ಹವಾಮಾನ ಇಲಾಖೆ ಕರ್ನಾಟಕಕ್ಕೆ ಮುಂದಿನ ನಾಲ್ಕು ದಿನ ಯಾವ ಮುನ್ಸೂಚನೆ ಕೊಟ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಹವಾಮಾನ ಇಲಾಖೆ ಪ್ರಕಾರ, ದಕ್ಷಿಣ ತಮಿಳುನಾಡು ಕರಾವಳಿ ಮತ್ತು ಪಕ್ಕದ ಶ್ರೀಲಂಕಾದ ಮೇಲೆ ಚಂಡಮಾರುತದ ಪರಿಚಲನೆಯು ಈಗ ದಕ್ಷಿಣ ಕೇರಳ ಕರಾವಳಿಯ ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಇದೆ. ಈ ಪರಿಚಲನೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿಮೀ ವರೆಗೆ ವಿಸ್ತರಣೆಗೊಂಡಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ಮುಖ್ಯಸ್ತರು ಮತ್ತು ವಿಜ್ಞಾನಿ ಡಾ.ಎನ್.ಪುವಿಯರಸನ್ ಅವರು ತಿಳಿಸಿದ್ದಾರೆ.
ದಕ್ಷಿಣ ತಮಿಳುನಾಡು ಕರಾವಳಿಯಲ್ಲಿ ಮೇಲಿನ ಚಂಡಮಾರುತದ ಪರಿಚಲನೆಯಿಂದ ಟ್ರಫ್ ಮತ್ತು ಪಕ್ಕದ ಶ್ರೀಲಂಕಾದಿಂದ ಕರಾವಳಿ ಕರ್ನಾಟಕಕ್ಕೆ 0.9 ಕಿಮೀ ಎತ್ತರದಲ್ಲಿ ಸಮುದ್ರ ಮಟ್ಟದಿಂದ ಕಡಿಮೆ ಇದೆ. ಇದರಿಂದ ಕೆಲವೆಡೆ ಸಾಧಾರದಿಂದ ಭಾರೀ ಮಳೆ ಬರಬಹುದು. ಕೆಲವೆಡೆ ಶುಷ್ಕವಾತಾವರಣ ಮುಂದುವರಿಯಬಹದು ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ರಾಜ್ಯಕ್ಕೆ ನವೆಂಬರ್ 7ರವರೆಗೆ ಮಳೆ, ಶುಷ್ಕ ವಾತಾವರಣ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಗಾಗ ಮಬ್ಬು ವಾತಾವರಣ ಕಂಡು ಬಂದರೂ ಸಹಿತ ದಿನವಿಡೀ ಬಿಸಿಲಿನ ವಾತಾವರಣ ಕಂಡು ಬರಲಿದೆ. ಒಂದರಡು ಕಡೆಗಳಲ್ಲಿ ತುಂತುರು ಮಳೆ ಆಗಬಹುದು ಎನ್ನಲಾಗಿದೆ.
ರಾಜ್ಯದಲ್ಲಿ ಮುಂದಿನ ನವೆಂಬರ್ 7ರವರೆಗೆ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಮತ್ತು ದಕ್ಷಿಣ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದರ ಹೊರತು ಎಲ್ಲಿಯೂ ಗಂಭೀರ ಸ್ವರೂಪದ ಲಕ್ಷಣಗಳು ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಎರಡು ಮೂರು ದಿನಗಳ ಹಿಂದಷ್ಟೇ ತಡರಾತ್ರಿ ಭರ್ಜರಿ ಮಳೆ ಸುರಿದಿದೆ. ಮೆಕ್ಕೆಜೋಳ ಸೇರಿದಂತೆ ಕೊಯ್ಲಿಗೆ ಬಂದ ಮುಂಗಾರು ಬೆಳೆ ಕಟಾವಿಗೆ ಮಳೆ ತೊಂದರೆ ನೀಡುತ್ತಿದೆ. ಹೊಲದಲ್ಲಿ ಕಾಲಿಡದಂತೆ ಸ್ಥಿತಿ ಇದೆ. ಇದೀಗ ಮುಂದಿನ ನವೆಂಬರ್ 7ರವರೆಗೆ ಯಾವುದೇ ಮಳೆ ಅಬ್ಬರ, ಆರ್ಭಟ ಕಂಡು ಬರುವುದಿಲ್ಲ.
Post a Comment