ಭಾರತೀಯತೆಯ ಸಂಸ್ಕೃತಿಯ ಮೇರುದಂಡ ಗೋಮಾತೆ - ಸಾಧ್ವಿ ಮಾತಾನಂದಮಯಿ
ನಮ್ಮ ದೇಶಕ್ಕೆ ಅನಿಷ್ಟ ಗಳು ಅನಾಹುತ ಅವಘಡಗಳು ಸಂಭವಿಸಲು ಮುಖ್ಯ ಕಾರಣವೇ ಗೋ ಹತ್ಯೆ. ಗೋಹತ್ಯೆಯನ್ನು ನಿಯಂತ್ರಿಸುವ ಮಹತ್ತರ ಕಾರ್ಯಕ್ಕೆ ಮುಂದಾಗಿರುವ ಯುವಶಕ್ತಿ ಬಜರಂಗದಳ ಸಂಘಟನೆ. ಭಾರತೀಯತೆಯ ಸಂಸ್ಕೃತಿಯ ಮೇರುದಂಡ ಗೋಮಾತೆ. ಹಿಂದೂ ಸಮಾಜವೆಂದರೆ ಅಶ್ವಥ ವೃಕ್ಷದಂತೆ ಅದು ನಶಿಸಲು ಸಾಧ್ಯವೇ ಇಲ್ಲ.
ಆಧ್ಯಾತ್ಮಿಕ ತಳಪಾಯ ಹಿಂದೂ ಧರ್ಮದಲ್ಲಿ ರುವುದು.ಧರ್ಮರಾಯನು ಆಹಾರ ಸೇವಿಸುವ ಮುಂಚಿತವಾಗಿ ಗೋಪೂಜೆಯನ್ನು ನೆರವೇರಿಸುತ್ತಿದ್ದರು. ಭವ್ಯ ಭಾರತದ ಭವಿಷ್ಯದ ಆಸ್ತಿಯೇ ಮಾತೃಶಕ್ತಿ ಹಾಗೂ ಸಂಘಟನೆಯಾಗಿದೆ ಎಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನ.9 ರಂದು ವಿಶ್ವ ಹಿಂದೂ ಪರಿಷದ್ ಬಜರಂಗದಳದ ಆಶ್ರಯದಲ್ಲಿ ನಡೆದ 2 ನೇ ವರ್ಷದ ಗೋಪೂಜೆಯ ಕಾರ್ಯಕ್ರಮದಲ್ಲಿ ಒಡಿಯೂರು
ಕ್ಷೇತ್ರದ ಸಾಧ್ವಿ ಮಾತಾನಂದಮಯಿ ಯವರು ಆಶೀರ್ವಚನ ನೀಡಿದರು.
ಗೋವು ದೇಶದ ಸಂಸ್ಕ್ರತಿಯ ಪ್ರತೀಕವಾಗಿದೆ.
ನಿತ್ಯ ಜೀವನದಲ್ಲಿ ಗೋಮಾತೆಯ ಪ್ರಮುಖ ಪಾತ್ರವಿದೆ. ಸರಕಾರ ಗೋಹತ್ಯೆ ನಿಷೇಧ ಕಾನೂನು ಹೊರತಂದರೂ ನಿರಂತರವಾಗಿ ಕಟುಕರು ಗೋಹತ್ಯೆ ಮಾಡುತ್ತಿದ್ದಾರೆ. ಕಸಾಯಿಖಾನೆಗೆ ಕಟುಕರ ಕೈಗೆ ಹಿಂದೂ ಬಾಂಧವರು ಗೋವುಗಳನ್ನು ಮಾರಾಟ ಮಾಡುವುದು ಸರಿಯಲ್ಲ ಅದು ಮಹಾಪರಾಧ. ಸಾಕುವ ಶಕ್ತಿ ಇಲ್ಲದಿದ್ದರೆ ಗೋಶಾಲೆಗೆ ನೀಡಬೇಕು. ಗೋಹತ್ಯೆ ನಿಯಂತ್ರಣ ಇಲಾಖೆಯವರು ಮಾಡುವಂತಾಗಬೇಕು. ನೀವು ಮಾಡದಿದ್ದರೆ ಸಂಘಟನೆಯ ಮೂಲಕ ಮಾಡುತ್ತೇವೆ. ಅದಕ್ಕೆ ಅವಕಾಶ ಇಲಾಖೆ ಕೊಡಬಾರದು. ಗೋವಿನ ರಕ್ಷಣೆ ನಮ್ಮೆಲ್ಲರ ಹೊಣೆ.
ನಮ್ಮ ಭೂಮಿಯನ್ನು ಕಬಳಿಸುವ ಸಂಚು ಇದೀಗ ನಡೆಯುತ್ತಿದೆ 9ಲಕ್ಷ ಸಾವಿರ ಎಕ್ರೆ ಭೂಮಿ ಇಸ್ಲಾಮೀಕರಣದ ವಕ್ಫ್ ಗೆ ಸೇರಿದೆ ಲ್ಯಾಂಡ್ ಜಿಹಾದ್ ಎಂಬ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಹಿಂದೂ ಬಾಂಧವರು ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ ಎಂದು
ವಿಶ್ವ ಹಿಂದೂ ಪರಿಷದ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್
ದಿಕ್ಸೂಚಿ ಭಾಷಣ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ನಗರದ ಅಧ್ಯಕ್ಷ ಉಪೇಂದ್ರ ನಾಯಕ್ ವಹಿಸಿದ್ದರು.
ಶ್ರೀ ಶಾರದಾಂಬ ಉತ್ಸವ ಸಮಿತಿ ಅಧ್ಯಕ್ಷ ಡಾ.ಡಿ.ವಿ.ಲೀಲಾಧರ್ ದೀಪ ಪ್ರಜ್ವಲಿಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ಯೋಜನಾಧಿಕಾರಿ ಮಾಧವ ಗೌಡ,ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡ ಅಧ್ಯಕ್ಷ ಸೋಮಶೇಖರ ಪೈಕ, ಬಜರಂಗದಳ ಪುತ್ತೂರು ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ರೂಪೇಶ್ ಪೂಜಾರಿಮನೆ, ವಿ.ಹೆಚ್.ಪಿ ಸುಳ್ಯ ಪ್ರಖಂಡ ಪ್ರಧಾನ ಕಾರ್ಯದರ್ಶಿ ನವೀನ್ ಎಲಿಮಲೆ, ಬಜರಂಗದಳದ ಸುಳ್ಯ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ, ಗೋ ರಕ್ಷಾ ಪ್ರಮುಖ್ ರಾಜೇಶ್ ಕಲ್ಲುಮುಟ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು.ಅಭಿಜ್ಞಾ ಭಟ್ ವೈಯುಕ್ತಿಕ ಗೀತೆ ಹಾಡಿದರು.
ರಾಜೇಶ್ ಕಲ್ಲುಮುಟ್ಲು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ ವಂದಿಸಿದರು.
ಗಿರೀಶ್ ಕುಂಟಿನಿ ಮತ್ತು ತೀರ್ಥೇಶ್ ಯಾದವ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೋ ಭಕ್ತರು ಗೋಮಾತೆಗೆ ಮಂಗಳಾರತಿ ಬೆಳಗಿ ಗೋಪೂಜೆಯನ್ನು ಮಾಡಿದರು.
ಗೋಮಾತೆಯ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಆರಂಭದಲ್ಲಿ ಸಂಜೆ ಚೆನ್ನಕೇಶವ ದೇವರ ಕಟ್ಟೆಯ ಬಳಿಯಿಂದ ಆಕರ್ಷಕ ಕುಣಿತ ಭಜನೆಯು ರಥಬೀದಿಯಲ್ಲಿ ಸಾಗಿ ಬಂತು. ಈ ಸಂದರ್ಭದಲ್ಲಿ ಶಂಖ ನಾದ ಹಾಗೂ ಜಾಗಟೆಯು ಮೊಳಗಿತು. ಬಳಿಕ ಕುಣಿತ ಭಜನಾ ಪ್ರದರ್ಶನವು ನಡೆಯಿತು.
ಆಗಮಿಸಿದ ಎಲ್ಲರಿಗೂ ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಗೂ ಮಾತೃಶಕ್ತಿ ದುರ್ಗಾವಾಹಿನಿ ಸುಳ್ಯ ನಗರದ ಸದಸ್ಯರು ಸಹಕರಿಸಿದರು.
Post a Comment