾಟ ಸಂಸ್ಥೆ ವತಿಯಿಂದ ಸಹ್ಯಾದ್ರಿ ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ 'ಪ್ರಜಾಪ್ರಭುತ್ವ, ಮಾಧ್ಯಮ ಮತ್ತು ನಾವು' ವಿಷಯದ ಕುರಿತು ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಪೇಜಾವರ ಸ್ವಾಮೀಜಿ ಬಯಸಿರುವ ಸಂವಿಧಾನ ಮನುಸ್ಮೃತಿ. ಡಾ.ಅಂಬೇಡ್ಕರ್ ರಚಿಸಿದ್ದ ಸಂವಿಧಾನವನ್ನು ಮೊದಲ ಬಾರಿಗೆ ಆರೆಸ್ಸೆಸ್ ವಿರೋಧಿಸಿತ್ತು.

ಈಗ ಸಂವಿಧಾನವನ್ನು ಬದಲಾವಣೆ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಅದನ್ನು ದುರ್ಬಲ ಮಾಡುವ ಪ್ರಯತ್ನ ನಡೆದಿದೆ. ಸಂವಿಧಾನದ ರಕ್ಷಕರಾದ ರಾಜ್ಯಪಾಲರು ಈಗ ಏನು ಮಾಡುತ್ತಿದ್ದಾರೆ. ಪೇಜಾವರ

ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತು ಎಂದವರು ಹೇಳಿದರು. ಒಬ್ಬ ವ್ಯಕ್ತಿಗೆ ಇರುವಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯ ಮಾಧ್ಯಮಗಳಿಗೂ ಇವೆ.

ಈಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೀರಿ ಕಾರ್ಯನಿರ್ವಹಿಸಿದ ಪರಿಣಾಮ ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್ ಗಳು ಬರುತ್ತಿವೆ.

ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಅನೇಕರು ಹೇಳುವುದುಂಟು. ಆದರೆ ಈ ಸಂಗತಿ ಸಂವಿಧಾನದಲ್ಲಿ ಉಲ್ಲೇಖವೇ ಆಗಿಲ್ಲ. ಭ್ರಷ್ಟತೆ ಎಂಬುದು ಸಮಾಜದ ಎಲ್ಲ ಹಂತಗಳಲ್ಲಿ ಬೇರು ಬಿಟ್ಟಿದೆ. ಅದಕ್ಕೆ ಮಾಧ್ಯಮವೂ ಹೊರತಾಗಿಲ್ಲ. ಎಲ್ಲವೂ ವಿಫಲವಾಗಿರುವಾಗ ಜನರು ಈಗ ಮಾಧ್ಯಮಗಳತ್ತ ನೋಡುತ್ತಿದ್ದಾರಷ್ಟೇ ಎಂದರು.

ಸಂವಿಧಾನ ವಿರೋಧಿ ಹೇಳಿಕೆ ನೀಡುವವರ ವಿರುದ್ಧ ಧ್ವನಿ ಎತ್ತಬೇಕಾದ ಪ್ರಗತಿಪರರು ದಣಿದಿದ್ದಾರೆ ಎಂದೇ ನನ್ನ ಭಾವನೆ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಸಿಎಂ ಮನೆ ಎದುರು ಕಾದು ಬೇರೆಯವರಿಂದ ಪ್ರಭಾವ ಬೀರಿಸಿ ಅಧಿಕಾರ ಪಡೆದ ಪ್ರಗತಿಪರರು, ಈಗ ನಾವು ನಿಷ್ಪಕ್ಷವಾಗಿರಬೇಕೆಂದು ಭಾವಿಸಿದಂತಿದೆ. ಹೀಗಾಗಿ ಪ್ರತಿರೋಧ ತೋರುತ್ತಿಲ್ಲ ಎಂದರು.

ಪತ್ರಕರ್ತರಾದ ಸತೀಶ್ ಜಿ.ಟಿ ಹಾಗೂ ಬಿ.ಎಸ್.ಅಂಜುಂ ಪ್ರತಿಕ್ರಿಯೆ ನೀಡಿದರು. ಫ್ರಾನ್ಸಿಸ್ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.

ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಕಾಲೇಜಿನ ಪ್ರಾಚಾರ್ಯ ಟಿ.ಅವಿನಾಶ್, ಒಡನಾಟ ಬಳಗದ ಅಕ್ಷತಾ ಹುಂಚದಕಟ್ಟೆ, ರೈತ ನಾಯಕರಾದ ಕೆ.ಟಿ.ಗಂಗಾಧರ, ಎಚ್.ಆರ್.ಬಸವರಾಜಪ್ಪ, ದಲಿತ ಸಂಘರ್ಷ ಸಮಿತಿಯ ಗುರುಮೂರ್ತಿ, ಅಂಕಣಕಾರ ಬಿ.ಚಂದ್ರೇಗೌಡ ಉಪಸ್ಥಿತರಿದ್ದರು.

 


ಲಖನೌ(ಉತ್ತರ ಪ್ರದೇಶ): ಸಂಭಲ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲು ತೂರಾಟಗಾರರ ಪೋಸ್ಟರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲು ಸರ್ಕಾರ ಮುಂದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾನುವಾರ ಸಂಭಲ್‌ನ ಕೋಟ್ ಗರ್ವಿ ಪ್ರದೇಶದಲ್ಲಿರುವ ಜಾಮಾ ಮಸೀದಿ ಸಮೀಕ್ಷೆ ಕಾರ್ಯಾಚರಣೆ ವೇಳೆ ಭುಗಿಲೆದ್ದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟು, ಪೊಲೀಸ್‌ ಸಿಬ್ಬಂದಿ ಸೇರಿ ಹಲವು ಜನರು ಗಾಯಗೊಂಡಿದ್ದರು.


'ಹಿಂಸಾಚಾರದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಕಲ್ಲು ತೂರಾಟಗಾರರ ಪೋಸ್ಟರ್‌ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶಿಸುವುದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರಿಂದಲೇ ಹಣ ಪಾವತಿಸುವಂತೆ ಮಾಡುವುದು ಹಾಗೂ ಕಿಡಿಗೇಡಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಲಾಗುತ್ತದೆ' ಎಂದು ಅವರು ತಿಳಿಸಿದ್ದಾರೆ.


ಪ್ರಕರಣ ಸಂಬಂಧ ಇಲ್ಲಿಯವರೆಗೆ 25 ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಏಳು ಜನರ ವಿರುದ್ಧ ಎಫ್‌ಐಆ‌ರ್ ದಾಖಲಿಸಲಾಗಿದೆ.

 


ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನ ಸೇರಿದಂತೆ ಕರಾವಳಿ ಭಾಗದ ಹಲವು ಪ್ರಮುಖ ರೈಲು ಮೂಲಸೌಕರ್ಯ ಅಭಿವೃದ್ಧಿಯ ಕುರಿತ ಬೇಡಿಕೆಗೆಗಳ ಕುರಿತಂತೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. 


ಸಂಸತ್ತಿನ ಚಳಿಗಾಲದ ಅಧಿವೇಶನದ ಎರಡನೇ ದಿನದಂದು ಕ್ಯಾ. ಚೌಟ ಅವರು, ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಬೆಂಗಳೂರು ಗ್ರಾಮಾಂತರ ಸಂಸದ ಡಾ ಸಿ.ಎನ್ ಮಂಜುನಾಥ್ ಜೊತೆಯಾಗಿ ನವದೆಹಲಿಯ ರೈಲು ಭವನದಲ್ಲಿ ಕೇಂದ್ರ ಸಚಿವ ವೈಷ್ಣವ್ ಅವರನ್ನು ಭೇಟಿಯಾದರು. 


ಈ ವೇಳೆ ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೇ ವಿಲೀನ, ಕರಾವಳಿ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನ ನಡುವಿನ ಉತ್ತಮ ರೈಲು ಸಂಪರ್ಕಕ್ಕೆ ತೀರಾ ಅತ್ಯಗತ್ಯವಾಗಿರುವ ಎರಡು ನಗರಗಳ ನಡುವೆ ಟ್ರ್ಯಾಕ್‌ಗಳನ್ನು ದ್ವಿಗುಣಗೊಳಿಸುವುದು, ಈ ಭಾಗದ ರೈಲು ಮಾರ್ಗಗಳಲ್ಲಿ ಪ್ರಯಾಣಿಕರ ಸೌಲಭ್ಯಗಳ ಅಭಿವೃದ್ದಿ



ಸುಬ್ರಹ್ಮಣ್ಯ ಮಂಗಳೂರು ಪ್ಯಾಸೆಂಜರ್ ರೈಲು ಸೇರಿದಂತೆ ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಸುತ್ತಮುತ್ತಲಿನ ಪ್ರದೇಶಗಳ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಪ್ರಮುಖ ವಿಷಯಗಳನ್ನು ಚರ್ಚಿಸಿ ಮನವಿ ಸಲ್ಲಿಸಿದರು. 


ಕೇಂದ್ರ ಸಚಿವರನ್ನು ಭೇಟಿ ಮಾಡಿದ ಬಳಿಕ, ಕ್ಯಾ. ಚೌಟಾ ಅವರು ರಾಜ್ಯದ ರೈಲ್ವೆ ಅಭಿವೃದ್ಧಿಯ ಕುರಿತು ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿ ಟ್ವೀಟ್ ಮಾಡಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರೆ. " ಕೊಂಕಣ ರೈಲ್ವೇ ಮತ್ತು ಹಾಸನ-ಮಂಗಳೂರು ರೈಲು ಅಭಿವೃದ್ಧಿ ಕಂಪನಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ತ್ವರಿತ ಪರಿಹಾರಕ್ಕಾಗಿ ಅಗತ್ಯ ರಾಜ್ಯ ಬೆಂಬಲವನ್ನು ಒದಗಿಸುವಂತೆ" ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

 


ಅತುಲ್ ಲಿಮಾಯೆ ಅವರು ಬಿಜೆಪಿಯ ಉನ್ನತ ನಾಯಕರೊಂದಿಗೆ ಸಮನ್ವಯ ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು ಮತ್ತು ಚುನಾವಣಾ ಪ್ರಚಾರದ ಸಮಯದಲ್ಲಿ ಅತೃಪ್ತ ಸಾಮಾಜಿಕ ಗುಂಪುಗಳನ್ನು ತಲುಪಿದರು.


ಆರ್‌ಎಸ್‌ಎಸ್‌ನ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿರುವ 54 ವರ್ಷದ ಅತುಲ್ ಲಿಮಾಯೆ ಅವರು ಮಹಾಯುತಿ ಮೈತ್ರಿಕೂಟದ ಚುನಾವಣಾ ಗೆಲುವಿನ ನಂತರ ಗಮನ ಸೆಳೆದಿದ್ದಾರೆ.

ಲಿಮಾಯೆ ಅವರ ತಂತ್ರ ಮತ್ತು ಲೆಕ್ಕಾಚಾರದ ಸಾಮಾಜಿಕ ಎಂಜಿನಿಯರಿಂಗ್, ಅತೃಪ್ತ ಸಾಮಾಜಿಕ ಗುಂಪುಗಳ ನಾಯಕರನ್ನು ತಲುಪುವುದು ಸೇರಿದಂತೆ, NDA ವಿರೋಧಿ ಆಡಳಿತವನ್ನು ನಿಭಾಯಿಸಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ವರದಿಯಾಗಿದೆ.

ಅತುಲ್ ಲಿಮಾಯೆ ಯಾರು?

ನಾಸಿಕ್‌ನ ಇಂಜಿನಿಯರ್ ಆಗಿರುವ ಲಿಮಾಯೆ ಅವರು ಆರ್‌ಎಸ್‌ಎಸ್‌ಗೆ ಸೇರಲು ಸುಮಾರು ಮೂರು ದಶಕಗಳ ಹಿಂದೆ ಬಹುರಾಷ್ಟ್ರೀಯ ಕಂಪನಿಯನ್ನು ತೊರೆದರು ಮತ್ತು ಪೂರ್ಣ ಸಮಯದ ಪ್ರಚಾರಕರಾದರು.


ಹೊಸ ಸಂಘ ತಂತ್ರಜ್ಞರು ಆರಂಭದಲ್ಲಿ ರಾಯಗಢ ಮತ್ತು ಕೊಂಕಣದಂತಹ ಪಶ್ಚಿಮ ಮಹಾರಾಷ್ಟ್ರ ಪ್ರದೇಶಗಳಲ್ಲಿ ಕೆಲಸ ಮಾಡಿದರು, ನಂತರ ಮರಾಠವಾಡ ಮತ್ತು ಉತ್ತರ ಮಹಾರಾಷ್ಟ್ರ ಪ್ರದೇಶಗಳನ್ನು ಒಳಗೊಂಡ ದೇವಗಿರಿ ಪ್ರಾಂತಕ್ಕೆ ಸಹ ಪ್ರಾಂತ ಪ್ರಚಾರಕರಾದರು.

2014ರಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿದಾಗ ಮಹಾರಾಷ್ಟ್ರ, ಗುಜರಾತ್ ಮತ್ತು ಗೋವಾ ಸೇರಿದಂತೆ ಪಶ್ಚಿಮ ಮಹಾರಾಷ್ಟ್ರ ಪ್ರದೇಶದ ಉಸ್ತುವಾರಿಯನ್ನು ಲಿಮಯೆ ವಹಿಸಿದ್ದರು.


ಸಹ ಪ್ರಾಂತ ಪ್ರಚಾರಕರಾಗಿ ಲಿಮಾಯೆ ಅವರ ಅಧಿಕಾರಾವಧಿಯು ರಾಜ್ಯದ ಕೃಷಿ ಆರ್ಥಿಕತೆ ಮತ್ತು ಪ್ರದೇಶದ ಸಾಮಾಜಿಕ-ರಾಜಕೀಯ ಡೈನಾಮಿಕ್ಸ್ ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು.

ಪಶ್ಚಿಮ ವಲಯದ ಮುಖ್ಯಸ್ಥರಾಗಿ, ಲಿಮಾಯೆ ಅವರು ಬಿಜೆಪಿ ನಾಯಕರು ಮತ್ತು ಪ್ರತಿಪಕ್ಷಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಒಳಗೊಂಡಂತೆ ಮಹಾರಾಷ್ಟ್ರದ ರಾಜಕೀಯ ಭೂದೃಶ್ಯದ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆದರು.


ಈ ಪಾತ್ರಗಳ ನಂತರ, ಲಿಮಾಯೆ ಅವರು ವಿವಿಧ ಸಂಶೋಧನಾ ತಂಡಗಳು, ಅಧ್ಯಯನ ಗುಂಪುಗಳು ಮತ್ತು ಥಿಂಕ್ ಟ್ಯಾಂಕ್‌ಗಳನ್ನು ರಚಿಸಿದರು, ಅದು ಧಾರ್ಮಿಕ ಅಲ್ಪಸಂಖ್ಯಾತರ ಜನಸಂಖ್ಯಾಶಾಸ್ತ್ರದಿಂದ ಸರ್ಕಾರದ ಚೌಕಟ್ಟಿನೊಳಗೆ ನೀತಿ-ನಿರ್ಮಾಣದವರೆಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿತು.


ಅತುಲ್ ಲಿಮಾಯೆ ಮಹಾಯುತಿಗೆ ಹೇಗೆ ಸಹಾಯ ಮಾಡಿದರು?

ಈ ವರ್ಷದ ಆರಂಭದಲ್ಲಿ ಲೋಕಸಭೆ ಚುನಾವಣೆಗೆ ವ್ಯತಿರಿಕ್ತವಾಗಿ ಬಿಜೆಪಿಯನ್ನು ಬೆಂಬಲಿಸುವಲ್ಲಿ ಪೂರ್ವಭಾವಿ ಪಾತ್ರವನ್ನು ವಹಿಸಲು ಆರ್‌ಎಸ್‌ಎಸ್ ನಿರ್ಧರಿಸಿದಾಗ ಲಿಮಾಯೆ ಅವರ ಕಾರ್ಯವನ್ನು ಕಡಿತಗೊಳಿಸಲಾಯಿತು. ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ, ಲಿಮಾಯೆ ಅವರು ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ದೆಹಲಿಯ ಬಿಜೆಪಿಯ ಉನ್ನತ ನಾಯಕರೊಂದಿಗೆ ಸೇರಿಕೊಂಡರು.


ಜರಂಗೆ ಪಾಟೀಲ್ ಅವರ ಮರಾಠ ಮೀಸಲಾತಿ ಪರವಾದ ಆಂದೋಲನವು ರಾಜ್ಯದ ಸಾಮಾಜಿಕ ಭೂದೃಶ್ಯವನ್ನು ಅಲುಗಾಡಿಸುವುದರೊಂದಿಗೆ, ವಿವಿಧ ಮರಾಠ ನಾಯಕರನ್ನು ತಲುಪಿದ ಲಿಮಯೆ, ಮರಾಠ ಸಮುದಾಯವನ್ನು ಒಬಿಸಿ ಎಂದು ವರ್ಗೀಕರಿಸದೆ ಬಿಜೆಪಿ ಪ್ರಾಮಾಣಿಕವಾಗಿ ಮೀಸಲಾತಿಯನ್ನು ಬೆಂಬಲಿಸುತ್ತದೆ ಎಂದು ಭರವಸೆ ನೀಡಿದರು.

ಚುನಾವಣಾ ಫಲಿತಾಂಶಗಳ ಲೈವ್ ನವೀಕರಣಗಳನ್ನು ಸಹ ಪರಿಶೀಲಿಸಿ

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರದಲ್ಲಿರುವುದರಿಂದ ಲಿಮಾಯೆ ಅವರ ತಂಡವು ಸುಪ್ರೀಂ ಕೋರ್ಟ್‌ನಲ್ಲಿ ಈ ವಿಷಯವನ್ನು ಮುಂದುವರಿಸುವುದಾಗಿ ಭರವಸೆ ನೀಡಿತು.

ಗಡ್ಕರಿ ಮತ್ತು ಫಡ್ನವಿಸ್ ಅವರ ಕಾರ್ಯತಂತ್ರದ ಯೋಜನೆ ಮತ್ತು ಸೇರ್ಪಡೆ ಚುನಾವಣೆಯಲ್ಲಿ ಅದ್ಭುತಗಳನ್ನು ಮಾಡಿದೆ ಎಂದು ಮರಾಠಿ ದೈನಿಕ ಮತ್ತು ಆರ್‌ಎಸ್‌ಎಸ್ ಮುಖವಾಣಿ ತರುಣ್ ಭಾರತ್‌ನ ಮುಖ್ಯ ಸಂಪಾದಕ ಗಜಾನನ್ ನಿಮ್‌ದೇವ್ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ.

 


ನವದೆಹಲಿ:ಭಾರತವು ತನ್ನದೇ ಆದ 'ಪ್ರಾಣ ಶಕ್ತಿ' ಹೊಂದಿದೆ ಆದರೆ 500 ವರ್ಷಗಳ 'ಸಂಸ್ಕಾರ' ಅವರ ಪ್ರಜ್ಞೆಯಲ್ಲಿ ಆಳವಾಗಿ ಹುದುಗಿರುವುದರಿಂದ ಅದು ಅನೇಕರಿಗೆ ಗೋಚರಿಸುವುದಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಂಗಳವಾರ ಹೇಳಿದ್ದಾರೆ.

ಇಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ 'ಪ್ರಾಣ ಶಕ್ತಿ' (ಜೀವ ಶಕ್ತಿ) ವಿಶ್ವದ ಯಾವುದೇ ಭಾಗದಲ್ಲಿ ಬಿಕ್ಕಟ್ಟು ಉಂಟಾದರೆ, ದೇಶವು ಅಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆಯೇ ಎಂದು ಪರಿಗಣಿಸದೆ ತನ್ನ ಸಹಾಯವನ್ನು ನೀಡಲು "ಧಾವಿಸುವಂತೆ" ಮಾಡುತ್ತದೆ ಎಂದು ಹೇಳಿದರು. ಒಂದು ಸನ್ನಿವೇಶವು ಪ್ರತಿಕೂಲ ಅಥವಾ ಸ್ನೇಹಪರವಾಗಿದೆ.


"ಭಾರತವು ನಮ್ಮ ಕಣ್ಣುಗಳ ಮುಂದೆ 'ಪ್ರಾಣ ಶಕ್ತಿ' ಹೊಂದಿದೆ ಆದರೆ ಅದು ಗೋಚರಿಸುವುದಿಲ್ಲ ಏಕೆಂದರೆ 500 ವರ್ಷಗಳ 'ಸಂಸ್ಕಾರ' ನಮ್ಮಲ್ಲಿ ಆಳವಾಗಿ ಹುದುಗಿದೆ," ಎಂದು ಅವರು ಭಾರತೀಯ ಆಧ್ಯಾತ್ಮಿಕ ಅಭ್ಯಾಸಗಳನ್ನು ಅನುಸರಿಸಲು ಜನರನ್ನು ಉತ್ತೇಜಿಸಿದರು. 'ಪ್ರಾಣ ಶಕ್ತಿ' ಮತ್ತು ದೇಶದ. ಭಾರತದ 'ಪ್ರಾಣ ಶಕ್ತಿ' "ಸಾಮಾನ್ಯ ಮನುಷ್ಯರಲ್ಲಿ ಮತ್ತು ಸಣ್ಣ ವಿಷಯಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಜನವರಿ 22 ರಂದು ಆಶ್ಚರ್ಯಕರವಾಗಿ ಕಾಣಿಸಿಕೊಂಡಿತು" ಎಂದು ಅವರು ಈ ವರ್ಷದ ಜನವರಿ 22 ರಂದು ನಡೆದ ಅಯೋಧ್ಯೆಯ ರಾಮ ಮಂದಿರದ ಪ್ರತಿಷ್ಠಾಪನೆಯ ಬಗ್ಗೆ ಮುಸುಕಿನ ಉಲ್ಲೇಖದಲ್ಲಿ ಹೇಳಿದರು.


ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತ ಮುಕುಲ್ ಕಾನಿಟ್ಕರ್ ಅವರು ಬರೆದಿರುವ ‘ಬನಾಯೀಂ ಜೀವನ್ ಪ್ರಣ್ವಾನ್’ ಪುಸ್ತಕವನ್ನು ಬಿಡುಗಡೆ ಮಾಡಲು ದೆಹಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಆಯೋಜಕರ ಪ್ರಕಾರ, ಪುಸ್ತಕವು ಭಾರತೀಯ ಸಂಪ್ರದಾಯಗಳ ವೈಜ್ಞಾನಿಕ ಮತ್ತು ತಾತ್ವಿಕ ತಳಹದಿಗಳನ್ನು ಬಿಚ್ಚಿಡಲು ಓದುಗರನ್ನು ಪ್ರಯಾಣಕ್ಕೆ ಕರೆದೊಯ್ಯುತ್ತದೆ. ಇದು ಜೀವನ, ಆಲೋಚನೆ ಮತ್ತು ಕ್ರಿಯೆಯ ಆಳವಾದ ಅಂತರ್ಸಂಪರ್ಕವನ್ನು ಎತ್ತಿ ತೋರಿಸುತ್ತದೆ, "ಪ್ರಾನ್" ಅನ್ನು ಅರ್ಥಮಾಡಿಕೊಳ್ಳುವ ಮಹತ್ವವನ್ನು ಒತ್ತಿಹೇಳುತ್ತದೆ - ಎಲ್ಲಾ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ವಿದ್ಯಮಾನಗಳ ಅಡಿಪಾಯವನ್ನು ರೂಪಿಸುವ ಜೀವ ಶಕ್ತಿ.


ಪುಸ್ತಕದ ಪ್ರಕಟಣೆಯನ್ನು ಶ್ಲಾಘಿಸಿದ ಭಾಗವತ್, ಆಧ್ಯಾತ್ಮಿಕತೆ ಮತ್ತು ವಿಜ್ಞಾನದ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಹೇಳಿದರು. "ತಿಳಿದು ನಂತರ ನಂಬಿರಿ ... ಕುರುಡು ನಂಬಿಕೆಗೆ ಸ್ಥಳವಿಲ್ಲ" ಎಂದು ಅವರು ಹೇಳಿದರು.

ರಾಮ ಲಕ್ಷ್ಮಣ ಕೊಪ್ಪರಿಗೆ ಏರುವ ಕಾರ್ಯಕ್ರಮ



ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು(ನ.27) ಬೆಳ್ಳಗೆ 7.45ಕ್ಕೆ ಕೊಪ್ಪರಿಗೆ ಏರುವುದರೊಂದಿಗೆ ಷಷ್ಠಿ ಮಹೋತ್ಸವ ಆರಂಭಗೊಂಡಿದೆ.

ಇಂದು ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವನಡೆಯಲಿದೆ. ನ.30- ಲಕ್ಷದೀಪೋತ್ಸವ ,ಡಿ.01- ಶೇಷವಾಹನೋತ್ಸವ,ಡಿ.02- ಅಶ್ವವಾಹನೋತ್ಸವ, ಡಿ.03- ಮಯೂರ ವಾಹನೋತ್ಸವ, ಡಿ.04- ಶೇಷವಾಹನೋತ್ಸವ,, ಡಿ.05- ಹೂವಿನ ತೇರಿನ ಉತ್ಸವ , ಡಿ.06- ಪಂಚಮಿ ರಥೋತ್ಸವ,, ಡಿ.07- ಪ್ರಾತಃ ಕಾಲ ಚಂಪಾಷಷ್ಠಿ ಮಹಾರಥೋತ್ಸವ,ಡಿ.08- ರಂದು ಅವಭೃತೋತ್ಸವ, ನೌಕಾವಿಹಾರ, ನಡೆದು

ಡಿ.12- ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ ನಡೆಯಲಿದೆ.

 ವಾರಾಂತ್ಯಕ್ಕೆ ಚಂಡಮಾರುತವಾಗಿ ಪರಿವರ್ತನೆ ಸಾಧ್ಯತೆ



ಬೆಂಗಳೂರು: ಬಂಗಾಳ ಉಪ ಸಾಗರದ ಆಗ್ನೆಯ ಭಾಗದಲ್ಲಿ ಸರ್ಕ್ಯೂಲೇಷನ್‌ ಸೃಷ್ಟಿಯಿಂದಾಗಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುರುವಾರದವರೆಗೆ ತುಂತುರು ಮಳೆಯಾಗಲಿದೆ. ವಾಯುಭಾರ ಕುಸಿತದಿಂದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಸೃಷ್ಟಿಯಾಗಿದೆ. ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿ ಕೆಲ ಜಿಲ್ಲೆಗಳಲ್ಲಿ ಹಗುರ ಮಳೆಯಾಗಿದ್ದರೆ, ಉಳಿದೆಡೆ ತುಂತುರು ಮಳೆಯಾಗಿದೆ. ಜತೆಗೆ ಹಗಲಿನ ತಾಪಮಾನ 2-3 ಡಿಗ್ರಿ ಸೆ. ಕುಸಿತ ಕಂಡಿದ್ದು, ಬೀದರ್‌ನಲ್ಲಿ ಅತಿ ಕಡಿಮೆ ಉಷ್ಣಾಂಶ 12 ಡಿಗ್ರಿ ಸೆ. ದಾಖಲಾಗಿದೆ. ಬುಧವಾರವೂ ತುಂತುರು ಮಳೆ ಮುಂದುವರಿಯುವ ಸಾಧ್ಯತೆ ಇದೆ. ಒಂದೆರಡು ದಿನಗಳಲ್ಲಿ ವಾಯುಭಾರ ಕುಸಿತ ಇನ್ನಷ್ಟು ತೀವ್ರಗೊಂಡಲ್ಲಿ ಚಂಡಮಾರುತ ಸೃಷ್ಟಿಯಾಗಬಹುದು. ಈ ಸನ್ನಿವೇಶ ಸೃಷ್ಟಿಗೆ ವಾರಾಂತ್ಯದವರೆಗೂ ಕಾಯಬೇಕಾಗುತ್ತದೆ. ಈ ಪರಿಸ್ಥಿತಿಯಿಂದ ನವೆಂಬರ್ ಅಂತ್ಯದವರೆಗೂ ಕನಿಷ್ಠ ತಾಪಮಾನ ಕುಸಿತ ಉಂಟಾಗಿ ಚಳಿ ವಾತಾವರಣ ಕಾಣಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ 13-15 ಡಿಗ್ರಿ ಸೆ. ಹಾಗೂ ಬೆಂಗಳೂರಿನಲ್ಲಿ 17-18 ಡಿಗ್ರಿ ಸೆ. ಇರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

 


ಬೆಂಗಳೂರು: “ಕಾಂಗ್ರೆಸ್ ಪಕ್ಷಕ್ಕೆ ತ್ಯಾಗದ ಇತಿಹಾಸವೇ ಇದೆ.

ಸೋನಿಯಾ ಗಾಂಧಿ ಅವರು ಪ್ರಧಾನಿಯಾಗುವ ಅವಕಾಶವನ್ನು ಎರಡು ಬಾರಿ ನಿರಾಕರಿಸಿದರು. ಸಮಯ ಬಂದಾಗ ನಮ್ಮ ಸರ್ಕಾರದ ಸಚಿವರೂ ತಮ್ಮ ಸ್ಥಾನದ ತ್ಯಾಗಕ್ಕೆ ಸಿದ್ಧರಿರಬೇಕು' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಭಾರತದ ಸಂವಿಧಾನ ಅಂಗೀಕಾರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನೇ ಅಧಿಕಾರದಿಂದ ಕೆಳಗೆ ಇಳಿಸಲು ಹರಸಾಹಸ ಮಾಡಬೇಕಿದೆ. ಮಹಾತ್ಮ ಗಾಂಧಿ, ಸೋನಿಯಾ, ರಾಹುಲ್ ಅವರಂತೆ ಎಲ್ಲರೂ ಯೋಚಿಸಬೇಕು. ಆಗಮಾತ್ರ ಪಕ್ಷಕ್ಕೆ ಬಲತುಂಬಲು ಸಾಧ್ಯ ಎಂದರು.


ಕಾರ್ಯಕ್ರಮದ ನಂತರ 'ಸಚಿವರ ತ್ಯಾಗ'ದ ಮಾತು ಹಾಗೂ ದೆಹಲಿ ಭೇಟಿ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಸಚಿವರು ತಕ್ಷಣಕ್ಕೆ ತಮ್ಮ ಸ್ಥಾನ ಬಿಡಬೇಕು ಎಂದು ಹೇಳಿಲ್ಲ. ತ್ಯಾಗಕ್ಕೆ ಸಿದ್ಧವಿರಬೇಕು ಎಂದು ಕಿವಿಮಾತು ಹೇಳಿರುವೆ. ಅದಕ್ಕೆ ಇನ್ನೂ ಸಮಯಾವಕಾಶವಿದೆ' ಎಂದು ತಿಳಿಸಿದರು.


'ಸಚಿವ ಸಂಪುಟ ಪುನ‌ರಚನೆ ವಿಚಾರ ಗೊತ್ತಿಲ್ಲ. ಗೊತ್ತಾದಾಗ ಮಾತನಾಡುತ್ತೇನೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಮುಖ್ಯಮಂತ್ರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳನ್ನೇ ಕೇಳಿ' ಎಂದರು.

'ಮಹದಾಯಿ ವಿಷಯ ಚರ್ಚಿಸಲು ಕೇಂದ್ರ ಸಚಿವರ ಭೇಟಿಗಾಗಿ ದೆಹಲಿ ಪ್ರವಾಸಕ್ಕೆ ತೆರಳುತ್ತಿರುವೆ. ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ರೂಪುರೇಷೆ ಕುರಿತು ಪಕ್ಷದ ಹೈಕಮಾಂಡ್ ಜತೆ ಚರ್ಚೆ ನಡೆಸುವೆ. ಹಾಗೆಯೇ, ಹೇಮಂತ್ ಸೊರೇನ್ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸುವೆ. ದೆಹಲಿ ಭೇಟಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ' ಎಂದು ಪ್ರತಿಕ್ರಿಯಿಸಿದರು.


'ಕೊಟ್ಟ ಮಾತಿನಂತೆ ಕೇಂದ್ರ ಸಚಿವ ಪ್ರಲಾದ ಜೋಶಿ ಅವರು ಮಹದಾಯಿಗೆ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರು ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಕೊಡಿಸಬೇಕು. ರಾಜ್ಯದ ಒಳಿತಾಗಿ ಅವರ ಸಹಕಾರ ಬಳಸಿಕೊಳ್ಳಲು ಸಿದ್ಧ' ಎಂದರು.

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget