ಫೆ.4ರಂದು ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ: ಕೆ.ಎಸ್.ಈಶ್ವರಪ್ಪ

 ಫೆಬ್ರುವರಿ 4ರಂದು ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಆಗಲಿದೆ.


ವಿಜಯಪುರ: ರಾಜ್ಯದಲ್ಲಿ ಕ್ರಾಂತಿವೀರ ಬ್ರಿಗೇಡ್ ಅಸ್ತಿತ್ವಕ್ಕೆ ಬರುತ್ತಿದೆ. ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸಮ್ಮುಖದಲ್ಲಿ ವಿಜಯಪುರದ ಮಖಣಾಪುರ ಸೋಮೇಶ್ವರ ಸ್ವಾಮೀಜಿಯವರು ಕ್ರಾಂತಿವೀರ ಬ್ರಿಗೇಡ್ ಹೆಸರು ಘೋಷಣೆ ಮಾಡಿದ್ದಾರೆ.


ಈ ಸಂಬಂಧ ಶನಿವಾರ ವಿಜಯಪುರದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹಾಗೂ ಮಖಣಾಪುರ ಸೋಮೇಶ್ವರ ಸ್ವಾಮೀಜಿ ಅವರು ಪತ್ರಿಕಾಗೋಷ್ಠಿ ನಡೆಸಿದರು. ಫೆಬ್ರುವರಿ 4ರಂದು ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಯಾಗಲಿದೆ. ವಿಜಯಪುರದಲ್ಲಿ ಸಭೆ ನಡೆಸಿ ಬ್ರಿಗೇಡ್ ಹೆಸರು ಅಂತಿಮಗೊಳಿಸಲಾಗಿದೆ. ಸೋಮೇಶ್ವರ ಸ್ವಾಮೀಜಿಯವರು ಬ್ರಿಗೇಡ್​​ನ ಮುಖ್ಯಸ್ಥರಾಗಲಿದ್ದಾರೆ.


ಈ ಬಗ್ಗೆ ಮಾತನಾಡಿದ ಸೋಮೇಶ್ವರ ಸ್ವಾಮೀಜಿ, ''ಉತ್ತರ ಕರ್ನಾಟಕದ ಹಿಂದುಳಿದ ಮಠಾಧಿಪತಿಗಳೆಲ್ಲರೂ ಒಂದಾಗಿದ್ದೇವೆ‌. ಹಿಂದೂ ಸಮಾಜ ಉಳಿಸಲು ಒಂದು ಬ್ರಿಗೇಡ್ ಅವಶ್ಯಕತೆ ಇತ್ತು. ಹಿಂದುಳಿದ ಸಮುದಾಯದ ಎಲ್ಲ ಮಠಗಳ ಸ್ವಾಮೀಜಿಗಳು ಈ ಬ್ರಿಗೇಡ್​​ನಲ್ಲಿದ್ದೇವೆ. ಬ್ರಿಗೇಡ್​​ಗೆ ಇತರ ಸ್ವಾಮೀಜಿಗಳು ಪದಾಧಿಕಾರಿಗಳಿದ್ದಾರೆ'' ಎಂದು ತಿಳಿಸಿದರು.


ಕೆ.ಎಸ್.ಈಶ್ವರಪ್ಪ ಮಾತನಾಡಿ, ಸಕಲ‌ ಹಿಂದೂ ಸಮಾಜವನ್ನು ಒಂದು ಮಾಡಬೇಕು ಎಂಬ ಕಾರಣಕ್ಕೆ ಈ ಬ್ರಿಗೇಡ್ ಮಾಡಲಾಗಿದೆ. ಫೆಬ್ರವರಿ 4ರಂದು ಸ್ವಾಮೀಜಿಗಳ ನೇತೃತ್ವದಲ್ಲಿ ಬಸವನ ಬಾಗೇವಾಡಿಯಲ್ಲಿ ಉದ್ಘಾಟನೆ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನರು ಭಾಗಿಯಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಪದಾಧಿಕಾರಿಗಳನ್ನ ನೇಮಕ ಮಾಡಲಾಗುವುದು'' ಎಂದು ಮಾಹಿತಿ ನೀಡಿದರು.

ಪದಾಧಿಕಾರಿಗಳ ನೇಮಕದ ವೇಳೆ ನನ್ನ ಪಾತ್ರವನ್ನು ಸ್ವಾಮೀಜಿಗಳು ನಿರ್ಧಾರ ಮಾಡಲಿದ್ದಾರೆ. ಇವತ್ತು ಮಾರ್ಗದರ್ಶಕ ಮಂಡಳಿ ಹಾಗೂ ಬ್ರಿಗೇಡ್ ಹೆಸರು ಮಾತ್ರ ಘೋಷಣೆ ಮಾಡಲಾಗಿದೆ. ಪದಾಧಿಕಾರಿಗಳ ನೇಮಕ ಮಾಡುವಾಗ ನನ್ನನ್ನು ಸೇರಿದಂತೆ ಹಲವರನ್ನು ಸೇರ್ಪಡೆ ಮಾಡಲಾಗುವುದು. ಹಿಂದೂ ಸಮಾಜಕ್ಕೆ ಆಗುವ ಅನ್ಯಾಯದ ವಿರುದ್ಧ ಹೋರಾಡಲು ಈ ಬ್ರಿಗೇಡ್ ಕೆಲಸ ಮಾಡಲಿದೆ'' ಎಂದು ಈಶ್ವರಪ್ಪ ಹೇಳಿದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget