ಎಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಅವಕಾಶ ವಿಸ್ತರಿಸಿದ ರಾಜ್ಯ ಸರಕಾರ : ನವೆಂಬ‌ರ್ 30ರೊಳಗೆ ಬದಲಾಯಿಸುವಂತೆ ಆದೇಶ

 


ಬೆಂಗಳೂರು, ನವೆಂಬರ್ 04, 2024 (ಕರಾವಳಿ ಟೈಮ್ಸ್) : 2019ರ ಎಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ (ಎಚ್‌ಎಸ್‌ಆಕ್ಸಿ) ಅಳವಡಿಕೆ ಗಡುವನ್ನು ರಾಜ್ಯ ಸರಕಾರ ಮತ್ತೊಮ್ಮೆ ವಿಸ್ತರಣೆ ಮಾಡಿದೆ.



ನಾಲ್ಕು ಬಾರಿ ಗಡವು ವಿಸ್ತರಿಸಿದರೂ ಬಹುತೇಕ ವಾಹನ ಮಾಲೀಕರು ಇನ್ನೂ ಎಚ್‌ಎಸ್‌ಆಗ್ನಿ ನಂಬ‌ರ್ ಪ್ಲೇಟ್ ಅಳವಡಿಸಿಕೊಂಡಿಲ್ಲ. ಹೀಗಾಗಿ ರಾಜ್ಯ ಸರಕಾರ ಮತ್ತೊಮ್ಮೆ ಗಡುವು ವಿಸ್ತರಣೆ ಮಾಡಿದ್ದು, ನವೆಂಬ‌ರ್ 30 ರವರೆಗೆ ಎಚ್‌ಎಸ್‌ಆಕ್ಸಿ ನಂಬರ್ ಪ್ಲೇಟ್ ಅಳವಡಿಕೆಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ.




ನವೆಂಬರ್ 30ರೊಳಗೆ ನಂಬ‌ರ್ ಪ್ಲೇಟ್ ಬದಲಾವಣೆ ಮಾಡಿಕೊಳ್ಳದಿದ್ದರೆ ಡಿಸೆಂಬರ್ 1 ರಿಂದ ದಂಡ ವಿಧಿಸಲು ಸಾರಿಗೆ ಇಲಾಖೆ ತೀರ್ಮಾನಿಸಿದೆ. ದ್ವಿಚಕ್ರ ವಾಹನಗಳು, ಆಟೋ ಮತ್ತು ನಾಲ್ಕು ಚಕ್ರಗಳ ವಾಹನಗಳು ಸೇರಿದಂತೆ ರಾಜ್ಯದ ಎಲ್ಲಾ ವಾಹನಗಳಿಗೂ ಎಚ್‌ಎಸ್‌ಆಕ್ಸಿ ನಂಬರ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಗೊಳಿಸಲಾಗಿದೆ.










ವಂಚನೆ ಮತ್ತು ಕಳ್ಳತನದಿಂದ ರಕ್ಷಿಸಲು ಹೆಚ್ಚುವರಿ ಭದ್ರತಾ ಕ್ರಮಗಳನ್ನು ಒಳಗೊಂಡಿರುವ ಎಚ್‌ಎಸ್‌ಆಕ್ಟಿ ನಂಬ‌ರ್ ಪ್ಲೇಟ್ ಕಡ್ಡಾಯಾವಾಗಿ ಅಳವಡಿಸಬೇಕು ಎಂದು ರಾಜ್ಯ ಸರಕಾರ ಆದೇಶಿಸಿದೆ.



Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget