ಹೆದ್ದಾರಿ ಬದಿ ಸಂಚರಿಸಿದ ಎರಡು ಆನೆಗಳು
ಕೃಷಿ ಬೆಳೆ ಹಾನಿ ಮಾಡಿ ಕೃಷಿಕರ ನಿದ್ದೆಗೆಡಿಸಿದ್ದ ಕಾಡಾನೆಗಳು ನ.11ರಂದು ಬೆಳಿಗ್ಗೆ ಕನಕಮಜಲು ಗ್ರಾಮದ ಆನೆಗುಂಡಿಯಲ್ಲಿ ರಸ್ತೆ ಬದಿ ಸಂಚರಿಸುತ್ತಿದ್ದು, ಇದನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮಾರಾದಲ್ಲಿ ಸೆರೆ ಹಿಡಿದಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿ ತಿರುವಿನಲ್ಲಿ ಎರಡು ಕಾಡಾನೆಗಳು ರಸ್ತೆ ಬದಿ ಸಂಚರಿಸಿದ್ದು, ಬಳಿಕ ರಸ್ತೆ ಪಕ್ಕದ ಕಾಡಿನೊಳಗೆ ಹೋಗಿರುವುದಾಗಿ ತಿಳಿದುಬಂದಿದೆ.
ಕನಕಮಜಲು ಗ್ರಾಮದ ಕುದ್ಕುಳಿ, ಕುತ್ಯಾಳ, ಕಣಜಾಲು, ಮುಗೇರು ಕಂಡುಬಂದಿದೆ.ಕಳೆದ ಅನೇಕ ದಿನಗಳಿಂದ ಈ ಪರಿಸರ ದಲ್ಲಿ ಬಿಡುಬಿಟ್ಟಿರುವ ಆನೆ ಕೃಷಿಕರ ತೋಟಕ್ಕೆ ನುಗ್ಗಿ ಅಡಿಕೆ,ಬಾಳೆ, ತೆಂಗಿನ ಮರ ಧ್ವಂಸ ಮಾಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೂಳ್ಳುವಂತೆ ಕೃಷಿಕರು ಒತ್ತಾಯಿಸಿದ್ದಾರೆ.
ಹೆದ್ದಾರಿ ಬದಿ ಸಂಚರಿಸಿದ ಎರಡು ಆನೆಗಳು ದೃಶ್ಯ 👇🏻👇🏻
https://youtu.be/xTN1iBfrL40?si=aj9gK6TuUBE7YhXl
Post a Comment