ನೈಜೀರಿಯಾ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ (ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನ) ಪ್ರವಾಸ ಕೈಗೊಂಡಿದ್ದು, ಇಂದು ನೈಜೀರಿಯಾ ತಲುಪಿದ್ದಾರೆ. ಇದರೊಂದಿಗೆ ಭಾರತದ ಪ್ರಧಾನಿಯೊಬ್ಬರು 17 ವರ್ಷಗಳ ಬಳಿಕ ಈ ದೇಶಕ್ಕೆ ಭೇಟಿಕೊಟ್ಟಂತಾಗಿದೆ.
ಮೋದಿ ಅವರು ನೈಜೀರಿಯಾ ತಲುಪಿರುವ ಸುದ್ದಿಯನ್ನು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ನೈಜೀರಿಯಾದ ಅಬುಜಾ ನಗರ ತಲುಪಿದ್ದಾರೆ. ಫೆಡರಲ್ ಕ್ಯಾಪಿಟಲ್ ಟೆರಿಟರಿ ಸಚಿವ ನೀಸಮ್ ಎಜೆನ್ವೊ ವೈಕ್ ಅವರು ‘ನಗರಕ್ಕೆ ಕೀಲಿಕೈ’ ನೀಡುವ ಮೂಲಕ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಈ ಕೀಲಿಕೈ ನೈಜೀರಿಯನ್ನರು ಪ್ರಧಾನಿ ಅವರ ಮೇಲೆ ಇಟ್ಟಿರುವ ನಂಬಿಕೆ ಮತ್ತು ಗೌರವದ ಸಂಕೇತವಾಗಿದೆ’ ಎಂದು ತಿಳಿಸಿದ್ದಾರೆ. ಅಷ್ಟೇಅಲ್ಲ, ವಿದೇಶಾಂಗ ಸಚಿವಾಲಯವೂ ಮೋದಿ ಅವರ ಚಿತ್ರಗಳನ್ನು ಹಂಚಿಕೊಂಡಿದೆ.
Post a Comment